ಮಧ್ಯ ಪ್ರದೇಶ, ಛತ್ತೀಸ್‌ಗಢ ಚುನಾವಣೆಯ ಸಿಇಸಿ ಸಭೆಗೆ ಮೋದಿ ಅಧ್ಯಕ್ಷತೆ; ಬಿಜೆಪಿ ಪ್ರಧಾನ ಕಚೇರಿಯಲ್ಲಿ ಪ್ರಧಾನಿಗೆ ಅದ್ಧೂರಿ ಸ್ವಾಗತ

|

Updated on: Sep 13, 2023 | 8:40 PM

ನರೇಂದ್ರ ಮೋದಿ ಬುಧವಾರ ದೆಹಲಿಯಲ್ಲಿರುವ ಬಿಜೆಪಿ ಪ್ರಧಾನ ಕಚೇರಿಗೆ ಆಗಮಿಸಿದ್ದು, ಅಲ್ಲಿ ಅವರಿಗೆ ಅದ್ಧೂರಿ ಸ್ವಾಗತ ನೀಡಲಾಗಿದೆ. ಜಿ20 ಶೃಂಗಸಭೆಯನ್ನು ಯಶಸ್ವಿಯಾಗಿ ನಡೆಸಿದಕ್ಕಾಗಿ ಪಕ್ಷದ ಹಿರಿಯ ನಾಯಕರು ಪ್ರಧಾನಿ ಅವರನ್ನು ಅಭಿನಂದಿಸಿದರು. ಸೆಪ್ಟೆಂಬರ್ 10 ರಂದು ದೆಹಲಿಯಲ್ಲಿ ಜಿ 20 ಶೃಂಗಸಭೆ ಮುಗಿದ ನಂತರ ಪಕ್ಷದ ಪ್ರಧಾನ ಕಚೇರಿಗೆ ಪ್ರಧಾನಿ ಮೋದಿ ಅವರ ಮೊದಲ ಭೇಟಿ ಇದಾಗಿದೆ.

ಮಧ್ಯ ಪ್ರದೇಶ, ಛತ್ತೀಸ್‌ಗಢ ಚುನಾವಣೆಯ ಸಿಇಸಿ ಸಭೆಗೆ ಮೋದಿ ಅಧ್ಯಕ್ಷತೆ; ಬಿಜೆಪಿ ಪ್ರಧಾನ ಕಚೇರಿಯಲ್ಲಿ ಪ್ರಧಾನಿಗೆ ಅದ್ಧೂರಿ ಸ್ವಾಗತ
ನರೇಂದ್ರ ಮೋದಿ
Follow us on

ದೆಹಲಿ ಸೆಪ್ಟೆಂಬರ್13 : ಪ್ರಧಾನಿ ನರೇಂದ್ರ ಮೋದಿ (Narendra Modi) ಅವರಿಗೆ ಬುಧವಾರ ದೆಹಲಿಯಲ್ಲಿರುವ ಬಿಜೆಪಿ (BJP) ಪ್ರಧಾನ ಕಚೇರಿಗೆ ಬಂದಿದ್ದು, ಅಲ್ಲಿ ಅವರಿಗೆ ಅದ್ಧೂರಿ ಸ್ವಾಗತ ನೀಡಲಾಗಿದೆ. ಜಿ20 ಶೃಂಗಸಭೆಯನ್ನು (G20 Summit) ಯಶಸ್ವಿಯಾಗಿ ನಡೆಸಿದಕ್ಕಾಗಿ ಪಕ್ಷದ ಹಿರಿಯ ನಾಯಕರು ಪ್ರಧಾನಿ ಅವರನ್ನು ಅಭಿನಂದಿಸಿದರು. ಸೆಪ್ಟೆಂಬರ್ 10 ರಂದು ದೆಹಲಿಯಲ್ಲಿ ಜಿ 20 ಶೃಂಗಸಭೆ ಮುಗಿದ ನಂತರ ಪಕ್ಷದ ಪ್ರಧಾನ ಕಚೇರಿಗೆ ಪ್ರಧಾನಿ ಮೋದಿ ಅವರ ಮೊದಲ ಭೇಟಿ ಇದಾಗಿದೆ. ಪ್ರಧಾನಿ ಮೋದಿ ಅವರು ಮಧ್ಯಪ್ರದೇಶ ಮತ್ತು ಛತ್ತೀಸ್‌ಗಢ ಚುನಾವಣೆಗಳ ಕುರಿತು ಚರ್ಚಿಸಲು ಪಕ್ಷದ ಕೇಂದ್ರ ಚುನಾವಣಾ ಸಮಿತಿಯ ಅಧ್ಯಕ್ಷತೆ ವಹಿಸಲಿದ್ದಾರೆ.

