ತೈಲ ಕಂಪನಿಗಳಿಗೆ 30,000 ಕೋಟಿ ರೂ. ಎಲ್‌ಪಿಜಿ ಸಬ್ಸಿಡಿಗೆ ಮೋದಿ ಸಂಪುಟ ಅನುಮೋದನೆ
ಮಧ್ಯಮ ವರ್ಗದವರಿಗೆ ಕೈಗೆಟುಕುವ ದರದಲ್ಲಿ ಅಡುಗೆ ಅನಿಲವನ್ನು ನೀಡಲು ತೈಲ ಮಾರುಕಟ್ಟೆ ಕಂಪನಿಗಳಿಗೆ (ಒಎಂಸಿ) 30,000 ಕೋಟಿ ರೂ. ಎಲ್‌ಪಿಜಿ ಸಬ್ಸಿಡಿಗೆ ಕೇಂದ್ರ ಸಂಪುಟ ಅನುಮೋದನೆ ನೀಡಿದೆ. ಹಾಗೇ, 275 ಎಂಜಿನಿಯರಿಂಗ್ ಮತ್ತು ಪಾಲಿಟೆಕ್ನಿಕ್ ಸಂಸ್ಥೆಗಳನ್ನು ಬೆಂಬಲಿಸಲು 4,200 ಕೋಟಿ ರೂ.ಗಳ ವೆಚ್ಚವನ್ನು ಸಂಪುಟ ಅನುಮೋದಿಸಿದೆ. ಇದರ ಜೊತೆಗೆ ಉಜ್ವಲ ಯೋಜನೆಯ ಗ್ರಾಹಕರಿಗೆ 12,000 ಕೋಟಿ ರೂ. ಸಬ್ಸಿಡಿಗೆ ಮೋದಿ ಸಂಪುಟ ಅನುಮೋದನೆ ನೀಡಿದೆ.

ನವದೆಹಲಿ, ಆಗಸ್ಟ್ 8: ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ (Union Cabinet Meeting) ಇಂದು ಕೆಲವು ಮಹತ್ವದ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ. ಅಡುಗೆ ಅನಿಲ (ಎಲ್‌ಪಿಜಿ)ವನ್ನು ಗ್ರಾಹಕರಿಗೆ ಹೆಚ್ಚು ಕೈಗೆಟುಕುವಂತೆ ಮಾಡಲು ತೈಲ ಮಾರುಕಟ್ಟೆ ಕಂಪನಿಗಳಿಗೆ (ಒಎಂಸಿ) 30,000 ಕೋಟಿ ರೂ. ಸಬ್ಸಿಡಿಗೆ ಕೇಂದ್ರ ಸಂಪುಟ ಅನುಮೋದನೆ ನೀಡಿದೆ. ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ಅಶ್ವಿನಿ ವೈಷ್ಣವ್ (Ashwini Vaishnaw) ಈ ಕ್ರಮವು ಇಂಧನ ಭದ್ರತೆ ಮತ್ತು ದೇಶಾದ್ಯಂತ ಗೃಹಬಳಕೆಯ ಅಡುಗೆ ಇಂಧನಗಳನ್ನು ಎಲ್ಲರಿಗೂ ನೀಡುವ ಗುರಿಯನ್ನು ಹೊಂದಿದೆ ಎಂದು ಘೋಷಿಸಿದ್ದಾರೆ.
ಪ್ರಧಾನ ಮಂತ್ರಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ಇಂದು ನಡೆದ ಕೇಂದ್ರ ಸಚಿವ ಸಂಪುಟವು ತೈಲ ಮಾರುಕಟ್ಟೆ ಕಂಪನಿಗಳಿಗೆ (ಒಎಂಸಿ) 30,000 ಕೋಟಿ ರೂ. ಮೊತ್ತದ ಎಲ್‌ಪಿಜಿ ಸಬ್ಸಿಡಿಯನ್ನು ಅನುಮೋದಿಸಿದೆ ಎಂದು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ. ಪ್ರಸ್ತುತ ಭೌಗೋಳಿಕ ರಾಜಕೀಯ ಪರಿಸ್ಥಿತಿಯ ನಡುವೆ ಮಧ್ಯಮ ವರ್ಗದವರಿಗೆ ಕೈಗೆಟುಕುವ ದರದಲ್ಲಿ ಎಲ್‌ಪಿಜಿಯನ್ನು ನೀಡಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ.
