Ajit Pawar: ಅಜಿತ್ ಪವಾರ್ ಬಣದ ಎನ್​​ಸಿಪಿ ಟ್ವಿಟರ್​​ ಖಾತೆ ಅಮಾನತು

ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ (Ajit Pawar) ಬಣದ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ X (ಟ್ವಿಟರ್​) ಖಾತೆಯನ್ನು ಅಮಾನತುಗೊಳಿಸಲಾಗಿದೆ. ಶರದ್ ಪವಾರ್ ಬಣದ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷ ಟ್ವಿಟರ್​​ ಖಾತೆಯು ಅಜಿತ್​​ ಪವಾರ್ ಅವರು ಟ್ವಿಟರ್​​ ಖಾತೆ ನಮ್ಮ ಪಕ್ಷದ ಹೆಸರನ್ನು ಹೊಂದಿದ್ದು, ಇದು ನಕಲು ಖಾತೆ ಎಂದು X (ಟ್ವಿಟರ್​)ಗೆ ದೂರು ನೀಡಿದೆ.

Ajit Pawar: ಅಜಿತ್ ಪವಾರ್ ಬಣದ ಎನ್​​ಸಿಪಿ ಟ್ವಿಟರ್​​ ಖಾತೆ ಅಮಾನತು
ಸಾಂದರ್ಭಿಕ ಚಿತ್ರ
Follow us
|

Updated on: Sep 13, 2023 | 6:43 PM

ಪುಣೆ, ಸೆ.13: ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ (Ajit Pawar) ಬಣದ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ X (ಟ್ವಿಟರ್​) ಖಾತೆಯನ್ನು ಅಮಾನತುಗೊಳಿಸಲಾಗಿದೆ. ಶರದ್ ಪವಾರ್ ಬಣದ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷ ಟ್ವಿಟರ್​​ ಖಾತೆಯು ಅಜಿತ್​​ ಪವಾರ್ ಅವರು ಟ್ವಿಟರ್​​ ಖಾತೆ ನಮ್ಮ ಪಕ್ಷದ ಹೆಸರನ್ನು ಹೊಂದಿದ್ದು, ಇದು ನಕಲು ಖಾತೆ ಎಂದು X (ಟ್ವಿಟರ್​)ಗೆ ದೂರು ನೀಡಿದೆ. X ಈ ದೂರಿನ ಆಧಾರ ಮೇಲೆ ಅಜಿತ್​​ ಪವಾರ್​ ಬಣ್ಣದ ಟ್ವಿಟರ್​​ ಖಾತೆಯನ್ನು ಅಮಾನತುಗೊಳಿಸಿದೆ. ಜುಲೈನಲ್ಲಿ ಅಜಿತ್​​ ಪವಾರ್​ ಅವರು ಬಿಜೆಪಿ ಮತ್ತು ಶಿಂಧೆ ಬಣ ಶಿವಸೇನೆ ನೇತೃತ್ವದ ಸರ್ಕಾರಕ್ಕೆ ಬೆಂಬಲ ನೀಡಿದ್ದರು. ಒಂದೇ ಹೆಸರಿನ ಪಕ್ಷವು ಎರಡು ಭಾಗವಾಗಿತ್ತು. ಇದರ ಜತೆಗೆ X ಖಾತೆಯು ಕೂಡ ವಿಭಜನೆಯಾಗಿದೆ. @NCPSpeaks ಶರದ್ ಪವಾರ್ ಅವರ NCP ಗುಂಪಿನ ಅಧಿಕೃತ X ಖಾತೆಯಾಗಿದ್ದರೆ, @NCPSpeaks1 ಅಜಿತ್ ಪವಾರ್ ಬಣದ ಅಧಿಕೃತ X ಹ್ಯಾಂಡಲ್ ಆಗಿತ್ತು.

