ಕಲ್ಪಟ್ಟ ಆಗಸ್ಟ್ 10: ವಯನಾಡಿನ (Wayanad) ವಿಪತ್ತು ಪೀಡಿತ ಪ್ರದೇಶಗಳ ವೈಮಾನಿಕ ಕಣ್ಗಾವಲು ಬಳಿಕ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಕಲ್ಪಟ್ಟಾದಿಂದ ಚೂರಲ್‌ಮಲಗೆ (chooralmala) ರಸ್ತೆ ಮೂಲಕ ಪ್ರಯಾಣಿಸಿದ್ದಾರೆ. ಕಣ್ಣೂರಿಗೆ ಬಂದಿಳಿದ ಪ್ರಧಾನಿ ನರೇಂದ್ರ ಮೋದಿ ಹೆಲಿಕಾಪ್ಟರ್ ಮೂಲಕ ವಯನಾಡ್ ತಲುಪಿದರು. ನಂತರ ಭೂಕುಸಿತ ಸಂಭವಿಸಿದ ಮುಂಡಕೈ- ಚೂರಲ್‌ಮಲ-ಪುಂಚಿರಿಮಟ್ಟಂ ಪ್ರದೇಶದಲ್ಲಿ ವೈಮಾನಿಕ ಸಮೀಕ್ಷೆ ನಡೆಸಲಾಯಿತು. ಪ್ರಧಾನಮಂತ್ರಿಯವರೊಂದಿಗೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್, ಕೇಂದ್ರ ಸಚಿವ ಸುರೇಶ್ ಗೋಪಿ ಮತ್ತಿತರರು ಉಪಸ್ಥಿತರಿದ್ದರು. ಶಿಬಿರದಲ್ಲಿರುವವರನ್ನು ಮೋದಿ ಖುದ್ದಾಗಿ ಭೇಟಿ ಮಾಡಿ ಮಾತನಾಡಲಿದ್ದಾರೆ. ಸಂತ್ರಸ್ತರ ಪುನರ್ವಸತಿಗಾಗಿ ಕೇಂದ್ರದಿಂದ 2000 ಕೋಟಿ ವಿಶೇಷ ಪ್ಯಾಕೇಜ್ ಕೋರಲು ರಾಜ್ಯ ಸರ್ಕಾರ ನಿರ್ಧರಿಸಿದೆ.
ಇಂದು ಬೆಳಗ್ಗೆ 11 ಗಂಟೆಗೆ ಮೋದಿ ಕಣ್ಣೂರು ವಿಮಾನ ನಿಲ್ದಾಣ ತಲುಪಿದರು. ಶಾಸಕಿ ಕೆ.ಕೆ. ಶೈಲಜಾ, ಮುಖ್ಯ ಕಾರ್ಯದರ್ಶಿ ಡಾ.ವಿ. ವೇಣು, ಡಿಜಿಪಿ ಶೇಖ್ ದರ್ವೇಶ್ ಸಾಹಿಬ್, ಜಿಲ್ಲಾಧಿಕಾರಿ ಅರುಣ್ ಕೆ.ವಿಜಯನ್, ನಗರ ಪೊಲೀಸ್ ಆಯುಕ್ತ ಅಜಿತ್ ಕುಮಾರ್, ಎ.ಪಿ. ಅಬ್ದುಲ್ಲಕುಟ್ಟಿ, ಸಿ.ಕೆ. ಪದ್ಮನಾಭನ್ ಮತ್ತಿತರರು ಕೂಡ ವಿಮಾನ ನಿಲ್ದಾಣದಲ್ಲಿ ಪ್ರಧಾನಿಯನ್ನು ಬರಮಾಡಿಕೊಳ್ಳಲು ಬಂದಿದ್ದರು.
#WATCH | Kerala: Prime Minister Narendra Modi conducts an aerial survey of the landslide-affected area in Wayanad
CM Pinarayi Vijayan is accompanying him
(Source: DD News) pic.twitter.com/RFfYpmK7MJ
— ANI (@ANI) August 10, 2024
ದುರಂತದಲ್ಲಿ ಬದುಕುಳಿದ ಮತ್ತು ಚಿಕಿತ್ಸೆ ಪಡೆಯುತ್ತಿರುವವರನ್ನೂ ಪ್ರಧಾನಿ ಭೇಟಿ ಮಾಡಲಿದ್ದಾರೆ. ಮೇಪ್ಪಾಡಿ ಆಸ್ಪತ್ರೆಯಲ್ಲಿರುವ ಅರುಣ್, ಅನಿಲ್, ಎಂಟು ವರ್ಷದ ಆವಂತಿಕಾ ಮತ್ತು ಒಡಿಶಾದ ಸುಹೃತಿ ಅವರನ್ನು ಮೋದಿ ಭೇಟಿ ಮಾಡುತ್ತಿದ್ದಾರೆ. ಮಣ್ಣಿನ ದಿಬ್ಬದಲ್ಲಿ ಸಿಲುಕಿದ ಗಂಟೆಗಳ ನಂತರ ರಕ್ಷಣಾ ಕಾರ್ಯಕರ್ತರು ಅರುಣ್ ಅವರನ್ನು ರಕ್ಷಿಸಿದ್ದು, ಅನಿಲ್ ಬೆನ್ನುಮೂಳೆಯ ಗಾಯಕ್ಕೆ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇದನ್ನೂ ಓದಿ: ಬಂಧಮುಕ್ತರಾದ ನಂತರ ಮಹಾತ್ಮ ಗಾಂಧಿಯವರ ಸ್ಮಾರಕ, ಹನುಮಾನ್ ಮಂದಿರಕ್ಕೆ ಭೇಟಿ ನೀಡಿದ ಮನೀಶ್ ಸಿಸೋಡಿಯಾ
ಇದಾದ ಬಳಿಕ ಪ್ರಧಾನಿಯವರು ಸಂತ್ರಸ್ತ ಜನರನ್ನು ಭೇಟಿ ಮಾಡಲಿದ್ದಾರೆ. ಪರಿಹಾರ ಶಿಬಿರಗಳು ಮತ್ತು ಆಸ್ಪತ್ರೆಗಳಲ್ಲಿ ಇರುವವರೊಂದಿಗೆ ಅವರು ಮಾತನಾಡಲಿದ್ದಾರೆ. ನಂತರ ವಯನಾಡ್ ಕಲೆಕ್ಟರೇಟ್ ತಲುಪಿ ಪರಿಶೀಲನಾ ಸಭೆಯಲ್ಲಿ ಭಾಗವಹಿಸಲಿದ್ದಾರೆ. 3.15ಕ್ಕೆ ಕಣ್ಣೂರಿಗೆ ಹಿಂತಿರುಗಲಿದ್ದು ಕಣ್ಣೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮಧ್ಯಾಹ್ನ 3.55ಕ್ಕೆ ದೆಹಲಿಗೆ ಹೊರಡಲಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 1:16 pm, Sat, 10 August 24