AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

6ನೇ ತರಗತಿಯಲ್ಲಿ ಮದುವೆ, 20ನೇ ವಯಸ್ಸಿಗೆ ತಂದೆ, ಜವಾಬ್ದಾರಿಗಳ ನಡುವೆ ನೀಟ್ ಪಾಸಾದ ಯುವಕ!

ರಾಮ್‌ಲಾಲ್ NEET 2022 ಪರೀಕ್ಷೆಯ ಎಲ್ಲ ಹಂತಗಳಲ್ಲಿಯು ತೇರ್ಗಡೆಗೊಂಡಿದ್ದಾರೆ. ಇನ್ನು ಅವರು 5ನೇ ಬಾರಿಯ ಪ್ರಯತ್ನದಲ್ಲಿ ವೈದ್ಯಕೀಯ ಪ್ರವೇಶ ಪರೀಕ್ಷೆ ಬರೆದು ಪಾಸ್​ ಆಗಿದ್ದರೆ. ಆ ಮೂಲಕ, ಅವರು ಕುಟುಂಬದಲ್ಲಿ ಮೊದಲ ವೈದ್ಯರಾಗುತ್ತಾರೆ.

6ನೇ ತರಗತಿಯಲ್ಲಿ ಮದುವೆ, 20ನೇ ವಯಸ್ಸಿಗೆ ತಂದೆ, ಜವಾಬ್ದಾರಿಗಳ ನಡುವೆ ನೀಟ್ ಪಾಸಾದ ಯುವಕ!
ಸಾಂದರ್ಭಿಕ ಚಿತ್ರ
ಅಕ್ಷಯ್​ ಪಲ್ಲಮಜಲು​​
|

Updated on: Sep 16, 2023 | 3:02 PM

Share

ಮದುವೆಯ ನಂತರ ಜವಾಬ್ದಾರಿಗಳು ಹೆಚ್ಚು ಎಂಬುದು ಅನೇಕರ ಮಾತು. ತನ್ನ ಜೀವನವೆಲ್ಲ ಕುಟುಂಬಕ್ಕೆ ಮೀಸಲು ಇಡಬೇಕು ಎಂಬ ಕಟ್ಟುಪಡು, ಅದರಲ್ಲೂ ಚಿಕ್ಕ ವಯಸ್ಸಿನಲ್ಲಿ ಮದುವೆಯಾದವರಿಗೆ ಅರಿಯದ ಮಯಸ್ಸಿನಲ್ಲೇ ಜೀವನದ ಪಾಠ, ಹೀಗಿರುವಾಗ ಓದು, ಸಾಧನೆ ಎಲ್ಲಿ ಸಾಧ್ಯ ಅಲ್ವ, ಆದರೆ ಇದೆಲ್ಲ ಸುಳ್ಳು ಮಾತುಗಳು ಎಂದು ಸಾಬೀತು ಪಡಿಸಿದ್ದಾರೆ ರಾಜಸ್ಥಾನದ ಚಿರಯುವಕ ರಾಮ್‌ಲಾಲ್, ಹೌದು ಛಲವಿದ್ದರೆ ಸಾಕು ಏನಾದರೂ ಸಾಧಿಸಬಹುದು ಎಂಬುದನ್ನು ಇವರ ಮಾಡಿ ತೋರಿಸಿದ್ದಾರೆ. 6ನೇ ತರಗತಿ ಅಂದರೆ 11ನೇ ವಯಸ್ಸಿನಲ್ಲಿ ಮದುವೆಯಾದ ರಾಜಸ್ಥಾನದ ರಾಮ್‌ಲಾಲ್ ಅವರು ಅನೇಕ ಕಷ್ಟ ನೋವುಗಳ ನಡುವೆ ಶಿಕ್ಷಣ ಕ್ಷೇತ್ರದಲ್ಲಿ ಮಹತ್ವದ ಸಾಧನೆ ಮಾಡಿದ್ದಾರೆ. ರಾಮ್‌ಲಾಲ್ ಅವರು ನ್ಯಾಷನಲ್ ಎಲಿಜಿಬಿಲಿಟಿ ಕಮ್ ಎಂಟ್ರೆನ್ಸ್ ಟೆಸ್ಟ್ (NEET) ಪರೀಕ್ಷೆಯನ್ನು ಬರೆದು ತೇರ್ಗಡೆಗೊಳ್ಳುವ ಮೂಲಕ ವೈದ್ಯಕೀಯ ಕ್ಷೇತ್ರಕ್ಕೆ ಹೆಜ್ಜೆ ಇಡಲು ಮುಂದಾಗಿದ್ದಾರೆ.

