AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಂದ್ರನ ಮೇಲ್ಮೈಯಲ್ಲಿ ಚಂದ್ರಯಾನ- 3ಗೆ ಏನೆಲ್ಲ ಅಪಾಯಗಳಿವೆ ಎಂದು ವಿವರಿಸಿದ ಇಸ್ರೋ ಮುಖ್ಯಸ್ಥ

Chandrayaan-3:ಕ್ಷುದ್ರಗ್ರಹ ಅಥವಾ ಇತರ ವಸ್ತುಗಳು ಭಾರೀ ವೇಗದಲ್ಲಿ ಹೊಡೆದರೆ, ಲ್ಯಾಂಡರ್ ಮತ್ತು ರೋವರ್ ಎರಡೂ ನಾಶವಾಗುತ್ತವೆ. ನೀವು ಚಂದ್ರನ ಮೇಲ್ಮೈಯನ್ನು ನೋಡಿದರೆ ಗೊತ್ತಾಗುತ್ತದೆ. ಇದು ಬಾಹ್ಯಾಕಾಶ ವಸ್ತುಗಳ ಹೊಡೆತದಿಂದ ಉಂಟಾಗುವ ಗುರುತುಗಳಿಂದ ತುಂಬಿರುತ್ತದೆ. ಭೂಮಿಯಲ್ಲೂ, ಪ್ರತಿ ಗಂಟೆಗೆ ಲಕ್ಷಗಟ್ಟಲೆ ಬಾಹ್ಯಾಕಾಶ ವಸ್ತುಗಳು ಬರುತ್ತವೆ, ಆದರೆ ನಮ್ಮ ವಾತಾವರಣವು ಎಲ್ಲವನ್ನೂ ಸುಡುವುದರಿಂದ ಅದು ನಮ್ಮ ಅನುಭವಕ್ಕೆ ಬರುವುದಿಲ್ಲ ಎಂದು ಸೋಮನಾಥ್ ಹೇಳಿದರು.

ಚಂದ್ರನ ಮೇಲ್ಮೈಯಲ್ಲಿ ಚಂದ್ರಯಾನ- 3ಗೆ ಏನೆಲ್ಲ ಅಪಾಯಗಳಿವೆ ಎಂದು ವಿವರಿಸಿದ ಇಸ್ರೋ ಮುಖ್ಯಸ್ಥ
ಎಸ್.ಸೋಮನಾಥ್
ರಶ್ಮಿ ಕಲ್ಲಕಟ್ಟ
|

Updated on: Aug 24, 2023 | 6:23 PM

Share

ದೆಹಲಿ ಆಗಸ್ಟ್ 24: ಚಂದ್ರಯಾನ- 3ರ (Chandrayaan-3) ವಿಕ್ರಮ್ ಲ್ಯಾಂಡರ್ ಮತ್ತು ಪ್ರಗ್ಯಾನ್ ರೋವರ್ ಎರಡೂ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು, ಮತ್ತಷ್ಟು ಕಾರ್ಯಗಳು ನಡೆಯಲಿವೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಮುಖ್ಯಸ್ಥ ಎಸ್ ಸೋಮನಾಥ್ (S Somanath) ಅವರ ಹೇಳಿದ್ದಾರೆ. ಆದಾಗ್ಯೂ, ಅವರು ಚಂದ್ರನ ಮಿಷನ್‌ಗೆ ಮುಂದಿರುವ ಸವಾಲುಗಳ ಬಗ್ಗೆಯೂ ಹೇಳಿದ್ದಾರೆ. ಲ್ಯಾಂಡರ್ ಮತ್ತು ರೋವರ್ ಎರಡೂ ಸಂಪೂರ್ಣವಾಗಿ ಆರೋಗ್ಯಕರವಾಗಿವೆ ಮತ್ತು ಎಲ್ಲವೂ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ. ಮತ್ತಷ್ಟು ಚಲನೆಗಳು ಇರುತ್ತದೆ. ಚಂದ್ರನ ಮೇಲೆ ವಾತಾವರಣದ ಕೊರತೆಯಿಂದಾಗಿ, ಯಾವ ಕಡೆಯಿಂದಾದರೂ ವಸ್ತುಗಳು ಬಂದು ಹೊಡೆಯಬಹುದು. ಅದರೊಂದಿಗೆ ಥರ್ಮಲ್ ಸಮಸ್ಯೆ ಮತ್ತು ಸಂವಹನ ಬ್ಲ್ಯಾಕೌಟ್ ಸಮಸ್ಯೆ ಇದ ಎಂದು ಪಿಟಿಐ ಜತೆ ಮಾತನಾಡಿದ ಇಸ್ರೋ ಮುಖ್ಯಸ್ಥರು ಹೇಳಿದ್ದಾರೆ.

