ಮಧ್ಯಪ್ರದೇಶ ಬಾವಿ ದುರಂತ: ಪುಟ್ಟ ಬಾಲಕಿಯ ರಕ್ಷಣಾ ಕಾರ್ಯಾಚರಣೆ ವೇಳೆ  ಮೃತಪಟ್ಟವರ ಕುಟುಂಬಕ್ಕೆ 2 ಲಕ್ಷ ರೂ.ಘೋಷಿಸಿದ ಪ್ರಧಾನಿ ಮೋದಿ

| Updated By: Lakshmi Hegde

Updated on: Jul 17, 2021 | 8:53 AM

Madhya Pradesh: 8 ಮೃತದೇಹಗಳನ್ನು ಹೊರತೆಗೆಯಲಾಗಿದ್ದು, ಇದುವರೆಗೆ 19 ಮಂದಿಯನ್ನು ರಕ್ಷಿಸಿದ್ದಾರೆ ಮಧ್ಯಪ್ರದೇಶದ ಸಚಿವ ವಿಶ್ವಾಸ್​ ಸಾರಂಗ್​ ತಿಳಿಸಿದ್ದಾರೆ. ಮೃತರ ಕುಟುಂಗಳಿಗೆ ತಲಾ 5 ಲಕ್ಷ ರೂಪಾಯ ನೀಡುವುದಾಗ ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್​ ಸಿಂಗ್​ ಚೌಹಾಣ್​ ಈಗಾಗಲೇ ಘೋಷಿಸಿದ್ದಾರೆ.

ಮಧ್ಯಪ್ರದೇಶ ಬಾವಿ ದುರಂತ: ಪುಟ್ಟ ಬಾಲಕಿಯ ರಕ್ಷಣಾ ಕಾರ್ಯಾಚರಣೆ ವೇಳೆ  ಮೃತಪಟ್ಟವರ ಕುಟುಂಬಕ್ಕೆ 2 ಲಕ್ಷ ರೂ.ಘೋಷಿಸಿದ ಪ್ರಧಾನಿ ಮೋದಿ
ವಿದಿಶಾ ಬಾವಿ ದುರಂತದ ಸನ್ನಿವೇಶ
Follow us on

ಮಧ್ಯಪ್ರದೇಶದ ಭೋಪಾಲ್​​ನ ವಿದಿಶಾ (Madhya Pradesh-Vidisha)ದಲ್ಲಿ ನಡೆದ ಬಾವಿ ದುರಂತದಲ್ಲಿ ಮೃತಪಟ್ಟವರ ಕುಟುಂಬಕ್ಕೆ ತಲಾ 2 ಲಕ್ಷ ರೂಪಾಯಿ ನೀಡುವುದಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ (Prime Minister Narendra Modi)  ಘೋಷಿಸಿದ್ದಾರೆ. ವಿದಿಶಾ ಜಿಲ್ಲೆಯ ಗಂಜ್​ ಬಸೌಡ ಪ್ರದೇಶದಲ್ಲಿ 8 ವರ್ಷದ ಬಾಲಕಿ ಜುಲೈ 15ರಂದು ಬಾವಿಗೆ ಬಿದ್ದಿದ್ದಳು. ಅವಳನ್ನು ರಕ್ಷಿಸಲು ಕೆಲವರು ಮುಂದಾದರು. ಈ ವೇಳೆ ಬಾವಿಯ ಸುತ್ತ 40ಕ್ಕೂ ಹೆಚ್ಚು ಜನರು ನೆರೆದಿದ್ದರು. ಆಗ ಬಾವಿ ಕುಸಿದ ಪರಿಣಾಮ 40 ಜನರೂ ಬಾವಿಪಾಲಾಗಿದ್ದಾರೆ. ಅದರಲ್ಲಿ ಈಗ 8 ಮೃತದೇಹಗಳನ್ನು ಹೊರತೆಗೆಯಲಾಗಿದೆ. ರಕ್ಷಣಾ ಕಾರ್ಯಾಚರಣೆ ಇನ್ನೂ ಮುಂದುವರಿದಿದೆ.

