AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Password: ಭಾರತದಲ್ಲಿ ಜನರು ಅತಿ ಹೆಚ್ಚಾಗಿ‌‌ ಬಳಸೋದು ಇದೇ ಪಾಸ್​ವರ್ಡ್​ಗಳನ್ನಂತೆ! ಅವು ಯಾವುವು ಗೊತ್ತಾ?

ಭಾರತದಲ್ಲಿ ಸಾಮಾನ್ಯವಾಗಿ ಬಳಸಲ್ಪಡುವ ಪಾಸ್​ವರ್ಡ್​ಗಳಿವು ಎಂಬುದನ್ನು ನಾರ್ಡ್​ಪಾಸ್​ ಸಂಸ್ಥೆಯು ವರದಿ ಮಾಡಿದೆ. ಆ ಪಾಸ್​ವರ್ಡ್​ಗಳು ಯಾವುವು? ಎಂಬುದು ಈ ಕೆಳಗಿನಂತಿದೆ.

Password: ಭಾರತದಲ್ಲಿ ಜನರು ಅತಿ ಹೆಚ್ಚಾಗಿ‌‌ ಬಳಸೋದು ಇದೇ ಪಾಸ್​ವರ್ಡ್​ಗಳನ್ನಂತೆ! ಅವು ಯಾವುವು ಗೊತ್ತಾ?
ಪಾಸ್ವರ್ಡ್​
TV9 Web
| Edited By: |

Updated on:Nov 19, 2021 | 3:11 PM

Share

ಕೊವಿಡ್ ಸಾಂಕ್ರಾಮಿಕ ಹರಡುವಿಕೆಯು ಡಿಜಿಟಲ್​ಗೆ ತೀವ್ರವಾಗಿ ಹೊಂದಿಕೊಳ್ಳುವಂತೆ ಮಾಡಿತು. ಆಫೀಸ್ ಕೆಲಸಗಳು, ಆನ್​ಲೈನ್​ ಕ್ಲಾಸ್ ಹೀಗೆ ಎಲ್ಲವೂ ಮನೆಯಲ್ಲಿಯೇ ಕುಳಿತು ಮಾಡುವಂತಹ ಪರಿಸ್ಥಿತಿ ಎದುರಾಯಿತು. ಈಗೆಲ್ಲಾ ಪ್ರತಿಯೊಂದಕ್ಕೂ ಪಾಸ್​ವರ್ಡ್​ ಬೇಕೇಬೇಕು. ನಿಮ್ಮ ಪ್ರೊಫೈಲ್, ಡೀಟೇಲ್ಸ್, ಲೆಕ್ಕಪತ್ರ ಎಲ್ಲವೂ ಲೀಕ್ ಆಗದೇ ಸುರಕ್ಷತೆ ಕಾಯ್ದುಕೊಳ್ಳಲು ಪಾಸ್​ವರ್ಡ್​​ ಅಗತ್ಯವಿದೆ. ನೀವು ಗೌಪ್ಯವಾಗಿಟ್ಟಿರುವ ಪಾಸ್​ವರ್ಡ್​ ಎಷ್ಟು ಸೇಫ್​? ಹೀಗಿರುವಾಗ ನಾರ್ಡ್​ಪಾಸ್​ ಸಂಸ್ಥೆಯ ಹೊಸ ಅಧ್ಯಯನವು, ಭಾರತದಲ್ಲಿ ಸಾಮಾನ್ಯವಾಗಿ ಬಳಸುವ ಪಾಸ್​ವರ್ಡ್ ಯಾವುದು ಎಂಬುದನ್ನು ಬಹಿರಂಗಪಡಿಸಿದೆ. ಸುಲಭವಾಗಿ ಕಂಡುಹಿಡಿಯಲು ಸಾಧ್ಯವಾಗದ ಪಾಸ್​ವರ್ಡ್​ಗಳ ಆಯ್ಕೆಗಳನ್ನು ಹೊಂದಿರಿ ಎಂಬುದರ ಕುರಿತಾಗಿ ಪೊಲೀಸ್ ಇಲಾಖೆ ಎಚ್ಚರಿಸುತ್ತಿರುವ ಹೊರತಾಗಿಯೂ ಸುಲಭದಲ್ಲಿ ಕಂಡುಹಿಡಿಯಬಹುದಾದ ಪಾಸ್​ವರ್ಡ್​ಗಳ ಬಳಕೆಯಾಗುತ್ತಿದೆ ಎಂದು ಅಧ್ಯಯನ ತಿಳಿಸಿದೆ.

