ಕುಡಿಯುವವರು ಸುಳ್ಳು ಹೇಳುವುದಿಲ್ಲ; ಲಸಿಕೆಯ ಪ್ರಮಾಣಪತ್ರದ ಕುರಿತಂತೆ ಮಧ್ಯಪ್ರದೇಶ ಅಬಕಾರಿ ಅಧಿಕಾರಿ ಹೇಳಿಕೆ
ಮಧ್ಯಪ್ರದೇಶದಲ್ಲಿ ಅಬಕಾರಿ ಅಧಿಕಾರಿಯೊಬ್ಬರು ಕುಡಿಯುವವರು ಸುಳ್ಳನ್ನು ಹೇಳುವುದಿಲ್ಲ ಎಂದಿದ್ದು, ದೇಶಾದ್ಯಂತ ಸುದ್ದಿಯಾಗಿದೆ. ಅಧಿಕಾರಿ ಹಾಗೆ ಹೇಳಲು ಕಾರಣವೇನು? ಇಲ್ಲಿದೆ ಮಾಹಿತಿ.
ಮಧ್ಯಪ್ರದೇಶದ ಖಾಂಡ್ವಾ ಜಿಲ್ಲೆಯ ಅಬಕಾರಿ ಅಧಿಕಾರಿಯೊಬ್ಬರು ಕುಡಿಯುವವರು ಸತ್ಯವನ್ನೇ ಹೇಳುತ್ತಾರೆ ಎಂದಿದ್ದಾರೆ. ಮದ್ಯ ಖರೀದಿಗೆ ಎರಡೂ ಡೋಸ್ ವ್ಯಾಕ್ಸೀನ್ ಕಡ್ಡಾಯವಾಗಿ ಪಡೆದಿರಬೇಕು ಎಂಬ ಆದೇಶ ಇರುವ ಕಾರಣ, ಅದನ್ನು ಸಾಕ್ಷೀಕರಿಸಲು ಕೇವಲ ಬಾಯಿ ಮಾತು ಸಾಕು. ಕಾರಣ, ಕುಡುಕರು ಸುಳ್ಳು ಹೇಳುವುದಿಲ್ಲ ಎಂದು ಅಬಕಾರಿ ಅಧಿಕಾರಿ ಆರ್ಪಿ ಕಿರಾರ್ ಹೇಳಿದ್ದಾರೆ. ನಿಯಮಾವಳಿಗಳಲ್ಲಿ ಕೇವಲ ಮೌಖಿಕವಾಗಿ ತಿಳಿಸಿದರೆ ಸಾಕೇ ಎಂಬುದರ ಕುರಿತು ಸ್ಪಷ್ಟನೆ ಇರದಿರುವ ಕುರಿತು, ಪ್ರತಿಕ್ರಿಯಿಸಿದ ಅವರು ‘ಕುಡಿಯುವವರು ಸುಳ್ಳು ಹೇಳುವುದಿಲ್ಲ’ ಎಂಬ ಹೇಳಿಕೆ ನೀಡಿದ್ದಾರೆ. ಇದನ್ನು ಎಎನ್ಐ ವರದಿ ಮಾಡಿದ್ದು, ಅಬಕಾರಿ ಅಧಿಕಾರಿಯ ಹೇಳಿಕೆ ಸದ್ಯ ದೇಶದಾದ್ಯಂತ ಸುದ್ದಿಯಾಗಿದೆ.
ಎಎನ್ಐ ಅಧಿಕಾರಿಯ ಹೇಳಿಕೆಯನ್ನು ಉಲ್ಲೇಖಿಸಿದ್ದು, ‘ಲಸಿಕೆ ಪಡೆದಿದ್ದಾರೆ ಎನ್ನುವುದಕ್ಕೆ ಪ್ರಮಾಣ ಪತ್ರದ ಅವಶ್ಯಕತೆ ಇಲ್ಲ. ಕೇವಲ ಮೌಖಿಕ ಸ್ಪಷ್ಟನೆ ಸಾಕು. ಕಾರಣ, ಯಾರು ಕುಡಿಯುತ್ತಾರೋ ಅವರು ಸುಳ್ಳು ಹೇಳುವುದಿಲ್ಲ’ ಎಂದು ಹೇಳಿದ್ದಾಗಿ ವರದಿ ಮಾಡಿದೆ. ಖಾಂಡ್ವಾ ಜಿಲ್ಲಾಡಳಿತವು ಈ ಮೊದಲು ಎಲ್ಲಾ ಮದ್ಯ ಅಂಗಡಿಗಳಿಗೆ, ಎರಡೂ ಡೋಸ್ ವ್ಯಾಕ್ಸಿನ್ ಪಡೆದವರಿಗೆ ಮಾತ್ರ ಮದ್ಯ ನೀಡುವಂತೆ ಕಟ್ಟುನಿಟ್ಟಾಗಿ ಸೂಚಿಸಿತ್ತು.
