Defence Expo 2022: ಭಾರತೀಯ ಯುವಜನರ ಶಕ್ತಿ, ಕನಸು ಮತ್ತು ಧೈರ್ಯ ಸಾಕಾರಗೊಳಿಸಿದ ಡಿಫೆನ್ಸ್​ ಎಕ್ಸ್​ಪೊ; ನರೇಂದ್ರ ಮೋದಿ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Oct 19, 2022 | 12:10 PM

ಡಿಫೆನ್ಸ್​ ಎಕ್ಸ್​ಪೊ ಮೂಲಕ ಭಾರತದ ಯುವ ಶಕ್ತಿ, ಕನಸು ಮತ್ತು ಧೈರ್ಯವನ್ನು ಜಗತ್ತಿಗೆ ಸಾರಿ ಹೇಳಲಾಗುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದರು.

Defence Expo 2022: ಭಾರತೀಯ ಯುವಜನರ ಶಕ್ತಿ, ಕನಸು ಮತ್ತು ಧೈರ್ಯ ಸಾಕಾರಗೊಳಿಸಿದ ಡಿಫೆನ್ಸ್​ ಎಕ್ಸ್​ಪೊ; ನರೇಂದ್ರ ಮೋದಿ
ಪ್ರಧಾನಿ ನರೇಂದ್ರ ಮೋದಿ
Image Credit source: ANI
Follow us on

ಗಾಂಧಿನಗರ: ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಗುಜರಾತ್​ನ ಡೀಸಾ ನಗರದಲ್ಲಿ ಭಾರತೀಯ ವಾಯುಪಡೆಯ ಹೊಸ ವಾಯುನೆಲೆಗೆ (Deesa IAF Base) ಬುಧವಾರ (ಅ 19) ಶಿಲಾನ್ಯಾಸ ನೆರವೇರಿಸಿದರು. ಇದರ ಜೊತೆಗೆ ರಕ್ಷಣಾ ಉಪಕರಣಗಳ ಪ್ರದರ್ಶನಕ್ಕಾಗಿ ಆಯೋಜಿಸಿರುವ ‘ಡಿಫೆನ್ಸ್​ ಎಕ್ಸ್​ಪೊ 2022’ (Defence Expo 2022) ಕಾರ್ಯಕ್ರಮಕ್ಕೂ ಅವರು ಚಾಲನೆ ನೀಡಿದರು. ಇದು 12ನೇ ಡಿಫೆನ್ಸ್​ ಎಕ್ಸ್​ಪೊ ಕಾರ್ಯಕ್ರಮವಾಗಿದ್ದು ‘ಹೆಮ್ಮೆಯ ಹಾದಿ’ (Path to Pride) ಆಶಯದ ಮೇಲೆ ರೂಪುಗೊಂಡಿದೆ.

ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ‘ಡಿಫೆನ್ಸ್​ ಎಕ್ಸ್​ಪೊ ಮೂಲಕ ಭಾರತದ ಯುವ ಶಕ್ತಿ, ಕನಸು ಮತ್ತು ಧೈರ್ಯವನ್ನು ಜಗತ್ತಿಗೆ ಸಾರಿ ಹೇಳಲಾಗುತ್ತಿದೆ. ಈ ಕಾರ್ಯಕ್ರಮವು ಹೊಸ ಭಾರತದ ಭವ್ಯ ದೃಶ್ಯವನ್ನು ಬಿಂಬಿಸಿದೆ. ಅಮೃತಕಾಲದಲ್ಲಿ ನಾವು ತೆಗೆದುಕೊಂಡಿರುವ ದೃಢ ನಿರ್ಧಾರಗಳ ಪ್ರತೀಕವಾಗಿದೆ ಈ ಕಾರ್ಯಕ್ರಮ. ಇದು ರಾಷ್ಟ್ರದ ಅಭಿವೃದ್ಧಿ, ರಾಜ್ಯಗಳ ಪಸಹಭಾಗಿತ್ವ, ಯುವಶಕ್ತಿ, ಯುವ ಕನಸು, ಯುವಜನರ ಧೈರ್ಯ ಮತ್ತು ಸಾಮರ್ಥ್ಯದ ಪ್ರತೀಕವಾಗಿದೆ’ ಎಂದು ಹೇಳಿದರು.

