PM Modi’s Birthday; 9 ವರ್ಷದಲ್ಲಿ ಪ್ರಧಾನಿ ಮೋದಿ ತೆಗೆದುಕೊಂಡ 10 ಪ್ರಮುಖ ನಿರ್ಧಾರಗಳು

|

Updated on: Sep 16, 2023 | 5:14 PM

ಕಳೆದ 9 ವರ್ಷಗಳಿಂದ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಭಾರತದ ಕರೆನ್ಸಿಗಳ ನೋಟು ಅಮಾನ್ಯೀಕರಣ ಮತ್ತು ಸ್ವಚ್ಛ ಭಾರತ ಅಭಿಯಾನದ ಪ್ರಾರಂಭ ಸೇರಿದಂತೆ ಭಾರತವನ್ನು ಪರಿವರ್ತಿಸಿದ ಹಲವಾರು ಮಹತ್ವದ ನಿರ್ಧಾರಗಳನ್ನು ತೆಗೆದುಕೊಂಡಿದೆ. ಇನ್ನು ಯಾವೆಲ್ಲ ಮಹತ್ವ ನಿರ್ಧಾರಗಳನ್ನು ಮೋದಿ ಸರ್ಕಾರ ತೆಗೆದುಕೊಂಡಿದೆ ಇಲ್ಲಿದೆ ನೋಡಿ.

PM Modi’s Birthday; 9 ವರ್ಷದಲ್ಲಿ ಪ್ರಧಾನಿ ಮೋದಿ ತೆಗೆದುಕೊಂಡ 10 ಪ್ರಮುಖ ನಿರ್ಧಾರಗಳು
ಪ್ರಧಾನಿ ನರೇಂದ್ರ ಮೋದಿ
Follow us on

ಸೆ.17ರಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು 73ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಈ ನಿಟ್ಟಿನಲ್ಲಿ ದೇಶದ್ಯಾಂತ ಅವರು ಮಾಡಿದ ಸಾಧನೆಗಳನ್ನು ಮತ್ತು ಪ್ರಮುಖ ನಿರ್ಧಾರಗಳನ್ನು ಬಿಜೆಪಿ ಸಾರುತ್ತಿದೆ. ಇನ್ನು ಮೋದಿ ಅವರು ಅಧಿಕಾರಿವಹಿಸಿದ 9 ವರ್ಷದಲ್ಲಿ ಮಹತ್ವ ಸಾಧನೆಗಳನ್ನು ಅವರು ನೇತೃತ್ವದ ಸರ್ಕಾರ ಮಾಡಿದೆ. ಇದರ ಜತೆಗೆ ಹಲವು ನಿರ್ಧಾರಗಳನ್ನು ತೆಗೆದುಕೊಳ್ಳುವ ಮೂಲಕ ದೇಶದ ಮುಖವನ್ನೇ ಬದಲು ಮಾಡಿದೆ. ಮೋದಿ ಸರ್ಕಾರ ಬರುವ ಮೊದಲು ಕಾಂಗ್ರೆಸ್​​ ಸರ್ಕಾರ ಮಾಡಿದ ಅನೇಕ ಯೋಜನೆಗಳಲ್ಲಿ ಮಹತ್ವ ಬದಲಾವಣೆಯನ್ನು ಕೂಡ ಮಾಡಿತ್ತು. ಮೋದಿ ಸರ್ಕಾರ ದೇಶದ ಅಭಿವೃದ್ಧಿಗೆ ಹಾಗೂ ದೇಶದ ಒಳಗೆ ಆಗಬೇಕಿದ್ದ ಹಲವು ಬದಲಾವಣೆಗಳ ಬಗ್ಗೆ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಂಡಿದ್ದಾರೆ.

