Kannada News Photo gallery Ugadi 2024: Muslims Pray To Lord Venkateswara On Ugadi In Kadapa, Know reason here in Kannada
Ugadi 2024: ಕಡಪದ ಈ ದೇಗುಲಕ್ಕೆ ಯುಗಾದಿಯಂದು ಬರುತ್ತಾರೆ ಸಾಲು ಸಾಲು ಮುಸ್ಲಿಮರು!
ಯುಗಾದಿಯಂದು ತಿರುಮಲದ ಕಡಪ ವೆಂಕಟೇಶ್ವರ ಸ್ವಾಮಿ ದೇವಸ್ಥಾನಕ್ಕೆ ಮುಸ್ಲಿಮರು ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸುತ್ತಾರೆ. ಇದು ಈ ದೇಗುಲದ ವಾಡಿಕೆಯಾಗಿದೆ. ಪ್ರತಿ ವರ್ಷ, ವೆಂಕಟೇಶ್ವರನನ್ನು ಪೂಜಿಸಲು ಮತ್ತು ಪ್ರಾರ್ಥನೆ ಸಲ್ಲಿಸಲು ಮುಸ್ಲಿಂ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲಿಗೆ ಆಗಮಿಸುತ್ತಾರೆ. ವೆಂಕಟೇಶ್ವರ ಸ್ವಾಮಿಯು ಬೀಬಿ ನಾಂಚಾರಮ್ಮರನ್ನು ವಿವಾಹವಾದ ಕಾರಣ, ಇಲ್ಲಿನ ಮುಸ್ಲಿಮರು ಶ್ರೀ ವೆಂಕಟೇಶ್ವರ ಸ್ವಾಮಿಯನ್ನು ಸಂಬಂಧಿ ಎಂದು ಪರಿಗಣಿಸುತ್ತಾರಂತೆ! ಹೀಗೊಂದು ಪ್ರತೀತಿ ಈ ಬಾಗದಲ್ಲಿದೆ.