Meghalaya: ಇದು ಆಗಸವೋ, ನದಿಯೋ?; ಅಪರೂಪದ ಚಿತ್ರ ನೋಡಿ ಅಚ್ಚರಿಗೊಂಡ ನೆಟ್ಟಿಗರು!

River Umngot: ಜಲ ಶಕ್ತಿ ಸಚಿವಾಲಯವು ಮೇಘಾಲಯದ ನದಿಯೊಂದರ ಚಿತ್ರವನ್ನು ಹಂಚಿಕೊಂಡಿದ್ದು, ಜನರು ಅದನ್ನು ನೋಡಿ ಅಚ್ಚರಿ ಪಟ್ಟಿದ್ದಾರೆ. ಏನದರ ವಿಶೇಷತೆ? ಇಲ್ಲಿದೆ ಮಾಹಿತಿ.

Meghalaya: ಇದು ಆಗಸವೋ, ನದಿಯೋ?; ಅಪರೂಪದ ಚಿತ್ರ ನೋಡಿ ಅಚ್ಚರಿಗೊಂಡ ನೆಟ್ಟಿಗರು!
ಜಲ ಶಕ್ತಿ ಸಚಿವಾಲಯ ಹಂಚಿಕೊಂಡಿರುವ ಚಿತ್ರ
Follow us
TV9 Web
| Updated By: shivaprasad.hs

Updated on: Nov 19, 2021 | 2:59 PM

ಭಾರತದಲ್ಲಿ ಯಮುನಾ ನದಿ ಮಲಿನಗೊಂಡು, ಅದರ ಮೇಲೆ ವಿಷಕಾರಿ ಬುರುಗು ತೇಲುತ್ತಿರುವುದು ದೊಡ್ಡ ಮಟ್ಟದಲ್ಲಿ ಚರ್ಚೆಯಾಗಿತ್ತು. ಇದರ ಬೆನ್ನಲ್ಲೇ ಈಗ ಮೇಘಾಲಯದ ಸ್ಫಟಿಕದಷ್ಟು ಶುಭ್ರವಾಗಿರುವ ನದಿಯೊಂದರ ಚಿತ್ರ ವೈರಲ್ ಆಗಿದ್ದು ನೆಟ್ಟಿಗರ ಮನಗೆದ್ದಿದೆ. ಜಲ ಶಕ್ತಿ ಸಚಿವಾಲಯದ ಟ್ವಿಟರ್ ಖಾತೆಯಲ್ಲಿ ಈ ಚಿತ್ರವನ್ನು ಹಂಚಿಕೊಳ್ಳಲಾಗಿದ್ದು, ನದಿಯ ಪಕ್ಷಿನೋಟವನ್ನು ಹಂಚಿಕೊಳ್ಳಲಾಗಿದೆ. ಶಿಲ್ಲಾಂಗ್​ನ ಉಮ್ನ್​ಗೋಟ್ ನದಿಯ ಚಿತ್ರವನ್ನು ಸಚಿವಾಲಯ ಶೇರ್ ಮಾಡಿದ್ದು, ಅದರಲ್ಲಿ ಸ್ಫಟಿಕದಷ್ಟು ಶುಭ್ರವಾದ ನೀರಿನ ಮೇಲೆ ದೋಣಿಯೊಂದರಲ್ಲಿ ಸ್ಥಳೀಯರು ಸಂಚರಿಸುತ್ತಿದ್ದಾರೆ. ಚಿತ್ರ ಹಲವಾರು ಕಾರಣಗಳಿಂದ ಜನರ ಕುತೂಹಲ ಕೆರಳಿಸಿದೆ.