ಕಳೆದ 9 ವರ್ಷಗಳಿಂದ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಭಾರತದ ಕರೆನ್ಸಿಗಳ ನೋಟು ಅಮಾನ್ಯೀಕರಣ ಮತ್ತು ಸ್ವಚ್ಛ ಭಾರತ ಅಭಿಯಾನದ ಪ್ರಾರಂಭ ಸೇರಿದಂತೆ ಭಾರತವನ್ನು ಪರಿವರ್ತಿಸಿದ ಹಲವಾರು ಮಹತ್ವದ ನಿರ್ಧಾರಗಳನ್ನು ತೆಗೆದುಕೊಂಡಿದೆ. ಇನ್ನು ಯಾವೆಲ್ಲ ಮಹತ್ವ ನಿರ್ಧಾರಗಳನ್ನು ಮೋದಿ ಸರ್ಕಾರ ತೆಗೆದುಕೊಂಡಿದೆ ಇಲ್ಲಿದೆ ನೋಡಿ.

1. ನೋಟು ಅಮಾನ್ಯೀಕರಣ:

ರಾತ್ರೋರಾತ್ರಿ ಇಡಿ ದೇಶವೇ ಅಚ್ಚರಿ ಪಡುವಂತೆ ಮಾಡಿದ ಮಹತ್ವ ನಿರ್ಧಾರ ನೋಟು ಅಮಾನ್ಯೀಕರಣ. ನವೆಂಬರ್ 8, 2016 ರಂದು ಸಾರ್ವಜನಿಕ ಬಳಕೆಯಿಂದ 500 ಮತ್ತು 1,000 ರೂಪಾಯಿಗಳ ನೋಟುಗಳನ್ನು ಹಿಂತೆಗೆದುಕೊಳ್ಳುವುದಾಗಿ ಘೋಷಿಸಿದರು. ಈ ನಿರ್ಧಾರವು ದೇಶದಲ್ಲಿ ಒಂದು ಸಂಚಲನವನ್ನೇ ಸೃಷ್ಟಿತ್ತು. ಇನ್ನು ಈ ಹಠತ್​​ ನಿರ್ಧಾರಕ್ಕೆ ಕಾರಣವನ್ನು ಕೂಡ ಮೋದಿ ಅವರು ನೀಡಿದ್ದರು. ಅವುಗಳೆಂದರೆ ಕಪ್ಪುಹಣವನ್ನು ನಿಭಾಯಿಸುವುದು, ಭ್ರಷ್ಟಾಚಾರದ ವಿರುದ್ಧ ಹೋರಾಡುವುದು ಮತ್ತು ಭಯೋತ್ಪಾದಕ ನಿಧಿಯನ್ನು ತಡೆಗಟ್ಟುವುದು. ಈ ನಿರ್ಧಾರದ ಬಗ್ಗೆ ರಾಜಕೀಯ ತಜ್ಞರು ಇವುಗಳ ಮೇಲೆ ನೋಟು ಅಮಾನ್ಯೀಕರಣ ಪರಿಣಾಮ ಉಂಟು ಮಾಡುವುದಿಲ್ಲ ಎಂದು ಹೇಳಿದರು.

2. ಸ್ವಚ್ಛ ಭಾರತ ಅಭಿಯಾನ:

ದೇಶದಲ್ಲಿ ಮಹತ್ವದ ಬದಲಾವಣೆ ಮತ್ತು ಒಂದು ಬಾರಿ ಸ್ವಚ್ಛ ಜಾಗೃತಿಯನ್ನು ಸ್ವಚ್ಛ ಭಾರತ ಅಭಿಯಾನ ರೂಪಿಸಿತ್ತು. ಸ್ವಚ್ಛ ಭಾರತ ಅಭಿಯಾನ ಪ್ರಧಾನಿ ಮೋದಿ ಅವರ ಮಹತ್ವದ ಹಜ್ಜೆಯಾಗಿತ್ತು. ಅಕ್ಟೋಬರ್​​ 2, 2014 ರಂದು ಗಾಂಧಿ ಜಯಂತಿಯಂದು ಈ ಅಭಿಯಾನವನ್ನು ಪ್ರಾರಂಭಿಸಲಾಗಿತ್ತು. ಇದು ಬಯಲು ಮುಕ್ತ ಶೌಚಾಲಯ ಮತ್ತು ಘನ ತ್ಯಾಜ್ಯ ನಿರ್ವಹಣೆ ವ್ಯವಸ್ಥೆಯ ಗುರಿಯನ್ನು ಹೊಂದಿತ್ತು.

