Cyclone Biparjoy: ಅಬ್ಬರಿಸಿದ ಬಿಪೋರ್​​ಜಾಯ್ ಚಂಡಮಾರುತ: ಉನ್ನತ ಮಟ್ಟದ ಸಭೆ ಕರೆದ ಪ್ರಧಾನಿ ಮೋದಿ

|

Updated on: Jun 12, 2023 | 3:03 PM

ಚಂಡಮಾರುತದ ಬಗ್ಗೆ ನಿಗಾ ಇಡಲು ರಾಜ್ಯ ಸರ್ಕಾರಗಳಿಗೆ ಸೂಚಿಸಲಾಗಿದೆ. ನಿಯಮಿತವಾಗಿ ತಮ್ಮ ಪ್ರದೇಶಗಳಲ್ಲಿನ ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡಿ ಮತ್ತು ಸೂಕ್ತ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವಂತೆ ಜಿಲ್ಲಾ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಐಎಂಡಿ ಹೇಳಿದೆ.

Cyclone Biparjoy: ಅಬ್ಬರಿಸಿದ ಬಿಪೋರ್​​ಜಾಯ್ ಚಂಡಮಾರುತ: ಉನ್ನತ ಮಟ್ಟದ ಸಭೆ ಕರೆದ ಪ್ರಧಾನಿ ಮೋದಿ
ಉನ್ನತ ಮಟ್ಟದ ಸಭೆ ಕರೆದ ಮೋದಿ
Follow us on

ದೆಹಲಿ: ಬಿಪೋರ್​​ಜಾಯ್​​ ಚಂಡಮಾರುತವು (Cyclone Biparjoy) ಪ್ರಬಲ ಚಂಡಮಾರುತವಾಗಿ ಪರಿವರ್ತನೆಗೊಂಡ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಇಂದು ಪರಿಶೀಲನಾ ಸಭೆ ನಡೆಸಿದ್ದಾರೆ. ಈ ಚಂಡಮಾರುತ ಗುರುವಾರ ಮಧ್ಯಾಹ್ನ ಗುಜರಾತ್‌ನ (Gujarat) ಕಚ್ ಮತ್ತು ಪಾಕಿಸ್ತಾನದ ಕರಾಚಿ ನಡುವೆ ಅಪ್ಪಳಿಸುವ ಸಾಧ್ಯತೆ ಇದೆ. ಗುಜರಾತ್‌ನ ಸೌರಾಷ್ಟ್ರ ಮತ್ತು ಕಚ್ ಕರಾವಳಿಯಲ್ಲಿ ಹವಾಮಾನ ಇಲಾಖೆ ಚಂಡಮಾರುತದ ಎಚ್ಚರಿಕೆ ನೀಡಿದೆ. ಸೌರಾಷ್ಟ್ರ ಮತ್ತು ಕಚ್ ಕರಾವಳಿಯಲ್ಲಿಸಮುದ್ರದ ಪರಿಸ್ಥಿತಿಯು ಬುಧವಾರದವರೆಗೆ ತುಂಬಾ ತೀವ್ರವಾಗಿರುತ್ತದೆ. ಗುರುವಾರದಂದು ಇದು ಮತ್ತಷ್ಟು ತೀವ್ರ ಸ್ವರೂಪ ಪಡೆಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ತಿಳಿಸಿದೆ.

ಕಚ್, ಜಾಮ್‌ನಗರ, ಮೊರ್ಬಿ, ಗಿರ್ ಸೋಮನಾಥ್, ಪೋರಬಂದರ್ ಮತ್ತು ದೇವಭೂಮಿ ದ್ವಾರಕಾ ಜಿಲ್ಲೆಗಳಲ್ಲಿ ಜೂನ್ 13-15 ರ ಅವಧಿಯಲ್ಲಿ ಭಾರೀ ಮಳೆ ಮತ್ತು ಅತಿ ವೇಗದ ಗಾಳಿ ಇರಬಹುದು. ಇಲ್ಲಿ ಬೀಸುವ ಗಾಳಿಯ ವೇಗೆ ಗಂಟೆಗೆ 150 ಕಿಮೀವರೆಗೆ ಇರುತ್ತದೆ ಎಂದು ಹವಾಮಾನ ಇಲಾಖೆ ಹೇಳಿದೆ.


ಕಚ್ ಜಿಲ್ಲೆಯ ಅಧಿಕಾರಿಗಳು ತಗ್ಗು ಪ್ರದೇಶಗಳಿಂದ ಜನರನ್ನು ತಾತ್ಕಾಲಿಕ ಆಶ್ರಯಕ್ಕೆ ಸ್ಥಳಾಂತರಿಸಲು ಪ್ರಾರಂಭಿಸಿದ್ದಾರೆ. ಯಾವುದೇ ತುರ್ತು ಪರಿಸ್ಥಿತಿಯನ್ನು ಎದುರಿಸಲು ಕರಾವಳಿ ಜಿಲ್ಲೆಗಳ ಸನ್ನದ್ಧತೆಯನ್ನು ಪರಿಶೀಲಿಸಲು ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಭಾನುವಾರ ರಾಜ್ಯ ತುರ್ತು ಕಾರ್ಯಾಚರಣೆ ಕೇಂದ್ರಕ್ಕೆ ಭೇಟಿ ನೀಡಿದ್ದರು.


