Nag Panchami 2024 : ಈ ಗ್ರಾಮದ ಮಕ್ಕಳಿಗೆ ಜೀವಂತ ಹಾವುಗಳೇ ಆಟಿಕೆಗಳು

ನಾಗರ ಪಂಚಮಿ ಹಿಂದೂಗಳ ಪ್ರಮುಖ ಹಬ್ಬಗಳಲ್ಲಿ ಒಂದು. ಒಂದೊಂದು ಕಡೆಗಳಲ್ಲಿ ಒಂದೊಂದು ರೀತಿಯ ಆಚರಣೆಯಲ್ಲಿ ಈ ಹಬ್ಬವನ್ನು ಆಚರಿಸಲಾಗುತ್ತದೆ. ಆದರೆ ನಾಗರಪಂಚಮಿಯಂದು ಜೀವಂತ ನಾಗರಹಾವಿಗೆ ಹಾಲೆರೆದು ಪೂಜಿಸುವ ಘಟನೆಗಳು ನಡೆಯುತ್ತದೆ. ಆದರೆ ಭಾರತದ ಈ ಕೆಲವು ಗ್ರಾಮಗಳಲ್ಲಿ ಹಾವುಗಳನ್ನು ಕುಟುಂಬದ ಸದಸ್ಯರಂತೆ ನೋಡಿಕೊಳ್ಳುತ್ತಾರೆ. ಹಾಗಾದ್ರೆ ಈ ಕುರಿತಾದ ಕುತೂಹಲಕಾರಿ ವಿಷಯಗಳು ಇಲ್ಲಿವೆ.

Nag Panchami 2024 : ಈ ಗ್ರಾಮದ ಮಕ್ಕಳಿಗೆ ಜೀವಂತ ಹಾವುಗಳೇ ಆಟಿಕೆಗಳು
ಸಾಂದರ್ಭಿಕ ಚಿತ್ರ
Follow us
| Updated By: ಅಕ್ಷಯ್​ ಪಲ್ಲಮಜಲು​​

Updated on: Aug 09, 2024 | 7:29 AM

ಹಿಂದೂ ಪುರಾಣಗಳಲ್ಲಿ ಪೂಜಿಸುವ ನಾಗ ಅಥವಾ ಹಾವುಗಳಿಗೆ ಸಂಪೂರ್ಣವಾಗಿ ಸಮರ್ಪಿಸಲಾಗಿರುವ ಹಬ್ಬವೇ ಶ್ರಾವಣ ಮಾಸದ‌ ಮೊದಲ ಹಬ್ಬ ನಾಗರ ಪಂಚಮಿ. ಈ ಬಾರಿ ಆಗಸ್ಟ್ 9 ರಂದು ನಾಗರ ಪಂಚಮಿ ಹಬ್ಬ ಬಂದಿದ್ದು, ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ವಿವಿಧ ರೀತಿಯಲ್ಲಿ ಆಚರಿಸಲಾಗುತ್ತದೆ. ನಾಗದೇವರು ಎಂದ ಕೂಡಲೇ ಭಕ್ತಿ ಭಾವಗಳು ಹೇಗೆ ಉಕ್ಕಿ ಬರುತ್ತದೆಯೋ ಜೀವಂತ ಹಾವುಗಳನ್ನು ಕಂಡರೆ ಅಷ್ಟೇ ಭಯವಾಗುತ್ತದೆ. ಆದರೆ ಈ ಭಾಗದ ಜನರು ಹಾವುಗಳನ್ನು ಬದುಕಿನ ಭಾಗವಾಗಿಸಿಕೊಂಡಿದ್ದಾರೆ.