3. ಜಿಎಸ್ಟಿ ಜಾರಿ:

ಜಿಎಸ್ಟಿ ಜಾರಿ ಕೂಡ ಮೋದಿ ಸರ್ಕಾರದ ಮಹತ್ವ ನಿರ್ಧಾರವಾಗಿತ್ತು. ಸರಕು ಮತ್ತು ಸೇವಾ ತೆರಿಗೆ (GST) ಜುಲೈ 1, 2017 ರಂದು ಜಾರಿಗೆ ಬಂದಿತು. ಈ ಕ್ರಮವು ಪರೋಕ್ಷ ತೆರಿಗೆ ಸುಧಾರಣೆಯು ಕೇಂದ್ರ ಮತ್ತು ರಾಜ್ಯಗಳು ವಿಧಿಸುವ ಬಹು ತೆರಿಗೆಗಳನ್ನು ಬದಲಾಯಿಸಿತು. ಐದು ವರ್ಷಗಳ ಕಾಲ GST (ರಾಜ್ಯಗಳಿಗೆ ಪರಿಹಾರ) ಕಾಯಿದೆ, 2017 ರ ನಿಬಂಧನೆಗಳ ಅಡಿಯಲ್ಲಿ ಇದನ್ನು ಅನುಷ್ಠಾನ ಮಾಡಲಾಗಿತ್ತು. ಇದು ರಾಜ್ಯದ ಆದಾಯದ ನಷ್ಟಕ್ಕೆ ಪರಿಹಾರಕ್ಕೆ ಭರವಸೆಯಾಗಿತ್ತು.

4. ತ್ರಿವಳಿ ತಲಾಖ್:

ಆಗಸ್ಟ್​​ 1 2019ರಂದು ವಿರೋಧ ಪಕ್ಷಗಳ ವಿರುದ್ಧ ನಡುವೆಯು ಸರ್ಕಾರವು ತ್ರಿವಳಿ ತಲಾಖ್ ಮಸೂದೆಯನ್ನು ಅಂಗೀಕರಿಸಿತು. ಪತಿ ಮೂರು ಬಾರಿ ತಲಾಖ್ ಹೇಳುವ ಮೂಲಕ ಸಂಬಂಧವನ್ನು ಕಡಿದುಕೊಳ್ಳುವ (ಮುಸ್ಲಿಂರಲ್ಲಿ ಇದು ವಿಚ್ಛೇದನಕ್ಕೆ ಸಮ) ಕ್ರಮಕ್ಕೆ ಮೋದಿ ನೇತೃತ್ವದ ಸರ್ಕಾರ ಎಳ್ಳುನೀರು ಬಿಟ್ಟಿದೆ. ಇದರಿಂದ ಸಹಸ್ರಾರು ಮುಸ್ಲಿಂ ಮಹಿಳೆಯರು ಮೋದಿ ಸರ್ಕಾರದ ಈ ಕ್ರಮಕ್ಕೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

5. 370ನೇ ವಿಧಿಯ ರದ್ದತಿ:

