ಬ್ರಿಟನ್​ನ​ ನೂತನ ಪ್ರಧಾನಿ ಲಿಜ್ ಟ್ರಸ್ ಅಭಿನಂದಿಸಿದ ನರೇಂದ್ರ ಮೋದಿ

|

Updated on: Sep 05, 2022 | 8:10 PM

ಲಿಜ್ ಅವರನ್ನು ಅಭಿನಂದಿಸಿ ಟ್ವೀಟ್ ಮಾಡಿದ ಪ್ರಧಾನಿ ಮೋದಿ, ಟ್ರಸ್‌ ನಾಯಕತ್ವದಲ್ಲಿ ಭಾರತ-ಯುಕೆ ಸಮಗ್ರ ಕಾರ್ಯತಂತ್ರದ ಸಹಭಾಗಿತ್ವವು ಮತ್ತಷ್ಟು ಬಲಗೊಳ್ಳಲಿದೆ ಎಂಬ ವಿಶ್ವಾಸವಿದೆ ಎಂದು ಹೇಳಿದ್ದಾರೆ

ಬ್ರಿಟನ್​ನ​ ನೂತನ ಪ್ರಧಾನಿ ಲಿಜ್ ಟ್ರಸ್ ಅಭಿನಂದಿಸಿದ ನರೇಂದ್ರ ಮೋದಿ
ನರೇಂದ್ರ ಮೋದಿ
Follow us on

ಕನ್ಸರ್ವೇಟಿವ್ ಪಕ್ಷದ ಸದಸ್ಯರಿಂದ ಯುಕೆ ಕನ್ಸರ್ವೇಟಿವ್ ಪಕ್ಷದ ನಾಯಕಿಯಾಗಿ ಆಯ್ಕೆಯಾದ ಲಿಜ್ ಟ್ರಸ್ (Liz Truss) ಅವರನ್ನು ಪ್ರಧಾನಿ ನರೇಂದ್ರ ಮೋದಿ (Narendra Modi) ಅಭಿನಂದಿಸಿದ್ದಾರೆ. ಲಿಜ್ ಅವರನ್ನು ಅಭಿನಂದಿಸಿ ಟ್ವೀಟ್ ಮಾಡಿದ ಪ್ರಧಾನಿ ಮೋದಿ, ಟ್ರಸ್‌ ನಾಯಕತ್ವದಲ್ಲಿ ಭಾರತ-ಯುಕೆ ಸಮಗ್ರ ಕಾರ್ಯತಂತ್ರದ ಸಹಭಾಗಿತ್ವವು ಮತ್ತಷ್ಟು ಬಲಗೊಳ್ಳಲಿದೆ ಎಂಬ ವಿಶ್ವಾಸವಿದೆ ಎಂದು ಹೇಳಿದ್ದಾರೆ. ಮಾಜಿ ವಿದೇಶಾಂಗ ಕಾರ್ಯದರ್ಶಿ ಟ್ರಸ್ ಅವರು ಗೆಲ್ಲುವ ಕಡಿಮೆ ಅವಕಾಶಗಳೊಂದಿಗೆ ಚುನಾವಣಾ ಕಣಕ್ಕಿಳಿದಿದ್ದರು. ಆದರೆ ಈ ಚುನಾವಣೆಯಲ್ಲಿ ರಿಷಿ ಸುನಕ್ ಅವರನ್ನು ಸೋಲಿಸಿದರು. ತನ್ನ ಗೆಲುವಿನ ನಂತರ, ಈ ಕಠಿಣ ಸಮಯದಲ್ಲಿ ಯುಕೆಗಾಗಿ ತಾನು ದಿಟ್ಟ ಕ್ರಮ ತೆಗೆದುಕೊಳ್ಳುವುದಾಗಿ ಟ್ರಸ್ ಭರವಸೆ ನೀಡಿದರು.

ಕನ್ಸರ್ವೇಟಿವ್ ಪಕ್ಷದ ನಾಯಕಿಯಾಗಿ ಆಯ್ಕೆಯಾಗಿರುವುದು ನನಗೆ ಗೌರವ ತಂದಿದೆ. ನಮ್ಮ ಮಹಾನ್ ದೇಶವನ್ನು ಮುನ್ನಡೆಸಲು ಮತ್ತು ತಲುಪಿಸಲು ನನ್ನ ಮೇಲೆ ನಂಬಿಕೆ ಇಟ್ಟಿದ್ದಕ್ಕಾಗಿ ಧನ್ಯವಾದಗಳು. ಈ ಕಠಿಣ ಸಮಯದಲ್ಲಿ ನಮ್ಮ ಆರ್ಥಿಕತೆಯನ್ನು ಬೆಳೆಸಲು ಮತ್ತು ಯುನೈಟೆಡ್ ಕಿಂಗ್‌ಡಮ್‌ನ ಸಾಮರ್ಥ್ಯವನ್ನು ಹೊರಹಾಕಲು ನಾನು ದಿಟ್ಟ ಕ್ರಮವನ್ನು ತೆಗೆದುಕೊಳ್ಳುತ್ತೇನೆ ಎಂದು ಅವರು ಟ್ವೀಟ್ ಮಾಡಿದ್ದಾರೆ.


