ಬ್ಯಾಂಕ್​ಗಳು ನೀಡುವ ಸಾಲಕ್ಕೆ ಕೇಂದ್ರ ಸರ್ಕಾರವೇ ಗ್ಯಾರಂಟಿ: ಸಚಿವೆ ನಿರ್ಮಲಾ ಘೋಷಣೆ

ದೆಹಲಿ: ಕೊರೊನಾ ಸಂಕಷ್ಟ ಕಾಲದಲ್ಲಿ ದೇಶದ ಉದ್ಯಮವಲಯದ ಕೈಹಿಡಿಯಲು ನಿನ್ನೆ ರಾತ್ರಿ ಪ್ರಧಾನಿ ನರೇಂದ್ರ ಮೋದಿ ದೇಶವನ್ನುದ್ದೇಶಿಸಿ ಭಾಷಣ ಮಾಡುತ್ತಾ 20 ಲಕ್ಷ ಕೋಟಿ ರೂಪಾಯಿ ಆರ್ಥಿಕ ಪ್ಯಾಕೇಜ್ ಘೋಷಿಸಿದ್ದರು. ಆ ಲೆಕ್ಕದ ಬಾಬತ್ತು ಹೇಗಿರಲಿದೆ ಎಂಬುದನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ನೀಡಲಿದ್ದಾರೆ ಎಂದೂ ತಿಳಿಸಿದ್ದರು. ಅದರಂತೆ ಸಚಿವೆ ನಿರ್ಮಲಾ ಇದೀಗ ಸುದ್ದಿಗೋಷ್ಠಿ ನಡೆಸಿದ್ದು, 20 ಲಕ್ಷ ಕೋಟಿ ರೂಪಾಯಿ ಆರ್ಥಿಕ ಪ್ಯಾಕೇಜ್ ವಿವರಣೆಯನ್ನು ಒಂದೊಂದಾಗಿ ನೀಡುತ್ತಿದ್ದಾರೆ. ನಮ್ಮ ಹಣಕಾಸು ಸಚಿವಾಲಯದ ಹಿರಿಯ ಅಧಿಕಾರಿಗಳನ್ನೊಳಗೊಂಡ ತಂಡ […]

ಬ್ಯಾಂಕ್​ಗಳು ನೀಡುವ ಸಾಲಕ್ಕೆ ಕೇಂದ್ರ ಸರ್ಕಾರವೇ ಗ್ಯಾರಂಟಿ: ಸಚಿವೆ ನಿರ್ಮಲಾ ಘೋಷಣೆ
Follow us
ಸಾಧು ಶ್ರೀನಾಥ್​
|

Updated on:May 14, 2020 | 9:40 AM

ದೆಹಲಿ: ಕೊರೊನಾ ಸಂಕಷ್ಟ ಕಾಲದಲ್ಲಿ ದೇಶದ ಉದ್ಯಮವಲಯದ ಕೈಹಿಡಿಯಲು ನಿನ್ನೆ ರಾತ್ರಿ ಪ್ರಧಾನಿ ನರೇಂದ್ರ ಮೋದಿ ದೇಶವನ್ನುದ್ದೇಶಿಸಿ ಭಾಷಣ ಮಾಡುತ್ತಾ 20 ಲಕ್ಷ ಕೋಟಿ ರೂಪಾಯಿ ಆರ್ಥಿಕ ಪ್ಯಾಕೇಜ್ ಘೋಷಿಸಿದ್ದರು. ಆ ಲೆಕ್ಕದ ಬಾಬತ್ತು ಹೇಗಿರಲಿದೆ ಎಂಬುದನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ನೀಡಲಿದ್ದಾರೆ ಎಂದೂ ತಿಳಿಸಿದ್ದರು. ಅದರಂತೆ ಸಚಿವೆ ನಿರ್ಮಲಾ ಇದೀಗ ಸುದ್ದಿಗೋಷ್ಠಿ ನಡೆಸಿದ್ದು, 20 ಲಕ್ಷ ಕೋಟಿ ರೂಪಾಯಿ ಆರ್ಥಿಕ ಪ್ಯಾಕೇಜ್ ವಿವರಣೆಯನ್ನು ಒಂದೊಂದಾಗಿ ನೀಡುತ್ತಿದ್ದಾರೆ.

