ದೆಹಲಿ: ಲಾಕ್‌ಡೌನ್ ಮುಂದುವರಿಯುತ್ತಾ? ಇಲ್ಲ ರಿಲೀಫ್ ಸಿಗುತ್ತಾ? ಸಾರ್ವಜನಿಕ ಸಂಚಾರಕ್ಕೆ ಅನುಮತಿ ಸಿಗುತ್ತಾ? ಶಾಲಾ-ಕಾಲೇಜುಗಳು ಆರಂಭವಾಗುತ್ವಾ? ಹೀಗೆ ನೂರಾರು ಪ್ರಶ್ನೆಗಳು, ಹಲವು ಯೋಚನೆಗಳನ್ನಿಟ್ಟುಕೊಂಡಿದ್ದ ಜನರು ನಿನ್ನೆ ರಾತ್ರಿ ಮೋದಿ ಭಾಷಣಕ್ಕಾಗಿ ಕಾಯ್ತಿದ್ರು. 130 ಕೋಟಿ ಮಂದಿ ಲಾಕ್‌ಡೌನ್ ಭವಿಷ್ಯ ಕೇಳೋಕೆ ಟಿವಿ ಮುಂದೆ ಕೂತಿದ್ರು. ಮಕ್ಕಳಿಂದ ಹಿಡಿದು ದೊಡ್ಡವರ ತನಕ ಎಲ್ರೂ ತುದಿಗಾಲಲ್ಲಿ ನಿಂತಿದ್ರು. ಅಂದುಕೊಂಡಂತೆಯೇ ಲಾಕ್‌ಡೌನ್ ಬಗ್ಗೆ ಮಾತಾನಾಡಿದ ಮೋದಿ ದೇಶದ ಜನರಿಗೆ ಕೊಂಚ ಶಾಕಿಂಗ್ ನ್ಯೂಸೇ ಕೊಟ್ರು.
ಮೇ 18ರಿಂದ 4ನೇ ಹಂತದ ಲಾಕ್‌ಡೌನ್ ಶುರು!
ಕೊರೊನಾವನ್ನ ಕಟ್ಟಿ ಹಾಕೋಕೆ, ಹೆಮ್ಮಾರಿಯ ಸಾವಿನ ಸುಳಿಯಿಂದ ಬಚಾವ್ ಆಗೋಕೆ ಲಾಕ್‌ಡೌನ್ ಅನ್ನೋದು ಸದ್ಯ ಅನಿವಾರ್ಯವಾಗೋಗಿದೆ. ಹೀಗಾಗಿ ನಿನ್ನೆ ಪ್ರಧಾನಿ ಮೋದಿ ಮೇ 18ರಿಂದ 4ನೇ ಹಂತದ ಲಾಕ್‌ಡೌನ್ ಜಾರಿಯಾಗೋದಾಗಿ ಹೇಳಿದ್ರು. ಆದ್ರೆ 4ನೇ ಹಂತದ ಲಾಕ್‌ಡೌನ್ ಹೊಸ ರೂಪರೇಷೆ ಹಾಗೂ ಹೊಸ ನಿಯಮಗಳೊಂದಿಗೆ ವಿಭಿನ್ನವಾಗಿರುತ್ತೆ ಅಂದ್ರು. ಅಷ್ಟೇ ಅಲ್ಲದೆ ಮೇ 18ಕ್ಕೂ ಮೊದಲೇ ಹೊಸ ರೂಲ್ಸ್ ಘೋಷಿಸಲಾಗುತ್ತೆ. ಜೊತೆಗೆ ರಾಜ್ಯಗಳ ಸಲಹೆ ಆಧರಿಸಿ ಲಾಕ್‌ಡೌನ್ ಬಗ್ಗೆ ನಿರ್ಧಾರ ಕೈಗೊಳ್ಳಲಾಗುತ್ತೆ ಅಂದ್ರು.
ಇನ್ನು 4ನೇ ಹಂತದ ಲಾಕ್ಡೌನ್ನಲ್ಲಿರೋ ಹೊಸ ರೂಲ್ಸ್ ಏನು? ಹೊಸ ಮಾರ್ಗಸೂಚಿಯಲ್ಲಿ ಏನೇನಿರುತ್ತೆ ಅನ್ನೋದನ್ನ ನೋಡೋದಾದ್ರೆ.
