ಧರ್ಮವನ್ನು ನಾಶ ಮಾಡಲು ಸಾಧ್ಯವಿಲ್ಲ, ಧರ್ಮ ಬೇರೆ ರಿಲೀಜಿಯನ್ ಬೇರೆ: ಆರ್​​ಎಸ್​​ಎಸ್​​

ಸನಾತನ ಧರ್ಮ ನಿರ್ಮೂಲನೆ ಬಗ್ಗೆ ಜನರು ಮಾತನಾಡುತ್ತಾರೆ, ಅವರಿಗೆ ಇದರ ಅರ್ಥ ಗೊತ್ತಿದೆಯೇ? ಅದರ ವ್ಯಾಖ್ಯಾನ ಏನೆಂದು ತಿಳಿದಿದೆಯೇ? ಧರ್ಮ ಮತ್ತು ರಿಲೀಜಿಯನ್ ಬೇರೆ. ಅಧ್ಯಾತ್ಮ ಚಿಂತನೆಯ ಸಮಾಜ ನಮ್ಮದು. ಸತ್ಯ್ ಏಕ್ ಹೇ ಈಶ್ವರ್ ಏಕ್ ಹೇ ಎಂದು ನಮ್ಮ ಸಮಾಜ ನಂಬಿದೆ. ಇಲ್ಲಿ ವಿವಿಧತೆಯಲ್ಲಿ ಏಕತೆ ಇದೆ. ಇಂಡಿಯಾ ಎ ಕಂಟ್ರಿ ದೇಟ್ ಸೆಲೆಬ್ರೇಟ್ ಡೈವರ್ಸಿಟಿ. ಮನುಷ್ಯನ ಅಂತಿಮ ಲಕ್ಷ್ಯ ಏನು ಮೋಕ್ಷ ಪಡೆಯುವುದು. ಅದು ಬೇರೆ ಬೇರೆ ರೀತಿಯಲ್ಲಿರುತ್ತದೆ

ಧರ್ಮವನ್ನು ನಾಶ ಮಾಡಲು ಸಾಧ್ಯವಿಲ್ಲ, ಧರ್ಮ ಬೇರೆ ರಿಲೀಜಿಯನ್ ಬೇರೆ: ಆರ್​​ಎಸ್​​ಎಸ್​​
ಆರ್ಎಸ್ಎಸ್ ಸುದ್ದಿಗೋಷ್ಠಿ
Follow us
ರಶ್ಮಿ ಕಲ್ಲಕಟ್ಟ
|

Updated on: Sep 16, 2023 | 2:36 PM

ಪುಣೆ ಸೆಪ್ಟೆಂಬರ್ 16:ಸೆಪ್ಟಂಬರ್ 13ರಂದು ಆರಂಭವಾದ ರಾಷ್ಟ್ರೀಯ ಸ್ವಯಂಸೇವಕ ಸಂಘದ (Rashtriya Swayamsevak Sangh) ಅಖಿಲ ಭಾರತ ಸಮನ್ವಯ ಸಭೆ (Akhil Bharatiya Samanvay Baithak) ಇಂದು (ಸೆಪ್ಟೆಂಬರ್ 16)ರಂದು ಮುಕ್ತಾಯಗೊಳ್ಳಲಿದೆ. ಇಂದು ಮಧ್ಯಾಹ್ನ 12.30ಕ್ಕೆ ರಾಷ್ಟ್ರೀಯ ಸ್ವಯಂಸೇವಕ ಸಂಘ ಪತ್ರಿಕಾಗೋಷ್ಠಿ ನಡೆಸಿದ್ದು ಆರ್​​ಎಸ್ಎಸ್ ಸಹ ಕಾರ್ಯಾಧ್ಯಕ್ಷ ಡಾ. ಮನಮೋಹನಜಿ ವೈದ್ಯ ಮತ್ತು ಸಂಘದ ಅಖಿಲ ಭಾರತ ಪ್ರಚಾರ ಮುಖ್ಯಸ್ಥ ಸುನೀಲಜಿ ಅಂಬೇಕರ್ ಮಾತನಾಡಿದ್ದಾರೆ.

