Modi Mann Ki Baat: ಭಾರತದ ಸಂವಿಧಾನ ರಚನಾ ಸಭೆಗೆ ಸಂಬಂಧಿಸಿದ ಮಹಾನ್ ನಾಯಕರ ಧ್ವನಿ ಕೇಳಿಸಿದ ಪ್ರಧಾನಿ ಮೋದಿ

|

Updated on: Jan 19, 2025 | 11:41 AM

ಇಂದು 118ನೇ ಮನ್​ ಕಿ ಬಾತ್ ಕಾರ್ಯಕ್ರಮವನ್ನು ಪ್ರಧಾನಿ ಮೋದಿ ನಡೆಸಿಕೊಟ್ಟಿದ್ದಾರೆ. ಭಾರತದ ಸಂವಿಧಾನ ರಚನಾ ಸಭೆಗೆ ಸಂಬಂಧಿಸಿದ ಮಹಾನ್ ನಾಯಕರ ಧ್ವನಿಯನ್ನು ಮೋದಿ ಶ್ರೋತೃಗಳಿಗೆ ಕೇಳಿಸಿದ್ದಾರೆ. ಡಾ. ರಾಜೇಂದ್ರ ಪ್ರಸಾದ್, ಡಾ. ಬಿಆರ್ ಅಂಬೇಡ್ಕರ್ ಹಾಗೂ ಶ್ಯಾಮ್ ಪ್ರಸಾದ್ ಮುಖರ್ಜಿಯವರ ಧ್ವನಿಯನ್ನು ಕೇಳಿಸಿದ್ದಾರೆ. 1951-52ರಲ್ಲಿ ದೇಶದಲ್ಲಿ ಮೊದಲ ಬಾರಿಗೆ ಚುನಾವಣೆ ನಡೆದಾಗ ದೇಶದ ಪ್ರಜಾಪ್ರಭುತ್ವ ಉಳಿಯುತ್ತದೆಯೇ ಎಂದು ಕೆಲವರಿಗೆ ಅನುಮಾನವಿತ್ತು ಎಂದರು.

Modi Mann Ki Baat: ಭಾರತದ ಸಂವಿಧಾನ ರಚನಾ ಸಭೆಗೆ ಸಂಬಂಧಿಸಿದ ಮಹಾನ್ ನಾಯಕರ ಧ್ವನಿ ಕೇಳಿಸಿದ ಪ್ರಧಾನಿ ಮೋದಿ
ನರೇಂದ್ರ ಮೋದಿ
Image Credit source: Mint
Follow us on

ಪ್ರಧಾನಿ ಮೋದಿಯವರ ಈ ವರ್ಷದ ಮೊದಲ ಮನ್​ ಕಿ ಬಾತ್​ ಇಂದು ಪ್ರಸಾರವಾಗಿದೆ. ಭಾರತದ ಸಂವಿಧಾನ ರಚನಾ ಸಭೆಗೆ ಸಂಬಂಧಿಸಿದ ಮಹಾನ್ ನಾಯಕರ ಧ್ವನಿಯನ್ನು ಮೋದಿ ಶ್ರೋತೃಗಳಿಗೆ ಕೇಳಿಸಿದ್ದಾರೆ. ಡಾ. ರಾಜೇಂದ್ರ ಪ್ರಸಾದ್, ಡಾ. ಬಿಆರ್ ಅಂಬೇಡ್ಕರ್ ಹಾಗೂ ಶ್ಯಾಮ್ ಪ್ರಸಾದ್ ಮುಖರ್ಜಿಯವರ ಧ್ವನಿಯನ್ನು ಕೇಳಿಸಿದ್ದಾರೆ.

