ಚಂದ್ರನ ಮೇಲ್ಮೈಯಲ್ಲಿ ಇಸ್ರೋ ಲೋಗೊ ಮತ್ತು ರಾಷ್ಟ್ರೀಯ ಲಾಂಛನದ ಚಿತ್ರ; ವೈರಲ್ ಫೋಟೊ ಫೇಕ್
Fact Check: ಚಂದ್ರನ ಮೇಲ್ಮೈಯಲ್ಲಿ ರಾಷ್ಟ್ರೀಯ ಲಾಂಛನದ ಚಿತ್ರ, ಇಸ್ರೋ ಲೋಗೊ ಮುದ್ರೆ ಹೀಗೆ ಅಚ್ಚೊತ್ತಿದೆ ಎಂಬ ಬರಹದೊಂದಿಗೆ ಸಾಮಾಜಿಕ ಮಾಧ್ಯಮಗಳಲ್ಲಿ ಹಲವಾರು ಮಂದಿ ಶೇರ್ ಮಾಡುತ್ತಿರುವ ಈ ಚಿತ್ರ ಫೋಟೋಶಾಪ್ ಮಾಡಿದ್ದು. ಇಂಥಾ ಯಾವುದೇ ಫೋಟೊವನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಇಸ್ರೋ ಹಂಚಿಕೊಂಡಿಲ್ಲ. ಈ ಚಿತ್ರದ ಫ್ಯಾಕ್ಟ್ ಚೆಕ್ ಇಲ್ಲಿದೆ.
ದೆಹಲಿ ಆಗಸ್ಟ್24: ಚಂದ್ರಯಾನ-3 (Chandrayaan-3) ಯಶಸ್ವಿಯಾದ ಬೆನ್ನಲ್ಲೇ ಸಾಮಾಜಿಕ ಮಾಧ್ಯಮಗಳಲ್ಲಿ ಚಂದ್ರನ ಮೇಲ್ಮೈಯಲ್ಲಿ ಇಳಿದ ವಿಕ್ರಮ್ ಲ್ಯಾಂಡರ್ (Vikram Lander) ತೆಗೆದ ಚಿತ್ರ, ವಿಡಿಯೊ ಎಂಬ ಬರಹಗಳೊಂದಿಗೆ ಹಲವಾರು ಪೋಸ್ಟ್ ಹರಿದಾಡುತ್ತಿವೆ. ಇವುಗಳ ಪೈಕಿ ರಾಷ್ಟ್ರೀಯ ಲಾಂಛನದ ಚಿತ್ರ, ಚಂದ್ರನ ಮೇಲ್ಮೈಯಲ್ಲಿ ಇಸ್ರೋ ಲೋಗೊ ಇರುವ ಫೋಟೊವೊಂದು ವೈರಲ್ ಆಗಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ಹಲವಾರು ಮಂದಿ ಶೇರ್ ಮಾಡುತ್ತಿರುವ ಈ ಚಿತ್ರ ಫೋಟೋಶಾಪ್ ಮಾಡಿದ್ದು. ಇಂಥಾ ಯಾವುದೇ ಫೋಟೊವನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಇಸ್ರೋ ಹಂಚಿಕೊಂಡಿಲ್ಲ. ಈ ವೈರಲ್ ಚಿತ್ರದ ಬಗ್ಗೆ ಬೂಮ್ ಲೈವ್ ಫ್ಯಾಕ್ಟ್ ಚೆಕ್ ಮಾಡಿದ್ದು, ಇದು ಅಸಲಿ ಫೋಟೊ ಅಲ್ಲ ಎಂದು ಹೇಳಿದೆ.
ಆಗಸ್ಟ್ 23, 2023 ರಂದು ಚಂದ್ರಯಾನ 3 ರ ವಿಕ್ರಮ್ ಲ್ಯಾಂಡರ್ ಚಂದ್ರನ ಮೇಲ್ಮೈಯಲ್ಲಿ ಯಶಸ್ವಿಯಾಗಿ ಇಳಿದ ನಂತರ ಭಾರತವು ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿದ ಮೊದಲ ದೇಶ ಮತ್ತು ಚಂದ್ರನ ಮೇಲೆ ಇಳಿದ ವಿಶ್ವದ ನಾಲ್ಕನೇ ದೇಶವಾಗಿದೆ.
