ಅಫಿಡವಿಟ್ ಮೇಲೆ ಸಹಿ ಮಾಡಿ ಅಂತ ಚುನಾವಣಾ ಆಯೋಗ ರಾಹುಲ್ರನ್ನು ಬೆದರಿಸಲು ಪ್ರಯತ್ನಿಸುತ್ತಿದೆ: ಖರ್ಗೆ
ರಾಜ್ಯದ ಬಿಜೆಪಿ ನಾಯಕರು ರಾಹುಲ್ ಗಾಂಧಿ ಪ್ರೆಸ್ ಮೀಟ್ ನಂತರ ಶಿವಕಾಶಿ ಪಟಾಕಿ, ಠುಸ್ ಪಟಾಕಿ ಅಂತ ಹೇಳಿಕೆ ನೀಡಿದ್ದನ್ನು ಗಮನಿಸಿದ್ದೇನೆ, ರಾಹುಲ್ ನೀಡಿದ ದಾಖಲೆಗಳು ಠುಸ್ ಪಟಾಕಿ ಅಂತಾದರೆ ಕೈಯಲ್ಲಿ ಹಿಡಿದು ನೋಡಲಿ, ಕಮೆಂಟ್ ಎಲ್ಲರೂ ಮಾಡುತ್ತಾರೆ ಎಂದ ಪ್ರಿಯಾಂಕ್, ಇದಕ್ಕೂ ಮೊದಲು ಚಿಲುಮೆ ಟ್ರಸ್ಟ್ ಬಗ್ಗೆ ದೂರು ನೀಡಿದ್ದೇವೆ, ಚುನಾವಣಾ ಆಯೋಗ ಯಾವ ಕ್ರಮವನ್ನೂ ಜರುಗಿಲಿಲ್ಲ ಎಂದರು.
ಬೆಂಗಳೂರು, ಆಗಸ್ಟ್ 8: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ತಾವು ಚುನಾವಣಾ ಆಯೋಗದ ವಿರುದ್ಧ ಮಾಡಿದ ಎಲ್ಲ ಅರೋಪಗಳಿಗೆ ದಾಖಲೆಗಳನ್ನು ಒದಗಿಸಿದ್ದಾರೆ, ಅವರು ನಿನ್ನೆ ಸುದ್ದಿಗೋಷ್ಠಿ ನಡೆಸಿದ ನಂತರ ಚುನಾವಣಾ ಅಯೋಗ ತನ್ನ ವೆಬ್ಸೈಟ್ನಿಂದ ಮತದಾರರ ಪಟ್ಟಿಗಳನ್ನು ಡಿಲೀಟ್ ಮಾಡುತ್ತಿದೆ, ಇದರ ಅರ್ಥವೇನು? ಎಂದು ಸಚಿವ ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದರು. ಮಾಧ್ಯಮಗಳೊಂದಿಗೆ ಮಾತಾಡಿದ ಅವರು ರಾಹುಲ್ ದಾಖಲೆಗಳನ್ನು ಬಿಡುಗಡೆ ಮಾಡಿದ ಬಳಿಕ ಚುನಾವಣಾ ಆಯೋಗ ಒಂದು ಜವಾಬ್ದಾರಿಯುತ ಸಂಸ್ಥೆಯಾಗಿ ದಾಖಲೆಗಳನ್ನು ಪರಿಶೀಲಿಸಬೇಕು ಮತ್ತು ತನಿಖೆ ಮಾಡಬೇಕು, ಅದನ್ನು ಬಿಟ್ಟು ಅಫಿಡವಿಟ್ ಕೊಡಿ, ದಾಖಲೆಗಳು ಸುಳ್ಳಾಗಿದ್ದರೆ ಕ್ರಿಮಿನಲ್ ಮೊಕದ್ದಮೆ ಹೂಡುತ್ತೇವೆ ಅಂತ ಆಯೋಗ ಹೇಳುತ್ತದೆ, ಇದು ಬೆದರಿಕೆವೊಡ್ಡುವ ತಂತ್ರವಲ್ಲದೆ ಮತ್ತೇನು? ಒಂದು ಜಬಾಬ್ದಾರಿಯುತ ಸಂಸ್ಥೆ ಹೀಗೆ ನಡೆದುಕೊಳ್ಳುತ್ತದೆಯೇ ಎಂದು ಖರ್ಗೆ ಪ್ರಶ್ನಿಸಿದರು.
ಇದನ್ನೂ ಓದಿ: ನಾವು ಆಟ ಆಡಲು ವಿದೇಶಕ್ಕೆ ಹೋಗ್ತಿಲ್ಲ: ಅಮೆರಿಕಕ್ಕೆ ತೆರಳಲು ಅನುಮತಿ ನೀಡದ್ದಕ್ಕೆ ಕೇಂದ್ರದ ವಿರುದ್ಧ ಪ್ರಿಯಾಂಕ್ ಖರ್ಗೆ ಕಿಡಿ
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

