ರಾಮಮಂದಿರ ಅಡಿಗಲ್ಲು ಸಮಾರಂಭ: ಪ್ರಧಾನಿ ಮೋದಿ ವೇಳಾಪಟ್ಟಿ

|

Updated on: Aug 05, 2020 | 5:53 AM

ದೆಹಲಿ: ಇಂದು ರಾಮಮಂದಿರಕ್ಕೆ ಶಿಲಾನ್ಯಾಸ ನೆರವೇರಿಸ್ತಿರೋದು ದೇಶದ ಪ್ರಧಾನಿ ನರೇಂದ್ರ ಮೋದಿ. ಹೀಗಾಗಿಯೇ ಅಯೋಧ್ಯೆಯಲ್ಲಿ ನಡೆಯಲಿರೋ ಕಾರ್ಯಕ್ರಮ ಮತ್ತಷ್ಟು ಕಳೆಗಟ್ಟಿದೆ. ಹಾಗಿದ್ರೆ ಪ್ರಧಾನಿ ಎಷ್ಟು ಗಂಟೆಗೆ ಅಯೋಧ್ಯೆ ತಲುಪಲಿದ್ದಾರೆ. ಎಷ್ಟು ಗಂಟೆಗೆ ಮಂದಿರದ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಇವೆಲ್ಲದ್ರ ಕುರಿತ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ. ರಾಮಮಂದಿರ.. ಕೋಟಿ ಕೋಟಿ ಭಾರತೀಯರ ಕನಸು. ಹಿಂದೂಗಳ ಪಾಲಿನ ಹೆಮ್ಮೆಯ ಪ್ರತೀಕ. ಈ ಮಂದಿರದ ನಿರ್ಮಾಣಕ್ಕಾಗಿ ಭಾರತಕ್ಕೇ ಭಾರತವೇ ಕಾಯುತ್ತಿತ್ತು. ಅಸಂಖ್ಯಾತ ರಾಮ ಭಕ್ತರು ಮಂದಿರಕ್ಕಾಗಿ ತನು ಮನ ಧನದಿಂದ ಪ್ರಾರ್ಥಿಸ್ತಿದ್ರು. ಇದೀಗ […]

ರಾಮಮಂದಿರ ಅಡಿಗಲ್ಲು ಸಮಾರಂಭ: ಪ್ರಧಾನಿ ಮೋದಿ ವೇಳಾಪಟ್ಟಿ
Follow us on

ದೆಹಲಿ: ಇಂದು ರಾಮಮಂದಿರಕ್ಕೆ ಶಿಲಾನ್ಯಾಸ ನೆರವೇರಿಸ್ತಿರೋದು ದೇಶದ ಪ್ರಧಾನಿ ನರೇಂದ್ರ ಮೋದಿ. ಹೀಗಾಗಿಯೇ ಅಯೋಧ್ಯೆಯಲ್ಲಿ ನಡೆಯಲಿರೋ ಕಾರ್ಯಕ್ರಮ ಮತ್ತಷ್ಟು ಕಳೆಗಟ್ಟಿದೆ. ಹಾಗಿದ್ರೆ ಪ್ರಧಾನಿ ಎಷ್ಟು ಗಂಟೆಗೆ ಅಯೋಧ್ಯೆ ತಲುಪಲಿದ್ದಾರೆ. ಎಷ್ಟು ಗಂಟೆಗೆ ಮಂದಿರದ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಇವೆಲ್ಲದ್ರ ಕುರಿತ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ.