Image permanently imprinted on the surface of Moon today onward as Tyres of rover has this imprint, as there is no air on moon hence these marks will be forever. pic.twitter.com/oFor9u6Wil
— Pushpendra Kulshrestha (@Pushpendraamu) August 23, 2023
ಟೈರ್ಸ್ ಆಫ್ ರೋವರ್ ಈ ಮುದ್ರೆಯನ್ನು ಹೊಂದಿದ್ದು, ಇಂದು ಚಂದ್ರನ ಮೇಲ್ಮೈಯಲ್ಲಿ ಈ ಚಿತ್ರ ಶಾಶ್ವತವಾಗಿ ಅಚ್ಚೊತ್ತಿದೆ, ಏಕೆಂದರೆ ಚಂದ್ರನ ಮೇಲೆ ಗಾಳಿಯಿಲ್ಲ ಆದ್ದರಿಂದ ಈ ಗುರುತುಗಳು ಶಾಶ್ವತವಾಗಿರುತ್ತವೆ ಎಂಬ ಬರಹದೊಂದಿಗೆ ಈ ಚಿತ್ರ ವಾಟ್ಸಾಪ್ ನಲ್ಲಿ ಹರಿದಾಡಿದೆ.
ಫ್ಯಾಕ್ಟ್ ಚೆಕ್
ಫೋಟೋಶಾಪ್ ಬಳಸಿ ಮಾಡಿದ ಚಿತ್ರ ಇದು. ಚಂದ್ರನ ಮೇಲ್ಮೈಯಲ್ಲಿ ಇಸ್ರೋದ ಲೋಗೊ ಮತ್ತು ರಾಷ್ಟ್ರೀಯ ಲಾಂಛನದ ಚಿತ್ರ ನಿಜವಾದ ಫೋಟೋ ಅಲ್ಲ. ಈ ಫೋಟೊವನ್ನು ಸೂಕ್ಷ್ಮವಾಗಿ ನೋಡಿದರೆ ಕೆಳಗೆ ಎಡಭಾಗದಲ್ಲಿ ‘ಕೃಷ್ಣಾಂಶು ಗಾರ್ಗ್’ (‘Krishanshu Garg ) ಎಂದು ಬರೆದಿರುವ ವಾಟರ್‌ಮಾರ್ಕ್ ಕಾಣುತ್ತದೆ.
Can’t wait for this! 🌕🇮🇳 pic.twitter.com/9cXjpjT3nL
— Krishanshu Garg (@KrishanshuGarg) August 23, 2023
ಇದನ್ನೇ ಸುಳಿವು ಆಗಿ ಇಟ್ಟುಕೊಂಡು ಬೂಮ್ ತಂಡ ಕೃಷ್ಣಾಂಶು ಗಾರ್ಗ್ ಅವರ X ಪ್ರೊಫೈಲ್ ಅನ್ನು ಹುಡುಕಿದೆ. ಅದರಲ್ಲಿಅವರು ಆಗಸ್ಟ್ 23 ರಂದು “Can’t wait for this! 🌕🇮🇳 ” ಎಂಬ ಪಠ್ಯದೊಂದಿಗೆ ಚಿತ್ರವನ್ನು ಹಂಚಿಕೊಂಡಿರುವುದು ಕಂಡುಬಂದಿದೆ.
ಗಾರ್ಗ್ ಅವರನ್ನು ಸಂಪರ್ಕಿಸಿದಾಗ ಇದು ಚಂದ್ರನ ಮೇಲ್ಮೈನಲ್ಲಿ ತೆಗೆದ ಫೋಟೊ ಅಲ್ಲ ಎಂದು ಹೇಳಿದ್ದಾರೆ. ಬೂಮ್‌ನೊಂದಿಗೆ ಮಾತನಾಡಿದ ಗಾರ್ಗ್, “ನಾನು ರೋವರ್‌ನ ಲ್ಯಾಂಡಿಂಗ್ ಕೌಂಟ್ ಡೌನ್ ಸಮಯದಲ್ಲಿ ಈ ಚಿತ್ರವನ್ನು ಮಾಡಲು ಅಡೋಬಿ ಫೋಟೋಶಾಪ್ ಅನ್ನು ಬಳಸಿದ್ದೇನೆ, ನಾನು ಅದನ್ನು ನನ್ನ ಇನ್‌ಸ್ಟಾಗ್ರಾಮ್ ಸ್ಟೋರಿಯಾಗಿ ಹಂಚಿಕೊಂಡಿದ್ದೇನೆ. ಜನರು ಅದನ್ನು ನಿಜವಾದ ಚಿತ್ರ ಎಂದು ತಪ್ಪಾಗಿ ಭಾವಿಸಿದ್ದಾರೆ. ಅದು ವೈರಲ್ ಆಗುತ್ತದೆ ಎಂದು ನಿರೀಕ್ಷಿಸಿರಲಿಲ್ಲ ಎಂದು ಹೇಳಿದ್ದಾರೆ.
