ಛತ್ತೀಸ್​ಗಡ: ಪ್ರಧಾನಿ ಮೋದಿಯ ಹೊಗಳಿದ ಕಾಂಗ್ರೆಸ್ ನಾಯಕ, ಡಿಸಿಎಂ ಟಿಎಸ್​ ಸಿಂಗ್ ದೇವ್

ಮೋದಿ ಅವರನ್ನು ಸ್ವಾಗತಿಸಿ ನಂತರ ಮಾತನಾಡಿದ ಟಿಎಸ್​ ಸಿಂಗ್ ದೇವ್, ನೀವಿಲ್ಲಿಗೆ ಏನನ್ನೋ ನೀಡಲು ಬಂದಿದ್ದೀರಿ. ಛತ್ತೀಸ್​ಗಡಕ್ಕೆ ಅನೇಕ ಕೊಡುಗೆ ನೀಡಿದ್ದೀರಿ. ಮುಂದಿನ ದಿನಗಳಲ್ಲಿಯೂ ನೀವು ಹೀಗೆಯೇ ಇನ್ನಷ್ಟು ನೀಡಲಿದ್ದೀರಿ ಎಂಬ ವಿಶ್ವಾಸ ನನಗಿದೆ ಎಂದು ಹೇಳಿದ್ದಾರೆ. ಜತೆಗೆ, ಛತ್ತೀಸ್​ಗಡಕ್ಕೆ ಯೋಜನೆಗಳನ್ನು ಘೋಷಣೆ ಮಾಡಿದ್ದಕ್ಕಾಗಿ ಮೋದಿ ಅವರಿಗೆ ಧನ್ಯವಾದ ಸಮರ್ಪಿಸಿದರು.

ಛತ್ತೀಸ್​ಗಡ: ಪ್ರಧಾನಿ ಮೋದಿಯ ಹೊಗಳಿದ ಕಾಂಗ್ರೆಸ್ ನಾಯಕ, ಡಿಸಿಎಂ ಟಿಎಸ್​ ಸಿಂಗ್ ದೇವ್
ಪ್ರಧಾನಿ ಮೋದಿ & ಟಿಎಸ್​ ಸಿಂಗ್ ದೇವ್
Follow us
|

Updated on: Sep 16, 2023 | 3:54 PM

ರಾಯ್​ಪುರ, ಸೆಪ್ಟೆಂಬರ್ 16: ಛತ್ತೀಸ್​​​ಗಡದ ಉಪ ಮುಖ್ಯಮಂತ್ರಿ, ಕಾಂಗ್ರೆಸ್ ನಾಯಕ ಟಿಎಸ್​ ಸಿಂಗ್ ದೇವ್ (TS Singh Deo) ಅವರು ಪ್ರಧಾನ ಮಂತ್ರಿ ನರೇಂದ್ರ ಮೋದಿ (Narendra Modi) ಅವರ ಬಗ್ಗೆ ಅಪಾರ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಮೋದಿ ಅವರು ಛತ್ತೀಸ್​​ಗಡದ 9 ಜಿಲ್ಲೆಗಳಲ್ಲಿ ಆರಂಭಿಸಲಾಗುತ್ತಿರುವ ‘ಕ್ರಿಟಿಕಲ್ ಕೇರ್ ಬ್ಲಾಕ್​​’ ಆಸ್ಪತ್ರೆಗಳ ನಿರ್ಮಾಣಕ್ಕೆ ಗುರುವಾರ ಶಂಕುಸ್ಥಾಪನೆ ನೆರವೇರಿಸಿ 1 ಲಕ್ಷ ಕೌನ್ಸೆಲಿಂಗ್ ಕಾರ್ಡ್​​ಗಳನ್ನು ವಿತರಿಸಿದರು. ಈ ಕಾರ್ಯಕ್ರಮದಲ್ಲಿ ಮೋದಿ ಹಾಗೂ ಟಿಎಸ್​ ಸಿಂಗ್ ದೇವ್ ವೇದಿಕೆ ಹಂಚಿಕೊಂಡಿದ್ದರು.