ನಮ್ಮ ಹಣಕಾಸು ಸಚಿವಾಲಯದ ಹಿರಿಯ ಅಧಿಕಾರಿಗಳನ್ನೊಳಗೊಂಡ ತಂಡ ಇದೇ ರೀತಿ ಇನ್ನು ಮೂರ್ನಾಲ್ಕು ದಿನಗಳ ಕಾಲ ನಿಮ್ಮ ಮುಂದೆ ಬಂದು ಪ್ರಧಾನಿ ಮೋದಿ ಆರ್ಥಿಕ ಪ್ಯಾಕೇಜ್​ ಬಗ್ಗೆ ವಿವರಣೆ ನೀಡುತ್ತೇವೆ. ಈ ಎಲ್ಲ ಮಾರ್ಪಾಡುಗಳೂ, ಆರ್ಥಿಕ ಪ್ಯಾಕೇಜ್​ ಲಾಭಗಳು ನಾಳೆಯಿಂದಲೇ ಜಾರಿಗೆ ಬರಲಿದ್ದು, 2021ನೇ ಮಾರ್ಚ್​ವರೆಗೆ ಚಾಲ್ತಿಯಲ್ಲಿರುತ್ತದೆ.

ವಲಸಿಗ ಕಾರ್ಮಿಕರು, ದಿವ್ಯಾಂಗರು, ಹಿರಿಯ ನಾಗರಿಕರಿಗೆ ಕೇಂದ್ರ ನೆರವು ನೀಡಲಿದೆ. 18 ಸಾವಿರ ಕೋಟಿ ರೂಪಾಯಿಯಷ್ಟು ಆದಾಯ ತೆರಿಗೆ ವಾಪಸ್ ಮಾಡಲಿದ್ದೇವೆ. ಇದರಿಂದ 14 ಕೋಟಿ ಆದಾಯ ತೆರಿಗೆ ಪಾವತಿದಾರರಿಗೆ ನೆರವಾಗಲಿದೆ.

ಮಧ್ಯಮ-ಸಣ್ಣ ಕೈಗಾರಿಕೆಗಳಿಗೆ ಸಾಲದ ನೆರವು: 

ಮಧ್ಯಮ-ಸಣ್ಣ ಕೈಗಾರಿಕೆಗಳಿಗೆ (ಎಂಎಸ್​ಎಂಇ), ಎನ್​ಬಿಎಫ್​ಸಿ, ಗುತ್ತಿಗೆದಾರರು, ರಿಯಲ್ ಎಸ್ಟೇಟ್​ ಕ್ಷೇತ್ರಗಳಲ್ಲಿ 25-100 ಕೋಟಿ ವಹಿವಾಟು ಇರುವ ಕಂಪನಿಗಳಿಗೆ ಈ ಆರ್ಥಿಕ ನೆರವು. ಇದರಿಂದ 45 ಲಕ್ಷ ಎಂಎಸ್​ಎಂಇ ಕಂಪನಿಗಳಿಗೆ ನೆರವಾಗಲಿದೆ. ಎಂಎಸ್​ಎಂಇಗಳಿಗೆ 3 ಲಕ್ಷ ಕೋಟಿ ರೂಪಾಯಿ ಸಾಲವನ್ನು ಯಾವುದೇ ಅಡಮಾನವಿಲ್ಲದೆ ನೀಡಲಾಗುವುದು.