ಸುದ್ದಿಗೋಷ್ಠಿಯ ಆರಂಭದಲ್ಲಿ ಸ್ವಾಗತ ಕೋರಿ ಮಾತನಾಡಿದ ಸುನಿಲ್ ಅವರು, ಇಂದು ಸಮನ್ವಯ ಬೈಠಕ್ ಪೂರ್ಣಗೊಳ್ಳಲಿದೆ. ಈ ಬೈಠಕ್ ನಲ್ಲಿ ಏನೇನಾಯ್ತು ಎಂಬುದರ ಬಗ್ಗೆ ಮನಮೋಹನ್ ಜೀ ಅವರು ಹೇಳಲಿದ್ದಾರೆ ಎಂದು ಹೇಳಿದ್ದಾರೆ. ನಂತರ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಮನಮೋಹನ್ ಜೀ ವೈದ್ಯ ಅವರು, ಮೂರು ದಿನಗಳ ಬೈಠಕ್ ನಲ್ಲಿ ಏನು ನಡೆಯಿತು ಎಂಬುದರ ಬಗ್ಗೆ ಅರಿಯುವ ಉತ್ಸುಕತೆ ನಿಮಗೆ ಇದೆ. ಇದು ವರ್ಷದಲ್ಲಿ ಒಂದು ಬಾರಿ ಆಗುತ್ತದೆ. ಸಂಘ ಆರಂಭವಾಗಿ 97 ವರ್ಷಗಳಾಗಿವೆ. ಇದು ಹಂತ ಹಂತವಾಗಿ ಬೆಳೆದು ಬಂದಿದೆ. ಸಂಘದ ಉದ್ದೇಶಗಳನ್ನು ನಾಲ್ಕು ಹಂತಗಳಾಗಿ ವಿಭಜಿಸಲಾಗಿದೆ. ಮೊದಲ ಹಂತದಲ್ಲಿ ಹಿಂದೂ ಸಮಾಜವನ್ನು ಒಗ್ಗಟ್ಟಾಗಿಸುವುದು. ಇಡೀ ದೇಶ ಒಂದೇ ದನಿಯಲ್ಲಿ ಹೇಳಬೇಕು, ಹಾಗೆ ಹೇಳಬೇಕಾದರೆ ಅವರಲ್ಲಿ ವಿಶ್ವಾಸ ಮೂಡಿಸಬೇಕು. ಹಾಗೆ ವಿಶ್ವಾಸ ಮೂಡಿಸುವ ಪ್ರಯತ್ನವನ್ನು ಮೊದಲ ಹಂತದಲ್ಲಿ ಮಾಡಲಾಗಿತ್ತು. ಎರಡನೇ ಹಂತ ಎಂದರೆ ಸಂಪೂರ್ಣ ಸಂಘಟನೆಯನ್ನು ಒಗ್ಗೂಡಿಸುವುದು. ಇದರಲ್ಲಿ ವಿವಿಧ ಸ್ತರಗಳಲ್ಲಿನ ಜನರು ಇದ್ದಾರೆ. ಅವರನ್ನೆಲ್ಲ ಒಗ್ಗೂಡಿಸುವುದರ ಜತೆ ಸಂಘದ ಉದ್ದೇಶಗಳನ್ನು ಜನರೆಡೆಗೆ ಕೊಂಡೊಯ್ಯುವುದು ಆಗಿದೆ. ಇದು ಸಂಘದ ವಿಸ್ತರಣೆ ಹಂತ. ಸಂಘಕ್ಕೆ ಬೇರೆ ಶಾಖೆಗಳಲ್ಲ. ಇಲ್ಲಿ ನಿರ್ಣಯ ಸ್ವತಂತ್ರವಾಗಿರುತ್ತದೆ. ಇಲ್ಲಿ ಅನುಭವಗಳನ್ನು ಶೇರ್ ಮಾಡಲಾಗುತ್ತದೆ. ಮೂರನೆಯೇ ಹಂತ 1990ರಲ್ಲಿ ಶುರು ಆಗಿದ್ದು, ಸಮಾಜಕ್ಕೆ ತಲುಪುವ ಕಾರ್ಯಗಳನ್ನು ಇಲ್ಲಿ ಮಾಡಲಾಗಿದೆ. ವಿಪತ್ತು ನಿರ್ವಹಣೆ, ವಿಪತ್ತು ಸಂಭವಿಸಿದಾಗ ಸಹಾಯ ಮಾಡುವುದು ಇದ್ದೇ ಇದೆ. ಆದರೆ ಸಮಾಜದಲ್ಲಿನ ಕೆಳಸ್ತರದ ಜನರಿಗೆ ಅಗತ್ಯ ಸಹಾಯಗಳನ್ನು ಮಾಡುವ ಕಾರ್ಯ ಈ ಹಂತದಲ್ಲಿ ನಡೆದಿದೆ. ಅವರ ಜತೆ ಸಂಪರ್ಕ ಸಾಧಿಸಲು ಸೇವಾ ಪ್ರಚಾರ್ ಸಂಪರ್ಕ್ ವಿಭಾಗ 1991ರಲ್ಲಿ ಶುರುವಾಯಿತು. ಸಮಾಜದಲ್ಲಿ ಸಾಮರಸ್ಯ, ಪರಿಸರ ಸಂರಕ್ಷಣೆ, ಕುಟುಂಬ ಕಲ್ಯಾಣ ಎಲ್ಲವೂ ಈ ಹಂತದಲ್ಲಿ ಬರುತ್ತದೆ.

