ಚಂದ್ರಯಾನ-3 ಯಶಸ್ಸಿಗೆ ಮೋದಿಯನ್ನು ಪ್ರಶಂಸಿಸಿದ ದಕ್ಷಿಣ ಆಫ್ರಿಕಾದ ಪತ್ರಿಕೆ; ಪ್ರಧಾನಿಯ ಫೋಟೊ ಟ್ವೀಟ್ ಮಾಡಿದ ಜೈಶಂಕರ್

|

Updated on: Aug 24, 2023 | 8:14 PM

ಬಾಹ್ಯಾಕಾಶ ವಿಜ್ಞಾನದಲ್ಲಿ ಐತಿಹಾಸಿಕ ಮೈಲಿಗಲ್ಲು ಸಾಧಿಸಿದಾಗ ಪ್ರಧಾನಿ ಮೋದಿ ದಕ್ಷಿಣ ಆಫ್ರಿಕಾದ ಜೋಹಾನ್ಸ್‌ಬರ್ಗ್‌ನಲ್ಲಿದ್ದರು. " India's Modi out of this world, ಎಂದು ದಕ್ಷಿಣ ಆಫ್ರಿಕಾದ 'ದಿ ಸ್ಟಾರ್' ಪತ್ರಿಕೆಯ ಶೀರ್ಷಿಕೆ ನೀಡಿದೆ. ಐತಿಹಾಸಿಕ ಬಾಹ್ಯಾಕಾಶ ಯಾತ್ರೆಯ ನಂತರ ಪ್ರಧಾನಿ ಮೋದಿ ಖುಷಿಯಾಗಿದ್ದಾರೆ. ವಿಶ್ವದಾದ್ಯಂತದ ಭಾರತೀಯ ಸಮುದಾಯವು ಪ್ರಧಾನಿ ನರೇಂದ್ರ ಮೋದಿಯರೊಂದಿಗೆ ಅಕ್ಷರಶಃ ಚಂದ್ರನ ಮೇಲೆ ತಲುಪಿದೆ ಎಂದು ಸುದ್ದಿಯಲ್ಲಿ ಬರೆಯಲಾಗಿದೆ.

ಚಂದ್ರಯಾನ-3 ಯಶಸ್ಸಿಗೆ ಮೋದಿಯನ್ನು ಪ್ರಶಂಸಿಸಿದ ದಕ್ಷಿಣ ಆಫ್ರಿಕಾದ ಪತ್ರಿಕೆ; ಪ್ರಧಾನಿಯ ಫೋಟೊ ಟ್ವೀಟ್ ಮಾಡಿದ ಜೈಶಂಕರ್
ನರೇಂದ್ರ ಮೋದಿ
Follow us on