  • ಮಹಾರಾಷ್ಟ್ರದ ಪುಣೆಯಿಂದ 200 ಕಿ.ಮೀ ದೂರದಲ್ಲಿರುವ ಹಳ್ಳಿಯಲ್ಲಿ ಎಲ್ಲೆಲ್ಲೂ ಹಾವುಗಳದ್ದೇ ರಾಶಿ. ಈ ಹಳ್ಳಿಯ ಹೆಸರು ಸೋಲಾಪುರ ಜಿಲ್ಲೆಯಲ್ಲಿ ಶೇಟ್ಪಾಲ್. ಇಲ್ಲಿ ಪ್ರತಿಯೊಬ್ಬರ ಮನೆಯಲ್ಲಿ ಹಾವುಗಳನ್ನು ನೋಡಬಹುದು. ಶಾಲೆಯಲ್ಲಿ ಹಾವುಗಳು ಅತ್ತಿಂದ ಇತ್ತ ಓಡಾಡುತ್ತವೆ. ದೊಡ್ಡವರಿಂದ ಹಿಡಿದು ಮಕ್ಕಳು ಕೂಡ ಹಾವುಗಳಿಗೆ ಭಯ ಪಡುವುದೇ ಇಲ್ಲ. ಒಂದು ವೇಳೆ ಈ ಹಳ್ಳಿಯಲ್ಲಿ ಹೊಸ ಮನೆಯನ್ನೇದಾರೂ ಕಟ್ಟಿದರೆ ಹಾವುಗಳಿಗಾಗಿ ಒಂದು ಮೂಲೆಯಲ್ಲಿ ಸ್ಥಳವಕಾಶವನ್ನು ಮಾಡಬೇಕಂತೆ. ಆ ಮೂಲೆಯು ಮನೆಯ ಜನರಿಗೆ ದೇವಸ್ಥಾನವಿದ್ದಂತೆ ಎನ್ನಲಾಗಿದೆ.
  • ಬಿಹಾರದ ಸಮಸ್ತಿಪುರದಿಂದ 23 ಕಿ.ಮೀ ದೂರದಲ್ಲಿ ಸಿಂಧಿಯಾ ಘಾಟ್ ನಲ್ಲಿ ವಾಸಿಸುವ ಜನರಿಗೆ ಹಾವಿನ ಬಗ್ಗೆ ಯಾವುದೇ ಭಯವಿಲ್ಲ. ಮಕ್ಕಳು ಕೂಡ ಹಾವನ್ನು ಸಲೀಸಾಗಿ ಕೈಯಲ್ಲಿ ಹಿಡಿದು ಆಟವಾಡುತ್ತಾರೆ. ಆಟ ಆಡುವ ವೇಳೆಯಲ್ಲಿ ಹಾವು ಮಕ್ಕಳನ್ನು ಕಚ್ಚಿದರೆ ವಿಷವು ದೇಹಕ್ಕೆ ಏರುವುದೇ ಇಲ್ಲ, ಸಾವು ಸಂಭವಿಸುವುದೇ ಇಲ್ಲವಂತೆ.
  • ಛತ್ತೀಸ್ ಗಢದ ರಾಜಧಾನಿ ರಾಯ್ ಪುರ್ ಬಳಿಯ ದಿಘಾರಿ ಗ್ರಾಮದಲ್ಲಿ, ಹಾವುಗಳು ಮತ್ತು ಮಾನವರ ನಡುವೆ ಅಗಾಧವಾದ ಸಂಬಂಧವಿದೆ. ಆದರೆ ಈ ಗ್ರಾಮದಲ್ಲಿ ಹಾವುಗಳು ಯಾರನ್ನೂ ಕಚ್ಚುವುದಿಲ್ಲ. ಹಳ್ಳಿಯ ಹೊರಗಿನ ವ್ಯಕ್ತಿಗೆ ಹಾವು ಕಚ್ಚಿದರೆ, ಈ ಗ್ರಾಮಕ್ಕೆ ಕಾಲಿಟ್ಟರೆ ಸಾಕು ಹಾವಿನ ವಿಷ ಇಳಿದು ಹೋಗುತ್ತದೆಯಂತೆ.
  • ಉತ್ತರಾಖಂಡದ ಜೌನ್ಸರ್ ಬಾವರ್ ಎಂಬ ಹಳ್ಳಿಯ ಜನರಿಗೆ ಏನಾದರೂ ಹಾವು ಕಚ್ಚಿದರೆ ಚಿಕಿತ್ಸೆ ನೀಡಬೇಕಾಗಿಯೇ ಇಲ್ಲ. ಈ ಗ್ರಾಮದ ಜನರಿಗೆ ನಾಗದೇವರ ಆಶೀರ್ವಾದವಿದ್ದು, ಹಾವು ಕಚ್ಚಿದ ತಕ್ಷಣವೇ ಆ ವ್ಯಕ್ತಿಯು ನಾಗರಹಾವನ್ನು ನೆನಪಿಸಿಕೊಂಡ ತಕ್ಷಣವೇ ದೇಹದಿಂದ ವಿಷವು ಹೊರಗೆ ಬರುತ್ತದೆ ಎನ್ನಲಾಗಿದೆ.