ನಾಲ್ಕನೇ ಹಂತ 2006ರಲ್ಲಿ ಶುರುವಾಗಿದ್ದು, ದೇಶದ ಸರ್ವಾಂಗೀಣ ಉನ್ನತಿಗಾಗಿ ವಿವಿಧ ಕ್ಷೇತ್ರಗಳಲ್ಲಿ ಸಂಘ ತೊಡಗಿಕೊಂಡಿದೆ.

ಪುಣೆಯಲ್ಲಿ ನಡೆದ ಬೈಠಕ್​​ನಲ್ಲಿ ಏನೇನಾಯ್ತು?

ಸಂಘದಲ್ಲಿ 35 -36 ಮಹಿಳಾ ಸಂಘಟನೆಗಳಿದ್ದು , ಮಹಿಳಾ ಸಮನ್ವಯ ನಡೆಸುವ ಬಗ್ಗೆ ತೀರ್ಮಾನ ಮಾಡಲಾಗಿದೆ. ಮಹಿಳೆಯರ ವಿಶೇಷ ಬೈಠಕ್ ಇದಾಗಲಿದೆ. ದೇಶದ ಅಭಿವೃದ್ಧಿಯಲ್ಲ ಮಹಿಳೆಯರು ಪ್ರಧಾನ ಪಾತ್ರ ವಹಿಸುತ್ತಾರೆ. ವಿವಿಧ ಕ್ಷೇತ್ರದಲ್ಲಿರುವ ಮಹಿಳೆಯರನ್ನು ತಲುಪುವ ಕಾರ್ಯಗಳನ್ನು ಮಾಡಬೇಕು. ಅವರನ್ನು ಸಂಘದಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವ ಬಗ್ಗೆ ಚಿಂತನೆ ನಡೆಸಲಾಗಿದೆ.

ಆಗಸ್ಟ್​​ನಿಂದ ಜನವರಿ ವರೆಗ 73 ಸಮ್ಮೇಳನಗಳು ನಡೆದಿದ್ದು ಇದರಲ್ಲಿ ಒಂದು ಲಕ್ಷಕ್ಕಿಂತ ಹೆಚ್ಚು ಮಹಿಳೆಯರು ಭಾಗವಹಿಸಿದ್ದಾರೆ. ಅದೇ ರೀತಿ ವಿದ್ಯಾರ್ಥಿ, ರೈತ, ಕಾರ್ಮಿಕ ವರ್ಗಗಳನ್ನು ಸಂಘದಲ್ಲಿ ಸಕ್ರಿಯರಾಗುವಂತೆ ಮಾಡಬೇಕು. ಬೇರೆ ಬೇರೆ ಸಂಘಟನೆಗಳ ಜತೆ ಸಮನ್ವಯ ಸಾಧಿಸಬೇಕು, ಪರಸ್ಪರ ಪೂರಕ ಆಗಬೇಕು. ಅವರವರ ಕ್ಷೇತ್ರದಲ್ಲಿ ತೊಡಗಿಸಿಕೊಂಡೇ ದೇಶದ ಅಭಿವೃದ್ಧಿಗೆ ಶ್ರಮಿಸುವಂತೆ ಮಾಡಬೇಕು

