ಯುಗಾದಿ ಹಬ್ಬದ ದಿನ ಬಾಗಲಕೋಟೆಯ ಬೀಳಗಿ ಪಟ್ಟಣದ ರೈತರ ಎಕ್ಕೆ ಎಲೆ, ಜಕನೇರನ ಕಟ್ಟೆ ಭವಿಷ್ಯ
ಕರ್ನಾಟಕದಲ್ಲಿ ಯುಗಾದಿ ಹಬ್ಬದ ಸಂಭ್ರಮ ಮನೆ ಮಾಡಿದೆ. ಇಂದು (ಏ.09) ರಾಜ್ಯದ ಅನೇಕ ಊರುಗಳಲ್ಲಿ ರಥೋತ್ಸವ, ಪಲ್ಲಕ್ಕಿ ಉತ್ಸವ ಜರಗುತ್ತವೆ. ಯುಗಾದಿ ಹಬ್ಬದ ದಿನ ಬಾಗಲಕೋಟೆ ಜಿಲ್ಲೆ ಬೀಳಗಿ ಪಟ್ಟಣದ ರೈತರು ಎಕ್ಕೆ ಎಲೆ ಭವಿಷ್ಯ ಹೇಳುತ್ತಾರೆ.
Updated on: Apr 09, 2024 | 9:53 AM

ಕರ್ನಾಟಕದಲ್ಲಿ ಯುಗಾದಿ ಹಬ್ಬದ ಸಂಭ್ರಮ ಮನೆ ಮಾಡಿದೆ. ಇಂದು (ಏ.09) ರಾಜ್ಯದ ಅನೇಕ ಊರುಗಳಲ್ಲಿ ರಥೋತ್ಸವ, ಪಲ್ಲಕ್ಕಿ ಉತ್ಸವ ಜರಗುತ್ತವೆ.

ಯುಗಾದಿ ಹಬ್ಬದ ದಿನ ಬಾಗಲಕೋಟೆ ಜಿಲ್ಲೆ ಬೀಳಗಿ ಪಟ್ಟಣದ ರೈತರು ಎಕ್ಕೆ ಎಲೆ ಭವಿಷ್ಯ ಹೇಳುತ್ತಾರೆ.

ಯುಗಾದಿ ಅಮವಾಸ್ಯೆ ದಿನದಂದು ಎಕ್ಕೆ ಎಲೆ ಜಕನೇರನ ಕಟ್ಟೆ ನಿರ್ಮಾಣ ಮಾಡಿ. ಯುಗಾದಿ ಪಾಡ್ಯದ ದಿನ ರೈತರು ಭವಿಷ್ಯ ಹೇಳುತ್ತಾರೆ.

ಮಣ್ಣಿನ ಐದು ಅಡಿ ಚೌಕಾಕಾರದ ಕಟ್ಟೆ ನಿರ್ಮಾಣ ಮಾಡುತ್ತಾರೆ. ಇದಕ್ಕೆ ಕಟ್ಟೆಗೆ ಜಕನೇರನ ಕಟ್ಟೆ ಎಂದು ಕರೆಯುತ್ತಾರೆ.

ಈ ಕಟ್ಟೆಯ ಮೇಲೆ ಚಿಕ್ಕದಾದ ರಂದ್ರಗಳನ್ನು ಮಾಡಿ, ಅದರಲ್ಲಿ 27 ತರಹದ ಧಾನ್ಯಗಳನ್ನು ಹಾಕಿ, ಚರಣದ ಪ್ರಕಾರ ಎಕ್ಕೆ ಎಲೆ ಇಟ್ಟು ಪ್ರಯೋಗ ಮಾಡುತ್ತಾರೆ.

ಕಟ್ಟೆ ಮೇಲಿನ ರಂದ್ರದೊಳಗಿನ ಯಾವ ಧಾನ್ಯ ಉಬ್ಬುತ್ತದೆಯೋ, ಅದು ಸಮೃದ್ದಿಯಾಗಿ ಬೆಳೆಯುತ್ತದೆ ಎಂದು ಅರ್ಥ.

ಎಕ್ಕೆ ಎಲೆಗಳ ತೇವಾಂಶದ ಮೇಲೆ ಈ ವರ್ಷ ಎಷ್ಟು ಪ್ರಮಾಣ ಮಳೆಯಾಗಲಿದೆ ಎಂದು ರೈತರು ತಿಳುದುಕೊಳ್ಳುತ್ತಾರೆ.

ಜಕನೇರನ ಕಟ್ಟೆ ಯಾವ ಭಾಗದಲ್ಲಿ ಬಿರುಕು ಬಿಡುತ್ತದೆ ಆ ಭಾಗದಲ್ಲಿ ಭೂಕಂಪ ಆಗಲಿದೆ ಎಂದು ನಂಬಲಾಗಿದೆ. ಈ ಬಾರಿ ಕಟ್ಟೆಯ ಈಶಾನ್ಯ ಭಾಗದಲ್ಲಿ ಬಿರುಕು ಬಿಟ್ಟಿದೆ. ಈಶಾನ್ಯ ಭಾಗದಲ್ಲಿ ಭೂಕಂಪ ಸಂಭವಿಸಲಿದೆ ಎಂದು ಭವಿಷ್ಯ ನುಡಿಯಲಾಗಿದೆ.

ಮಣ್ಣು ಹಾಗೂ ಬೆಂಡಿನಿಂದ ಕುಂಟೆ, ರಂಟೆ, ಕೂರಿಗೆ, ಮಣ್ಣಿನ ಬಸವಣ್ಣ, ಮಡಿಕೆ, ತಕ್ಕಡಿ, ಮಣ್ಣಿನ ಮಗ್ಗ ನಿರ್ಮಾಣ ಮಾಡಿ ರೈತರು ಕಟ್ಟೆ ಸುತ್ತಲೂ ಇಡುತ್ತಾರೆ.



