ಹೊಸ ಮಾರ್ಗಸೂಚಿಯಲ್ಲಿ ಏನಿರುತ್ತೆ?
ಕಂಟೇನ್ಮೆಂಟ್ ಜೋನ್ಗಳಲ್ಲಿ ಮಾತ್ರ ಲಾಕ್‌ಡೌನ್ ಮುಂದುವರಿಸೋ ಸಾಧ್ಯತೆಯಿದೆ. ಕಂಟೇನ್ಮೆಂಟ್ ಜೋನ್ ಬಿಟ್ಟು ಬೇರೆ ವಲಯಗಳಲ್ಲಿ ಆರ್ಥಿಕ ಚಟುವಟಿಕೆಗೆ ಅವಕಾಶ ಸಿಗಬಹುದು. ಕಂಪನಿ, ಕಾರ್ಖಾನೆಗಳಲ್ಲಿ ಶೇ.33ರ ಬದಲು ಶೇ.50ರಷ್ಟು ಕಾರ್ಮಿಕರನ್ನ ಬಳಸಿಕೊಳ್ಳಲು ಸೂಚಿಸಬಹುದು.
ಇನ್ನು ಮಹಾನಗರಗಳಲ್ಲಿ & ಗ್ರಾಮೀಣ ಭಾಗದಲ್ಲಿ ಸಾರ್ವಜನಿಕ ಸಂಚಾರ ಆರಂಭಿಸಬಹುದು. ದೊಡ್ಡ ನಗರಗಳಿಗೆ ಆರಂಭವಾದ ರೈಲು ಸಂಚಾರ ಸಣ್ಣ ನಗರಗಳಿಗೂ ವಿಸ್ತರಣೆಯಾಗ್ಬಹುದು. ಅಷ್ಟೇ ಅಲ್ಲದೆ ದೊಡ್ಡ ದೊಡ್ಡ ನಗರಗಳಿಗೆ ದೇಶೀಯ ವಿಮಾನ ಸಂಚಾರ ಆರಂಭ ಸಾಧ್ಯತೆಯಿದೆ. ಜೊತೆಗೆ ನಗರಗಳಲ್ಲಿ ಆಟೋ, ಕ್ಯಾಬ್ಗಳ ಸಂಚಾರಕ್ಕೆ ಅವಕಾಶ ಸಿಗ್ಬಹುದು. ಇನ್ನು ಕೊರೊನಾ ಜೋನ್ ಗುರುತಿಸುವ ಜವಾಬ್ದಾರಿ ರಾಜ್ಯಗಳಿಗೆ ಬಿಡಬಹುದು ಹಾಗೂ ಬಹುತೇಕ ಅಂಗಡಿ ಮುಂಗಟ್ಟು ತೆರೆಯಲು ಅವಕಾಶ ನೀಡುವ ಸಾಧ್ಯತೆಯಿದೆ.
ಹೀಗೆ ಕೇಂದ್ರ ಸರ್ಕಾರ ಹೊರಡಿಸಲಿರೋ ಮಾರ್ಗಸೂಚಿ ಮೇಲೆ ಜನರು ಸಾಕಷ್ಟು ನಿರೀಕ್ಷೆ ಇಟ್ಕೊಂಡಿದ್ದು, ಇನ್ನೆರಡು ದಿನಗಳಲ್ಲಿ ಮಾರ್ಗಸೂಚಿ ಬಿಡುಗಡೆಯಾಗಬಹುದು. ಆದ್ರೆ ಯಾವ್ಯಾವ ಕ್ಷೇತ್ರಗಳಿಗೆ ಲಾಕ್ನಿಂದ ರಿಲೀಫ್ ಸಿಗುತ್ತೆ? ಕೊರೊನಾ ಅಟ್ಟಹಾಸ ಹೆಚ್ಚಾಗ್ತಿರೋದ್ರ ನಡ್ವೆಯೂ ಲಾಕ್ಡೌನ್ನ ಇನ್ನಷ್ಟು ಸಡಿಲಿಕೆ ಮಾಡೋ ಸಾಧ್ಯತೆ ಇದೆಯಾ? ಅನ್ನೋದನ್ನ ಕಾದು ನೋಡ್ಬೇಕಿದೆ.
Published On - 7:46 am, Wed, 13 May 20