ಇದರ ಬಗ್ಗೆ ಚರ್ಚೆ ನಡೆಸಿ ಸಂಘದ ವಿಷಯಗಳನ್ನು ಅವರಲ್ಲಿಗೆ ತಲುಪಿಸುವ ಕಾರ್ಯದ ಜತೆಗೆ ಹೊಸಬರನ್ನು ಸಂಘಕ್ಕೆ ಸೇರಿಸುವ ಕಾರ್ಯವನ್ನೂ ಮಾಡಬೇಕು.

ವಿದ್ಯಾರ್ಥಿ,ರೈತ, ಕಾರ್ಮಿಕ ಸಂಘದಲ್ಲಿ ಸಕ್ರಿಯರಾಗಿಲು ಸಂಘದ ವೈಚಾರಿಕ ವಿಷಯ ಹೇಳಿಕೊಡುವುದು. ಸಮನ್ವಯ ಆಗಬೇಕು. ಪರಸ್ಪರ ಪೂರಕ ಆಗಬೇಕು. ಅವರವರ ಕ್ಷೇತ್ರದಲ್ಲಿ ತೊಡಗಿಕೊಂಡು  ದೇಶದ ಅಭಿವೃದ್ಧಿ ಶ್ರಮಿಸಬೇಕು. ಅವರ ಸಮಸ್ಯೆಯ ಬಗ್ಗೆಯೂ ಮಾತನಾಡಬೇಕಿದೆ.

ಇನ್ನು ಕೆಲವರು ನಮ್ಮ ಸಂಘಟನೆಯಲ್ಲಿ ತೊಡಗಿಸಿಕೊಂಡಿಲ್ಲ, ಆದರೆ ದೇಶ ಅಭಿವೃದ್ಧಿಗಾಗಿ ತುಡಿತ , ದುಡಿತ ಮಾಡುವವರಾಗಿದ್ದಾರೆ. ಹೀಗೆ ಒಂದೇ ಉದ್ದೇಶ ಹೊಂದಿರುವವರನ್ನು ಜತೆಯಾಗಿ ಕರೆದೊಯ್ಯುವ ಬಗ್ಗೆ ಸಂಘ ಕಾರ್ಯ ನಿರ್ವಹಿಸಲಿದೆ. ಅವರನ್ನು ಸಂಪರ್ಕಿಸುವುದು ಹೇಗೆ, ದೇಶದ ಅಭಿವೃದ್ಧಿ ಕಾರ್ಯದಲ್ಲಿ ಅವರನ್ನು ಪಾಲುದಾರರನ್ನಾಗಿ ಮಾಡುವುದು ಹೇಗೆ ಎಂಬುದರ ಬಗ್ಗೆ ಸಂಘ ಚರ್ಚೆ ನಡೆಸಿದೆ. 2019ರಲ್ಲಿ ಕೊರೊನಾದಿಂದಾಗಿ ಲಾಕ್ ಡೌನ್ ಆಯ್ತು. ಈ ವೇಳೆ ಸಂಘದ ಕಾರ್ಯಗಳನ್ನು ನಡೆಸಲಾಗಿಲ್ಲ. ಆದರೂ ಸಂಘದ ಕಾರ್ಯದಲ್ಲಿ ಅಭಿವೃದ್ಧಿ ಆಗಿದೆ. ಸಂಘದಲ್ಲಿ ಶೇ 50 ರಷ್ಟು ವಿದ್ಯಾರ್ಥಿಗಳು ಶೇ 40ರಷ್ಟು 40ರ ಹರೆಯದವರು ಮತ್ತು ಶೇ 10 ರಷ್ಟು ಮಂದಿ 40 ವರ್ಷಕ್ಕಿಂತ ಮೇಲ್ಪಟ್ಟವರಾಗಿದ್ದಾರೆ. ಕಳೆದ 8 ವರ್ಷಗಳಲ್ಲಿ ಯುವಕರು ಸಂಘ ಸೇರ್ಪಡೆಯಾಗಿದ್ದರಲ್ಲಿ ಹೆಚ್ಚಳ ಆಗಿದೆ. ವೆಬ್​​ಸೈಟ್ ನಲ್ಲಿ 20-35ರ ಹರೆಯದವರು ಸಂಘದ ಬಗ್ಗೆ ಆಸಕ್ತಿ ಹೊಂದಿ ಸಂಘ ಸೇರಲು ರಿಕ್ವೆಸ್ಟ್ ಕಳುಹಿಸುತ್ತಾರೆ. ನಮಗೆ ಸುಮಾರು 1 ಲಕ್ಷ ಜನರುಈ ರೀತಿ ರಿಕ್ವೆಸ್ಟ್ ಕಳುಹಿಸಿದ್ದಾರೆ. ಅಂದರೆ ಜನರಲ್ಲಿ ಸಂಘದ ಬಗ್ಗೆ ಒಲವು ಹೆಚ್ಚತ್ತಿದೆ.

