25,000 ಅನಾಥ ಶವಗಳಿಗೆ ಅಂತ್ಯಕ್ರಿಯೆ ನೆರವೇರಿಸಿದ ಷರೀಫ್ರಿಗೆ ಸಿಕ್ತು ಭೂಮಿ ಪೂಜೆಗೆ ಆಮಂತ್ರಣ
ಲಕ್ನೋ: ಅನಾಥ ಶವಗಳಿಗೆ ಗೌರವಯುತವಾಗಿ ಅಂತ್ಯ ಸಂಸ್ಕಾರ ನೆರವೇರುವುದು ತೀರ ಅಪರೂಪ. ಅಂಥದ್ರಲ್ಲಿ, ಬರೋಬ್ಬರಿ 25 ಸಾವಿರಕ್ಕೂ ಹೆಚ್ಚು ಅನಾಥ ಶವಗಳಿಗೆ ಗೌರವಯುತವಾಗಿ ಅಂತ್ಯಕ್ರಿಯೆ ನೆರವೇರಿಸಿರುವ ಮೊಹಮ್ಮದ್ ಷರೀಫ್ರಿಗೆ ತಮ್ಮ ನಿಸ್ವಾರ್ಥ ಸೇವೆಗಾಗಿ ಅಮೋಘವಾದ ಗೌರವ ಸಂದಿದೆ. ನಾಳೆ ಜರುಗಲಿರುವ ರಾಮ ಮಂದಿರದ ಭೂಮಿ ಪೂಜೆ ಸಮಾರಂಭಕ್ಕೆ ಮೊಹಮ್ಮದ್ ಷರೀಫ್ರನ್ನ ಆಹ್ವಾನಿಸುವ ಮೂಲಕ ಅವರ ನಿಸ್ವಾರ್ಥ ಸೇವೆಯನ್ನ ಶ್ಲಾಘಿನೆ ದೊರೆತಿದೆ. ಮೊಹಮ್ಮದ್ ಷರೀಫ್ 25 ಸಾವಿರಕ್ಕೂ ಹೆಚ್ಚು ಅನಾಥ ಶವಗಳಿಗೆ ಅಂತ್ಯಸಂಸ್ಕಾರ ನೆರವೇರಿಸಿದ್ದಾರೆ. ರಾಮ ಮಂದಿರದ ಭೂಮಿ […]
ಲಕ್ನೋ: ಅನಾಥ ಶವಗಳಿಗೆ ಗೌರವಯುತವಾಗಿ ಅಂತ್ಯ ಸಂಸ್ಕಾರ ನೆರವೇರುವುದು ತೀರ ಅಪರೂಪ. ಅಂಥದ್ರಲ್ಲಿ, ಬರೋಬ್ಬರಿ 25 ಸಾವಿರಕ್ಕೂ ಹೆಚ್ಚು ಅನಾಥ ಶವಗಳಿಗೆ ಗೌರವಯುತವಾಗಿ ಅಂತ್ಯಕ್ರಿಯೆ ನೆರವೇರಿಸಿರುವ ಮೊಹಮ್ಮದ್ ಷರೀಫ್ರಿಗೆ ತಮ್ಮ ನಿಸ್ವಾರ್ಥ ಸೇವೆಗಾಗಿ ಅಮೋಘವಾದ ಗೌರವ ಸಂದಿದೆ.
ನಾಳೆ ಜರುಗಲಿರುವ ರಾಮ ಮಂದಿರದ ಭೂಮಿ ಪೂಜೆ ಸಮಾರಂಭಕ್ಕೆ ಮೊಹಮ್ಮದ್ ಷರೀಫ್ರನ್ನ ಆಹ್ವಾನಿಸುವ ಮೂಲಕ ಅವರ ನಿಸ್ವಾರ್ಥ ಸೇವೆಯನ್ನ ಶ್ಲಾಘಿನೆ ದೊರೆತಿದೆ.
ಮೊಹಮ್ಮದ್ ಷರೀಫ್ 25 ಸಾವಿರಕ್ಕೂ ಹೆಚ್ಚು ಅನಾಥ ಶವಗಳಿಗೆ ಅಂತ್ಯಸಂಸ್ಕಾರ ನೆರವೇರಿಸಿದ್ದಾರೆ. ರಾಮ ಮಂದಿರದ ಭೂಮಿ ಪೂಜೆ ಸಮಾರಂಭದ ಆಹ್ವಾನ ಪತ್ರಿಕೆ ಸಿಕ್ಕ ನಂತರ ಮೊಹಮ್ಮದ್ ಷರೀಫ್ ಸಂತೋಷ ವ್ಯಕ್ತಪಡಿಸಿದ್ದು, ನನ್ನ ಆರೋಗ್ಯವು ಅನುಮತಿಸಿದರೆ ನಾನು ಖಂಡಿತ ಹೋಗುತ್ತೇನೆ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.