ಲಿಜ್ ಟ್ರಸ್ ಯುಕೆಯ 56 ನೇ ಪ್ರಧಾನ ಮಂತ್ರಿ ಮತ್ತು ದೇಶವನ್ನು ಮುನ್ನಡೆಸುವ ಮೂರನೇ ಮಹಿಳಾ ಪ್ರಧಾನ ಮಂತ್ರಿಯಾಗಿದ್ದಾರೆ. ಲಿಜ್ ಮಂಗಳವಾರ ಯುಕೆ ನಾಗರಿಕರನ್ನು ಉದ್ದೇಶಿಸಿ ಮಾತನಾಡಲಿದ್ದು ಬುಧವಾರ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

ಬ್ರಿಟನ್ ನ ನೂತನ ಪ್ರಧಾನಿ ಲಿಜ್ ಟ್ರಸ್ ಪರಿಚಯ

47 ವರ್ಷದ ಲಿಜ್  ಆಕ್ಸ್‌ಫರ್ಡ್‌ನಲ್ಲಿ ಜನಿಸಿದರು. ಆಕೆಯ ತಂದೆ ಗಣಿತ ಪ್ರಾಧ್ಯಾಪಕರಾಗಿದ್ದರು, ಮತ್ತು ಆಕೆಯ ತಾಯಿ ನರ್ಸ್. ಟ್ರಸ್ ಒಮ್ಮೆ ತನ್ನ ಹೆತ್ತವರನ್ನು ‘ಎಡಪಂಥೀಯರು’ ಎಂದಿದ್ದರು. ಆಕೆಯ ಕುಟುಂಬವು ಸಕ್ರಿಯ ರಾಜಕೀಯದ ಭಾಗವಾಗಿರಲಿಲ್ಲ. ಆದರೆ ಮಾಜಿ ಪಿಎಂ ಮಾರ್ಗರೆಟ್ ಥ್ಯಾಚರ್ ಯುಎಸ್ ಪರಮಾಣು ಸಿಡಿತಲೆಗಳನ್ನು ಲಂಡನ್‌ನ ಪಶ್ಚಿಮದಲ್ಲಿರುವ ಆರ್‌ಎಎಫ್ ಗ್ರೀನ್‌ಹ್ಯಾಮ್ ಕಾಮನ್‌ನಲ್ಲಿ ಸ್ಥಾಪಿಸಲು ಅನುಮತಿಸಿದಾಗ ಪರಮಾಣು ನಿಶ್ಯಸ್ತ್ರೀಕರಣಕ್ಕೆ ಕರೆ ನೀಡುವ ರ್ಯಾಲಿಗಳಿಗೆ ತೆರಳಿದರು. ಅವರು  ಶಾಲೆಯ ಅಣಕುಚುನಾವಣೆಯಲ್ಲಿ ಮಾರ್ಗರೆಟ್ ಥ್ಯಾಚರ್ ಪಾತ್ರವನ್ನು ನಿರ್ವಹಿಸಿದರು. ಆದರೆ ಪರಾಭವಗೊಂಡರು. ಆದರೆ ಥ್ಯಾಚರ್ ಪಾತ್ರ ಖುಷಿಕೊಟ್ಟಿತ್ತು.  ಟ್ರಸ್ ಗ್ಲಾಸ್ಗೋ ಮತ್ತು ಲೀಡ್ಸ್‌ನಲ್ಲಿ ಶಾಲೆಯಲ್ಲಿ ಶಿಕ್ಷಣ ಪೂರೈಸಿ  ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡಿದರು. ಅಲ್ಲಿ ಅವರು ತತ್ವಶಾಸ್ತ್ರ, ರಾಜಕೀಯ ಮತ್ತು ಅರ್ಥಶಾಸ್ತ್ರವನ್ನು ಅಧ್ಯಯನ ಮಾಡಿದರು. ವಿದ್ಯಾರ್ಥಿ ರಾಜಕೀಯದಲ್ಲಿ ಸಕ್ರಿಯರಾಗಿದ್ದರು.