ಮೋದಿ ಅವರನ್ನು ಸ್ವಾಗತಿಸಿ ನಂತರ ಮಾತನಾಡಿದ ಟಿಎಸ್​ ಸಿಂಗ್ ದೇವ್, ನೀವಿಲ್ಲಿಗೆ ಏನನ್ನೋ ನೀಡಲು ಬಂದಿದ್ದೀರಿ. ಛತ್ತೀಸ್​ಗಡಕ್ಕೆ ಅನೇಕ ಕೊಡುಗೆ ನೀಡಿದ್ದೀರಿ. ಮುಂದಿನ ದಿನಗಳಲ್ಲಿಯೂ ನೀವು ಹೀಗೆಯೇ ಇನ್ನಷ್ಟು ನೀಡಲಿದ್ದೀರಿ ಎಂಬ ವಿಶ್ವಾಸ ನನಗಿದೆ ಎಂದು ಹೇಳಿದ್ದಾರೆ. ಜತೆಗೆ, ಛತ್ತೀಸ್​ಗಡಕ್ಕೆ ಯೋಜನೆಗಳನ್ನು ಘೋಷಣೆ ಮಾಡಿದ್ದಕ್ಕಾಗಿ ಮೋದಿ ಅವರಿಗೆ ಧನ್ಯವಾದ ಸಮರ್ಪಿಸಿದರು.

‘ನಾವು ಕೇಂದ್ರದ ಮಾರ್ಗದರ್ಶನದಲ್ಲಿ ಕೆಲಸ ಮಾಡುತ್ತಿದ್ದೇವೆ. ಅದನ್ನು ಹೇಳದೇ ಇರಲು ನನಗೆ ಸಾಧ್ಯವಿಲ್ಲ. ನನ್ನ ಅನುಭವದ ಪ್ರಕಾರ, ಯಾವುದೇ ರೀತಿಯ ಪಕ್ಷಪಾತದ ಧೋರಣೆಯ ಅನುಭವವಾಗಿಲ್ಲ. ರಾಜ್ಯದಲ್ಲಿ ನಾವು ಕೇಂದ್ರದಿಂದ ಏನನ್ನಾದರೂ ಕೇಳಿದಾಗ ಅವರು ಎಂದಿಗೂ ಸಹಾಯವನ್ನು ನಿರಾಕರಿಸಲಿಲ್ಲ. ದೇಶ ಮತ್ತು ರಾಜ್ಯದ ಅಭಿವೃದ್ಧಿಗಾಗಿ ರಾಜ್ಯ ಮತ್ತು ಕೇಂದ್ರವು ಒಟ್ಟಾಗಿ ಕೆಲಸ ಮಾಡುವುದನ್ನು ಮುಂದುವರಿಸಲಿವೆ ಎಂದು ನಾನು ಭಾವಿಸುತ್ತೇನೆ’ ಎಂದು ಟಿಎಸ್​ ಸಿಂಗ್ ದೇವ್ ಹೇಳಿದ್ದಾರೆ.

ನಂತರ ಪ್ರಧಾನಿ ಮೋದಿ ಅವರು ಸಿಂಗ್ ದೇವ್ ಅವರಿಗೆ ಹಸ್ತಲಾಘವ ನೀಡಿ ಮೆಚ್ಚುಗೆ ಸೂಚಿಸಿದ್ದಾರೆ.

ಇದನ್ನೂ ಓದಿ: PM Modi’s Birthday; ಮೋದಿ ಜನ್ಮದಿನ; ಕಳೆದ 9 ವರ್ಷಗಳಲ್ಲಿ ಪ್ರಧಾನಿ ಘೋಷಿಸಿದ ಪ್ರಮುಖ ಯೋಜನೆಗಳ ವಿವರ ಇಲ್ಲಿದೆ

ಬಳಿಕ ಮಾತನಾಡಿದ ಮೋದಿ, 6,400 ಕೋಟಿ ರೂ.ಗೂ ಹೆಚ್ಚು ಮೊತ್ತದ ರೈಲ್ವೆ ಯೋಜನೆಗಳು ಅನಾವರಣಗೊಳ್ಳುತ್ತಿದ್ದು, ಛತ್ತೀಸ್‌ಗಢ ಅಭಿವೃದ್ಧಿಯತ್ತ ಮಹತ್ವದ ಹೆಜ್ಜೆ ಇಡುತ್ತಿದೆ. ಛತ್ತೀಸ್‌ಗಢ ದೇಶದ ಅಭಿವೃದ್ಧಿಯ ಶಕ್ತಿಕೇಂದ್ರವಾಗಿದೆ ಎಂದು ಹೇಳಿದ್ದಾರೆ.

ಛತ್ತೀಸ್‌ಗಢದಲ್ಲಿ ಕೇಂದ್ರ ಸರ್ಕಾರದಿಂದ ಪ್ರತಿಯೊಂದು ಕ್ಷೇತ್ರದಲ್ಲೂ ಬೃಹತ್ ಯೋಜನೆಗಳನ್ನು ಜಾರಿಗೊಳಿಸಲಾಗುತ್ತಿದ್ದು, ಹೊಸ ಯೋಜನೆಗಳಿಗೆ ಶಂಕುಸ್ಥಾಪನೆ ಮಾಡಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