ದೆಹಲಿ ಆಗಸ್ಟ್ 24:  ಚಂದ್ರನ ದಕ್ಷಿಣ ಧ್ರುವವನ್ನು ತಲುಪಿದ ಇಸ್ರೋದ (ISRO) ಚಂದ್ರಯಾನ- 3ಕ್ಕೆ (Chandrayaan-3) ಜಾಗತಿಕ ಮನ್ನಣೆ ಮತ್ತು ಪ್ರಶಂಸೆಗಳ ನಡುವೆಯೇ ದಕ್ಷಿಣ ಆಫ್ರಿಕಾದ ಪ್ರಮುಖ ಪತ್ರಿಕೆಯ ಶೀರ್ಷಿಕೆಯನ್ನು ಪ್ರಧಾನಿ ನರೇಂದ್ರ ಮೋದಿ (PM Narendra Modi) ಓದುತ್ತಿರುವ ಫೋಟೊವನ್ನು ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಟ್ವೀಟ್ ಮಾಡಿದ್ದಾರೆ. ಭಾರತ ಬಾಹ್ಯಾಕಾಶ ವಿಜ್ಞಾನದಲ್ಲಿ ಐತಿಹಾಸಿಕ ಮೈಲುಗಲ್ಲು ಸಾಧಿಸಿದಾಗ ಪ್ರಧಾನಿ ಮೋದಿ ದಕ್ಷಿಣ ಆಫ್ರಿಕಾದ ಜೋಹಾನ್ಸ್‌ಬರ್ಗ್‌ನಲ್ಲಿದ್ದರು. ” India’s Modi out of this world, ಎಂದು ದಕ್ಷಿಣ ಆಫ್ರಿಕಾದ ‘ದಿ ಸ್ಟಾರ್’ ಪತ್ರಿಕೆಯ ಶೀರ್ಷಿಕೆ ನೀಡಿದೆ. ಐತಿಹಾಸಿಕ ಬಾಹ್ಯಾಕಾಶ ಯಾತ್ರೆಯ ನಂತರ ಪ್ರಧಾನಿ ಮೋದಿ ಖುಷಿಯಾಗಿದ್ದಾರೆ. ವಿಶ್ವದಾದ್ಯಂತದ ಭಾರತೀಯ ಸಮುದಾಯವು ಪ್ರಧಾನಿ ನರೇಂದ್ರ ಮೋದಿಯರೊಂದಿಗೆ ಅಕ್ಷರಶಃ ಚಂದ್ರನ ಮೇಲೆ ತಲುಪಿದೆ ಎಂದು ಸುದ್ದಿಯಲ್ಲಿ ಬರೆಯಲಾಗಿದೆ.

ಗುರುವಾರ ಬ್ರಿಕ್ಸ್‌ನಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಚಂದ್ರಯಾನದ ಯಶಸ್ಸಿನ ಬಗ್ಗೆ ಮಾತನಾಡಿದ್ದು, ಹಾರೈಸಿದ ಎಲ್ಲರಿಗೂ ಧನ್ಯವಾದಗಳನ್ನು ಸಲ್ಲಿಸಿದಾರೆ.


ಚಂದ್ರಯಾನ 3ರ ಯಶಸ್ಸಿಗಾಗಿ ವಿಶ್ವ ನಾಯಕರು ಭಾರತ ಮತ್ತು ಪ್ರಧಾನಿ ಮೋದಿಯನ್ನು ಶ್ಲಾಘಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿದ ಮೋದಿ, ಶುಭಾಶಯಗಳನ್ನು ಕೋರಿದ ಎಲ್ಲರಿಗೂ ಧನ್ಯವಾದಗಳನ್ನು ಅರ್ಪಿಸಿದರು. ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರ ಶುಭ ಹಾರೈಕೆಗಾಗಿ ಧನ್ಯವಾದಗಳು. ಈ ಮೈಲಿಗಲ್ಲು ಭಾರತದ ಹೆಮ್ಮೆ ಮಾತ್ರವಲ್ಲ, ಮಾನವ ಪ್ರಯತ್ನ ಮತ್ತು ಪರಿಶ್ರಮದ ದಾರಿದೀಪವಾಗಿದೆ. ವಿಜ್ಞಾನ ಮತ್ತು ಬಾಹ್ಯಾಕಾಶದಲ್ಲಿ ನಮ್ಮ ಪ್ರಯತ್ನಗಳು ಎಲ್ಲರಿಗೂ ಉಜ್ವಲವಾದ ನಾಳೆಗೆ ದಾರಿ ಮಾಡಿಕೊಡಲಿ ಎಂದು ಯುಎಇ ಅಧ್ಯಕ್ಷ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರ ಟ್ವೀಟ್​​ಗೆ ಮೋದಿ ಪ್ರತಿಕ್ರಿಯಿಸಿದ್ದಾರೆ.