  • ಉತ್ತರ ಪ್ರದೇಶ ಮತ್ತು ಮಧ್ಯಪ್ರದೇಶದ ಶಂಕರಗಢ ಎಂಬ ಹಳ್ಳಿಯಲ್ಲಿ ಹಾವುಗಳನ್ನು ಹೊಂದಿರುವುದೇ ಘನತೆಯ ಪ್ರಶ್ನೆಯಂತೆ. ಈ ಹಳ್ಳಿಯ ಜನರು ಯಾರು ಹೆಚ್ಚು ಹಾವುಗಳನ್ನು ಹೊಂದಿರುತ್ತಾರೆಯೋ ಅವರಿಗೆ ಇಲ್ಲಿ ಗೌರವ ಹಾಗೂ ಸ್ಥಾನಮಾನವನ್ನು ಹೊಂದಿರುತ್ತಾರೆ. ಇಲ್ಲಿ ಹಾವುಗಳನ್ನು ಮನೆಯ ಸದಸ್ಯರಂತೆ ನೋಡಿ ಕೊಳ್ಳುವುದಲ್ಲದೇ, ಮಕ್ಕಳು ಆಟಿಕೆಯಂತೆ ಹಾವುಗಳೊಂದಿಗೆ ಆಡುವುದನ್ನು ಕಾಣಬಹುದಾಗಿದೆ.
ಹಾಸನ: ಕೆರೆಯಲ್ಲಿ ಈಜಾಡಿ ಕಾಫಿ ತೋಟಕ್ಕೆ ಲಗ್ಗೆ ಇಟ್ಟ ಕಾಡಾನೆಗಳು
ಹಾಸನ: ಕೆರೆಯಲ್ಲಿ ಈಜಾಡಿ ಕಾಫಿ ತೋಟಕ್ಕೆ ಲಗ್ಗೆ ಇಟ್ಟ ಕಾಡಾನೆಗಳು
ಬಿವಿವಿ ಸಂಘದ ಮೆಡಿಕಲ್ ಕಾಲೇಜ್ ಆವರಣದಲ್ಲಿ ಓಣಂ ಸಂಭ್ರಮ, ವಿಡಿಯೋ ನೋಡಿ
ಬಿವಿವಿ ಸಂಘದ ಮೆಡಿಕಲ್ ಕಾಲೇಜ್ ಆವರಣದಲ್ಲಿ ಓಣಂ ಸಂಭ್ರಮ, ವಿಡಿಯೋ ನೋಡಿ
Nithya Bhavishya: ಈ ರಾಶಿಯವರಿಗೆ ಸ್ವ ಉದ್ಯೋಗವು ಇಂದು ಕೈ ಹಿಡಿಯುವುದು
Nithya Bhavishya: ಈ ರಾಶಿಯವರಿಗೆ ಸ್ವ ಉದ್ಯೋಗವು ಇಂದು ಕೈ ಹಿಡಿಯುವುದು
ಗುಜರಾತ್ ಪ್ರವಾಹದಲ್ಲಿ ಸಿಲುಕಿದ ಕಾರು ಹತ್ತಿ ಕುಳಿತು ಹರಟೆ ಹೊಡೆದ ದಂಪತಿ
ಗುಜರಾತ್ ಪ್ರವಾಹದಲ್ಲಿ ಸಿಲುಕಿದ ಕಾರು ಹತ್ತಿ ಕುಳಿತು ಹರಟೆ ಹೊಡೆದ ದಂಪತಿ
ಕಾಂಗ್ರೆಸ್​-JDS ಮೈತ್ರಿ: ಬಹುಮತ ಇಲ್ಲದಿದ್ರೂ ಅಧ್ಯಕ್ಷ ಸ್ಥಾನ ಕೈ ವಶಕ್ಕೆ
ಕಾಂಗ್ರೆಸ್​-JDS ಮೈತ್ರಿ: ಬಹುಮತ ಇಲ್ಲದಿದ್ರೂ ಅಧ್ಯಕ್ಷ ಸ್ಥಾನ ಕೈ ವಶಕ್ಕೆ
ದರ್ಶನ್​ ಜಾಮೀನು ಅರ್ಜಿ ಸಲ್ಲಿಸೋದು ಯಾವಾಗ? ಉತ್ತರ ನೀಡಿದ ಲಾಯರ್​
ದರ್ಶನ್​ ಜಾಮೀನು ಅರ್ಜಿ ಸಲ್ಲಿಸೋದು ಯಾವಾಗ? ಉತ್ತರ ನೀಡಿದ ಲಾಯರ್​
ಗಣಪತಿ ವಿಸರ್ಜನೆ ಬಳಿಕ ಈಜಲು ಹೊಳೆಗೆ ಹಾರಿದ ಯುವಕರು
ಗಣಪತಿ ವಿಸರ್ಜನೆ ಬಳಿಕ ಈಜಲು ಹೊಳೆಗೆ ಹಾರಿದ ಯುವಕರು
ಭಾಗ್ಯಲಕ್ಷ್ಮೀ ಬಾಂಡ್ ಹಣ ಹಾಕುವ ಬಗ್ಗೆ ಮಹತ್ವದ ಮಾಹಿತಿ ಹಂಚಿಕೊಂಡ ಸಚಿವೆ
ಭಾಗ್ಯಲಕ್ಷ್ಮೀ ಬಾಂಡ್ ಹಣ ಹಾಕುವ ಬಗ್ಗೆ ಮಹತ್ವದ ಮಾಹಿತಿ ಹಂಚಿಕೊಂಡ ಸಚಿವೆ
ದೆಹಲಿ ಕ್ಲಬ್ ಹೊರಗೆ ಬೌನ್ಸರ್​ಗೆ ಹೆದರಿಸಿ ಗುಂಡು ಹಾರಿಸಿದ ವಿಡಿಯೋ ವೈರಲ್
ದೆಹಲಿ ಕ್ಲಬ್ ಹೊರಗೆ ಬೌನ್ಸರ್​ಗೆ ಹೆದರಿಸಿ ಗುಂಡು ಹಾರಿಸಿದ ವಿಡಿಯೋ ವೈರಲ್
ದೀಪಾವಳಿ ಒಳಗೆ ಸಿದ್ದರಾಮಯ್ಯ ಸರ್ಕಾರ ಪತನ: ಸಿಟಿ ರವಿ
ದೀಪಾವಳಿ ಒಳಗೆ ಸಿದ್ದರಾಮಯ್ಯ ಸರ್ಕಾರ ಪತನ: ಸಿಟಿ ರವಿ