ಇದನ್ನೂ ಓದಿ:  ಪುಣೆಯಲ್ಲಿ ಆರ್​​ಎಸ್​​ಎಸ್​​ ಸಮನ್ವಯ ಬೈಠಕ್ ಕಾರ್ಯಸೂಚಿಯಲ್ಲಿ ಮಹಿಳಾ ಸಬಲೀಕರಣ ವಿಷಯ ಚರ್ಚೆ ಸಾಧ್ಯತೆ

ಮಾಧ್ಯಮದವರ ಪ್ರಶ್ನೆಗೆ ಉತ್ತರ

ಪ್ರಶ್ನೆ:  ಏಪ್ರಿಲ್ 23ರಂದು ಶಿಯಾ -ಸುನ್ನಿ ಇರಾನ್, ಸೌದಿ ಅರೇಬಿಯಾ ಜತೆಗೆ ಬಂದಿದೆ .ಇವರನ್ನು ಒಗ್ಗೂಡಿಸಿದ್ದು ಚೀನಾ ಜನರು. ಇವರೆಲ್ಲರೂ ಭಾರತದ ವಿರೋಧಿಗಳೇ. ಈ ಬಗ್ಗೆ ಸಂಘ ಯೋಚಿಸಿದೆಯೇ?

ಉತ್ತರ: ಸಂಘ ಸಂಸ್ಕೃತಿ ಜಾಗೃತಿ ಮೂಡಿಸುತ್ತದೆ. ವಿಭಜನ ಶಕ್ತಿಗಳ ವಿರುದ್ಧ ಸಂಘ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯಗಳನ್ನು ಮಾಡುತ್ತಿವೆ. ನಾವು ನಮ್ಮ ಕೆಲಸ ಮಾಡುತ್ತವೆ. ಸಮಾಜದ ಅಭಿವೃದ್ಧಿಗೆ ಏನು ಮಾಡಬೇಕೋ ಆ ಕಾರ್ಯಗಳನ್ನು ನಾವು ಮಾಡುತ್ತೇವೆ

ಪ್ರಶ್ನೆ: ಮಣಿಪುರ ವಿಷಯ, ಮೀಸಲಾತಿ ವಿಷಯಗಳನ್ನು ಚರ್ಚಿಸಲಾಗಿತ್ತೇ?

ಉತ್ತರ: ಪರಿಶಿಷ್ಟ ಜಾತಿ ಮತ್ತು ಪಂಗಡಗಳನ್ನು ಸಮಾಜದಲ್ಲಿ ಹಿಂದುಳಿಯದಂತೆ ಅವರನ್ನು ಮುಂದೆ ಕರೆದೊಯ್ಯಲು ಸಂವಿಧಾನ ಅವರಿಗೆ ಮೀಸಲಾತಿ ನೀಡಿದೆ. ಅವರಿಗೆ ಮೀಸಲಾತಿ ನೀಡಬೇಕು . ಬಾಕಿ ಮೀಸಲಾತಿ ಬಗ್ಗೆ ಚರ್ಚೆ ಆಗಿಲ್ಲ. ಇನ್ನು ಮಣಿಪುರದ ವಿಷಯ ಈ ಬಗ್ಗೆ ಸರ್ಕಾರ ನಿರ್ಣಯ ಕೈಗೊಳ್ಳಲಿದೆ. ಸಂಘ ಅಲ್ಲಿನ ಮೈತಿ ಮತ್ತು ಕುಕಿ ಸಮುದಾಯದೊಂದಿಗೆ ಸಂಪರ್ಕದಲ್ಲಿದೆ.

