ಈ ಹಳ್ಳಿಯಲ್ಲಿ ಉಳಿಯಲು ಜಾಗ ಬೇಕೆಂದ್ರೆ ಹೊರಗಿನಿಂದ ಬಂದವರು ಈ ನಿಯಮಗಳನ್ನು ಪಾಲಿಸಲೇಬೇಕು

ಊರಾಗಲಿ ನಗರವಾಗಲಿ ಹೊರಗಿನಿಂದ ವಲಸೆ ಬರುವವರು ಇದ್ದೇ ಇರುತ್ತಾರೆ. ಆದರೆ ಅದರ ಪ್ರಮಾಣ ಹೆಚ್ಚು ಕಡಿಮೆ ಇರುತ್ತಷ್ಟೆ. ನಮ್ಮದಲ್ಲದ ಊರಿಗೆ ಹೋಗಿ ಜೀವನ ನಡೆಸಬೇಕಾಗುತ್ತದೆ. ಅಲ್ಲಿನ ಕೆಲವು ನಿಯಮಗಳನ್ನು ಪಾಲಿಸಬೇಕಾಗುತ್ತದೆ. ಒಂದೊಮ್ಮೆ ಆ ನಿಯಮಗಳನ್ನು ಪಾಲಿಸದಿದ್ದಲ್ಲಿ ಊರಿನವರೇ ಹೊಸ ನಿಯಮಗಳನ್ನು ಜಾರಿಗೆ ತರಬೇಕಾಗುತ್ತದೆ. ಈ ಹಳ್ಳಿಯು ಅದನ್ನೇ ಮಾಡಿದೆ.

ಈ ಹಳ್ಳಿಯಲ್ಲಿ ಉಳಿಯಲು ಜಾಗ ಬೇಕೆಂದ್ರೆ ಹೊರಗಿನಿಂದ ಬಂದವರು ಈ ನಿಯಮಗಳನ್ನು ಪಾಲಿಸಲೇಬೇಕು
Follow us
ನಯನಾ ರಾಜೀವ್
|

Updated on: Aug 10, 2024 | 3:55 PM

ಪಂಬಾಜ್​ನ ಹಳ್ಳಿಯೊಂದರಲ್ಲಿ ಹೊರಗಿನಿಂದ ಬಂದವರು ಹಾಗೂ ಹಳ್ಳಿಯವರ ಮಧ್ಯೆ ನಿತ್ಯ ಒಂದಲ್ಲಾ ಒಂದು ವಿಚಾರಕ್ಕೆ ಗಲಾಟೆ ನಡೆಯುತ್ತಲೇ ಇತ್ತು. ಈ ಕಲಹಗಳನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಹೊಸ ನಿಯಮಗಳನ್ನು ಜಾರಿಗೊಳಿಸಲಾಗಿದೆ. ಖರಾರ್ ಬಳಿಯ ಜಂಡ್‌ಪುರ್ ಗ್ರಾಮದಲ್ಲಿ, ನೀರು, ವಾಹನ ನಿಲುಗಡೆ ಸೇರಿದಂತೆ ಒಂದಲ್ಲಾ ಒಂದು ವಿಚಾರಕ್ಕೆ ನಿತ್ಯ ಜಗಳಗಳು ನಡೆಯುತ್ತಿದ್ದವು ಹೀಗಾಗಿ ಈ ನಿಯಮಗಳನ್ನು ಜಾರಿಗೆ ತರಲಾಗಿದೆ.

ಈ ಹಳ್ಳಿಯಲ್ಲಿ ವಾಸಿಸಬೇಕೆಂದರೆ ಧೂಮಪಾನ ಮಾಡುವಂತಿಲ್ಲ, ಮೈ ಕಾಣುವ ಬಟ್ಟೆ ಧರಿಸುವಂತಿಲ್ಲ, ಸರಿಯಾದ ಪರಿಶೀಲನೆ ಇಲ್ಲದೆ ಬಾಡಿಗೆ ಮನೆ ಕೊಡುವವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಲಾಗಿದೆ. ಕೆಲವು ಪೇಯಿಂಗ್​ ಗೆಸ್ಟ್​ಗಳು ತಡರಾತ್ರಿ ಗಲಾಟೆ ಮಾಡುವುದು ಅನಗತ್ಯ ವಿವಾದಗಳಿಗೆ ಎಡೆಮಾಡಿ ಕೊಡುತ್ತಿದೆ.

ಅನಗತ್ಯ ವಾದ ವಿವಾದಗಳಿಗೆ ಎಡೆಮಾಡಿಕೊಡುತ್ತಿರುವುದನ್ನು ಗಮನಿಸಿದ ನಿವಾಸಿಗಳು ಗ್ರಾಮದ ಸುರಕ್ಷತೆ ಮತ್ತು ಶಾಂತಿಗೆ ಧಕ್ಕೆ ತರುತ್ತಿದೆ ಎಂದು ಭಾವಿಸಿದ ನಂತರ ಈ ನಿರ್ಧಾರಕ್ಕೆ ಬರಲಾಗಿದೆ. ಈ ಹೊಸ ನಿಯಮಗಳ ಬಗ್ಗೆ ಜನರಿಗೆ ಅರಿವು ಮೂಡಿಸಲು ಎಚ್ಚರಿಕೆ ಫಲಕಗಳನ್ನು ಹಾಕಲಾಗಿದೆ.

ಮತ್ತಷ್ಟು ಓದಿ: Nag Panchami 2024 : ಈ ಗ್ರಾಮದ ಮಕ್ಕಳಿಗೆ ಜೀವಂತ ಹಾವುಗಳೇ ಆಟಿಕೆಗಳು

ಹೊರಗಿನವರಿಗೆ ಅವರು ಉಳಿಯಲು ಬಯಸಿದರೆ, ಅವರು ನಿಯಮಗಳನ್ನು ಅನುಸರಿಸಬೇಕು ಎಂದು ತಿಳಿಸಲು ನಾವು ಸಾಮೂಹಿಕ ನಿರ್ಧಾರವನ್ನು ಮಾಡಿದ್ದೇವೆ.

ಇಲ್ಲಿ ಸುಮಾರು 500 ವಲಸೆ ಕಾರ್ಮಿಕರಿದ್ದಾರೆ,ಆದರೆ ಯಾರಾದರೂ – ಪಂಜಾಬಿ ಅಥವಾ ಪಂಜಾಬಿ ಅಲ್ಲದವರು – ಅವ್ಯವಸ್ಥೆಯನ್ನು ಸೃಷ್ಟಿಸಲು ಬಯಸಿದರೆ, ಅವರೆಲ್ಲರೂ ನಿಯಮಗಳಿಗೆ ಬದ್ಧರಾಗಿರಬೇಕು, ಎಂದು ಅವರು ಹೇಳಿದರು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