ಮುಖ್ಯಾಂಶಗಳು:

1) ಮುಂದಿನ ಮೂರು ತಿಂಗಳು ಎಟಿಎಂಗಳಲ್ಲಿ ಹಣ ವಿತ್​ಡ್ರಾ ಮಾಡಲು ಶುಲ್ಕ ವಿಧಿಸಲ್ಲ 2) ಸಣ್ಣ ಕೈಗಾರಿಕೆಗಳು ಸಂಬಳ ನೀಡಲು ಅವಶ್ಯವಿದ್ದರೆ ತಕ್ಷಣ ಹಣ ಬಿಡುಗಡೆ 3) ಬ್ಯಾಂಕ್​ಗಳು ನೀಡುವ ಸಾಲಕ್ಕೆ ಕೇಂದ್ರ ಸರ್ಕಾರವೇ ಗ್ಯಾರಂಟಿ ನೀಡಲಿದೆ 4) ಅಭಿವೃದ್ಧಿ ಸಾಧಿಸುತ್ತಿರುವ ಸಣ್ಣ ಕೈಗಾರಿಕೆಗಳ ನೆರವಿಗೆ 10 ಸಾವಿರ ಕೋಟಿ ರೂ.

5) MSME ಗಳ ವರ್ಗೀಕರಣವೇ ಮಾರ್ಪಾಡು: ಮಧ್ಯಮ, ಸಣ್ಣ, ಅತಿಸಣ್ಣ, ಗೃಹ ಕೈಗಾರಿಕೆಗಳ (MSME) ವರ್ಗೀಕರಣವೇ ಬದಲಾಗಿದೆ. ಬಂಡವಾಳ ಹೂಡಿಕೆ ಸಾಮರ್ಥ್ಯದ ಲಿಮಿಟ್​ ಅನ್ನು ಕಡಿಮೆ ಮಾಡಲಾಗಿದೆ. ಇದು 45 ಲಕ್ಷ ಸಣ್ಣ ಕೈಗಾರಿಕೆಗಳಿಗೆ ಪ್ರಯೋಜನವಾಗಲಿದೆ. 1 ಕೋಟಿ ಹೂಡಿಕೆ, 5 ಕೋಟಿವರೆಗಿನ ವಹಿವಾಟು ನಡೆಸುವ ಉದ್ದಿಮೆ ಸಣ್ಣ ಉದ್ದಿಮೆ ಎಂದು ಪರಿಗಣಿಸಲಾಗುವುದು.

6) ಉತ್ಪಾದನಾ ವಲಯ ಮತ್ತು ಸೇವಾ ಆಧಾರಿತ ಸಣ್ಣ ಕೈಗಾರಿಕೆಗಳು ಒಂದೇ. ಸಾಲ ಮರುಪಾವತಿಗೆ 4 ವರ್ಷದವರೆಗೆ ಕಾಲಾವಕಾಶ. ಮೊದಲ 12 ತಿಂಗಳು ಸಾಲ ಮರುಪಾವತಿಸುವಂತಿಲ್ಲ. ವ್ಯಾಪಾರಿಗಳು, ಕಾರ್ಮಿಕರಿಗೆ ಇಪಿಎಫ್​ ಮೂಲಕ 2,500 ಕೋಟಿ ರೂ. ನೆರವು

7) ಸ್ವಾವಲಂಬನೆಗೇ ಆದ್ಯತೆ, ವಿದೇಶಿ ಕಂಪನಿಗಳಿಗೆ ಮಣೆ ಹಾಕೋಲ್ಲ!:  ₹200 ಕೋಟಿವರೆಗೆ ಜಾಗತಿಕ ಟೆಂಡರ್​ ಅಗತ್ಯವಿಲ್ಲ. ವಿದೇಶಿ ಕಂಪನಿಗಳು ಈ ಟೆಂಡರ್​ನಲ್ಲಿ ಭಾಗವಹಿಸುವಂತಿಲ್ಲ. ಇದರಿಂದ ನಮ್ಮ ದೇಶದ ಸಣ್ಣ ಉದ್ಯಮಿಗಳಿಗೆ ಅನುಕೂಲವಾಗಲಿದೆ. ಸಣ್ಣ ಕೈಗಾರಿಕೆಗಳಿಗೆ ಇ-ಮಾರ್ಕೆಟ್ ಮೂಲಕ ಪೂರಕ ವಾತಾವರಣ ನಿರ್ಮಾಣ ಮಾಡಿಕೊಡಲಾಗುವುದು. ಮುಂದಿನ 45 ದಿನಗಳಲ್ಲಿ ಸಣ್ಣ ಕೈಗಾರಿಕೆಗಳಿಗೆ ಸರ್ಕಾರದ ವತಿಯಿಂದ ಉಳಿಸಿಕೊಂಡಿರುವ ಬಾಕಿ ವಾಪಸ್ ಕೊಡಲಿದ್ದೇವೆ.