#WATCH | Delhi: After the cabinet meeting, Union Minister Ashwini Vaishnaw says, “Pradhan Mantri Ujjwala Yojana is recognised globally for its inclusive growth…The Pradhan Mantri Ujjwala Yojana aims to bring a change in the lives of the public…10.33 crore Ujjwala connections… pic.twitter.com/cuSLv1X4LL
— ANI (@ANI) August 8, 2025
ಇದನ್ನೂ ಓದಿ: ಬೆಂಗಳೂರಿನಲ್ಲಿ ಸ್ಪೇಸ್‌ಟೆಕ್ ಕೇಂದ್ರ ಸ್ಥಾಪನೆ, ಬಹುಮಹಡಿ ಕಟ್ಟಡಗಳಿಗೆ ಸೆಸ್: ಸಚಿವ ಸಂಪುಟ ನಿರ್ಧಾರ
ಪ್ರಧಾನ ಮಂತ್ರಿ ಉಜ್ವಲ ಯೋಜನೆಗೆ 12,000 ಕೋಟಿ ರೂ. ಸಬ್ಸಿಡಿ:
ಹಾಗೇ, ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಇಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆಯು 2025-26ರ ಅವಧಿಗೆ ಪ್ರಧಾನ ಮಂತ್ರಿ ಉಜ್ವಲ ಯೋಜನಾ (ಪಿಎಂಯುವೈ) ಫಲಾನುಭವಿಗಳಿಗೆ ಉದ್ದೇಶಿತ ಸಬ್ಸಿಡಿಯನ್ನು ಮುಂದುವರಿಸಲು ಅನುಮೋದನೆ ನೀಡಿದೆ. 2025-26ರ ಹಣಕಾಸು ವರ್ಷಕ್ಕೆ ಪ್ರಧಾನ ಮಂತ್ರಿ ಉಜ್ವಲ ಯೋಜನೆಗೆ 12,000 ಕೋಟಿ ರೂ. ಸಬ್ಸಿಡಿಯನ್ನು ಸಂಪುಟ ಅನುಮೋದಿಸಿದೆ. ಈ ಸಬ್ಸಿಡಿ ಆರ್ಥಿಕವಾಗಿ ದುರ್ಬಲ ಕುಟುಂಬಗಳಿಗೆ ಸಬ್ಸಿಡಿ ಎಲ್‌ಪಿಜಿ ಸಂಪರ್ಕಗಳನ್ನು ಒದಗಿಸುವುದನ್ನು ಬೆಂಬಲಿಸುವುದನ್ನು ಮುಂದುವರಿಸುತ್ತದೆ. ಇದು ಸಾರ್ವತ್ರಿಕ ಶುದ್ಧ ಅಡುಗೆ ಪ್ರವೇಶದ ಸರ್ಕಾರದ ಗುರಿಯನ್ನು ಮುನ್ನಡೆಸುತ್ತದೆ.
#WATCH | Delhi: After the cabinet meeting, Union Minister Ashwini Vaishnaw says, “To ensure that the LPG gas is affordable for the middle class, a subsidy of Rs 30,000 cr has been approved…In present geopolitics, gas prices fluctuate and to take care of that, the subsidy is… pic.twitter.com/Y5bYgXB8zC
— ANI (@ANI) August 8, 2025
ಇದನ್ನೂ ಓದಿ: ತೆಲಂಗಾಣದ ಕಾಜಿಪೇಟೆ ರೈಲು ಉತ್ಪಾದನಾ ಘಟಕದಲ್ಲಿ MEMU ರೈಲುಗಳ ತಯಾರಿ: ಅಶ್ವಿನಿ ವೈಷ್ಣವ್
ಈ ಯೋಜನೆಗೆ 12,000 ಕೋಟಿ ರೂ.ಗಳನ್ನು ಹಂಚಿಕೆ ಮಾಡಿದೆ. ಈ ನಿರ್ಧಾರದ ಅಡಿಯಲ್ಲಿ PMUY ಗ್ರಾಹಕರು ವರ್ಷಕ್ಕೆ 9 ಮರುಪೂರಣಗಳಿಗೆ 14.2 ಕೆಜಿ ಎಲ್‌ಪಿಜಿ ಸಿಲಿಂಡರ್‌ಗೆ 300 ರೂ.ಗಳ ಸಬ್ಸಿಡಿಯನ್ನು ಪಡೆಯುತ್ತಾರೆ. ಕಡಿಮೆ ಆದಾಯದ ಕುಟುಂಬಗಳಿಗೆ LPG ಅನ್ನು ಹೆಚ್ಚು ಕೈಗೆಟುಕುವಂತೆ ಮಾಡುವುದು ಮತ್ತು ಜಾಗತಿಕ ಬೆಲೆಗಳಲ್ಲಿನ ಏರಿಳಿತದ ಹೊರತಾಗಿಯೂ ನಿರಂತರ ಬಳಕೆಯನ್ನು ಖಚಿತಪಡಿಸುವುದು ಈ ಕ್ರಮದ ಗುರಿಯಾಗಿದೆ. ಬಡ ಮನೆಗಳ ಮಹಿಳೆಯರಿಗೆ ಠೇವಣಿ-ಮುಕ್ತ LPG ಸಂಪರ್ಕಗಳನ್ನು ಒದಗಿಸಲು ಮೇ 2016ರಲ್ಲಿ ಪ್ರಾರಂಭಿಸಲಾದ PMUY ಈಗ ಭಾರತದಾದ್ಯಂತ 10.33 ಕೋಟಿಗೂ ಹೆಚ್ಚು ಸಂಪರ್ಕಗಳನ್ನು ಒಳಗೊಂಡಿದೆ.