ನಾರ್ಡ್​ಪಾಸ್,​ ದೇಶಾದ್ಯಂತ 50 ಪಾಸ್​ವರ್ಡ್​ಗಳನ್ನು ಪಟ್ಟಿ ಮಾಡಿದೆ. ಭಾರತದಲ್ಲಿ Password ಎಂಬುದು ಅತ್ಯಂತ ಸಾಮಾನ್ಯವಾಗಿ ಬಳಸುವ ಪಾಸ್​ವರ್ಡ್. ಈ ನಂತರದಲ್ಲಿ 12345, 123456, 123456789, 12345678, India123, 1234567890, 1234567 ಮತ್ತು abc123 ಎಂದು ತಿಳಿದು ಬಂದಿದೆ.

ನಾರ್ಡ್​ಪಾಸ್​ ಸಂಸ್ಥೆಯ ವರದಿಯ ಪ್ರಕಾರ, India123 ಅನ್ನು ಹೊರತುಪಡಿಸಿ ಈ ಎಲ್ಲಾ ಪಾಸ್​ವರ್ಡ್​ಗಳನ್ನು ಒಂದು ಸೆಕೆಂಡಿಗಿಂತ ಕಡಿಮೆ ಅವಧಿಯಲ್ಲಿ ಹ್ಯಾಕ್​ ಮಾಡಬಹುದು. India123 ಎಂಬ ಪಾಸ್​ವರ್ಡ್​ಅನ್ನು ಭೇದಿಸಲು 17 ನಿಮಿಷಗಳು ತೆಗೆದುಕೊಳ್ಳುತ್ತದೆ. ಪಾಸ್​ವರ್ಡ್ ಹ್ಯಾಕ್​ ಆಗುವ ಸಮಯ ಸೂಚಕವಾಗಿದ್ದರೂ ಪಾಸ್​ವರ್ಡ್ ಬಗ್ಗೆ ಎಷ್ಟು ಜಾಗರೂಕರಾಗಿರಬೇಕು ಎಂಬ ಕಲ್ಪನೆಯನ್ನು ಜನರಿಗೆ ನೀಡುತ್ತದೆ ಎಂದು ಸಂಸ್ಥೆ ಹೇಳಿಕೆಯಲ್ಲಿ ತಿಳಿಸಿದೆ.

ಪಾಸ್​ವರ್ಡ್ ನಾವು ಹೊಂದಿಕೊಂಡ ಡಿಜಿಟಲ್ ಜೀವನಕ್ಕೆ ಗೇಟ್​ವೇ ಇದ್ದಹಾಗೆ ಎಂಬುದನ್ನು ಅರ್ಥ ಮಾಡಿಕೊಳ್ಳಲೇಬೇಕು. ನಾವು ಹೆಚ್ಚು ಸಮಯ ಆನ್​ಲೈನ್​ನಲ್ಲಿ ಕಳೆಯುವುದು ಜೊತೆಗೆ ನಮ್ಮ ಸೈಬರ್ ಸುರಕ್ಷತೆಯನ್ನು ನೋಡಿಕೊಳ್ಳುವುದು ಅಷ್ಟೇ ಮುಖ್ಯ ಎಂದು ನಾರ್ಡ್​ಪಾಸ್​ ಸಿಇಒ ಜೋನಾಸ್ ಕಾಕ್ಲಿರ್ಸ್ ಹೇಳಿಕೆಯಲ್ಲಿ ತಿಳಿಸಿದ್ದಾರೆ. ದುರಾದೃಷ್ಟವಾಶಾತ್ ಪಾಸ್​ವರ್ಡ್​ಗಳು ಹೆಚ್ಚು ದುರ್ಬಲವಾಗುತ್ತಲೇ ಇರುತ್ತಿವೆ. ಜನರು ಇನ್ನೂ ಸರಿಯಾದ ಪಾಸ್​ವರ್ಡ್ ಬಳಕೆ ಮಾಡುತ್ತಿಲ್ಲ ಎಂದು ಅವರು ಹೇಳಿದ್ದಾರೆ.