8) ಜೂನ್, ಜುಲೈ ಮತ್ತು ಆಗಸ್ಟ್.. ಹೀಗೆ 3 ತಿಂಗಳ ಕಾಲ ಪಿಎಫ್​ ಖಾತೆಗೆ ಕೇಂದ್ರದಿಂದಲೇ ಹಣ ಹಾಕಲಾಗುವುದು. ಇದು 15 ಸಾವಿರ ರೂಪಾಯಿ ಒಳಗಿನ ವೇತನದಾರರಿಗೆ ಪಾವತಿಯಾಗಲಿದೆ. ಕಂಪನಿ ಮತ್ತು ನೌಕರರ ಪಾಲಿನ ವಂತಿಗೆಯನ್ನು ಕೇಂದ್ರವೇ ಪಾವತಿಸಲಿದೆ. ಇದರಿಂದ 72.5 ಲಕ್ಷ ಕಾರ್ಮಿಕರಿಗೆ EPF​ನಿಂದ ಅನುಕೂಲವಾಗಲಿದೆ. ವ್ಯಾಪಾರಿಗಳು, ಕಾರ್ಮಿಕರಿಗೆ ಇಪಿಎಫ್​ ಮೂಲಕ 2,500 ಕೋಟಿ ರೂ. ನೆರವು ಲಭಿಸಲಿದೆ.

9) 15 ಸಾವಿರ ರೂಪಾಯಿ ಮೇಲ್ಪಟ್ಟ ಸಂಬಳದಾರರಿಗೂ ಕೇಂದ್ರದಿಂದ ರಿಲೀಫ್ ದೊರೆತಿದೆ. ನೌಕರರ ಪಿಎಫ್​ ಪಾಲು ಶೇಕಡಾ 12 ರಿಂದ ಶೇಕಡಾ 10ಕ್ಕೆ ಇಳಿಕೆ ಮಾಡಲಾಗಿದೆ. ಅಂದ್ರೆ ಶೇ. 2 ರಷ್ಟು ಮೊತ್ತ ಸಂಬಳದಲ್ಲಿಯೇ ನೌಕರರಿಗೆ ಪಾವತಿಯಾಗಲಿದೆ.

10) ಬ್ಯಾಂಕೇತರ ಹಣಕಾಸು ಸಂಸ್ಥೆಗಳು, ಗೃಹ ಸಾಲ ಕಂಪನಿಗಳು, ಸಣ್ಣ ಸಾಲ ನೀಡುವ ಕಂಪನಿಗಳಿಗೆ 30 ಸಾವಿರ ಕೋಟಿ ರೂಪಾಯಿ ನೀಡಲಾಗುತ್ತದೆ. ಈ ವಲಯ ಕಂಪನಿಗಳು ನೀಡುವ ಸಾಲಕ್ಕೆ ಕೇಂದ್ರ ಸರ್ಕಾರವೇ ಗ್ಯಾರಂಟಿ ನೀಡಲಿದೆ.

11) ಬ್ಯಾಂಕಿಂಗ್ ಯೇತರ ಹಣಕಾಸು ಸಂಸ್ಥೆ (ಎನ್​ಬಿಎಫ್​ಸಿ) ವಲಯಕ್ಕೆ ಹೊಸ ಆರ್ಥಿಕ ಪ್ಯಾಕೇಜ್ ಅನುಸಾರ 45 ಸಾವಿರ ಕೋಟಿ ರೂಪಾಯಿ ಹಣ ನೀಡಿಕೆ. ಈ ವಲಯದ ಸಾಲಕ್ಕೂ ಕೇಂದ್ರ ಸರ್ಕಾರವೇ ಗ್ಯಾರಂಟಿ. ಸಣ್ಣ ಕೈಗಾರಿಕೆಗಳಿಗೆ ನೀಡುವ ಸಾಲಕ್ಕೆ ಕೇಂದ್ರದಿಂದ ಗ್ಯಾರಂಟಿ ನೀಡಲಾಗುವುದು.

