
ಸೋಮನಾಥ, ಜನವರಿ 10: ಗುಜರಾತಿನ ಸೋಮನಾಥ ದೇವಾಲಯದಲ್ಲಿ (Somnath Temple) ಜನವರಿ 11ರವರೆಗೆ ಸೋಮನಾಥ ಸ್ವಾಭಿಮಾನ ಪರ್ವ (Somnath Swabhiman Parv) ನಡೆಯುತ್ತಿದೆ. ಇದರ ಭಾಗವಾಗಿ ಇಂದು ನಡೆಯಲಿರುವ 72 ಗಂಟೆಗಳ ಕಾಲ ‘ಓಂ’ ಪಠಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಿದ್ದಾರೆ. ಇಂದು ಸಂಜೆ ತಮ್ಮ 3 ದಿನಗಳ ಭೇಟಿಗೆ ಗುಜರಾತಿಗೆ ಆಗಮಿಸಿದ ಪ್ರಧಾನಿ ಮೋದಿ ಸೋಮನಾಥ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಿದರು. ನಂತರ ಆಗಸದಲ್ಲಿ ಡ್ರೋನ್ ಚಿತ್ತಾರಗಳನ್ನು ವೀಕ್ಷಿಸಿದರು. ಬಳಿಕ, ಓಂ ಪಠಣದಲ್ಲಿ ತೊಡಗಿಸಿಕೊಂಡು ತಾವು ಕೂಡ ಧ್ಯಾನ ನಿರತರಾದರು. ಭಾರತದಾದ್ಯಂತದ ನೂರಾರು ಸಂತರು ಸೋಮನಾಥದಲ್ಲಿ 72 ಗಂಟೆಗಳ ನಿರಂತರ ‘ಓಂ’ ಪಠಣದಲ್ಲಿ ಭಾಗವಹಿಸಲು ಒಟ್ಟುಗೂಡಿದ್ದಾರೆ.
ಶಿವನ 12 ಆದಿ ಜ್ಯೋತಿರ್ಲಿಂಗಗಳಲ್ಲಿ ಮೊದಲನೆಯದು ಎಂದು ಪೂಜಿಸಲ್ಪಡುವ ಮತ್ತು ಭಾರತದ ಆಧ್ಯಾತ್ಮಿಕ ಪರಂಪರೆಯಲ್ಲಿ ಮಹತ್ವದ ಸ್ಥಾನವನ್ನು ಹೊಂದಿರುವ ಸೋಮನಾಥ ದೇವಾಲಯದಲ್ಲಿ ಜನವರಿ 8 ರಿಂದ 11ರವರೆಗೆ ಆಯೋಜಿಸಲಾಗುತ್ತಿರುವ ಸೋಮನಾಥ ಸ್ವಾಭಿಮಾನ ಪರ್ವದಲ್ಲಿ ಭಾಗವಹಿಸಲು ಆಗಮಿಸಿದ ಪ್ರಧಾನಿ ಮೋದಿ ಅವರಿಗೆ ಅಭೂತಪೂರ್ವ ಸ್ವಾಗತ ದೊರೆಯಿತು. 1026ರಲ್ಲಿ ಮಹಮ್ಮದ್ ಘಜ್ನಿ ಸೋಮನಾಥ ದೇವಾಲಯದ ಮೇಲೆ ಆಕ್ರಮಣ ಮಾಡಿದ್ದನ್ನು 1000 ವರ್ಷಗಳನ್ನು ಈ ಸೋಮನಾಥ ಸ್ವಾಭಿಮಾನ ಪರ್ವ ಸ್ಮರಿಸುತ್ತದೆ.
ಇದನ್ನೂ ಓದಿ: Somnath Temple: ಸೋಮನಾಥ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಿದ ಪ್ರಧಾನಿ ಮೋದಿ
#WATCH | Gujarat | Fireworks illuminate the night sky above Somnath Temple as the 72-hour ‘Aum’ chanting continues in the background during the ongoing Somnath Swabhiman Parv.
Source: DD pic.twitter.com/bOkFqu5hbG
— ANI (@ANI) January 10, 2026
1951ರಲ್ಲಿ ಸರ್ದಾರ್ ವಲ್ಲಭಭಾಯಿ ಪಟೇಲ್ ನೇತೃತ್ವದಲ್ಲಿ ನಡೆದ ಪುನರ್ನಿರ್ಮಾಣದ ನಂತರ ದೇವಾಲಯವು ಔಪಚಾರಿಕವಾಗಿ ಪುನಃ ತೆರೆಯಲ್ಪಟ್ಟು 2026 ವರ್ಷಕ್ಕೆ 75 ವರ್ಷಗಳು ಸಂದಿವೆ. ಅಂದಿನ ರಾಷ್ಟ್ರಪತಿ ಡಾ. ರಾಜೇಂದ್ರ ಪ್ರಸಾದ್ ಅವರ ಸಮ್ಮುಖದಲ್ಲಿ ಇದನ್ನು ಆಚರಿಸಲಾಯಿತು. ಈ ಪುನಃಸ್ಥಾಪನೆಯು ಸ್ವಾತಂತ್ರ್ಯಾನಂತರದ ಭಾರತದಲ್ಲಿ ರಾಷ್ಟ್ರೀಯ ಸಂಕಲ್ಪ ಮತ್ತು ಸಾಂಸ್ಕೃತಿಕ ಹೆಮ್ಮೆಯ ಸಂಕೇತವಾಯಿತು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