ಇದನ್ನೂ ಓದಿ: 6 ದೇಶಗಳನ್ನು ಆಹ್ವಾನಿಸಲು ನಿರ್ಧರಿಸಿದ ಬ್ರಿಕ್ಸ್; ಇದು ಗುಂಪನ್ನು ಬಲಪಡಿಸುತ್ತದೆ: ಪ್ರಧಾನಿ ನರೇಂದ್ರ ಮೋದಿ
ರಿವರ್ಸ್ ಇಮೇಜ್ ಸರ್ಚ್ ಮಾಡಿದಾಗ hiclipart.com ವೆಬ್‌ಸೈಟ್‌ನಲ್ಲಿ ಗಾರ್ಗ್‌ನ ಚಿತ್ರದಲ್ಲಿ ಬಳಸಿರುವ ಇಂಪ್ರಿಟ್ನ ಬಾರ್ಡರ್ನ ವೆಕ್ಟರ್ ಅನ್ನು ನಾವು ಕಂಡುಕೊಂಡಿದ್ದೇವೆ. ಜುಲೈ 14, 2023 ರಂದು ಗುಜರಾತ್‌ನ ಗೃಹ ಸಚಿವ ಹರ್ಷ್ ಸಾಂಘ್ವಿ ಅವರ ಈ ಪೋಸ್ಟ್ ಪ್ರಕಾರ, ಪ್ರಗ್ಯಾನ್‌ನ ಚಕ್ರವು ರಾಷ್ಟ್ರೀಯ ಲಾಂಛನ ಮತ್ತು ಇಸ್ರೋದ ಲೋಗೊ ಹೊಂದಿದೆ.
Towards a remarkable journey 🚀
On the wheel of Pragyan, the #ISRO logo and State Emblem (Ashoka Chakra) is embossed—a clear visual confirmation that this rover will leave its mark on the lunar regolith.#Pragyan #Chandrayaan3 pic.twitter.com/BzxcfIG7JQ
— Harsh Sanghavi (@sanghaviharsh) July 14, 2023
ವಿಕ್ರಮ್ ಲ್ಯಾಂಡರ್‌ನಲ್ಲಿರುವ ಪ್ರಗ್ಯಾನ್ ರೋವರ್ ಈಗ ಚಂದ್ರನ ಮೇಲ್ಮೈಯನ್ನು ಮತ್ತಷ್ಟು ಅರ್ಥಮಾಡಿಕೊಳ್ಳಲು ಮತ್ತು ಅನ್ವೇಷಿಸಲು 14 ದಿನಗಳ ಕಾರ್ಯಯೋಜನೆಯನ್ನು ನಡೆಸುತ್ತಿದೆ.
ಪ್ರಗ್ಯಾನ್ ಚಕ್ರದ ಮೇಲೆ ಕೆತ್ತಲಾಗಿರುವ ಮುದ್ರೆಯ ಚಿತ್ರಕ್ಕೆ ಹೋಲಿಸಿದಾಗ ಅವು ಒಂದೇ ಆಗಿಲ್ಲ ಎಂದು ತಿಳಿದುಬಂದಿದೆ. ಪ್ರಗ್ಯಾನ್ ಚಕ್ರವು ಎರಡು ಲಂಬವಾದ ಗಡಿಗಳಲ್ಲಿ ಇಸ್ರೋದ ಲೋಗೋ ಮತ್ತು ರಾಷ್ಟ್ರೀಯ ಲಾಂಛನವನ್ನು ಹೊಂದಿದ್ದರೆ, ವೈರಲ್ ಚಿತ್ರವು ಎರಡು ಬಾರ್ಡರ್ಗಳ ಮಧ್ಯದಲ್ಲಿ ಮುದ್ರೆಗಳನ್ನು ತೋರಿಸುತ್ತದೆ.
ಮತ್ತಷ್ಟು ಫ್ಯಾಕ್ಟ್ ಚೆಕ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