ರಾಮಮಂದಿರ.. ಕೋಟಿ ಕೋಟಿ ಭಾರತೀಯರ ಕನಸು. ಹಿಂದೂಗಳ ಪಾಲಿನ ಹೆಮ್ಮೆಯ ಪ್ರತೀಕ. ಈ ಮಂದಿರದ ನಿರ್ಮಾಣಕ್ಕಾಗಿ ಭಾರತಕ್ಕೇ ಭಾರತವೇ ಕಾಯುತ್ತಿತ್ತು. ಅಸಂಖ್ಯಾತ ರಾಮ ಭಕ್ತರು ಮಂದಿರಕ್ಕಾಗಿ ತನು ಮನ ಧನದಿಂದ ಪ್ರಾರ್ಥಿಸ್ತಿದ್ರು. ಇದೀಗ ಕನಸಿನ ಮಂದಿರದ ಶಿಲಾನ್ಯಾಸಕ್ಕೆ ಕೌಂಟ್​​ಡೌನ್ ಶುರುವಾಗಿದೆ. ಅದ್ರಲ್ಲೂ ರಾಷ್ಟ್ರ ರಾಜಕೀಯದ ದಿಕ್ಕೇ ಬದಲಿಸಿದ, ಬಿಜೆಪಿ ಪಕ್ಷವನ್ನೇ ಕಟ್ಟಿಸಿದ ಈ ಮಂದಿರಕ್ಕೆ ಇಂದು ಪ್ರಧಾನಿ ಮೋದಿಯೇ ಮೊದಲ ಇಟ್ಟಿಗೆ ಇಡಲಿದ್ದಾರೆ.

ಹಾಗಿದ್ರೆ ಪ್ರಧಾನಿ ಮೋದಿ ಇಂದು ಎಷ್ಟೊತ್ತಿಗೆ ಅಯೋಧ್ಯೆ ತಲುಪಲಿದ್ದಾರೆ. ಶಿಲಾನ್ಯಾಸ ಕಾರ್ಯಕ್ರಮ ನೆರವೇರೋದು ಎಷ್ಟು ಗಂಟೆಗೆ. ಮೋದಿಯ ಇಂದಿನ ಟೈಮ್​ಟೇಬಲ್ ಏನು ಅನ್ನೋ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ.

ಮೋದಿ ‘ಅಯೋಧ್ಯೆ’ ವೇಳಾಪಟ್ಟಿ:
ಇಂದು ಬೆಳಗ್ಗೆ 9:35ಕ್ಕೆ ದೆಹಲಿಯಿಂದ ಪ್ರಧಾನಿ ಮೋದಿ ಅಯೋಧ್ಯೆಗೆ ಪ್ರಯಾಣ ಬೆಳೆಸಲಿದ್ದಾರೆ. ಬೆಳಗ್ಗೆ 10:35ಕ್ಕೆ ಮೋದಿ ಉತ್ತರಪ್ರದೇಶದ ಲಖನೌ ತಲುಪಲಿದ್ದಾರೆ. ಬಳಿಕ ಬೆಳಗ್ಗೆ 10:40ಕ್ಕೆ ಲಖನೌದಿಂದ ಹೆಲಿಕಾಪ್ಟರ್​ ಮೂಲಕ ಮೋದಿ ಅಯೋಧ್ಯೆಗೆ ತೆರಳಲಿದ್ದಾರೆ. ಬೆಳಗ್ಗೆ 11:30ಕ್ಕೆ ಮೋದಿ ಅಯೋಧ್ಯೆ ತಲುಪಲಿದ್ದಾರೆ. ಮಧ್ಯಾಹ್ನ 12ಕ್ಕೆ ಭೂಮಿ ಪೂಜೆ ವಿಧಿ ವಿಧಾನ ಆರಂಭವಾಗಲಿದೆ. ಮಧ್ಯಾಹ್ನ 12:15ಕ್ಕೆ ಪ್ರಧಾನಿ ಮೋದಿ ಭೂಮಿ ಪೂಜೆ ನೆರವೇರಿಸಲಿದ್ದಾರೆ.