12) ವಿದ್ಯುತ್ ಸರಬರಾಜು ಕಂಪನಿಗಳಿಗೆ 90 ಸಾವಿರ ಕೋಟಿ ಮೀಸಲು: ವಿದ್ಯುತ್ ಸರಬರಾಜು ಕಂಪನಿಗಳು ಕೊರೊನಾದಿಂದಾಗಿ ಭಾರಿ ಸಂಕಷ್ಟಕ್ಕೆ ಸಿಲುಕಿವೆ. 90 ಸಾವಿರ ಕೋಟಿ ರೂಪಾಯಿಯನ್ನು ವಿದ್ಯುತ್ ಸರಬರಾಜು ಕಂಪನಿಗಳಿಗೆ ಹೊಸ ಆರ್ಥಿಕ ಪ್ಯಾಕೇಜ್ ಅನುಸಾರ ಮೀಸಲು ಇಡಲಾಗಿದೆ. ವಿದ್ಯುತ್ ಸರಬರಾಜು ಕಂಪನಿಗಳಿಗೆ ನೀಡಿರುವ ಗ್ಯಾರಂಟಿ ಮೂಲಕ ಹಣ ಪಾವತಿ ಮಾಡಲಾಗುವುದು. ಸರ್ಕಾರಗಳು ಉಳಿಸಿಕೊಂಡಿರುವ ಹಳೆಯ ಬಾಕಿ ಪಾವತಿಗೆ ಹಣ ಮೀಸಲು ಇಡಲಾಗಿದೆ. ಜೊತೆಗೆ ವಿದ್ಯುತ್​ ಸರಬರಾಜು ಕಂಪನಿಗಳು ವಿದ್ಯುತ್​ ಉತ್ಪಾದಿಸುವ ಕಂಪನಿಗಳಿಗೆ ನೀಡಿರುವ ಬಾಕಿ ಪಾವತಿಗೂ ಹಣಕಾಸು ನೀಡಲಾಗುವುದು.

ಕೇಂದ್ರದ ಈ ಸೌಲಭ್ಯವನ್ನು ಗ್ರಾಹಕರಿಗೆ ನೀಡುವ ಕಂಪನಿಗಳಿಗೆ ಮಾತ್ರ ರಿಬೇಟ್ ಮಾದರಿಯಲ್ಲಿ ನೀಡಲಾಗುವುದು. ಇದರೊಂದಿಗೆ ವಿದ್ಯುತ್​ ಸರಬರಾಜು ಕಂಪನಿಗಳಿಗೆ ₹90 ಸಾವಿರ ಕೋಟಿ ಪ್ಯಾಕೇಜ್ ಘೋಷಣೆಯಾಗಿದೆ. ಇದರಿಂದ ವಿದ್ಯುತ್ ಸರಬರಾಜು, ಉತ್ಪಾದನಾ ಕಂಪನಿಗಳಿಗೆ ಅನುಕೂಲವಾಗಲಿದೆ.

13) ಸರ್ಕಾರಿ ಗುತ್ತಿಗೆದಾರರಿಗೆ ರಿಲೀಫ್ ನೀಡಿದ ವಿತ್ತ ಸಚಿವೆ ನಿರ್ಮಲಾ: ಕೇಂದ್ರ ಸರ್ಕಾರದಡಿ ಬರುವ ಗುತ್ತಿಗೆದಾರರ ಗುತ್ತಿಗೆ ಅವಧಿಯನ್ನು 6 ತಿಂಗಳವರೆಗೆ, ಕಾಮಗಾರಿಗಳ ಪೂರ್ಣಗೊಳಿಸಲು ವಿಸ್ತರಿಸಲಾಗುವುದು. ಗುತ್ತಿಗೆದಾರರು ನೀಡಿರುವ ಬ್ಯಾಂಕ್​ ಗ್ಯಾರಂಟಿಯನ್ನು ಮರುಪಾವತಿ ಮಾಡಬೇಕು. ಹಂತಹಂತವಾಗಿ ನಿರ್ಮಾಣ ಕೆಲಸ ಮುಗಿಯುತ್ತಿದ್ದಂತೆ ಬ್ಯಾಂಕ್​ ಗ್ಯಾರಂಟಿ ವಾಪಸ್ ನೀಡಬೇಕು.