ಈ ದುರಂತದ ಬಗ್ಗೆ ನೋವು ವ್ಯಕ್ತಪಡಿಸಿ ಟ್ವೀಟ್ ಮಾಡಿದ ಪ್ರಧಾನಮಂತ್ರಿ ಕಚೇರಿ, ಮೃತರ ಕುಟುಂಬಗಳಿಗೆ ಸಾಂತ್ವನಗಳು. ಪ್ರಧಾನಮಂತ್ರಿ ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಯಡಿಯಲ್ಲಿ ಮೃತರ ಕುಟುಂಬಗಳಿಗೆ ತಲಾ 2 ಲಕ್ಷ ನೀಡಲಾಗುವುದು ಎಂದು ಹೇಳಿದೆ.

ಇನ್ನು 8 ಮೃತದೇಹಗಳನ್ನು ಹೊರತೆಗೆಯಲಾಗಿದ್ದು, ಇದುವರೆಗೆ 19 ಮಂದಿಯನ್ನು ರಕ್ಷಿಸಿದ್ದಾರೆ ಮಧ್ಯಪ್ರದೇಶದ ಸಚಿವ ವಿಶ್ವಾಸ್​ ಸಾರಂಗ್​ ತಿಳಿಸಿದ್ದಾರೆ. ಮೃತರ ಕುಟುಂಗಳಿಗೆ ತಲಾ 5 ಲಕ್ಷ ರೂಪಾಯ ನೀಡುವುದಾಗ ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್​ ಸಿಂಗ್​ ಚೌಹಾಣ್​ ಈಗಾಗಲೇ ಘೋಷಿಸಿದ್ದಾರೆ. ಹಾಗೇ ಗಾಯಗೊಂಡವರಿಗೆ ತಲಾ 50,000 ರೂ.ನೀಡಲಾಗುವುದು ಮತ್ತು ಉಚಿತ ಚಿಕಿತ್ಸೆ ನೀಡುವುದಾಗಿಯೂ ಹೇಳಿದ್ದಾರೆ. ಸ್ಥಳೀಯರು ಹೇಳಿರುವಂತೆ ಗುರುವಾರ ಸಂಜೆ ವೇಳೆಗೆ ಬಾವಿಯ ಸಮೀಪ ಆಟವಾಡುತ್ತಿದ್ದ ಬಾಲಕಿ ಆಯತಪ್ಪಿಗೆ ಬಾವಿಗೆ ಬಿದ್ದಿದ್ದಾಳೆ. ಈ ಸುದ್ದಿ ಒಬ್ಬರ ಬಾಯಿಂದ ಒಬ್ಬರಿಗೆ ಹರಡುತ್ತಿದ್ದಂತೆಯೇ ಇಡೀ ಗ್ರಾಮಕ್ಕೆ ಗ್ರಾಮವೇ ಬಾವಿಯ ಸುತ್ತ ಜಮಾಯಿಸಿದೆ. ಬಾವಿಯ ತಡೆಗೋಡೆ ಸುತ್ತ ಒತ್ತಡ ಹೆಚ್ಚಾದ ಪರಿಣಾಮ ತಡೆಗೋಡೆ ಮುರಿದು, ಮಣ್ಣು ಕುಸಿದು ಅನಾಹುತ ಘಟಿಸಿದೆ. ಈ ಬಗ್ಗೆ ಮಾತನಾಡಿರುವ ಭೋಪಾಲ್​ನ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಸಾಯಿ ಮನೋಹರ್ ಕೂಡಾ ಇದೇ ಅಭಿಪ್ರಾಯವನ್ನೇ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: Petrol Price Today: ಮತ್ತೆ ಪೆಟ್ರೋಲ್​ ಬೆಲೆಯಲ್ಲಿ ಏರಿಕೆ; ಸ್ಥಿರತೆಯನ್ನು ಕಾಯ್ದುಕೊಂಡ ಡೀಸೆಲ್