ದೇಶದಲ್ಲಿ ಸಾಮಾನ್ಯವಾಗಿ ಬಳಸಲ್ಪಟ್ಟ 50 ಪಾಸ್​ವರ್ಡ್​ಗಳನ್ನು ಪಟ್ಟಿಮಾಡಲಾಗಿದೆ. ಜಾಗತಿಕವಾಗಿ ಅತಿ ಹೆಚ್ಚು ಬಳಕೆಯಲ್ಲಿದ್ದು ಮೂರು ಸ್ಥಾನಗಳನ್ನು ಪಡೆದುಕೊಂಡ ಸಾಮಾನ್ಯ ಬಳಕೆಯ ಪಾಸ್​ವರ್ಡ್​ಗಳು ಹೀಗಿವೆ; 123456, 123456789 ಮತ್ತು 12345.

ನಿಮ್ಮ ಡಿಜಿಟಲ್ ಸುಕ್ಷತೆಯ ದೃಷ್ಟಿಯಿಂದ ಪಾಸ್​ವರ್ಡ್ ಹೆಚ್ಚು ಬಲವಾಗಿದ್ದಷ್ಟು ನಿಮಗೆ ಸುರಕ್ಷಿತ. ಹೀಗಿರುವಾಗ ಆನ್ಲೈನ್ ಮೂಲಕವೂ ಪೊಲೀಸ್ ಇಲಾಖೆ ಜನರನ್ನು ಎಚ್ಚರಿಸುವ ಸಂದೇಶವನ್ನು ಸಾರುತ್ತಿವೆ. ಅವುಗಳಲ್ಲಿ ಮುಂಬೈ ಪೊಲೀಸ್ ಇಲಾಖೆ ಕೂಡಾ ಒಂದು. ಜನರಿಗೆ ಪಾಸ್​ವರ್ಡ್ ಬಗ್ಗೆ ಹೆಚ್ಚು ಅರಿವು ಮೂಡಿಸಲು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ ಕೆಲವು ಪೋಸ್ಟ್​ಗಳು ಈ ಕೆಳಗಿನಂತಿವೆ;