ಇದೀಗ @NCPSpeaks1 ಅಜಿತ್ ಪವಾರ್ ಬಣ ಖಾತೆಯು ಟ್ವಿಟರ್​​ ನಿಯಮಗಳನ್ನು ಉಲ್ಲಂಘನೆ ಮಾಡಿದೆ ಎಂದು ಈ ಖಾತೆಯನ್ನು ನಿರ್ಬಂಧಿಸಲಾಗಿದೆ. ಈ ಬಗ್ಗೆ ಟ್ವಿಟರ್​​ (X) ಮೊದಲೇ @NCPSpeaks1 ಅಜಿತ್ ಪವಾರ್ ಬಣ ಖಾತೆಗೆ ಎಚ್ಚರಿಕೆಯನ್ನು ನೀಡಿತ್ತು. ಆದರೆ ಈ ಎಚ್ಚರಿಕೆಗೆ @NCPSpeaks1 ಖಾತೆಯು ಈ ಕುರಿತು ಯಾವುದೇ ಪ್ರಕ್ರಿಯೆ ನೀಡಿಲ್ಲ. ಇಷ್ಟು ದಿನದ ಒಳಗೆ ವರದಿ ಮಾಡುವಂತೆ ಟ್ವಿಟರ್​​ ತಿಳಿಸಿತ್ತು. ಆದರೆ ಈ ಬಗ್ಗೆ @NCPSpeaks1 ಖಾತೆಯಿಂದ ಯಾವುದೇ ವರದಿ ಬರದ ಕಾರಣ ಈ ಖಾತೆಯನ್ನು ಬ್ಲಾಕ್​​​ ಮಾಡಲಾಗಿದೆ.

ಇನ್ನು ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಅಜಿತ್ ಪವಾರ್, ಟ್ವಿಟರ್​​ನಲ್ಲಿ ಒಂದೇ ರೀತಿ ಹೆಸರನ್ನು ಬಳಸಿದಕ್ಕಾಗಿ ಚಿಕ್ಕಪ್ಪನ ಬಣದಿಂದ ದೂರು ನೀಡಲಾಗಿದೆ. ಆ ಕಾರಣದಿಂದ ನಮ್ಮ X ಖಾತೆಯನ್ನು ಟ್ವಿಟರ್​​​ ನಿರ್ಬಂಧಿಸಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ:ಯಾರು ಹೆಚ್ಚು ಶಾಸಕರನ್ನು ಹೊಂದಿದ್ದಾರೆ ಎಂಬುದನ್ನು ನಿರೂಪಿಸಲು ಎನ್​ಸಿಪಿಯ ಎರಡು ಬಣಗಳ ಸಭೆ

ಶರದ್ ಪವಾರ್ ಮತ್ತು ಅಜಿತ್ ಪವಾರ್ ಬಣಗಳ ವಿಭಜನೆಯ ನಂತರ ಇಂತಹ ಅನೇಕ ಉದ್ವಿಗ್ನತೆಯ ಘಟನೆಗಳು ಈ ಎರಡು ಬಣಗಳ ನಡುವೆ ನಡೆದಿದೆ. ಶರದ್ ಪವಾರ್ ನೇತೃತ್ವದ ಎನ್​​ಸಿಪಿ ಪಕ್ಷದಿಂದ ವಿಭಜನೆಗೊಂಡ ನಂತರ ಆಡಳಿತಾರೂಢ ಬಿಜೆಪಿ ಮತ್ತು ಶಿವಸೇನೆ (ಶಿಂಧೆ ಬಣ) ಜೊತೆಗೆ ಕೈಜೋಡಿಸಿ, ಆ ಸರ್ಕಾರದಲ್ಲಿ ಅಜಿತ್ ಪವಾರ್ ಮಹಾರಾಷ್ಟ್ರದ ಉಪ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು.

ಇನ್ನು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರು ಸೋಮವಾರ ಮರಾಠಾ ಮೀಸಲಾತಿ ಕುರಿತು ಸರ್ವಪಕ್ಷ ಸಭೆ ನಡೆಸಿ ಮರಾಠರಿಗೆ ಮೀಸಲಾತಿ ನೀಡಲು ಮತ್ತು ಪ್ರತಿಭಟನಾಕಾರರ ಇತರ ಬೇಡಿಕೆಗಳನ್ನು ಸ್ವೀಕರಿಸಲು ನಿರ್ಧರಿಸಿದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