ರಾಮ್‌ಲಾಲ್ NEET 2022 ಪರೀಕ್ಷೆಯ ಎಲ್ಲ ಹಂತಗಳಲ್ಲಿಯು ತೇರ್ಗಡೆಗೊಂಡಿದ್ದಾರೆ. ಇನ್ನು ಅವರು 5ನೇ ಬಾರಿಯ ಪ್ರಯತ್ನದಲ್ಲಿ ವೈದ್ಯಕೀಯ ಪ್ರವೇಶ ಪರೀಕ್ಷೆ ಬರೆದು ಪಾಸ್​ ಆಗಿದ್ದರೆ. ಆ ಮೂಲಕ, ಅವರು ಕುಟುಂಬದಲ್ಲಿ ಮೊದಲ ವೈದ್ಯರಾಗುತ್ತಾರೆ. ರಾಮ್‌ಲಾಲ್ ಕೇವಲ 11 ವರ್ಷ ವಯಸ್ಸಿನವನಾಗಿದ್ದನು ಅಂದರೆ 6 ನೇ ತರಗತಿಯಲ್ಲಿ ಇರಬೇಕಾದರೆ, ತನ್ನ ಪಕ್ಕದ ಹಳ್ಳಿಯ ಹುಡುಗಿಯ ಜತೆಗೆ ಬಲವಂತದ ಬಾಲ್ಯವಿವಾಹ ಮಾಡುತ್ತಾರೆ. ಈ ಮಧ್ಯೆ ಅವರು ಕುಟುಂಬದ ಆರ್ಥಿಕ ಪರಿಸ್ಥಿತಿಯು ಸರಿ ಇರಲಿಲ್ಲ, ಈ ಮಧ್ಯೆ ರಾಮ್‌ಲಾಲ್ ಅವರು ಓದಬೇಕು ಎಂಬ ಛಲವನ್ನು ಹೊಂದಿದ್ದರು.

ಇನ್ನು ರಾಮ್‌ಲಾಲ್ ಅವರು ಓದುವುದು ಮನೆಯವರಿಗೆ ಇಷ್ಟವಿರಲಿಲ್ಲ. ಈ ನಿರ್ಧಾರಕ್ಕೆ ಅವರ ತಂದೆ ಕೂಡ ವಿರೋಧ ವ್ಯಕ್ತಪಡಿಸಿದ್ದರು. ಅದರೂ ರಾಮ್‌ಲಾಲ್ ಹಠ ಹಿಡಿದು ಓದು ಮುಂದುವರಿಸಿದರು, ಈ ಸಮಯದಲ್ಲಿ ಅವರು ಪತ್ನಿ 10ನೇ ತರಗತಿಗೆ ತನ್ನ ಓದು ಕೊನೆಗೊಳಿಸಿದರು. ಏಕೆಂದರೆ ಪತಿಗೆ ಓದಬೇಕು ಎಂಬ ಆಸೆಗೆ ಆಕೆ ಆಸರೆಯಾಗಿ ನಿಲ್ಲಬೇಕಿತ್ತು. ಜತೆಗೆ ರಾಮ್‌ಲಾಲ್ ಓದಿಗೆ ಸಹಾಯ ಕೂಡ ಮಾಡಿದ್ದಾರೆ.

ಇದನ್ನೂ ಓದಿ: ಧರ್ಮವನ್ನು ನಾಶ ಮಾಡಲು ಸಾಧ್ಯವಿಲ್ಲ, ಧರ್ಮ ಬೇರೆ ರಿಲೀಜಿಯನ್ ಬೇರೆ: ಆರ್​​ಎಸ್​​ಎಸ್​​

ರಾಮ್‌ಲಾಲ್ ಅವರು 10ನೇ ತರಗತಿಯಲ್ಲಿ 75 ಶೇಕಾಡ ಅಂಕವನ್ನು ಪಡೆದು, ಉನ್ನತಮಟ್ಟದ ಶಿಕ್ಷಣದಲ್ಲಿ ವಿಜ್ಞಾನ ವಿಭಾಗವನ್ನು ಆಯ್ಕೆ ಮಾಡಿಕೊಂಡರು. ಇದು ವೈದ್ಯನಾಗುವ ಕಡೆಗೆ ಅವರ ಮೊದಲ ಹೆಜ್ಜೆಯಾಗಿತ್ತು. 2019ರಲ್ಲಿ NEET ಪರೀಕ್ಷೆಯನ್ನು ಬರೆದರು ಒಟ್ಟು 720 ಅಂಕಗಳಲ್ಲಿ 350 ಅಂಕಗಳನ್ನು ಗಳಿಸಿದರು. ನಂತರದ ಪ್ರತಿ NEET ಪ್ರಯತ್ನದಲ್ಲೂ ಹೆಚ್ಚು ಹೆಚ್ಚು ಪಡೆದರು. ನಂತರ ಕೋಟಾದ ಕೋಚಿಂಗ್‌ ಸೇರಲು ನಿರ್ಧರಿಸಿದರು.

NEET 2022ರಲ್ಲಿ 490 ಅಂಕಗಳನ್ನು ಗಳಿಸಿಸುವ ಮೂಲಕ, ಅವರ ಕನಸನ್ನು ನನಸಾಗಿಸಿತು. ನಂತರ ಒಳ್ಳೆಯ ವೈದ್ಯಕೀಯ ಕಾಲೇಜಿಗೆ ಪ್ರವೇಶ ಪಡೆಯುತ್ತಾರೆ. ರಾಮ್‌ಲಾಲ್ ಅವರು ತಮ್ಮ ಪತ್ನಿ ಮತ್ತು ಕುಟುಂಬದ ಜತೆಗೆ ರಾಜಸ್ಥಾನದ ಚಿತ್ತೋರ್‌ಗಢದ ಘೋಸುಂಡಾ ಪ್ರದೇಶದಲ್ಲಿ ವಾಸವಾಗಿದ್ದಾರೆ. ರಾಮ್‌ಲಾಲ್ ಅವರು 20 ವಯಸ್ಸಿನಲ್ಲಿ ಒಂದು ಮಗುವನ್ನು ಪಡೆಯುತ್ತಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!