ಕೇಂದ್ರ ಸಚಿವರಾದ ಅಮಿತ್ ಶಾ ಮತ್ತು ರಾಜನಾಥ್ ಸಿಂಗ್ ಮತ್ತು ಪಕ್ಷದ ಅಧ್ಯಕ್ಷ ಜೆಪಿ ನಡ್ಡಾ ಸೇರಿದಂತೆ ಸಿಇಸಿ ಸದಸ್ಯರು  ದೆಹಲಿಯಲ್ಲಿರುವ  ಪ್ರಧಾನ ಕಚೇರಿಯಲ್ಲಿ ಮೋದಿ ಅವರನ್ನು ಬರಮಾಡಿಕೊಳ್ಳಲು ಸಾಲಾಗಿ ನಿಂತಿದ್ದರು. G20 ಶೃಂಗಸಭೆಗೆ ಮೋದಿ ನಾಯಕತ್ವವು ವಿಶ್ವ ನಾಯಕರಿಂದ ಪ್ರಶಂಸೆ ಗಳಿಸುವುದರೊಂದಿಗೆ ಭಾರೀ ಯಶಸ್ಸನ್ನು ಕಂಡಿತು.ಬಿಜೆಪಿಯು ತನ್ನ ರಾಜಕೀಯ ಭಾಷಣದಲ್ಲಿ ಮೋದಿಯವರ ನಾಯಕತ್ವದ ಜಾಗತಿಕ ಮನ್ನಣೆ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತದ ವರ್ಧಿತ ಸ್ಥಾನಮಾನವನ್ನು ಹೈಲೈಟ್ ಮಾಡಿದೆ.


ಇಂದು ನಡೆಯುವ ಸಭೆಯಲ್ಲಿ   ಮಧ್ಯಪ್ರದೇಶದ ಚುನಾವಣೆಗೆ ಅಭ್ಯರ್ಥಿಗಳ ಹೆಸರನ್ನು ಸಿಇಸಿ ಅಂತಿಮಗೊಳಿಸಲಿದೆ. ಸಿಇಸಿ ಕಳೆದ ತಿಂಗಳು ಸಭೆ ನಡೆಸಿ ಮಧ್ಯಪ್ರದೇಶದ 39 ಮತ್ತು ಛತ್ತೀಸ್‌ಗಢದ 21 ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಹೆಸರಿಸಿತು. ಬಿಜೆಪಿ ಹಾಲಿ ಶಾಸಕರನ್ನು ಹೊಂದಿರದ ಸ್ಥಾನಗಳಿಗೆ ಇವುಗಳನ್ನು ನೀಡಲಾಗಿತ್ತು.

ಬಿಜೆಪಿ ಈ ಬಾರಿ ಚುನಾವಣಾ ದಿನಾಂಕಗಳನ್ನು ಘೋಷಿಸುವ ಮೊದಲೇ ತನ್ನ ವಿಧಾನಸಭಾ ಚುನಾವಣಾ ಅಭ್ಯರ್ಥಿಗಳನ್ನು ಹೆಸರಿಸಲು ಪ್ರಾರಂಭಿಸಿದೆ.  ಮಧ್ಯಪ್ರದೇಶ, ಛತ್ತೀಸ್‌ಗಢ, ರಾಜಸ್ಥಾನ, ತೆಲಂಗಾಣ ಮತ್ತು ಮಿಜೋರಾಂನಲ್ಲಿ ನವೆಂಬರ್-ಡಿಸೆಂಬರ್‌ನಲ್ಲಿ ವಿಧಾನಸಭಾ ಚುನಾವಣೆ ನಡೆಯಲಿವೆ.ಇದು 2024 ರಲ್ಲಿ ಲೋಕಸಭೆ ಸ್ಪರ್ಧೆಯ ಮೊದಲು ರಾಜ್ಯ ಚುನಾವಣೆಯ ಕೊನೆಯ ಸುತ್ತಿನ ಚುನಾವಣೆಯಾಗಿದೆ.

ಮಧ್ಯಪ್ರದೇಶದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದರೆ, ರಾಜಸ್ಥಾನ ಮತ್ತು ಛತ್ತೀಸ್‌ಗಢದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದೆ. ತೆಲಂಗಾಣದಲ್ಲಿ ಬಿಆರ್‌ಎಸ್ ಅಧಿಕಾರದಲ್ಲಿದ್ದರೆ, ಮಿಜೋರಾಂನಲ್ಲಿ ಮಿಜೋ ನ್ಯಾಷನಲ್ ಫ್ರಂಟ್ ಸರ್ಕಾರವನ್ನು ನಡೆಸುತ್ತಿದೆ.

