ವಿದೇದಿಂದ ಬಂದ ಕೂಡಲೇ ದೆಹಲಿ ಲೆಫ್ಟಿನೆಂಟ್ ಗವರ್ನರ್ ಜತೆ ಪ್ರಧಾನಿ ಮೋದಿ ಮಾತುಕತೆ; ಪ್ರವಾಹ ನಿಯಂತ್ರಣ ಕುರಿತು ಚರ್ಚೆ

|

Updated on: Jul 16, 2023 | 11:54 AM

ವಿದೇಶ ಪ್ರವಾಸ ಮುಗಿಸಿ ದೆಹಲಿಗೆ ಆಗಮಿಸಿದ ತಕ್ಷಣವೇ ಪ್ರಧಾನಿಯವರು ಯಮುನಾ ನದಿ ಹರಿವು, ಪ್ರವಾಹದಂತಹ ಪರಿಸ್ಥಿತಿಯ ಸ್ಥಿತಿ ಮತ್ತು ಅವುಗಳನ್ನು ಪರಿಹರಿಸುವಲ್ಲಿ ಸಾಧಿಸಿದ ಪ್ರಗತಿಯ ಬಗ್ಗೆ ದೆಹಲಿಯ ಲೆಫ್ಟಿನೆಂಟ್ ಗವರ್ನರ್ ಅವರೊಂದಿಗೆ ಮಾತನಾಡಿದರು ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ವಿದೇದಿಂದ ಬಂದ ಕೂಡಲೇ ದೆಹಲಿ ಲೆಫ್ಟಿನೆಂಟ್ ಗವರ್ನರ್ ಜತೆ ಪ್ರಧಾನಿ ಮೋದಿ ಮಾತುಕತೆ; ಪ್ರವಾಹ ನಿಯಂತ್ರಣ ಕುರಿತು ಚರ್ಚೆ
ಪ್ರಧಾನಿ ನರೇಂದ್ರ ಮೋದಿ
Image Credit source: PTI
Follow us on

ನವದೆಹಲಿ, ಜುಲೈ 16: ವಿದೇಶ ಪ್ರವಾಸ ಮುಗಿಸಿ ದೆಹಲಿಗೆ ಮರಳಿದ ತಕ್ಷಣವೇ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಲೆಫ್ಟಿನೆಂಟ್ ಗವರ್ನರ್ ವಿಕೆ ಸಕ್ಸೇನಾ ಅವರೊಂದಿಗೆ ಮಾತುಕತೆ ನಡೆಸಿ ದೆಹಲಿ ಪ್ರವಾಹ (Delhi Flood) ಪರಿಸ್ಥಿತಿಯ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ. ರಾಷ್ಟ್ರ ರಾಜಧಾನಿಯಲ್ಲಿ ಪ್ರವಾಹದಂತಹ ಪರಿಸ್ಥಿತಿಯನ್ನು ನಿಭಾಯಿಸುವಲ್ಲಿ ಕೈಗೊಂಡ ಕ್ರಮಗಳ ಹಾಗೂ ಸಾಧಿಸಿದ ಪ್ರಗತಿಯ ಬಗ್ಗೆ ವಿಚಾರಿಸಿದ್ದಾರೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.

ಭಾರೀ ಮಳೆ ಹಾಗೂ ಯಮುನಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿರುವುದರಿಂದ ದೆಹಲಿಯ ಹಲವು ಭಾಗಗಳಲ್ಲಿ ನೀರು ನುಗ್ಗಿದೆ. ಆದಾಗ್ಯೂ, ಶನಿವಾರದಂದು ನದಿಯ ನೀರಿನ ಮಟ್ಟವು ಇಳಿಮುಖವಾಗತೊಡಗಿತ್ತು. ಅನೇಕ ಪ್ರದೇಶಗಳಲ್ಲಿ ಪ್ರವಾಹದ ನೀರು ಕಡಿಮೆಯಾದ ಕಾರಣ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲು ಅಧಿಕಾರಿಗಳಿಗೆ ಸುಲಭವಾಯಿತು.

ವಿದೇಶ ಪ್ರವಾಸ ಮುಗಿಸಿ ದೆಹಲಿಗೆ ಆಗಮಿಸಿದ ತಕ್ಷಣವೇ ಪ್ರಧಾನಿಯವರು ಯಮುನಾ ನದಿ ಹರಿವು, ಪ್ರವಾಹದಂತಹ ಪರಿಸ್ಥಿತಿಯ ಸ್ಥಿತಿ ಮತ್ತು ಅವುಗಳನ್ನು ಪರಿಹರಿಸುವಲ್ಲಿ ಸಾಧಿಸಿದ ಪ್ರಗತಿಯ ಬಗ್ಗೆ ದೆಹಲಿಯ ಲೆಫ್ಟಿನೆಂಟ್ ಗವರ್ನರ್ ಅವರೊಂದಿಗೆ ಮಾತನಾಡಿದರು ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ಇದನ್ನೂ ಓದಿ: ಯುಮುನಾ ಪ್ರವಾಹದ ನಡುವೆ ರಕ್ಷಣಾ ತಂಡ ರಕ್ಷಿಸಿದ ಈ ಗೂಳಿಯ ಬೆಲೆ ಬರೋಬ್ಬರಿ ₹1 ಕೋಟಿ!

ಮೋದಿ ಅವರು ಮೂರು ದಿನಗಳ ಫ್ರಾನ್ಸ್ ಮತ್ತು ಯುಎಇ ಪ್ರವಾಸ ಮುಗಿಸಿಕೊಂಡು ಶನಿವಾರ ದೆಹಲಿಗೆ ಮರಳಿದ್ದಾರೆ.

ಶನಿವಾರ ಸಂಜೆ ಕೂಡ ದೆಹಲಿಯ ಹಲವು ಪ್ರದೇಶಗಳಲ್ಲಿ ಭಾರೀ ಮಳೆಯಾಗಿದ್ದು, ನಗರದ ಹಲವು ಪ್ರದೇಶಗಳು ಜಲಾವೃತಗೊಂಡಿದ್ದವು. ಸಂಚಾರ ದಟ್ಟಣೆಯೂ ಉಂಟಾಗಿತ್ತು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 11:53 am, Sun, 16 July 23