ಪ್ರಧಾನಿ ಮೋದಿ ಸರ್ಕಾರ ಭಾರೀ ಮಹತ್ವ ನಿರ್ಧಾರ 370 ನೇ ವಿಧಿಯ ರದ್ದತಿ, ಇಡಿ ದೇಶವೇ ಒಂದು ಬಾರಿ ಈ ನಿರ್ಧಾರಕ್ಕೆ ತಲೆಬಾಗಿತ್ತು. ಕಾಶ್ಮೀರದಲ್ಲಿ ಭಾರೀ ಸಂಭ್ರಮವನ್ನು ಉಂಟು ಮಾಡಿತ್ತು. ಆಗಸ್ಟ್ 5, 2019 ರಂದು ಭಾರತೀಯ ಸಂವಿಧಾನದ 370 ಮತ್ತು 35(A) ವಿಧಿಗಳನ್ನು ರದ್ದುಗೊಳಿಸಿತು. ಇದು ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವಾಗಿತ್ತು. ಭಾರತದ ಇತರ ಪ್ರದೇಶಗಳಿಗೆ ಒಂದು ಕಾನೂನು, ಜಮ್ಮು ಮತ್ತು ಕಾಶ್ಮೀರಕ್ಕೆ ಇನ್ನೊಂದು ಕಾನೂನು ಇತ್ತು. ಇದರಿಂದ ಎಲ್ಲರಿಗೂ ಒಂದೇ ಕಾನೂನು ಎನ್ನುವ ಮೂಲಕ ಮೋದಿ ಸರ್ಕಾರ ಈ ಮಹತ್ವ ನಿರ್ಧಾರವನ್ನು ತೆಗೆದುಕೊಂಡಿದೆ. ಇದೀಗ ಅಲ್ಲಿ ಜನ ಶಾಂತಿ ಮತ್ತು ನಮ್ಮೆದಿಯಿಂದ ಬದುಕುತ್ತಿದ್ದಾರೆ. ಜತೆಗೆ ಅಲ್ಲಿಗೆ ವಿಶೇಷ ಯೋಜನೆಗಳನ್ನು ಕೂಡ ನೀಡಲಾಗುತ್ತಿದೆ. ಆದರೆ ಹಲವು ವಿರೋಧ ಪಕ್ಷದ ನಾಯಕರು ಈ ನಿರ್ಧಾರವನ್ನು ವಿರೋಧಿಸಿದ್ದರು.

ಇದನ್ನೂ ಓದಿ: ಛತ್ತೀಸ್​ಗಡ: ಪ್ರಧಾನಿ ಮೋದಿಯ ಹೊಗಳಿದ ಕಾಂಗ್ರೆಸ್ ನಾಯಕ, ಡಿಸಿಎಂ ಟಿಎಸ್​ ಸಿಂಗ್ ದೇವ್

6. ಸರ್ಜಿಕಲ್ ಸ್ಟ್ರೈಕ್

ದೇಶದ ಸೇನೆಯ ನಿಟ್ಟಿನಲ್ಲಿ ಇದು ಮಹತ್ವದ ನಿರ್ಧಾರವಾಗಿತ್ತು. 2016ರ ಸೆಪ್ಟೆಂಬರ್ 18ರಂದು ಕಾಶ್ಮೀರದ ಉರಿ ಸೇನಾ ನೆಲೆಯ ಮೇಲೆ ಪಾಕಿಸ್ತಾನ ಭಯೋತ್ಪಾದಕರು ನಡೆಸಿದ ಹಠಾತ್ ದಾಳಿಯಿಂದ ಭಾರತೀಯ ಸೇನೆಯ 19 ಯೋಧರು ಹುತಾತ್ಮರಾಗಿದ್ದರು. ಇದರಿಂದ ಕುಪಿತಗೊಂಡ ಭಾರತ, ಪಾಕ್ ಆಕ್ರಮಿತ ಕಾಶ್ಮೀರದಲ್ಲಿ (ಪಿಒಕೆ) ಸರ್ಜಿಕಲ್ ಸ್ಟ್ರೈಕ್ ನಡೆಸಲು ಆದೇಶಿಸಿತು. ಈ ಸರ್ಜಿಕಲ್ ಸ್ಟ್ರೈಕ್​​​ನಲ್ಲಿ 40 ಕ್ಕೂ ಹೆಚ್ಚು ಭಯೋತ್ಪಾದಕರು ಕೊಲ್ಲಲ್ಪಟ್ಟರು ಮತ್ತು ಎಲ್ಲಾ ಭಯೋತ್ಪಾದಕ ಲಾಂಚ್‌ಪ್ಯಾಡ್‌ಗಳನ್ನು ನಾಶಪಡಿಸಲಾಯಿತು.