ಪ್ರಶ್ನೆ: ರಾಮ ಮಂದಿರದ ಬಗ್ಗೆ ಚರ್ಚೆ ಆಗಿದೆಯೇ ಉತ್ತರ: ರಾಮ ಮಂದಿರ ನಿರ್ಮಾಣ ಆಗಿದೆ. ಇನ್ನುಳಿದಿರುವುದು ಪ್ರಾಣ ಪ್ರತಿಷ್ಠೆ. ಮಕರ ಸಂಕ್ರಾತಿಯ ನಂತರದ ತಿಥಿ ನೋಡಿ ಅಂದು ಪ್ರಾಣ ಪ್ರತಿಷ್ಠೆ ಆಗಲಿದೆ.

ಪ್ರಶ್ನೆ: ಜೆಪಿ ನಡ್ಡಾ ಅವರು ಏನು ಹೇಳಿದ್ದಾರೆ? ಉತ್ತರ: ಇದರ ಬಗ್ಗೆ ಅವರೇ ಹೇಳುತ್ತಾರೆ

ಪ್ರಶ್ನೆ: ಸನಾತನ ಧರ್ಮ ನಿರ್ಮೂಲನೆಗೆ ಸ್ಟಾಲಿನ್ ಕರೆ ನೀಡಿದ್ದರು, ಇತ್ತ ಆರ್​​ಜೆಡಿ ಸಚಿವರು ರಾಮಚರಿತಮಾನಸದ ಬಗ್ಗೆಯೂ ವಿವಾದಾತ್ಮಕ ಹೇಳಿಕೆ ನೀಡಿದ್ದರು ಈ ಬಗ್ಗೆ ನೀವು ಏನು ಹೇಳುತ್ತೀರಿ?

ಉತ್ತರ: ಸನಾತನ ಧರ್ಮ ನಿರ್ಮೂಲನೆ ಬಗ್ಗೆ ಜನರು ಮಾತನಾಡುತ್ತಾರೆ, ಅವರಿಗೆ ಇದರ ಅರ್ಥ ಗೊತ್ತಿದೆಯೇ? ಅದರ ವ್ಯಾಖ್ಯಾನ ಏನೆಂದು ತಿಳಿದಿದೆಯೇ? ಧರ್ಮ ಮತ್ತು ರಿಲೀಜಿಯನ್ ಬೇರೆ. ಅಧ್ಯಾತ್ಮ ಚಿಂತನೆಯ ಸಮಾಜ ನಮ್ಮದು. ಸತ್ಯ್ ಏಕ್ ಹೇ ಈಶ್ವರ್ ಏಕ್ ಹೇ ಎಂದು ನಮ್ಮ ಸಮಾಜ ನಂಬಿದೆ. ಇಲ್ಲಿ ವಿವಿಧತೆಯಲ್ಲಿ ಏಕತೆ ಇದೆ. ಇಂಡಿಯಾ ಎ ಕಂಟ್ರಿ ದೇಟ್ ಸೆಲೆಬ್ರೇಟ್ ಡೈವರ್ಸಿಟಿ. ಮನುಷ್ಯನ ಅಂತಿಮ ಲಕ್ಷ್ಯ ಏನು ಮೋಕ್ಷ ಪಡೆಯುವುದು. ಅದು ಬೇರೆ ಬೇರೆ ರೀತಿಯಲ್ಲಿರುತ್ತದೆ. ಭಾರತದಲ್ಲಿ ಸ್ಪಿರಿಚುವಲ್ ಡೈವರ್ಸಿಟಿ ಇದೆ. ಆದರೆ ಗುರುತು ಒಂದೇ. ವೈಚಾರಿಕ ವಿಷಯಗಳು ಇವೆ. ಸಮಾಜದಲ್ಲಿನ ಅಂಕುಡೊಂಕುಗಳನ್ನು ಸರಿ ಮಾಡುವ ಕೆಲಸವನ್ನು ಸಂಘ ಮಾಡುತ್ತಿದೆ.ಆಧ್ಯಾತ್ಮಿಕ ಸಂತರು ವಿವಿಧ ಜಾತಿಯಿಂದ ಬರುತ್ತಾರೆ. ಇನ್ನುಳಿದವರು ಮಾಡುವುದು ಬರೀ ರಾಜಕೀಯ. ಧರ್ಮಕ್ಕೆ ವಿವಿಧ ಅರ್ಥಗಳಿವೆ. ಎಲ್ಲ ಕಡೆ ಧರ್ಮ ಇದೆ.