ಮೊದಲ ಕಾರಣ, ಜಲ ಶಕ್ತಿ ಸಚಿವಾಲಯವು, ಟ್ವಿಟರ್​ನಲ್ಲಿ ಚಿತ್ರವನ್ನು ಹಂಚಿಕೊಳ್ಳುವಾಗ, ಸುಂದರವಾದ ಕ್ಯಾಪ್ಶನ್ ನೀಡಿದೆ. ಅದರಲ್ಲಿ ಬರೆಯುತ್ತಾ, ಈ ಚಿತ್ರ ನೋಡಿದಾಗ ಬೋಟ್ ಆಗಸದಲ್ಲಿದೆ ಎಂಬ ಭಾವ ಉಟುಮಾಡುತ್ತದೆ ಎಂದು ಬರೆದಿದೆ. ಈ ಹೋಲಿಕೆ ನೆಟ್ಟಿಗರಿಗೆ ಇಷ್ಟವಾಗಿದೆ. ಚಿತ್ರವನ್ನು ಹಂಚಿಕೊಂಡ ಸಚಿವಾಲಯವು, ‘‘ಇದು ವಿಶ್ವದಲ್ಲೇ ಅತ್ಯಂತ ಶುದ್ಧವಾದ ನದಿಗಳಲ್ಲೊಂದು. ಮೇಘಾಲಯದ ಶಿಲ್ಲಾಂಗ್​ನಿಂದ 100 ಕಿಮೀ ದೂರದಲ್ಲಿರುವ ಉಮ್ನ್​ಗೋಟ್ ಎಂಬಲ್ಲಿದೆ. ನದಿ ನೀರು ಎಷ್ಟು ಶುಭ್ರವಾಗಿದೆಯೆಂದರೆ, ಬೋಟ್ ಆಗಸದಲ್ಲಿರುವಂತೆ ಭಾಸವಾಗುತ್ತದೆ. ನಮ್ಮೆಲ್ಲಾ ನದಿಗಳು ಹೀಗೇ ಇರಲಿ ಎಂದು ಬಯಸುತ್ತೇವೆ. ಇಂತಹ ನದಿಯನ್ನು ಕಾಪಾಡಿಕೊಂಡಿದ್ದಕ್ಕೆ ಮೇಘಾಲಯದ ಜನರಿಗೆ ಧನ್ಯವಾದಗಳು’’ ಎಂದು ಬರೆದಿದೆ.

ಜಲ ಶಕ್ತಿ ಸಚಿವಾಲಯ ಹಂಚಿಕೊಂಡ ಟ್ವೀಟ್ ಇಲ್ಲಿದೆ:

ಈ ಚಿತ್ರಕ್ಕೆ ನೆಟ್ಟಿಗರು ಮೆಚ್ಚುಗೆ ಸೂಚಿಸಿದ್ದು, ಅಚ್ಚರಿ ಸೂಚಿಸಿದ್ದಾರೆ. ಕೆಲವರು ಇದು ಫೋಟೋಶಾಪ್ಡ್ ಚಿತ್ರ ಇರುವಂತೆ ಇದೆ. ಅಷ್ಟು ಅದ್ಭುತವಾಗಿದೆ ಎಂದು ಹೊಗಳಿದ್ದಾರೆ.

ಇದನ್ನೂ ಓದಿ:

Password: ಭಾರತದಲ್ಲಿ ಜನರು ಅತಿ ಹೆಚ್ಚಾಗಿ‌‌ ಬಳಸೋದು ಇದೇ ಪಾಸ್​ವರ್ಡ್​ಗಳನ್ನಂತೆ! ಅವು ಯಾವುವು ಗೊತ್ತಾ?

ನಯನತಾರಾಗೆ ಕೊಟ್ಟಿದ್ದ ಆಫರ್​ ಬಾಚಿಕೊಂಡ ಸ್ಯಾಂಡಲ್​ವುಡ್​​ ನಟಿ; ಕಾಲಿವುಡ್​​​ನಲ್ಲಿ ಹೆಚ್ಚಾಯ್ತು ಕನ್ನಡ ಮಂದಿಯ ಹವಾ