7.ಅಯೋಧ್ಯೆ ರಾಮ ಮಂದಿರ:

ಹಲವು ವರ್ಷಗಳಿಂದ ವಿವಾದದಲ್ಲಿದ್ದ ರಾಮ ಜನ್ಮಭೂಮಿ ಸುಖ್ಯಾಂತ ಕಂಡಿದ್ದು ಮೋದಿ ಪ್ರಧಾನಿಯಾದ ನಂತರ, ಬಳಿಕ ರಾಮಮಂದಿರಕ್ಕೆ ಪ್ರಧಾನಿ ಮೋದಿ ಅವರು ಆಗಸ್ಟ್​ 5 2020ರಂದು ಶಂಕುಸ್ಥಾಪನೆ ನೆರವೇರಿಸಿದರು. ಅಲ್ಲಿಂದ ಇಲ್ಲಿಯವರೆಗೆ ಅನೇಕ ಕಾರ್ಯಕ್ರಮಗಳನ್ನು ಅಲ್ಲಿ ನಡೆದಿದೆ. ರಾಮಮಂದಿರ ನಿರ್ಮಾಣ ಮಾಡುವುದು ಮೋದಿ ಸರ್ಕಾರದ ಮಹತ್ವ ನಿರ್ಧಾರ ಮತ್ತು ಕನಸು ಕೂಡ ಆಗಿತ್ತು. ಇದೀಗ ರಾಮಮಂದಿರದ ನಿರ್ಮಾಣ ಅಂತ್ಯದಲ್ಲಿದ್ದು, 2024ಕ್ಕೆ ಮಂದಿರ ಲೋಕರ್ಣಾಪಣೆಗೊಳ್ಳಲ್ಲಿದೆ ಎಂದು ಹೇಳಲಾಗಿದೆ.

8.ಕೊರೊನಾ ವ್ಯಾಕ್ಸಿನ್:

ಕೊರೊನಾದಿಂದ ಭಾರತ ಸೇರಿದಂತೆ ಇಡೀ ಜಗತ್ತು ಸಂಕಷ್ಟದಲ್ಲಿ ಸಿಲುಕಿಕೊಂಡಿತ್ತು. ಭಾರತದಲ್ಲಿ ಕೊರೊನಾ ಸೋಂಕುನ್ನು ನಿಭಾಯಿಸುವಲ್ಲಿ ಮೋದಿ ಸರ್ಕಾರ ಮಹತ್ವ ನಿರ್ಧಾರಗಳನ್ನು ತೆಗೆದುಕೊಂಡಿತ್ತು. ಈ ಸಮಯದಲ್ಲಿ ಸರ್ಕಾರ ಜನರ ಸಹಾಯಕ್ಕೆ ಧಾವಿಸಿ, ಜತೆಗೆ ಕೊರೊನಾ ತಡೆಗಟ್ಟಲು ವ್ಯಾಕ್ಸಿನ್​​ನ್ನು ಯಶಸ್ವಿಯಾಗಿ ಪರಿಚಯಿತು. ಇದು ದೇಶದ ಜನರ ಜೀವರಕ್ಷಾವಾಗಿ ಕೆಲಸ ಮಾಡಿತ್ತು. ಯಶಸ್ವಿ ಸಂಶೋಧನೆಯನ್ನು ಭಾರತದ ವೈದ್ಯಲೋಕ ಮಾಡಿತ್ತು. ಸಂಶೋಧನೆಗೆ ಬೇಕಾದ ಎಲ್ಲ ರೀತಿಯ ಸಹಕಾರವನ್ನು ಮೋದಿ ಸರ್ಕಾರ ಮಾಡಿತ್ತು. ಭಾರತಕ್ಕೆ ಮಾತ್ರವಲ್ಲದೆ ವಿಶ್ವದ ಅನೇಕ ದೇಶಗಳಿಗೆ ವ್ಯಾಕ್ಸಿನ್ ರಪ್ತು ಮಾಡುವ ಮೂಲಕ ಭಾರತ ಸಂಜೀವಿನಿಯಾಗಿ ಕೆಲಸ ಮಾಡಿತ್ತು. ಈ ವಿಚಾರವಾಗಿ ಇಡೀ ಜಗತ್ತು ಭಾರತವನ್ನು ಪ್ರಶಂಸಿತ್ತು.