ನಮ್ಮ ಪವಿತ್ರ ಸಂವಿಧಾನವನ್ನು ನಮಗೆ ನೀಡಿದ ಸಂವಿಧಾನ ರಚನಾ ಸಭೆಯ ಎಲ್ಲ ಮಹಾನ್ ವ್ಯಕ್ತಿಗಳಿಗೆ ನಾನು ನಮಸ್ಕರಿಸುತ್ತೇನೆ ಎಂದು ಪ್ರಧಾನಿ ಮೋದಿ ಹೇಳಿದರು. ಸಂವಿಧಾನ ರಚನಾ ಸಭೆಯಲ್ಲಿ ಹಲವು ವಿಷಯಗಳ ಮೇಲೆ ಸುದೀರ್ಘ ಚರ್ಚೆಗಳು ನಡೆದವು.

ಆ ಚರ್ಚೆಗಳು, ಸಂವಿಧಾನ ಸಭೆಯ ಸದಸ್ಯರ ಚಿಂತನೆಗಳು, ಅವರ ಮಾತುಗಳು ನಮ್ಮ ಶ್ರೇಷ್ಠ ಪರಂಪರೆಯಾಗಿದೆ. 1951-52ರಲ್ಲಿ ದೇಶದಲ್ಲಿ ಮೊದಲ ಬಾರಿಗೆ ಚುನಾವಣೆ ನಡೆದಾಗ ದೇಶದ ಪ್ರಜಾಪ್ರಭುತ್ವ ಉಳಿಯುತ್ತದೆಯೇ ಎಂದು ಕೆಲವರಿಗೆ ಅನುಮಾನವಿತ್ತು.

ಇದೆಲ್ಲದರ ನಡುವೆ, ನಮ್ಮ ಪ್ರಜಾಪ್ರಭುತ್ವವು ಎಲ್ಲಾ ಆತಂಕಗಳನ್ನು ತಪ್ಪೆಂದು ಸಾಬೀತುಪಡಿಸಿದೆ. ಎಲ್ಲಾ ನಂತರ ಭಾರತ ಪ್ರಜಾಪ್ರಭುತ್ವದ ತಾಯಿ. ದೇಶವಾಸಿಗಳು ತಮ್ಮ ಮತದಾನದ ಹಕ್ಕನ್ನು ಯಾವಾಗಲೂ ಗರಿಷ್ಠ ಸಂಖ್ಯೆಯಲ್ಲಿ ಬಳಸಲು ಮತ್ತು ದೇಶದ ಪ್ರಜಾಪ್ರಭುತ್ವ ಪ್ರಕ್ರಿಯೆಯ ಭಾಗವಾಗಲು ಮತ್ತು ಈ ಪ್ರಕ್ರಿಯೆಯನ್ನು ಬಲಪಡಿಸಲು ನಾನು ಕೇಳುತ್ತೇನೆ ಎಂದರು.

ಜನವರಿ 25ರಂದು ಭಾರತದ ಚುನಾವಣಾ ಆಯೋಗದ ಸ್ಥಾಪನೆಯಾಯಿತು, ಚುನಾವಣಾ ಆಯೋಗವು ಮತದಾನ ಪ್ರಕ್ರಿಯೆಯಲ್ಲಿ ಆಧುನಿಕತೆ ತಂದು, ಪ್ರಜಾಪ್ರಭುತ್ವವನ್ನು ಉಳಿಸುವಲ್ಲಿ ಪ್ರಮುಖ ಪಾತ್ರವಹಿಸಿದೆ ಎಂದು ಹೇಳಿದ್ದಾರೆ. ಸಂವಿಧಾನ ರಚನಾಕಾರರು ಪ್ರಜಾಪ್ರಭುತ್ವದ ಭಾಗವಾಗಿ ನಮ್ಮ ಚುನಾವಣಾ ಆಯೋಗವನ್ನು ಸಂವಿಧಾನದಲ್ಲಿ ಸೇರಿಸಿದ್ದಾರೆ ಭಾರತವು ಪ್ರಜಾಪ್ರಭುತ್ವದ ತಾಯಿ. ಹೆಚ್ಚಿನ ಜನರು ತಮ್ಮ ಮತದಾನದ ಅಧಿಕಾರವನ್ನು ಉಪಯೋಗ ಮಾಡಿಕೊಳ್ಳಿ, ಪ್ರಜಾಪ್ರಭುತ್ವವನ್ನು ಮತ್ತಷ್ಟು ಬಲಪಡಿಸಿ ಎಂದು ಜನರನ್ನು ಕೇಳಿಕೊಂಡರು.