ಕ್ಷುದ್ರಗ್ರಹ ಅಥವಾ ಇತರ ವಸ್ತುಗಳು ಭಾರೀ ವೇಗದಲ್ಲಿ ಹೊಡೆದರೆ, ಲ್ಯಾಂಡರ್ ಮತ್ತು ರೋವರ್ ಎರಡೂ ನಾಶವಾಗುತ್ತವೆ. ನೀವು ಚಂದ್ರನ ಮೇಲ್ಮೈಯನ್ನು ನೋಡಿದರೆ ಗೊತ್ತಾಗುತ್ತದೆ. ಇದು ಬಾಹ್ಯಾಕಾಶ ವಸ್ತುಗಳ ಹೊಡೆತದಿಂದ ಉಂಟಾಗುವ ಗುರುತುಗಳಿಂದ ತುಂಬಿರುತ್ತದೆ. ಭೂಮಿಯಲ್ಲೂ, ಪ್ರತಿ ಗಂಟೆಗೆ ಲಕ್ಷಗಟ್ಟಲೆ ಬಾಹ್ಯಾಕಾಶ ವಸ್ತುಗಳು ಬರುತ್ತವೆ, ಆದರೆ ನಮ್ಮ ವಾತಾವರಣವು ಎಲ್ಲವನ್ನೂ ಸುಡುವುದರಿಂದ ಅದು ನಮ್ಮ ಅನುಭವಕ್ಕೆ ಬರುವುದಿಲ್ಲ ಎಂದು ಸೋಮನಾಥ್ ಹೇಳಿದರು.

ಬುಧವಾರ, ಭಾರತವು ಚಂದ್ರನ ಮೇಲ್ಮೈಯ ದಕ್ಷಿಣ ಧ್ರುವವನ್ನು ಸ್ಪರ್ಶಿಸಿದ ಮೊದಲ ದೇಶವಾಯಿತು. ಚಂದ್ರಯಾನ 3 ರ ‘ವಿಕ್ರಮ್’ ಲ್ಯಾಂಡರ್ ದಕ್ಷಿಣ ಧ್ರುವದಲ್ಲಿ 6:04 ಕ್ಕೆ ಸಾಫ್ಟ್ ಲ್ಯಾಂಡಿಂಗ್ ಮಾಡಿತ್ತು.

ಇವತ್ತು ಪ್ರಗ್ಯಾನ್ ರೋವರ್ ಲ್ಯಾಂಡರ್‌ನಿಂದ ಕೆಳಕ್ಕೆ ಇಳಿದಿದೆ ಮತ್ತು “ಚಂದ್ರನ ಮೇಲೆ ವಾಕ್ ಮಾಡುತ್ತಿದೆ” ಎಂದು ಇಸ್ರೋ ತಿಳಿಸಿದೆ.

ಪ್ರಗ್ಯಾನ್ ರೋವರ್ ಎರಡು ಉಪಕರಣಗಳನ್ನು ಹೊಂದಿದೆ, ಇವೆರಡೂ ಚಂದ್ರನ ಮೇಲಿನ ಧಾತುರೂಪದ ಸಂಯೋಜನೆಯ ಸಂಶೋಧನೆಗಳು ಮತ್ತು ಅದರ ರಾಸಾಯನಿಕ ಸಂಯೋಜನೆಗಳಿಗೆ ಸಂಬಂಧಿಸಿವೆ. ಇದು ಚಂದ್ರನ ಮೇಲ್ಮೈಯಲ್ಲಿಯೂ ಸಂಚರಿಸಲಿದೆ. ನಾವು ರೋಬೋಟಿಕ್ ಪಥ ಯೋಜನೆ ಪ್ರಕ್ರಿಯೆಯನ್ನು ಮಾಡುತ್ತೇವೆ. ಇದು ಬಾಹ್ಯಾಕಾಶದಲ್ಲಿ ಭವಿಷ್ಯದ ಅನ್ವೇಷಣೆಗಳಿಗೆ ಮುಖ್ಯವಾಗಿದೆ ಎಂದು ಇಸ್ರೋ ಮುಖ್ಯಸ್ಥರು ಹೇಳಿರುವುದಾಗಿ ಎಎನ್ಐ ವರದಿ ಮಾಡಿದೆ.