ಭೂಮಿ ಪೂಜೆಗೂ ಮುನ್ನ ಹನುಮನ ಬಳಿ ಪ್ರಧಾನಿ ಪ್ರಾರ್ಥನೆ
ಇನ್ನು ಮೊಟ್ಟ ಮೊದಲ ಬಾರಿ ಅಯೋಧ್ಯೆಗೆ ಭೇಟಿ ನೀಡ್ತಿರೋ ಪ್ರಧಾನಿ ಮೋದಿ, ಭೂಮಿ ಪೂಜೆಗೂ ಮುನ್ನ ಹನುಮಾನ್ ಗಡಿಗೆ ಭೇಟಿ ನೀಡಲಿದ್ದಾರೆ. ಹನುಮಾನ್ ಗಡಿಯಲ್ಲಿ ಮೊದಲು ಹನುಮಾನ್​ಗೆ ಪೂಜೆ ಸಲ್ಲಿಸಿ, ಮಂದಿರ ನಿರ್ಮಾಣ ಕಾರ್ಯ ಯಶಸ್ವಿಯಾಗಲಿ ಎಂದು ಪ್ರಾರ್ಥನೆ ಸಲ್ಲಿಸಲಿದ್ದಾರೆ. ಯಾಕಂದ್ರೆ ಹನುಮಾನ್ ಆಶೀರ್ವಾದ ಇಲ್ಲದೇ ಶ್ರೀರಾಮನ ಯಾವ ಕೆಲಸ ನಡೆಯಲ್ಲ ಅನ್ನೋ ನಂಬಿಕೆ ಇದೆ. ಹೀಗಾಗಿ ಹನುಮಾನ್​ಗೆ ಮೋದಿ ವಿಷೇಶ ಪೂಜೆ ಸಲ್ಲಿಸಲು ಸಕಲ ವ್ಯವಸ್ಥೆ ಮಾಡಲಾಗಿದೆ.

ಮೋದಿಗೆ ಕೊರೊನಾ ತಗುಲದಂತೆ ತೀವ್ರ ಕಟ್ಟೆಚ್ಚರ!
ಕೊರೊನಾ ವೇಗವಾಗಿ ಹರಡುತ್ತಿರೋ ಹೊತ್ತಲ್ಲೇ ಮೋದಿ ಅಯೋಧ್ಯೆಗೆ ಭೇಟಿ ನೀಡ್ತಿದ್ದು, ಒಂದಷ್ಟು ಆತಂಕಕ್ಕೂ ಕಾರಣವಾಗಿದೆ. ಹೀಗಾಗಿ ಯಾವುದೇ ಕಾರಣಕ್ಕೂ ಪ್ರಧಾನಿಗೆ ವೈರಸ್ ಅಟಕಾಯಿಸದಂತೆ ವ್ಯವಸ್ಥೆ ಮಾಡಲಾಗಿದೆ. ಒಬ್ಬರಿಂದ ಒಬ್ಬರಿಗೆ 8 ಅಡಿ ಅಂತರ ಕಾಪಾಡುವಂತೆ ಕುರ್ಚಿ ಇಡಲಾಗಿದೆ. ಪ್ರಧಾನಿಯನ್ನ ಯಾರೂ ಯಾವುದೇ ಕಾರಣಕ್ಕೂ ಸ್ಪರ್ಶಿಸುವಂತಿಲ್ಲ. ಎಲ್ಲರೂ ಮೂರು ಪದರದ ಮಾಸ್ಕ್ ಧರಿಸೋದು ಕಡ್ಡಾಯ. ರಾಮಜನ್ಮಭೂಮಿ ಕ್ಷೇತ್ರದ ಕಾಂಪ್ಲೆಕ್ಸ್​ಗೆ ಕ್ರಿಮಿನಾಶಕ ಸಿಂಪಡಣೆ ಮಾಡಲಾಗಿದೆ.

ಒಟ್ನಲ್ಲಿ, ಇಡೀ ದೇಶ ಈಗ ಪ್ರಧಾನಿ ಮೋದಿಯ ಅಯೋಧ್ಯೆ ಭೇಟಿಯನ್ನ ಎದುರು ನೋಡ್ತಿದೆ. ರಾಮಮಂದಿರ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸುತ್ತಲೇ ಭಾರತದ ಧಾರ್ಮಿಕ ಚರಿತ್ರೆಯಲ್ಲಿ ಮೋದಿ ಹೊಸ ಇತಿಹಾಸ ಸೃಷ್ಟಿಸಲಿದ್ದಾರೆ. ಹಿಂದೂಸ್ಥಾನದ ಕೋಟಿ ಕೋಟಿ ಮಂದಿ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲಿದ್ದಾರೆ.