Published On - 2:52 pm, Fri, 19 November 21

Follow Us
ಕಿಸೆಯಿಂದ ಫೋನ್ ಹೊರತೆಗೆಯುತ್ತಿದ್ದಂತೆ ಸ್ಪೋಟ
ಕಿಸೆಯಿಂದ ಫೋನ್ ಹೊರತೆಗೆಯುತ್ತಿದ್ದಂತೆ ಸ್ಪೋಟ
ರಾಮನಗರ: ವೃಷಭಾವತಿ‌ ನದಿಯಲ್ಲಿ ಕಂತೆ ಕಂತೆ ನೋಟುಗಳು ಪತ್ತೆ; ವಿಡಿಯೋ ನೋಡಿ
ರಾಮನಗರ: ವೃಷಭಾವತಿ‌ ನದಿಯಲ್ಲಿ ಕಂತೆ ಕಂತೆ ನೋಟುಗಳು ಪತ್ತೆ; ವಿಡಿಯೋ ನೋಡಿ
ಗುಂಡೇಟಿಗೆ ಮೂವರು ಬಲಿ ಕೇಸ್​: ಮೃತರ ಮನೆಗೆ ಬಿಜೆಪಿ ಸತ್ಯಶೋಧನಾ ಸಮಿತಿ ಭೇಟಿ
ಗುಂಡೇಟಿಗೆ ಮೂವರು ಬಲಿ ಕೇಸ್​: ಮೃತರ ಮನೆಗೆ ಬಿಜೆಪಿ ಸತ್ಯಶೋಧನಾ ಸಮಿತಿ ಭೇಟಿ
ಏಯ್ ಯಾರಲ್ಲಿ ಟಿಕೆಟ್.. ಬಸ್ ಕಂಡಕ್ಟರ್ ಆದ ವಿದ್ಯಾರ್ಥಿ,ವಿಡಿಯೋ ವೈರಲ್!
ಏಯ್ ಯಾರಲ್ಲಿ ಟಿಕೆಟ್.. ಬಸ್ ಕಂಡಕ್ಟರ್ ಆದ ವಿದ್ಯಾರ್ಥಿ,ವಿಡಿಯೋ ವೈರಲ್!
ಶ್ವಾನದ ವೇಷದಲ್ಲೇ ಜಿಲ್ಲಾಧಿಕಾರಿ ಕಚೇರಿಗೆ ಬಂದ ವ್ಯಕ್ತಿ
ಶ್ವಾನದ ವೇಷದಲ್ಲೇ ಜಿಲ್ಲಾಧಿಕಾರಿ ಕಚೇರಿಗೆ ಬಂದ ವ್ಯಕ್ತಿ
RSS ಬಗ್ಗೆ ಹೇಳಿಕೆ: ಸಚಿವ ಯತೀಂದ್ರ ವಿರುದ್ಧ ಎಸ್​​ಪಿಗೆ ಬಿಜೆಪಿ ದೂರು
RSS ಬಗ್ಗೆ ಹೇಳಿಕೆ: ಸಚಿವ ಯತೀಂದ್ರ ವಿರುದ್ಧ ಎಸ್​​ಪಿಗೆ ಬಿಜೆಪಿ ದೂರು
ನಮ್ ವಿಷ್ಯದಲ್ಲಿ ತಲೆಹಾಕೋದು ಬೇಡ": ಸಚಿವ ಶಿವಲಿಂಗೇಗೌಡ
ನಮ್ ವಿಷ್ಯದಲ್ಲಿ ತಲೆಹಾಕೋದು ಬೇಡ
ವಿಧಾನ ಪರಿಷತ್​​ಗೆ ನಾಗೇಂದ್ರ ಆಗಮನದ ವೇಳೆ ಗೋಬ್ಯಾಕ್​​ ಘೋಷಣೆ
ವಿಧಾನ ಪರಿಷತ್​​ಗೆ ನಾಗೇಂದ್ರ ಆಗಮನದ ವೇಳೆ ಗೋಬ್ಯಾಕ್​​ ಘೋಷಣೆ
ತಮಿಳುನಾಡಿಗೆ ಕೆಆರ್​​ಎಸ್​ನಿಂದ ನೀರು ಹರಿಸಲಾಗ್ತಿದ್ಯಾ?: ಸಚಿವರು ಏನಂದ್ರು?
ತಮಿಳುನಾಡಿಗೆ ಕೆಆರ್​​ಎಸ್​ನಿಂದ ನೀರು ಹರಿಸಲಾಗ್ತಿದ್ಯಾ?: ಸಚಿವರು ಏನಂದ್ರು?
ಕೋಲಾರದಲ್ಲಿ ಹಾಲು ಉತ್ಪಾದಕರ ಬೃಹತ್ ಪ್ರತಿಭಟನೆ: ದರ ಏರಿಕೆಗೆ ಆಗ್ರಹ
ಕೋಲಾರದಲ್ಲಿ ಹಾಲು ಉತ್ಪಾದಕರ ಬೃಹತ್ ಪ್ರತಿಭಟನೆ: ದರ ಏರಿಕೆಗೆ ಆಗ್ರಹ