ಇದು ಇಸ್ರೋಗೆ ಮಾತ್ರವಲ್ಲ, ಇಡೀ ದೇಶಕ್ಕಾಗಿರುವುದು. ನಾವು ಈ ಬಾರಿ ಯಶಸ್ವಿ ಲ್ಯಾಂಡಿಂಗ್ ಮಾಡಿದ್ದೇವೆ ಎಂದು ಪ್ರತಿಯೊಬ್ಬ ಭಾರತೀಯರಂತೆ ನಾವು ಹೆಮ್ಮೆಪಡುತ್ತೇವೆ. ಇಷ್ಟು ವರ್ಷ ಮಾಡಿದ ಶ್ರಮಕ್ಕೆ ಫಲ ಸಿಕ್ಕಿದೆ. ನಾವು ಹೆಚ್ಚು ಸವಾಲಿನ ಕಾರ್ಯಗಳನ್ನು ಎದುರು ನೋಡುತ್ತಿದ್ದೇವೆ ಎಂದು ಸೋಮನಾಥ್ ಸುದ್ದಿ ಸಂಸ್ಥೆ ಪಿಟಿಐಗೆ ತಿಳಿಸಿದರು.

ಇದನ್ನೂ ಓದಿ: ಚಂದ್ರನ ಮೇಲ್ಮೈಯಲ್ಲಿ ಇಸ್ರೋ ಲೋಗೊ ಮತ್ತು ರಾಷ್ಟ್ರೀಯ ಲಾಂಛನದ ಚಿತ್ರ; ವೈರಲ್ ಫೋಟೊ ಫೇಕ್

