ಪ್ರಧಾನಿ ನರೇಂದ್ರ ಮೋದಿಯವರ ತಾಯಿ ಹೀರಾಬೆನ್ (Heeraben) ಯಾವುದೇ ಚುನಾವಣೆಯಿರಲಿ ತಮ್ಮ ಮತವನ್ನು ತಪ್ಪದೆ ಚಲಾಯಿಸುತ್ತಾರೆ. ಹಾಗೇ, ಇಂದು ನಡೆಯುತ್ತಿರುವ ಗುಜರಾತ್ನ ಗಾಂಧಿನಗರ ಮುನ್ಸಿಪಲ್ ಕಾರ್ಪೋರೇಶನ್ (ಗಾಂಧಿನಗರ ಮಹಾನಗರ ಪಾಲಿಕೆ) ಚುನಾವಣೆ (Gandhinagar Municipal Corporation)ಯಲ್ಲಿ ಅವರು ಮತದಾನ ಮಾಡಿದ್ದಾರೆ. ಮತಗಟ್ಟೆಗೆ ಬಂದ ಅವರಿಗೆ ಭದ್ರತೆ ಕಲ್ಪಿಸಲಾಗಿತ್ತು. ಜತೆಗೆ ಕುಟುಂಬದವರೂ ಇದ್ದರು.
ಇಂದು ಗಾಂಧಿನಗರ ಮಹಾನಗರ ಪಾಲಿಕೆಯ 11 ವಾರ್ಡ್ಗಳ 44 ಸೀಟ್ಗಳಿಗೆ ಚುನಾವಣೆ ನಡೆಯುತ್ತಿದೆ. ಈ ಚುನಾವಣೆ ಏಪ್ರಿಲ್ನಲ್ಲಿಯೇ ನಡೆಯಬೇಕಿತ್ತು. ಆದರೆ ಕೊವಿಡ್ 19 ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಮುಂದೂಡಲ್ಪಟ್ಟಿತ್ತು. ಇಂದು ಬೆಳಗ್ಗೆ7 ಗಂಟೆಯಿಂದ ಮತದಾನ ಶುರುವಾಗಿದ್ದು, ಸಂಜೆ 6ಗಂಟೆವರೆಗೆ ನಡೆಯಲಿದೆ. ಅಕ್ಟೋಬರ್ 5ರಂದು ಫಲಿತಾಂಶ ಹೊರಬೀಳಲಿದೆ. ಗಾಂಧಿ ನಗರದಲ್ಲಿ 2.8 ಲಕ್ಷ ನೋಂದಾಯಿತ ಮತದಾರರಿದ್ದಾರೆ.
ಗಾಂಧಿನಗರ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಕಾಂಗ್ರೆಸ್, ಬಿಜೆಪಿ, ಆಪ್ಗಳು ಅಭ್ಯರ್ಥಿಗಳನ್ನು ನಿಲ್ಲಿಸಿದ್ದಾರೆ. ಇಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಸಮಾನವಾದ ಫೈಟ್ ನಡೆಯುವ ಸಾಧ್ಯತೆ ಇದೆ. ಇನ್ನು ಆಪ್ನಿಂದ ಸೆಪ್ಟೆಂಬರ್ 30ರಂದು, ಮನೀಶ್ ಸಿಸೋಡಿಯಾ ರೋಡ್ ಶೋ ನಡೆಸಿದ್ದು. ಕಾಂಗ್ರೆಸ್ ಸಣ್ಣ ಮಟ್ಟದಲ್ಲಿ ಪ್ರಚಾರ ಸಭೆ ನಡೆಸಿತ್ತು..ಮನೆ ಬಾಗಿಲಿಗೆ ತೆರಳಿ ಮತ ಕೇಳಿತ್ತು. ಬಿಜೆಪಿಯೂ ಪ್ರಚಾರ ನಡೆಸಿತ್ತು.
Gujarat: Heeraben Modi, the mother of PM Narendra Modi, casts vote in Gandhinagar Municipal Corporation (GMC) elections at a polling centre in Raysan village in the city pic.twitter.com/KddJtXzg1X
— ANI (@ANI) October 3, 2021
ಇದನ್ನೂ ಓದಿ: ಕೃಷಿ ಕಾಯ್ದೆಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ರೈತರ ವಿರುದ್ಧ ಸುಪ್ರೀಂಕೋರ್ಟ್ ಮೆಟ್ಟಿಲೇರಿದ ಹರಿಯಾಣ ಸರ್ಕಾರ
WhatsApp: ವಾಟ್ಸ್ಆ್ಯಪ್ನಲ್ಲಿರುವ ಈ ಹಿಡನ್ ಫೀಚರ್ ಅನ್ನು ನೀವು ಬಳಸಿದ್ದೀರಾ?: ಒಮ್ಮೆ ಚೆಕ್ ಮಾಡಿ
Published On - 12:42 pm, Sun, 3 October 21