ಕುಟುಂಬ

ಲಿಜ್ ಟ್ರಸ್ ಅವರು 2000 ರಲ್ಲಿ ಅಕೌಂಟೆಂಟ್ ಹಗ್ ಓ’ಲಿಯರಿ ಅವರನ್ನು ವಿವಾಹವಾದರು. ಅವರು ದಿ  ಟೆಲಿಗ್ರಾಫ್‌ನೊಂದಿಗೆ ಮಾತನಾಡುವಾಗ ಹಗ್ ತಾಳ್ಮೆಯ, ಯಾವುದೇ ಭಾವನೆಗಳನ್ನು ವ್ಯಕ್ತಪಡಿಸದ ವ್ಯಕ್ತಿ  ಎಂದು ವಿವರಿಸಿದ್ದರು. ಹಗ್ ಸ್ಥಳೀಯ ಕನ್ಸರ್ವೇಟಿವ್ ಪಕ್ಷದ ಘಟಕದ ಅತ್ಯಂತ ಸಕ್ರಿಯ ಸದಸ್ಯರಾಗಿದ್ದಾರೆ.  ಆಕೆಗೆ ಫ್ರಾನ್ಸಿಸ್ (16) ಮತ್ತು ಲಿಬರ್ಟಿ(13)  ಎಂಬ ಇಬ್ಬರು ಹದಿಹರೆಯದ ಹೆಣ್ಣು ಮಕ್ಕಳಿದ್ದಾರೆ .

ರಾಜಕೀಯ ವೃತ್ತಿ

ಲಿಜ್ ಟ್ರಸ್ ಅವರ ರಾಜಕೀಯ ಮಹತ್ವಾಕಾಂಕ್ಷೆಗಳು ಆಕ್ಸ್‌ಫರ್ಡ್ ವಿಶ್ವವಿದ್ಯಾನಿಲಯದಲ್ಲಿರುವಾಗಲೇ ಗೊತ್ತಾಗಿತ್ತು. ಅವರು ಲಿಬರಲ್ ಡೆಮೋಕ್ರಾಟ್ ಆಗಿ  ಸಕ್ರಿಯರಾಗಿದ್ದು ಒಂದು ಹಂತದಲ್ಲಿ ಅವರು 1994 ರಲ್ಲಿ ರಾಜಪ್ರಭುತ್ವವನ್ನು ರದ್ದುಗೊಳಿಸುವುದಾಗಿ ಹೇಳಿದರು. ಅವರು ಆಕ್ಸ್‌ಫರ್ಡ್‌ನಲ್ಲಿ ಓದುತ್ತಿರುವಾಗ ಕನ್ಸರ್ವೇಟಿವ್ ಪಕ್ಷಕ್ಕೆ ಬದಲಾದರು. ಅವರು 2001 ಮತ್ತು 2005 ರಲ್ಲಿ ಕ್ರಮವಾಗಿ ಹೆಮ್ಸ್ವರ್ತ್ ಮತ್ತು ಕಾಲ್ಡರ್ ವ್ಯಾಲಿಯಿಂದ ಎರಡು ಚುನಾವಣೆಗಳನ್ನು ಎದುರಿಸಿ ಸೋತರು.

2006 ರಲ್ಲಿ ಆಗ್ನೇಯ ಲಂಡನ್‌ನ ಗ್ರೀನ್‌ವಿಚ್‌ನಿಂದ ತಮ್ಮ ಮೊದಲ ಚುನಾವಣೆಯಲ್ಲಿ ಗೆದ್ದರು, ಅಲ್ಲಿ ಅವರು ಕೌನ್ಸಿಲರ್ ಆಗಿ ಆಯ್ಕೆಯಾದರು. ಕನ್ಸರ್ವೇಟಿವ್ ಪಕ್ಷದ ನಾಯಕ ಮತ್ತು ಮಾಜಿ ಪ್ರಧಾನಿ ಡೇವಿಡ್ ಕ್ಯಾಮರೂನ್ 2010 ರಲ್ಲಿ ಟ್ರಸ್ ತನ್ನ ಆದ್ಯತೆಯ ಅಭ್ಯರ್ಥಿಗಳ ಎ-ಲಿಸ್ಟ್ ಬಯಸಿದ್ದು  ಅವರು ಸೌತ್ ವೆಸ್ಟ್ ನಾರ್ಫೋಕ್ ಸ್ಥಾನದಿಂದ ಚುನಾವಣೆಯಲ್ಲಿ ಸ್ಪರ್ಧಿಸಿದರು.

ಅವರು ಸಂಸದರಾದ ಎರಡು ವರ್ಷಗಳ ನಂತರ, ಅವರು 2012 ರಲ್ಲಿ ಶಿಕ್ಷಣ ಸಚಿವರ ಪಾತ್ರಕ್ಕೆ ಆಯ್ಕೆಯಾದರು. 2014 ರಲ್ಲಿ ಅವರು ಪರಿಸರ ಕಾರ್ಯದರ್ಶಿ ಪಾತ್ರಕ್ಕೆ ಬಡ್ತಿ ಪಡೆದರು.

Published On - 8:07 pm, Mon, 5 September 22