ಉತ್ತಮ ಫಲಿತಾಂಶದ ಫಲ ಹೆಚ್ಚು ಕೆಲಸ ಎಂದು ಇಸ್ರೋದಲ್ಲಿ ಹೇಳುತ್ತೇವೆ. ಅದು ನಮ್ಮಲ್ಲಿ ಪ್ರತಿಯೊಬ್ಬರನ್ನು ಪ್ರಚೋದಿಸುತ್ತದೆ ಎಂದು ನಾನು ಭಾವಿಸುತ್ತೇನೆ ಎಂದು ಅವರು ಹೇಳಿದ್ದಾರೆ. ಭಾರತದ ಚೊಚ್ಚಲ ಸೌರ ಮಿಷನ್ ‘ಆದಿತ್ಯ’ ಮುಂದಿನ ತಿಂಗಳು ಉಡಾವಣೆಗೆ ಸಿದ್ಧವಾಗಲಿದೆ ಎಂದು ಇಸ್ರೋ ಮುಖ್ಯಸ್ಥರು ಹೇಳಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಧಾನಿಯಾಗಿ ಇಂದಿರಾ ಗಾಂಧಿಯ ದಾಖಲೆ ಮುರಿದ ಮೋದಿಗೆ ಮುಯಿಝು ಅಭಿನಂದನೆ
ಪ್ರಧಾನಿಯಾಗಿ ಇಂದಿರಾ ಗಾಂಧಿಯ ದಾಖಲೆ ಮುರಿದ ಮೋದಿಗೆ ಮುಯಿಝು ಅಭಿನಂದನೆ
‘ಕೊತ್ತಲವಾಡಿ’ ಸಿನಿಮಾದಲ್ಲಿದೆ ಯಶ್ ಬಳಸಿದ ವಿಶೇಷ ಬೈಕ್
‘ಕೊತ್ತಲವಾಡಿ’ ಸಿನಿಮಾದಲ್ಲಿದೆ ಯಶ್ ಬಳಸಿದ ವಿಶೇಷ ಬೈಕ್
ಕೃಷ್ಣರಾಜ ಒಡೆಯರ್-ಸಿದ್ದರಾಮಯ್ಯ ಇಬ್ಬರೂ ಸಾಮಾಜಿಕ ಹರಿಕಾರರು: ಸಚಿವ
ಕೃಷ್ಣರಾಜ ಒಡೆಯರ್-ಸಿದ್ದರಾಮಯ್ಯ ಇಬ್ಬರೂ ಸಾಮಾಜಿಕ ಹರಿಕಾರರು: ಸಚಿವ
ಕರ್ನಾಟಕವೇ ದೇಶದಲ್ಲಿ ಪ್ರಥಮ ಬಾರಿಗೆ ಜಾತಿಗಣತಿ ಮಾಡಿಸಿದ್ದು: ಸಿದ್ದರಾಮಯ್ಯ
ಕರ್ನಾಟಕವೇ ದೇಶದಲ್ಲಿ ಪ್ರಥಮ ಬಾರಿಗೆ ಜಾತಿಗಣತಿ ಮಾಡಿಸಿದ್ದು: ಸಿದ್ದರಾಮಯ್ಯ
ಜಪಾನಿಗೆ ಬನ್ನೇರುಘಟ್ಟ ಸಾಕಾನೆಗಳ ಏರ್​ ಲಿಫ್ಟ್​ ಯಶಸ್ವಿ
ಜಪಾನಿಗೆ ಬನ್ನೇರುಘಟ್ಟ ಸಾಕಾನೆಗಳ ಏರ್​ ಲಿಫ್ಟ್​ ಯಶಸ್ವಿ
ಸುರ್ಜೇವಾಲಾ ಮಾಡಿದ್ದು ಸರಿಯಲ್ಲ ಅಂತ ರಾಜಣ್ಣನೇ ಹೇಳಿದ್ದಾರೆ: ರವಿಕುಮಾರ್
ಸುರ್ಜೇವಾಲಾ ಮಾಡಿದ್ದು ಸರಿಯಲ್ಲ ಅಂತ ರಾಜಣ್ಣನೇ ಹೇಳಿದ್ದಾರೆ: ರವಿಕುಮಾರ್
ಮಾಲ್ಡೀವ್ಸ್‌ನಲ್ಲಿ ಪ್ರಧಾನಿ ಮೋದಿಗೆ ಗೌರವದ ಸ್ವಾಗತ, ಭಾರತೀಯರಿಂದ ನೃತ್ಯ
ಮಾಲ್ಡೀವ್ಸ್‌ನಲ್ಲಿ ಪ್ರಧಾನಿ ಮೋದಿಗೆ ಗೌರವದ ಸ್ವಾಗತ, ಭಾರತೀಯರಿಂದ ನೃತ್ಯ
ಮಂತ್ರಿ ಮತ್ತು ಶಾಸಕರ ಜೊತೆ ಮಾತ್ರ ಸುರ್ಜೇವಾಲಾ ಮಾತುಕತೆ ನಡೆಸಿದರು: ಸಚಿವ
ಮಂತ್ರಿ ಮತ್ತು ಶಾಸಕರ ಜೊತೆ ಮಾತ್ರ ಸುರ್ಜೇವಾಲಾ ಮಾತುಕತೆ ನಡೆಸಿದರು: ಸಚಿವ
2023ರ ಕರ್ನಾಟಕ ಚುನಾವಣೆಯಲ್ಲಿ ಎಲ್ಲ ಸರಿಯಾಗಿತ್ತಾ? ಪ್ರಲ್ಹಾದ್ ಜೋಶಿ ಲೇವಡಿ
2023ರ ಕರ್ನಾಟಕ ಚುನಾವಣೆಯಲ್ಲಿ ಎಲ್ಲ ಸರಿಯಾಗಿತ್ತಾ? ಪ್ರಲ್ಹಾದ್ ಜೋಶಿ ಲೇವಡಿ
ಮಲ್ಲೇಶ್ವರಂ 11ನೇ ಮುಖ್ಯರಸ್ತೆಗೆ ಸರೋಜಾ ದೇವಿ ಹೆಸರು: ಶಾಸಕ ಅಶ್ವತ್ಥನಾರಾಯಣ
ಮಲ್ಲೇಶ್ವರಂ 11ನೇ ಮುಖ್ಯರಸ್ತೆಗೆ ಸರೋಜಾ ದೇವಿ ಹೆಸರು: ಶಾಸಕ ಅಶ್ವತ್ಥನಾರಾಯಣ