‘ಇದು ಹೊಸ ಆರಂಭದ ಪ್ರತೀಕ. ಈ ಹಿಂದೆಯೂ ನಮ್ಮ ದೇಶದಲ್ಲಿ ಹಲವು ಡಿಫೆನ್ಸ್​ ಎಕ್ಸ್​ಪೊ ಪ್ರದರ್ಶನಗಳು ನಡೆದಿದ್ದವು. ಆದರೆ ಈ ಬಾರಿಯ ಕಾರ್ಯಕ್ರಮ ಅಭೂತಪೂರ್ವವಾದುದು. ಈ ಬಾರಿಯ ಡಿಫೆನ್ಸ್​ ಎಕ್ಸ್​ಪೊದಲ್ಲಿ ಕೇವಲ ಭಾರತದ ಕಂಪನಿಗಳು ಪಾಲ್ಗೊಳ್ಳುತ್ತಿವೆ, ಭಾರತದಲ್ಲಿ ತಯಾರಾದ ಯುದ್ಧೋಪಕರಣಗಳನ್ನು ಮಾತ್ರ ಪ್ರದರ್ಶಿಸಲಾಗುತ್ತಿದೆ’ ಎಂದು ಮೋದಿ ಹೆಮ್ಮೆ ವ್ಯಕ್ತಪಡಿಸಿದರು.

‘ಭಾರತದೊಂದಿಗೆ ಕೈಜೋಡಿಸಿರುವ ಆಫ್ರಿಕಾ ದೇಶಗಳನ್ನು ಅಭಿನಂದಿಸುತ್ತೇನೆ. ಭಾರತವು ತನ್ನ ಭವಿಷ್ಯದ ಮಾರ್ಗ ಹೀಗಿರಲಿದೆ ಎಂದು ಸಾರಿ ಹೇಳಿದಾಗ ಭಾರತದ ಮಿತ್ರರಾಷ್ಟ್ರಗಳಾಗಿರುವ 53 ಆಫ್ರಿಕಾ ದೇಶಗಳು ಹೆಗಲಿಗೆ ಹೆಗಲು ಕೊಟ್ಟು ನಿಂತವು. ಈ ಎಲ್ಲ ದೇಶಗಳಿಗೂ ನಾನು ಅಭಾರಿ’ ಎಂದು ನುಡಿದರು.

&

ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ‘ಎಚ್​ಟಿಟಿ-40’ ತರಬೇತಿ ವಿಮಾನವನ್ನು ಅನಾವರಣಗೊಳಿಸಿದರು. ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್​ಎಎಲ್) ರೂಪಿಸಿರುವ ಈ ಯುದ್ಧವಿಮಾನವು ಪೈಲಟ್ ಸ್ನೇಹಿ ವ್ಯವಸ್ಥೆಗಳೊಂದಿಗೆ ಎಲ್ಲ ಬಗೆಯ ಅತ್ಯಾಧುನಿಕ ತಂತ್ರಜ್ಞಾನದ ತರಬೇತಿ ನೀಡಲು ಸಹಕಾರಿಯಾಗಲಿದೆ ಎಂದು ಪ್ರಧಾನಿ ಕಚೇರಿಯು ತಿಳಿಸಿದೆ. ಭಾರತ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿರುವ ‘ಮಿಷನ್ ಡಿಫ್​ಸ್ಪೇಸ್​’ಗೂ ಇದೇ ಸಂದರ್ಭದಲ್ಲಿ ಮೋದಿ ಚಾಲನೆ ನೀಡಿದರು. ಭಾರತೀಯ ರಕ್ಷಣಾ ಪಡೆಗಳ ಅಂತರಿಕ್ಷಕ್ಕೆ ಸಂಬಂಧಿಸಿದ ಅಗತ್ಯಗಳನ್ನು ಈ ಸಂಸ್ಥೆಯು ಪೂರೈಸುತ್ತದೆ.