ಹೆಚ್ಚು ಅರ್ಹತೆ ಮತ್ತು ಸಂಪಾದಿಸುತ್ತಿರುವ ಪತ್ನಿಗೆ ಜೀವನಾಂಶ ನೀಡಲಾಗದು: ದೆಹಲಿ ಹೈಕೋರ್ಟ್

ಪ್ರಸ್ತುತ ಪ್ರಕರಣದಲ್ಲಿ ಮೇಲ್ಮನವಿದಾರರು ಹೆಚ್ಚು ಅರ್ಹತೆ ಹೊಂದಿದ್ದಾರೆ ಮತ್ತು ಸಂಪಾದನೆ ಮಾಡುವ ಗಳಿಸುವ ಸಾಮರ್ಥ್ಯವನ್ನು ಹೊಂದಿದ್ದಾರೆ ಎಂದು ನಾವು ಕಂಡುಕೊಂಡಿದ್ದೇವೆ. ಆಕೆ ಸಂಪಾದನೆ ಮಾಡುತ್ತಿದ್ದರೂ ತನ್ನ ನಿಜವಾದ ಆದಾಯವನ್ನು ಬಹಿರಂಗಪಡಿಸಲು ಒಲವು ತೋರಲಿಲ್ಲ. ಅಂತಹ ವ್ಯಕ್ತಿ ನಿರ್ವಹಣೆಗೆ ಅರ್ಹರಾಗಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಹೇಳಿದೆ.

ಹೆಚ್ಚು ಅರ್ಹತೆ ಮತ್ತು ಸಂಪಾದಿಸುತ್ತಿರುವ ಪತ್ನಿಗೆ ಜೀವನಾಂಶ ನೀಡಲಾಗದು: ದೆಹಲಿ ಹೈಕೋರ್ಟ್
ದೆಹಲಿ ಹೈಕೋರ್ಟ್
Follow us
ರಶ್ಮಿ ಕಲ್ಲಕಟ್ಟ
|

Updated on: Sep 13, 2023 | 5:34 PM

ದೆಹಲಿ ಸೆಪ್ಟಂಬರ್ 13: ಹೆಂಡತಿ ತನ್ನ ನಿಜವಾದ ಆದಾಯವನ್ನು ಬಹಿರಂಗಪಡಿಸದಿದ್ದರೂ, ಮದುವೆಯ ನಂತರವೂ ಹೆಚ್ಚು ಅರ್ಹತೆ ಹೊಂದಿದ್ದಾಗ ಮತ್ತು ಸಂಪಾದಿಸುತ್ತಿರುವಾಗ ಪತಿಯಿಂದ ಜೀವನಾಂಶಕ್ಕೆ (Maintenance) ಅರ್ಹಳಾಗಿರುವುದಿಲ್ಲ ಎಂದು ದೆಹಲಿ ಹೈಕೋರ್ಟ್ (Delhi High Court) ಹೇಳಿದೆ.1955ರ ಹಿಂದೂ ವಿವಾಹ ಕಾಯ್ದೆಯ ಸೆಕ್ಷನ್ 24 ರ ಅಡಿಯಲ್ಲಿ ಜೀವನಾಂಶಕ್ಕಾಗಿ ಪತ್ನಿಯ ಅರ್ಜಿಯನ್ನು ವಜಾಗೊಳಿಸಿದ ಕೌಟುಂಬಿಕ ನ್ಯಾಯಾಲಯದ ಆದೇಶವನ್ನು ಎತ್ತಿಹಿಡಿಯುವಾಗ, ನ್ಯಾಯಮೂರ್ತಿ ಸುರೇಶ್ ಕುಮಾರ್ ಕೈಟ್ ಮತ್ತು ನ್ಯಾಯಮೂರ್ತಿ ನೀನಾ ಬನ್ಸಾಲ್ ಕೃಷ್ಣ ಅವರ ವಿಭಾಗೀಯ ಪೀಠ ಈ ರೀತಿ ಹೇಳಿದೆ.

ಪ್ರಸ್ತುತ ಪ್ರಕರಣದಲ್ಲಿ ಮೇಲ್ಮನವಿದಾರರು ಹೆಚ್ಚು ಅರ್ಹತೆ ಹೊಂದಿದ್ದಾರೆ ಮತ್ತು ಸಂಪಾದನೆ ಮಾಡುವ ಗಳಿಸುವ ಸಾಮರ್ಥ್ಯವನ್ನು ಹೊಂದಿದ್ದಾರೆ ಎಂದು ನಾವು ಕಂಡುಕೊಂಡಿದ್ದೇವೆ. ಆಕೆ ಸಂಪಾದನೆ ಮಾಡುತ್ತಿದ್ದರೂ ತನ್ನ ನಿಜವಾದ ಆದಾಯವನ್ನು ಬಹಿರಂಗಪಡಿಸಲು ಒಲವು ತೋರಲಿಲ್ಲ. ಅಂತಹ ವ್ಯಕ್ತಿ ನಿರ್ವಹಣೆಗೆ ಅರ್ಹರಾಗಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಹೇಳಿದೆ.