ಸುಪ್ರೀಂಕೋರ್ಟ್ ಮೋಟೊ ಯತೋ ಧರ್ಮ ತತೋ ಜಯ ಎಂದು ಹೇಳುತ್ತದೆ. ರಾಷ್ಟ್ರಧ್ವಜದಲ್ಲಿರುವ ಚಕ್ರ ಅದು ಧರ್ಮ ಚಕ್ರ. ಧರ್ಮ ಎಂದರೆ ರಿಲೀಜಿಯನ್ಅ ಲ್ಲ ಎಂದು ಅವರಲ್ಲಿ ಹೇಳಬೇಕು. ಧರ್ಮ ನಾಶವಾಗುವುದಿಲ್ಲ. ಶ್ರೀಕೃಷ್ಣನೂ ಅದನ್ನೇ ಹೇಳಿದ್ದು. ಈಗ ಧರ್ಮದ ಬಗ್ಗೆ ಮಾತನಾಡುವವರು ಮಾಡುತ್ತಿರುವುದು ಬರೀ ರಾಜಕೀಯ

ಪ್ರಶ್ನೆ: ಭಾರತ್ ಹೆಸರಿನ ಬಗ್ಗೆ ಉತ್ತರ: ಹೆಸರು ಭಾರತ್ ಆಗಬೇಕು, ಬರೀ ಹೆಸರು ಮಾತ್ರವಲ್ಲ ಭಾರತೀಯತೆ ಇಲ್ಲಿರಬೇಕು

ಮಹಿಳೆಯರ ಪಾತ್ರ ಬಗ್ಗೆ? ಉತ್ತರ: ಕುಟುಂಬ ಮತ್ತು ಸಮಾಜದಲ್ಲಿ ಮಹಿಳೆಯರು ಪ್ರಮುಖ ಪಾತ್ರವಹಿಸುತ್ತಾರೆ. ಅವರು ಎಲ್ಲ ಕ್ಷೇತ್ರದಲ್ಲಿ ಪ್ರಮುಖ ಪಾತ್ರ ವಹಿಸಬೇಕು.ಎಲ್ಲ ಕ್ಷೇತ್ರದಲ್ಲಿ ಮಹಿಳೆಯರು ಮುಂಚೂಣಿಯಲ್ಲಿರಬೇಕು.

ಪ್ರಶ್ನೆ: ನ್ಯಾಷನಲ್ ಸೆಕ್ಯೂರಿಟಿ ಬಗ್ಗೆ ಏನು ಚರ್ಚೆ ನಡೆದಿದೆ? ಉತ್ತರ: ಇಲ್ಲಿ ಆಗಿಲ್ಲ

ಪ್ರಶ್ನೆ: ಗ್ರಾಮೀಣ ಪ್ರದೇಶದಲ್ಲಿ ಸಂಘ ಹೆಚ್ಚಾಗುತ್ತಿದೆ? ಉತ್ತರ: ಹೌದು,ಗ್ರಾಮೀಣ ಪ್ರದೇಶಗಳಲ್ಲಿ ಸಂಘ ಹೆಚ್ಚುತ್ತಿದೆ. 917 ಜಿಲ್ಲೆಗಳ ಪೈಕಿ 901ರಲ್ಲಿ ಸಂಘ ಇದೆ.ಅದೇ ರೀತಿ 10-12 ಗ್ರಾಮಗಳನ್ನು ಒಗ್ಗೂಡಿಸಿ ಮಂಡಲ ಮಾಡಿದ್ದು, ಶೇ 45 ರಷ್ಟು ಮಂಡಲಗನ್ನು ಸಂಘ ತಲುಪಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್