14) ‘ರಿಯಲ್’ ಆರ್ಥಿಕ ಪ್ಯಾಕೇಜ್: ರಿಯಲ್ ಎಸ್ಟೇಟ್​ ನಿಯಂತ್ರಣ ಪ್ರಾಧಿಕಾರಕ್ಕೆ ಅವಕಾಶ ನೀಡಲಾಗುವುದು. ಮಾ. 31ರಿಂದ 6 ತಿಂಗಳವರೆಗೆ ನೋಂದಣಿ ಅವಧಿ ವಿಸ್ತರಣೆ ಮಾಡಲಾಗುವುದು. ಇದು ಡೆವಲಪರ್ಸ್​, ರಿಯಲ್ ಎಸ್ಟೇಟ್​ ಇಂಡಸ್ಟ್ರಿಗೆ ಅನುಕೂಲವಾಗಿದೆ. ಬಾಕಿ ಉಳಿದಿರುವ ಯೋಜನೆಗಳನ್ನು ಮುಗಿಸಲು ರಿಯಲ್ ಎಸ್ಟೇಟ್​ ಇಂಡಸ್ಟ್ರಿಗೆ 6 ತಿಂಗಳು ಕಾಲಾವಕಾಶ ನೀಡಲಾಗಿದೆ. ರೇರಾ ಅಡಿಯಲ್ಲಿ ನೋಂದಣಿಯಾಗಿರುವ ಕಂಪನಿಗಳಿಗೆ ಸದ್ಯಕ್ಕೆ ಕೇಂದ್ರದ ರಿಲೀಫ್​ ದೊರೆತಿದೆ. ಸದ್ಯಕ್ಕೆ ರಿಯಲ್​ ಎಸ್ಟೇಟ್ ಕಂಪನಿಗಳು ಅರ್ಜಿ ಸಲ್ಲಿಸುವ ಅಗತ್ಯ ಇಲ್ಲ.

15) ತೆರಿಗೆ ರಿಲೀಫ್​: ಟಿಡಿಎಸ್​/ಟಿಸಿಎಸ್​ ಶೇಕಡಾ 25 ರಷ್ಟು ಕೇಂದ್ರ ಸರ್ಕಾರ ಕಡಿತ ಮಾಡಿದೆ. ಇದರಿಂದ ಜನರಿಗೆ 50 ಸಾವಿರ ಕೋಟಿ ರೂಪಾಯಿ ಉಳಿತಾಯವಾಗಲಿದೆ.

16) ಆದಾಯ ತೆರಿಗೆ ಪಾವತಿಗೆ ಮತ್ತೆ 3 ತಿಂಗಳು ವಿಸ್ತರಣೆ. ಆದಾಯ ತೆರಿಗೆ ಮಾಹಿತಿ ಸಲ್ಲಿಕೆ ಗಡುವು 31 ಅಕ್ಟೋಬರ್​ಗೆ ವಿಸ್ತರಣೆಯಾಗಿದೆ. ಇದರಿಂದ ₹5 ಲಕ್ಷಕ್ಕಿಂತ ಕಡಿಮೆ ಆದಾಯದ 14 ಲಕ್ಷ ಜನರಿಗೆ ಅನುಕೂಲವಾಗಲಿದೆ. ಧಾರ್ಮಿಕೇತರ ಸಂಸ್ಥೆಗಳಿಗೆ ಐಟಿ ಪಾವತಿಗೆ ಗಡುವು ವಿಸ್ತರಣೆ ಮಾಡಲಾಗಿದೆ. ಆದಾಯ ತೆರಿಗೆ ಪಾವತಿಸುವವರಿಗೆ ಈಗಾಗಲೇ ಐಟಿ ರೀಫಂಡ್​ ಆಗಿದೆ.

Published On - 4:26 pm, Wed, 13 May 20

ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