ಖಾಂಡ್ವಾ ಜಿಲ್ಲಾಡಳಿತ ಕರೆದ ಸಭೆಯಲ್ಲಿ ಮದ್ಯ ಮಾರಾಟಕ್ಕೆ ಕಠಿಣ ಸೂಚನೆಗಳನ್ನು ನೀಡಿದೆ. ಅದರ ಪ್ರಕಾರ, ಪ್ರಸ್ತುತ ಜಿಲ್ಲೆಯಲ್ಲಿ ಕೊರೊನಾ ಸೋಂಕು ತಡೆಗಾಗಿ ನಡೆಸುತ್ತಿರುವ ಮೆಗಾ ಲಸಿಕೆ ಅಭಿಯಾನದಡಿಯಲ್ಲಿ ಪ್ರತಿಯೊಬ್ಬ ನಾಗರಿಕರು ಲಸಿಕೆ ಹಾಕಿಸಿಕೊಳ್ಳಬೇಕು. ಇದಕ್ಕಾಗಿ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ 55 ದೇಶಿ ಮತ್ತು 19 ವಿದೇಶಿ ಮದ್ಯದಂಗಡಿಗಳ ಮದ್ಯ ಮಾರಾಟವನ್ನು ಎರಡೂ ಡೋಸ್ ಲಸಿಕೆ ಪಡೆದ ವ್ಯಕ್ತಿಗಳು/ಗ್ರಾಹಕರಿಗೆ ಮಾತ್ರ ಮಾರಾಟ ಮಾಡಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಘಟನೆಯ ಕುರಿತು ಎಎನ್ಐ ಹಂಚಿಕೊಂಡಿರುವ ಟ್ವೀಟ್:
MP| No vaccination proof is required…just verbal assurance of being fully vaccinated is enough..those who drink don’t lie…: Khandwa district excise officer RP Kirar on only those who are completely vaccinated against COVID are sold liquor from licensed liquor vends (18.11) https://t.co/jIFoQDcgFu pic.twitter.com/wSMZvgssjh
— ANI (@ANI) November 19, 2021
ಭಾರತದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಜನರಿಗೆ ಲಸಿಕೆ ತೆಗೆದುಕೊಳ್ಳುವಂತೆ ವಿವಿಧ ರೀತಿಯಲ್ಲಿ ಕೋರಿಕೊಳ್ಳುತ್ತಿವೆ. ಕೆಲವೆಡೆ ಜನರು ಲಸಿಕೆ ತೆಗೆದುಕೊಳ್ಳಲು ಹಿಂದೇಟು ಹಾಕಿದಲ್ಲಿ, ಲಸಿಕೆಯನ್ನು ಕಡ್ಡಾಯಗೊಳಿಸಿ- ಸೌಲಭ್ಯ ನೀಡುವ ವ್ಯವಸ್ಥೆಯನ್ನು ಸ್ಥಳೀಯ ಆಡಳಿತಗಳು ನಡೆಸುತ್ತಿವೆ. ಭಾರತದಲ್ಲಿ ಇದುವರೆಗೆ ಸುಮಾರು 115 ಕೋಟಿಗೂ ಅಧಿಕ ಡೋಸ್ ವ್ಯಾಕ್ಸೀನ್ ನೀಡಲಾಗಿದೆ.
ಇದನ್ನೂ ಓದಿ:
ಅನುಷ್ಕಾ ಶರ್ಮಾಗೆ ಮೈಸೂರು ಜೋಡಿಯಿಂದ ಕನ್ನಡದಲ್ಲೇ ಮದುವೆ ಕರೆಯೋಲೆ; ಸಂತಸ ಪಟ್ಟ ನಟಿ
Meghalaya: ಇದು ಆಗಸವೋ, ನದಿಯೋ?; ಅಪರೂಪದ ಚಿತ್ರ ನೋಡಿ ಅಚ್ಚರಿಗೊಂಡ ನೆಟ್ಟಿಗರು!