ಅರಬ್ಬೀ ಸಮುದ್ರದ ಕರಾವಳಿಯಲ್ಲಿರುವ ಗುಜರಾತ್‌ನ ವಲ್ಸಾದ್‌ನಲ್ಲಿರುವ ಜನಪ್ರಿಯ ಪ್ರವಾಸಿ ತಾಣವಾದ ತಿಥಾಲ್ ಬೀಚ್ ನಲ್ಲಿ ಅಲೆಗಳ ಉಬ್ಬರ ಕಂಡಿದ್ದು, ಇಲ್ಲಿ ಪ್ರವಾಸಿಗರ ಭೇಟಿ ನಿಷೇಧಿಸಲಾಗಿದೆ. ಗುಜರಾತ್, ಕೇರಳ, ಕರ್ನಾಟಕ, ಮಹಾರಾಷ್ಟ್ರ ಮತ್ತು ಲಕ್ಷದ್ವೀಪ ಕರಾವಳಿಯಲ್ಲಿರುವ ಮೀನುಗಾರರು ಸಮುದ್ರಕ್ಕೆ ತೆರಳದಂತೆ ಐಎಂಡಿ ಸೂಚಿಸಿದೆ.


ಚಂಡಮಾರುತದ ಬಗ್ಗೆ ನಿಗಾ ಇಡಲು ರಾಜ್ಯ ಸರ್ಕಾರಗಳಿಗೆ ಸೂಚಿಸಲಾಗಿದೆ. ನಿಯಮಿತವಾಗಿ ತಮ್ಮ ಪ್ರದೇಶಗಳಲ್ಲಿನ ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡಿ ಮತ್ತು ಸೂಕ್ತ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವಂತೆ ಜಿಲ್ಲಾ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಐಎಂಡಿ ಹೇಳಿದೆ.

ಅಂತರರಾಷ್ಟ್ರೀಯ ಕಡಲ ಕಾನೂನಿಗೆ ಅನುಸಾರವಾಗಿ, ಮುಂಬರುವ ಪ್ರತಿಕೂಲ ಹವಾಮಾನ ಪರಿಸ್ಥಿತಿಗಳ ಬಗ್ಗೆ ಹಡಗುಗಳನ್ನು ಎಚ್ಚರಿಸಲು ಬಂದರುಗಳು ಸಂಕೇತಗಳನ್ನು ತೋರಿಸಬೇಕಾಗುತ್ತದೆ. ಕಡಲ ಚಟುವಟಿಕೆಗಳ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಮತ್ತು ಹಡಗುಗಳು ಮತ್ತು ಅವರ ಸಿಬ್ಬಂದಿಯನ್ನು ರಕ್ಷಿಸಲು ಇದನ್ನು ಇದನ್ನು ಮಾಡಲಾಗುತ್ತದೆ.

ಬಿಪೋರ್​​ಜಾಯ್ ಚಂಡಮಾರುತದಿಂದಾಗಿ ನಿನ್ನೆ ಸಂಜೆ ಮುಂಬೈನಲ್ಲಿ ವಿಮಾನ ಕಾರ್ಯಾಚರಣೆಗೆ ತೊಂದರೆಯಾಗಿದೆ. ಹವಾಮಾನ ವೈಪರೀತ್ಯ ಕಾರಣದಿಂದ ಹಲವಾರು ವಿಮಾನಗಳು ರದ್ದುಗೊಂಡವು, ಇನ್ನು ಕೆಲವು ವಿಳಂಬಗೊಂಡವು. ಕೆಲವು ವಿಮಾನಗಳ ಲ್ಯಾಂಡಿಂಗ್ ಕೂಡಾ ರದ್ದು ಮಾಡಲಾಗಿತ್ತು.

ಇದನ್ನೂ ಓದಿ:Biparjoy Cyclone: ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಬೀಪರ್ ಜಾಯ್ ಸೈಕ್ಲೋನ್ ಅಬ್ಬರ, ಧರೆಗುರುಳುತ್ತಿರುವ ಮರಗಿಡ ಮತ್ತು ಮನೆಗಳು!

ಸಿಂಧ್ ಮತ್ತು ಬಲೂಚಿಸ್ತಾನದ ಅಧಿಕಾರಿಗಳಿಗೆ ಎಚ್ಚರಿಕೆ ವಹಿಸುವಂತೆ ಪಾಕಿಸ್ತಾನ ಸರ್ಕಾರ ಸೂಚಿಸಿದೆ. ಜೂನ್ 13 ರ ರಾತ್ರಿಯಿಂದ ಸಿಂಧ್ ಮತ್ತು ಮಕ್ರಾನ್ ಕರಾವಳಿಯಲ್ಲಿ ಗುಡುಗು ಸಹಿತ ಮಳೆಯಾಗುವ ನಿರೀಕ್ಷೆಯಿದೆ ಎಂದು ಪಾಕಿಸ್ತಾನದ ಹವಾಮಾನ ಇಲಾಖೆ (PMD) ತಿಳಿಸಿದೆ.

ಚಂಡಮಾರುತಕ್ಕೆ ಬಾಂಗ್ಲಾದೇಶವು ಬಿಪೋರ್​​ಜಾಯ್ ಎಂದು ಹೆಸರಿಟ್ಟಿದೆ ಈ ಹೆಸರಿನ ಅರ್ಥ ಬಂಗಾಳಿ ಭಾಷೆಯಲ್ಲಿ “ವಿಪತ್ತು” . ಐಎಂಡಿವೆಬ್‌ಸೈಟ್‌ನ ಪ್ರಕಾರ, ಈ ಹೆಸರನ್ನು ವಿಶ್ವ ಹವಾಮಾನ ಸಂಸ್ಥೆ (WMO) ದೇಶಗಳು 2020 ರಲ್ಲಿ ಅನುಮೋದಿಸಿದ್ದವು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