ಇತಿಹಾಸ ರಚಿಸಿದ ಭಾರತ

ಇದಕ್ಕೂ ಮುನ್ನ ಬುಧವಾರ (ಆಗಸ್ಟ್ 23), ಜೋಹಾನ್ಸ್‌ಬರ್ಗ್‌ನಲ್ಲಿ ನಡೆದ ಬ್ರಿಕ್ಸ್ ಶೃಂಗಸಭೆಯ ಸಂದರ್ಭದಲ್ಲಿ ಔತಣಕೂಟದಲ್ಲಿ ಬ್ರಿಕ್ಸ್ ನಾಯಕರು ಮತ್ತು ಇತರ ವಿಶ್ವ ನಾಯಕರು ಪ್ರಧಾನಿ ಮೋದಿಯನ್ನು ಅಭಿನಂದಿಸಿದರು. ಭಾರತವು ಚಂದ್ರನ ದಕ್ಷಿಣ ಧ್ರುವದಲ್ಲಿ ಸಾಫ್ಟ್ ಲ್ಯಾಂಡಿಂಗ್ ಮಾಡಿದ ವಿಶ್ವದ ಮೊದಲ ದೇಶವಾಗಿದೆ. ಇಸ್ರೋ (ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ) ಚಂದ್ರಯಾನ-3 ರ ಯಶಸ್ವಿ ಮಿಷನ್ ನಂತರ ಚಂದ್ರನನ್ನು ತಲುಪಿದ ಯುಎಸ್, ರಷ್ಯಾ ಮತ್ತು ಚೀನಾದ ನಂತರ ನಾಲ್ಕನೇ ದೇಶವಾಗಿ ಭಾರತ ಇತಿಹಾಸವನ್ನು ಸೃಷ್ಟಿಸಿದೆ.

ಇದನ್ನೂ ಓದಿ: ಇಸ್ರೋ ವಿಜ್ಞಾನಿಗಳನ್ನು ಅಭಿನಂದಿಸಲು ಪ್ರಧಾನಿ ನರೇಂದ್ರ ಮೋದಿ ಆಗಸ್ಟ್ 26 ರಂದು ಬೆಂಗಳೂರಿಗೆ ಆಗಮಿಸಲಿದ್ದಾರೆ: ಆರ್ ಅಶೋಕ

ಬುಧವಾರ ಸಂಜೆ 6.04 ಕ್ಕೆ ಚಂದ್ರಯಾನ 3 ಚಂದ್ರನ ಮೇಲೆ ಮೃದುವಾಗಿ ಇಳಿಯುತ್ತಿದ್ದಂತೆ, ಪ್ರಧಾನಿ ಮೋದಿ ಜೋಹಾನ್ಸ್‌ಬರ್ಗ್‌ನಿಂದ ಇಸ್ರೋ ಮುಖ್ಯಸ್ಥ ಎಸ್ ಸೋಮನಾಥ್ ಅವರಿಗೆ ಕರೆ ಮಾಡಿ ಮತ್ತು ಅವರ ತಂಡವನ್ನು ಅಭಿನಂದಿಸಿದರು. “ಸೋಮನಾಥ್ ಜೀ, ನಿಮ್ಮ ಹೆಸರು ಸೋಮನಾಥ್, ಇದು ಚಂದ್ರನೊಂದಿಗೆ ಸಂಬಂಧ ಹೊಂದಿದೆ, ಆದ್ದರಿಂದ ನಿಮ್ಮ ಕುಟುಂಬ ಸದಸ್ಯರು ಇಂದು ತುಂಬಾ ಸಂತೋಷವಾಗಿರುತ್ತಾರೆ. ನಿಮಗೆ ಮತ್ತು ನಿಮ್ಮ ಇಡೀ ತಂಡಕ್ಕೆ ನನ್ನ ಕಡೆಯಿಂದ  ಅಭಿನಂದನೆಗಳು” ಎಂದು ಪ್ರಧಾನಿ ಮೋದಿ ಫೋನ್ ಕರೆ ಮಾಡಿ ಹೇಳಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 8:13 pm, Thu, 24 August 23