ಡಿಸೆಂಬರ್ 29ರಂದು ನಿಧನರಾದ ದಿವಿನ್ ಫೆಬ್ರುವರಿ 22ರಂದು ಮದುವೆಯಾಗಲಿದ್ದರು
ಡಿಸೆಂಬರ್ 29ರಂದು ನಿಧನರಾದ ದಿವಿನ್ ಫೆಬ್ರುವರಿ 22ರಂದು ಮದುವೆಯಾಗಲಿದ್ದರು
ಬಿಗ್​ ಬಾಸ್ ಮನೆಗೆ ಬಂದ ಗೌತಮಿ ಜಾದವ್ ಪತಿ​; ಹೇಗಿತ್ತು ಮಂಜು ರಿಯಾಕ್ಷನ್?
ಬಿಗ್​ ಬಾಸ್ ಮನೆಗೆ ಬಂದ ಗೌತಮಿ ಜಾದವ್ ಪತಿ​; ಹೇಗಿತ್ತು ಮಂಜು ರಿಯಾಕ್ಷನ್?
ಭಾವುಕ ಜೀವಿ ಸಾರಾ ಮಹೇಶ್ ಗತಿಸಿದ ಚಿಂಟುಳನ್ನು ನೆನೆದು ಕಣ್ಣೀರಾಗುತ್ತಾರೆ!
ಭಾವುಕ ಜೀವಿ ಸಾರಾ ಮಹೇಶ್ ಗತಿಸಿದ ಚಿಂಟುಳನ್ನು ನೆನೆದು ಕಣ್ಣೀರಾಗುತ್ತಾರೆ!
ರಸ್ತೆ ತಡೆಗೋಡೆಯಿಲ್ಲದಿದ್ದರೆ ಬಸ್ಸು ಪ್ರಪಾತಕ್ಕೆ ಉರುಳುತಿತ್ತು!
ರಸ್ತೆ ತಡೆಗೋಡೆಯಿಲ್ಲದಿದ್ದರೆ ಬಸ್ಸು ಪ್ರಪಾತಕ್ಕೆ ಉರುಳುತಿತ್ತು!
ಕೆಪಿಸಿಸಿ ಅಧ್ಯಕ್ಷನನ್ನು ಬದಲಾಯಿಸುವುದು ಹೈಕಮಾಂಡ್​ಗೆ ಬಿಟ್ಟ ವಿಚಾರ: ಸಚಿವ
ಕೆಪಿಸಿಸಿ ಅಧ್ಯಕ್ಷನನ್ನು ಬದಲಾಯಿಸುವುದು ಹೈಕಮಾಂಡ್​ಗೆ ಬಿಟ್ಟ ವಿಚಾರ: ಸಚಿವ
ತಂದೆ ಮುಖ ನೋಡಿ ಅಳು ನಿಲ್ಲಿಸಲೇ ಇಲ್ಲ ಉಗ್ರಂ ಮಂಜು; ಎಮೋಷನಲ್ ಎಪಿಸೋಡ್
ತಂದೆ ಮುಖ ನೋಡಿ ಅಳು ನಿಲ್ಲಿಸಲೇ ಇಲ್ಲ ಉಗ್ರಂ ಮಂಜು; ಎಮೋಷನಲ್ ಎಪಿಸೋಡ್
ಪೊಲೀಸರ ಮೇಲೆ ಅಪಾರ ನಂಬಿಕೆಯಿದೆ, ಸಿಬಿಐ ತನಿಖೆ ಬೇಕಿಲ್ಲ: ಸಿದ್ದರಾಮಯ್ಯ
ಪೊಲೀಸರ ಮೇಲೆ ಅಪಾರ ನಂಬಿಕೆಯಿದೆ, ಸಿಬಿಐ ತನಿಖೆ ಬೇಕಿಲ್ಲ: ಸಿದ್ದರಾಮಯ್ಯ
ಸಂವಿಧಾನದ ಆಶಯಗಳಿಗೆ ಕಾಂಗ್ರೆಸ್​ನಿಂದ ಅಪಪ್ರಚಾರ: ಸಿಟಿ ರವಿ
ಸಂವಿಧಾನದ ಆಶಯಗಳಿಗೆ ಕಾಂಗ್ರೆಸ್​ನಿಂದ ಅಪಪ್ರಚಾರ: ಸಿಟಿ ರವಿ
ಯುವಕ ಯುವತಿಯರ ಜೊತೆ ಮಧ್ಯವಯಸ್ಕ ಮಹಿಳೆಯರೂ ಪಬ್​ಗೆ ಬಂದಿದ್ದರು
ಯುವಕ ಯುವತಿಯರ ಜೊತೆ ಮಧ್ಯವಯಸ್ಕ ಮಹಿಳೆಯರೂ ಪಬ್​ಗೆ ಬಂದಿದ್ದರು
ಹೊಸ ವರ್ಷಕ್ಕೆ ಸಿಹಿ ಸುದ್ದಿ ಕೊಟ್ಟ ಶಿವಣ್ಣ: ವಿಡಿಯೋ ನೋಡಿ
ಹೊಸ ವರ್ಷಕ್ಕೆ ಸಿಹಿ ಸುದ್ದಿ ಕೊಟ್ಟ ಶಿವಣ್ಣ: ವಿಡಿಯೋ ನೋಡಿ