9.ನೂತನ ಸಂಸತ್ ಭವನ

ದೇಶದ ಸಂವಿಧಾನದ ಮೂಲಕ ಸ್ಥಾಪಿತವಾದ ಸಂಸತ್ ಭವನಕ್ಕೆ ನೂತನ ಆಯಾಮ ನೀಡಿದ್ದು ಮೋದಿ ಸರ್ಕಾರ. ದೇಶದ ಸುಂದರವಾದ ನೂತನ ಸಂಸತ್ ಭವನವನ್ನು ಮೋದಿ ಅವರು ಮೇ 28, 2023ರಂದು ಲೋಕರ್ಣಾಪಣೆ ಮಾಡಿದರು. ಇದು ದೇಶದ ದಿಕ್ಕುನ್ನು ಬದಲಾಯಿಸುವ ಇತಿಹಾಸವನ್ನು ಸೃಷ್ಟಿಸಿತ್ತು. ಈ ನೂತನ ಸಂಸತ್ ಭವನ ಸಂಸತ್ತಿನ ಹಳೆಯ ಕ್ರಮಗಳನ್ನು ಮುರಿದು, ಹೊಸ ವಿಚಾರಗಳಿಗೆ ನಾಂದಿ ಹಾಡಿತ್ತು. ಇನ್ನು ಈ ನೂತನ ಸಂಸತ್ ಭವನದಲ್ಲಿ ಸೆ.18ರಿಂದ ಸೆ.22ರವರೆಗೆ ಸಂಸತ್​​ನಲ್ಲಿ​​ ವಿಶೇಷ ಅಧಿವೇಶನ ನಡೆಯಲ್ಲಿದೆ.

10.ಜಿ.20 ಶೃಂಗಸಭೆ

ವಿಶ್ವದ ನಾಯಕರು ಮೆಚ್ಚಿಕೊಂಡ ಜಿ-20 ಸಭೆ ಎಂದರೆ ಅದು ಭಾರತದಲ್ಲಿ ನಡೆದ ಜಿ.20 ಶೃಂಗಸಭೆಯನ್ನು. ಭಾರತದ ಗ್ರಾಮಕ್ಕೂ ಈ ಸಭೆಯ ಕಂಪು ಹರಡಿದೆ. ದೇಶ- ವಿದೇಶದ ನಾಯಕರು ಒಂದು ಬಾರಿ ಭಾರತವನ್ನು ನೋಡುವಂತೆ ಮಾಡಿದ್ದು ಈ ಶೃಂಗಸಭೆ, ಮೋದಿ ನೇತೃತ್ವದಲ್ಲಿ ನಡೆದ 2 ದಿನಗಳ (ಸೆ.9,10) ಜಿ-20 ಶೃಂಗಸಭೆಗೆ ವಿಶ್ವದ ಅನೇಕ ನಾಯಕರು ಭಾರತದ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದರು. ಈ ಸಭೆಯಲ್ಲಿ ಮೋದಿ ಅವರು ಮಹತ್ವದ ನಿರ್ಧಾರಗಳನ್ನು ತೆಗೆದುಕೊಂಡಿದ್ದರು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

 

 

 

Published On - 5:12 pm, Sat, 16 September 23