G20 ಶೃಂಗಸಭೆಯನ್ನು ಸರ್ಕಾರವು ಒಂದು ಪ್ರಮುಖ ಯಶಸ್ಸು ಎಂದು ಹೇಳಿಕೊಂಡಿದೆ. ಶೃಂಗಸಭೆಯ ಮಹತ್ವದ ಸಂಗಿ ನವದೆಹಲಿ ಘೋಷಣೆಯಾಗಿದ್ದು, ಇದರಲ್ಲಿ ಘೋಷಣೆಯ ಎಲ್ಲಾ 83 ಪ್ಯಾರಾಗಳನ್ನು ಚೀನಾ ಮತ್ತು ರಷ್ಯಾ ಒಪ್ಪಂದದೊಂದಿಗೆ 100% ಒಮ್ಮತದೊಂದಿಗೆ ಸರ್ವಾನುಮತದಿಂದ ಅಂಗೀಕರಿಸಲಾಯಿತು. ಮೊದಲ ಬಾರಿಗೆ, ಈ ಘೋಷಣೆಯು ಅಡಿಟಿಪ್ಪಣಿಯನ್ನು ಹೊಂದಿಲ್ಲ.

G20 ಸಭೆಯು ಆಫ್ರಿಕನ್ ಯೂನಿಯನ್ ಅನ್ನು G20 ನ ಹೊಸ ಖಾಯಂ ಸದಸ್ಯರನ್ನಾಗಿ ಮಾಡಿತು.ಆಫ್ರಿಕನ್ ಯೂನಿಯನ್ ಸೇರ್ಪಡೆಯು ಭಾರತದ ಅಧ್ಯಕ್ಷತೆಯಲ್ಲಿ ಪ್ರಧಾನಿ ಮೋದಿಯವರ ನೇತೃತ್ವದಲ್ಲಿ ಒಂದು ಉಪಕ್ರಮವಾಗಿತ್ತು.

ಇದನ್ನೂ ಓದಿ:  ಬಿಎಸ್‌ಪಿ ಭದ್ರಕೋಟೆ ಮೇಲೆ ಕಣ್ಣಿಟ್ಟ ಕಾಂಗ್ರೆಸ್; ಕಾನ್ಶಿರಾಂ ಸ್ಪರ್ಧಿಸಿದ್ದ ಕ್ಷೇತ್ರದಿಂದ ಖರ್ಗೆ ಅವರನ್ನು ಕಣಕ್ಕಿಳಿಸಲು ಸಿದ್ಧತೆ?

ಅಮೆ ಅಧ್ಯಕ್ಷ ಜೋ ಬಿಡೆನ್, ಬ್ರೆಜಿಲ್ ಅಧ್ಯಕ್ಷ ಲೂಯಿಸ್ ಇನಾಸಿಯೊ, ಅರ್ಜೆಂಟೀನಾ ಅಧ್ಯಕ್ಷ ಅಲ್ಬರ್ಟೊ ಫೆರ್ನಾಂಡಿಸ್ ಮತ್ತು ಇಟಲಿಯ ಪ್ರಧಾನಿ ಜಾರ್ಜಿಯಾ ಮೆಲೋನಿ ಅವರ ಸಮ್ಮುಖದಲ್ಲಿ ಪ್ರಧಾನಿ ಮೋದಿ ಜಾಗತಿಕ ಜೈವಿಕ ಇಂಧನ ಒಕ್ಕೂಟವನ್ನು ಪ್ರಾರಂಭಿಸಿದರು.

ಭಾರತ, ಯುಎಸ್, ಸೌದಿ ಅರೇಬಿಯಾ ಮತ್ತು ಯುರೋಪಿಯನ್ ಯೂನಿಯನ್‌ನಿಂದ ಬೃಹತ್ ಭಾರತ-ಮಧ್ಯಪ್ರಾಚ್ಯ-ಯುರೋಪ್ ಹಡಗು ಮತ್ತು ರೈಲ್ವೆ ಸಂಪರ್ಕ ಕಾರಿಡಾರ್ ಅನ್ನು ಘೋಷಿಸುವುದು ಶೃಂಗಸಭೆಯ ಮತ್ತೊಂದು ಪ್ರಮುಖ ನಿರ್ಧಾರ ಆಗಿತ್ತು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 8:25 pm, Wed, 13 September 23