ಕೌಟುಂಬಿಕ ದೌರ್ಜನ್ಯದ ವಿರುದ್ಧ ಮಹಿಳೆಯರ ಸಂರಕ್ಷಣಾ ಕಾಯ್ದೆಯ ನಿಬಂಧನೆಗಳ ಅಡಿಯಲ್ಲಿ ಮೇಲ್ಮನವಿದಾರರ ಜೀವನಾಂಶದ ಹಕ್ಕು ನೀಡುವುದಕ್ಕೂ ಕೋರ್ಟ್ ಇದೇ ರೀತಿ ಹೇಳಿದ್ದು, ಜೀವನಾಂಶವನ್ನು ಆಕೆಗೆ ನಿರಾಕರಿಸಲಾಗಿದೆ. ವಜಾಗೊಳಿಸಲಾದ ಮೇಲ್ಮನವಿಯಲ್ಲಿ ನಾವು ಯಾವುದೇ ಅರ್ಹತೆಯನ್ನು ಕಾಣುವುದಿಲ್ಲ ಎಂದು ನ್ಯಾಯಾಲಯ ಹೇಳಿದೆ.

ಕೌಟುಂಬಿಕ ನ್ಯಾಯಾಲಯವು ಪತ್ನಿಯ ವಿದ್ಯಾರ್ಹತೆ ಮತ್ತು ಮದುವೆಯ ನಂತರವೂ ಆಕೆ ಕೆಲಸ ಮಾಡುತ್ತಿದ್ದಾಳೆ ಎಂಬ ಕಾರಣಕ್ಕೆ ಪತ್ನಿಗೆ ಯಾವುದೇ ಪೆಂಡೆಂಟ್ ಲೈಟ್ ಜೀವನಾಂಶ (ನ್ಯಾಯಾಲಯದಲ್ಲಿ ಪ್ರಕರಣ ನಡೆಯುತ್ತಿರುವಾಗ ನೀಡುವ ಜೀವನಾಂಶ) ನೀಡಲು ನಿರಾಕರಿಸಿತ್ತು. ತನ್ನ ಮೇಲ್ಮನವಿಯಲ್ಲಿ, ಪತ್ನಿಯು ಪತಿಯಿಂದ ತಿಂಗಳಿಗೆ ರೂ.35,000 ಮಧ್ಯಂತರ ಜೀವನಾಂಶವನ್ನು ಕೋರಿದ್ದು, ಜೊತೆಗೆ ರೂ.55,000 ದಾವೆಯ ವೆಚ್ಚವನ್ನು ಕೋರಿದ್ದರು.

ಇದನ್ನೂ ಓದಿ: ಕೇರಳದಲ್ಲಿ ನಿಫಾ ವೈರಸ್ ಹೆಚ್ಚಳ: ಕರ್ನಾಟಕದಲ್ಲೂ ಅಲರ್ಟ್, ಆರೋಗ್ಯ ಇಲಾಖೆಯಿಂದ ಮಾರ್ಗಸೂಚಿ ಬಿಡುಗಡೆ

ಆಕೆಯ ಮೇಲ್ಮನವಿಯನ್ನು ವಜಾಗೊಳಿಸಿದ ಪೀಠ, ಪತ್ನಿ ವಿವಾಹದ ಸಮಯದಲ್ಲಿ ಎಂ.ಫಿಲ್ ಆಗಿದ್ದರು ಮತ್ತು ಕಂಪ್ಯೂಟರ್‌ನಲ್ಲಿ ವೃತ್ತಿಪರ ಅರ್ಹತೆಯೊಂದಿಗೆ ಪಿಎಚ್‌ಡಿ (ಮ್ಯಾನೇಜ್‌ಮೆಂಟ್) ಪೂರ್ಣಗೊಳಿಸಿದ್ದರು. ಆದರೆ ಪತಿ ಕೇವಲ ಪದವೀಧರರಾಗಿದ್ದರು. ಪತ್ನಿ ಉನ್ನತ ಅರ್ಹತೆ ಹೊಂದಿದ್ದು ಮಾತ್ರವಲ್ಲದೆ ಮದುವೆಯ ಸಮಯದಲ್ಲಿಯೂ ಕೆಲಸ ಮಾಡುತ್ತಿದ್ದಳು ಎಂದು ನ್ಯಾಯಾಲಯ ಹೇಳಿದೆ.

“ಮೇಲೆ ವಿವರಿಸಿದಂತೆ ನಾವು, ಕೌಟುಂಬಿಕ ನ್ಯಾಯಾಲಯಗಳ ಪ್ರಧಾನ ನ್ಯಾಯಾಧೀಶರ ತೀರ್ಮಾನಗಳನ್ನು ಒಪ್ಪುತ್ತೇವೆ, ಮೇಲ್ಮನವಿ ಸಲ್ಲಿಸಿರುವ ಮಹಿಳೆ ಜೀವನಾಂಶಕ್ಕೆ ಅರ್ಹಳಲ್ಲ. ಆಕೆ ಅವರ ಮದುವೆಯ ಸಮಯದಲ್ಲಿ ಮತ್ತು ನಂತರವೂ ಕೆಲಸ ಮಾಡುತ್ತಿದ್ದರು. ಮೇಲ್ಮನವಿದಾರರು ಮಾಡಿದ ದಾಖಲೆಗಳು ಮತ್ತು ದಾಖಲಾತಿಗಳು ಸ್ಪಷ್ಟವಾಗಿ ಆಕೆ ಎಂಪಿ ಕಚೇರಿಯಲ್ಲಿ ಉದ್ಯೋಗಿಯಾಗಿದ್ದಾಳೆ ಎಂದು ಹೇಳುತ್ತಿದೆ. ಇದಲ್ಲದೆ, “ಸಾಮರ್ಥ್ಯ” ಮತ್ತು “ನಿಜವಾದ ಗಳಿಕೆ” ನಡುವೆ ಯಾವುದೇ ಸಂದೇಹವಿಲ್ಲ ಎಂದು ನ್ಯಾಯಾಲಯ ಹೇಳಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