#WATCH | Delhi: After the cabinet meeting, Union Minister Ashwini Vaishnaw says, “…The cabinet approves Budgetary Support for Multidisciplinary Education and Research improvement in Technical Education (MERITE) Scheme with an outlay of Rs 4200 crore…State Government… pic.twitter.com/uLMm9rwifC
— ANI (@ANI) August 8, 2025
MERITE ಯೋಜನೆಗೆ 4,200 ಕೋಟಿ ಅನುಮೋದನೆ:
‘ತಾಂತ್ರಿಕ ಶಿಕ್ಷಣದಲ್ಲಿ ಬಹುಶಿಸ್ತೀಯ ಶಿಕ್ಷಣ ಮತ್ತು ಸಂಶೋಧನಾ ಸುಧಾರಣೆ’ (MERITE) ಯೋಜನೆಗೆ ಸಚಿವ ಸಂಪುಟ 4,200 ಕೋಟಿ ರೂ. ಮಂಜೂರು ಮಾಡಿದೆ. ಇದು ಎಂಜಿನಿಯರಿಂಗ್ ಕಾಲೇಜುಗಳು, ಪಾಲಿಟೆಕ್ನಿಕ್ ಕಾಲೇಜು, ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆಗಳು (NITಗಳು), ರಾಜ್ಯ ಎಂಜಿನಿಯರಿಂಗ್ ಸಂಸ್ಥೆಗಳು ಮತ್ತು ತಾಂತ್ರಿಕ ವಿಶ್ವವಿದ್ಯಾಲಯಗಳನ್ನು ಒಳಗೊಂಡ 275 ಸರ್ಕಾರಿ ಮತ್ತು ಸರ್ಕಾರಿ ಅನುದಾನಿತ ತಾಂತ್ರಿಕ ಸಂಸ್ಥೆಗಳಲ್ಲಿ ಮೂಲಸೌಕರ್ಯ ಮತ್ತು ಗುಣಮಟ್ಟವನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ.
📡LIVE Now 📡 #Cabinet Briefing by Union Minister @AshwiniVaishnaw
📍 National Media Centre, New Delhi
Watch on #PIB‘s📺 Facebook: https://t.co/ykJcYlMTtL YouTube: https://t.co/F5xJE821DQhttps://t.co/MpUpBcpeqg
— PIB India (@PIB_India) August 8, 2025
ಈ ಯೋಜನೆಯು ರಾಷ್ಟ್ರೀಯ ಶಿಕ್ಷಣ ನೀತಿ 2020ರೊಂದಿಗೆ ಹೊಂದಿಕೆಯಾಗುತ್ತದೆ. ಇದು ವಿದ್ಯಾರ್ಥಿಗಳ ಕೌಶಲ್ಯ, ಸಂಶೋಧನೆ, ನಾವೀನ್ಯತೆ ಮತ್ತು ಆಡಳಿತವನ್ನು ಸುಧಾರಿಸುವ ಗುರಿಯನ್ನು ಹೊಂದಿದೆ ಮತ್ತು ದೇಶಾದ್ಯಂತ ಅಂದಾಜು 7.5 ಲಕ್ಷ ವಿದ್ಯಾರ್ಥಿಗಳಿಗೆ ಪ್ರಯೋಜನವನ್ನು ನೀಡುತ್ತದೆ. MERITE ಯೋಜನೆಯು ಪಠ್ಯಕ್ರಮದ ಆಧುನೀಕರಣ, ವೃತ್ತಿ-ಆಧಾರಿತ ತರಬೇತಿ ಮತ್ತು ಸುಧಾರಿತ ಇಂಟರ್ನ್‌ಶಿಪ್ ಅವಕಾಶಗಳಿಗೆ ಒತ್ತು ನೀಡುತ್ತದೆ. ತಾಂತ್ರಿಕ ಶಿಕ್ಷಣದಲ್ಲಿ ಮಹಿಳಾ ಭಾಗವಹಿಸುವಿಕೆಯನ್ನು ಹೆಚ್ಚಿಸುವುದರ ಮೇಲೆ ವಿಶೇಷ ಗಮನ ಹರಿಸಲಾಗುವುದು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:29 pm, Fri, 8 August 25