ಮತ್ತಷ್ಟು ಓದಿ: Modi Mann Ki Baat: ಸಂವಿಧಾನವು ನಮ್ಮನ್ನು ಉತ್ತಮ ಮಾರ್ಗದೆಡೆ ಕೊಂಡೊಯ್ಯುವ ದೀಪವಿದ್ದಂತೆ: ಪ್ರಧಾನಿ ಮೋದಿ

ಪ್ರಯಾಗ್​ರಾಜ್​ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳದ ಬಗ್ಗೆ ಮಾತನಾಡಿ ಇದು ಚಿರಸ್ಮರಣೀಯ ವಿವಿಧತೆಯಲ್ಲಿ ಏಕತೆ ಸೃಷ್ಟಿಸುವ ಉತ್ಸವ, ವಿಶ್ವ, ದೇಶದ ವಿವಿಧ ಕಡೆಗಳಿಂದ ಜನರು ಬರುತ್ತಾರೆ. ಒಂದೇ ನದಿಯಲ್ಲಿ ಎಲ್ಲರೂ ಮುಳುಗಿ ಏಳುತ್ತಾರೆ, ಒಟ್ಟಿಗೆ ಊಟ ಮಾಡುತ್ತಾರೆ, ಇಲ್ಲಿ ಬಡವ ಶ್ರೀಮಂತ, ಜಾತಿಯ ಭೇದಭಾವವಿಲ್ಲ. ಆದರೆ ಈ ಬಾರಿ ಬಹಳಷ್ಟು ಯುವಕರು ಇದಕ್ಕೆ ಸಾಕ್ಷಿಯಾಗಿರುವುದು ಹೆಮ್ಮೆಯ ಸಂಗತಿ ಎಂದಿದ್ದಾರೆ.

ಬೆಂಗಳೂರಿನ ಭಾರತೀಯ ಬಾಹ್ಯಾಕಾಶ-ತಂತ್ರಜ್ಞಾನದ ಸ್ಟಾರ್ಟ್-ಅಪ್ Pixxel, ಭಾರತದ ಮೊದಲ ಖಾಸಗಿ ಉಪಗ್ರಹ ಸಮೂಹ – ‘ಫೈರ್‌ಫ್ಲೈ’ ಅನ್ನು ಯಶಸ್ವಿಯಾಗಿ ಉಡಾವಣೆ ಮಾಡಿದೆ ಎಂದು ಹೇಳಲು ನಾನು ಹೆಮ್ಮೆಪಡುತ್ತೇನೆ.ಈ ಉಪಗ್ರಹ ಸಮೂಹವು ವಿಶ್ವದ ಅತ್ಯಂತ ಎತ್ತರದಲ್ಲಿದೆ. ಕೆಲವು ದಿನಗಳ ಹಿಂದೆ, ನಮ್ಮ ವಿಜ್ಞಾನಿಗಳು ಬಾಹ್ಯಾಕಾಶ ಡಾಕಿಂಗ್‌ನಲ್ಲಿ ಮತ್ತೊಂದು ದೊಡ್ಡ ಸಾಧನೆಯನ್ನು ಮಾಡಿದೆ ಎಂದು ಹೇಳಿದರು. ಕೊನೆಯ ಭಾನುವಾರ ಗಣರಾಜ್ಯೋತ್ಸವ ಇರುವ ಹಿನ್ನೆಲೆಯಲ್ಲಿ ಒಂದು ವಾರ ಮುಂಚಿತವಾಗಿ ಪ್ರಧಾನಿ ಮೋದಿ ಮನ್​ಕಿ ಬಾತ್​ನಲ್ಲಿ ಮಾತನಾಡಿದ್ದಾರೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

 

Published On - 11:40 am, Sun, 19 January 25