ಕಾಂಗ್ರೆಸ್ನಲ್ಲಿ ವಿಷ ತುಂಬಿದೆ ಇಂಡಿಯಾ ಮೈತ್ರಿಕೂಟ ರಾಮನ ಹೆಸರು ಕೇಳಿದರೆ ಸಾಕು ದ್ವೇಷ ಕಾರುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ(Narendra Modi) ಹೇಳಿದ್ದಾರೆ. ಇಂಡಿಯಾ ಒಕ್ಕೂಟವು ರಾಮ ವಿರೋಧಿ ಮನಸ್ಥಿತಿಯನ್ನು ಹೊಂದಿದೆ, ಜಗತ್ತಿನಾದ್ಯಂತ ಲಕ್ಷಾಂತರ ಜನರು ಪೂಜಿಸುವ ಶಕ್ತಿಯನ್ನು ಅವಮಾನಿಸುತ್ತಿವೆ ಎಂದು ಆರೋಪಿಸಿದ್ದಾರೆ.
ಪಿಲಿಭಿತ್ನಲ್ಲಿ ಬಿಜೆಪಿ ಅಭ್ಯರ್ಥಿ ಜಿತಿನ್ ಪ್ರಸಾದ್ ಅವರ ಪರವಾಗಿ ಮೋದಿ ಮತಯಾಚನೆ ಮಾಡಿದರು. ಕಾಂಗ್ರೆಸ್ ರಾಮಮಂದಿರ ನಿರ್ಮಾಣವನ್ನು ತಡೆಯುವ ಪ್ರಯತ್ನ ಮಾಡಿದ್ದು ಮಾತ್ರವಲ್ಲದೆ ಮಹಾಮಸ್ತಕಾಭಿಷೇಕ ಸಮಾರಂಭದ ಆಹ್ವಾನವನ್ನು ಕೂಡ ತಿರಸ್ಕರಿಸಿತ್ತು ಎಂದು ಹೇಳಿದರು.
ಕಾಂಗ್ರೆಸ್ ಪಕ್ಷವು ಈ ಸಮಾರಂಭದಲ್ಲಿ ಪಾಲ್ಗೊಂಡಿದ್ದ ತನ್ನ ಸದಸ್ಯರೆಲ್ಲರನ್ನೂ ದೂರ ಇಟ್ಟಿದೆ. ಈ ದೇಶದ ಪರಂಪರೆ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲ, ಈ ದೇಶದಲ್ಲಿ ಪೂಜಿಸಲ್ಪಡುವ ಶಕ್ತಿಯನ್ನು ಕಾಂಗ್ರೆಸ್ ಅವಮಾನಿಸಿದೆ. ಕಾಂಗ್ರೆಸ್ನ ಪ್ರಣಾಳಿಕೆ ಮುಸ್ಲಿಮ್ ಲೀಗ್ನ ಪ್ರಣಾಳಿಕೆಯಂತೆ ಕಾಣುತ್ತದೆ.ತುಷ್ಟೀಕರಣ ನೀತಿಯನ್ನು ಅನುಸರಿಸುತ್ತಿದೆ ಎಂದರು.
ಮತ್ತಷ್ಟು ಓದಿ:ಇಂಡಿಯಾ ಮೈತ್ರಿಕೂಟವು ಭ್ರಷ್ಟ ಹಾಗೂ ರಾಷ್ಟ್ರ ವಿರೋಧಿ ಶಕ್ತಿಗಳ ಅಡಗುತಾಣವಾಗಿದೆ: ನರೇಂದ್ರ ಮೋದಿ
ಸಮಾಜವಾದಿ ಪಕ್ಷವು ಕಾಂಗ್ರೆಸ್‌ನೊಂದಿಗೆ ನಿಂತಿದೆ ಆದರೆ 1984 ರಲ್ಲಿ ಸಿಖ್ಖರನ್ನು ಗುರಿಯಾಗಿಸಿದಾಗ ನಡೆದ ಗಲಭೆ ನಿಮಗೆ ನೆನಪಿದೆಯೇ? ಬಿಜೆಪಿ ಕರ್ತಾರ್‌ಪುರ ಕಾರಿಡಾರ್ ಅನ್ನು ತೆರೆದಿದೆ ಮತ್ತು ಯಾವಾಗಲೂ ಸಿಖ್ಖರ ಬೆಂಬಲಕ್ಕೆ ನಿಂತಿದೆ.
ಹಿಂದಿನ ಕಾಂಗ್ರೆಸ್ ಸರ್ಕಾರಗಳು ಪ್ರಪಂಚದ ಸಹಾಯವನ್ನು ಕೇಳುತ್ತಿದ್ದವು, ಆದರೆ ಇಂದು ಭಾರತವು ಜಗತ್ತಿಗೆ ಸಹಾಯ ಮಾಡುತ್ತಿದೆ, ಭಾರತಕ್ಕೆ ಯಾವುದೂ ಅಸಾಧ್ಯವಲ್ಲ ಎಂದರು.
ಕಷ್ಟಗಳ ನಡುವೆಯೂ ಭಾರತವು ತನಗೆ ಅಸಾಧ್ಯವಾದುದು ಯಾವುದೂ ಇಲ್ಲ ಎಂಬುದನ್ನು ತೋರಿಸಿಕೊಟ್ಟಿದೆ ಎಂದು ಪ್ರಧಾನಿ ಹೇಳಿದರು. ಇಂದು ಇಡೀ ವಿಶ್ವದಲ್ಲಿ ಭಾರತದ ಕಹಳೆ ಮೊಳಗುತ್ತಿದೆ, ಇದು ನಿಮ್ಮ ಮತದ ಶಕ್ತಿ. ನಿಮ್ಮ ಮತದಿಂದ ಬಲಿಷ್ಠ ಸರ್ಕಾರ ರಚನೆಯಾಗಿದೆ ಉದ್ದೇಶಗಳು ಸರಿಯಾಗಿದ್ದರೆ ಫಲಿತಾಂಶವೂ ಉತ್ತಮವಾಗಿರುತ್ತದೆ ಎಂಬುದನ್ನು ಬಿಜೆಪಿ ಸರ್ಕಾರ ಜಗತ್ತಿಗೆ ತೋರಿಸಿದೆ ಎಂದರು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