ಅಯೋಧ್ಯೆ: ಮಹರ್ಷಿ ವಾಲ್ಮೀಕಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಉದ್ಘಾಟಿಸಿದ ಪ್ರಧಾನಿ ನರೇಂದ್ರ ಮೋದಿ

|

Updated on: Dec 30, 2023 | 2:03 PM

Ayodhya Airport: ಅಯೋಧ್ಯೆಯಲ್ಲಿನೂತನವಾಗಿ ನಿರ್ಮಿಸಿರುವ 'ಮಹರ್ಷಿ ವಾಲ್ಮೀಕಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಅಯೋಧ್ಯಧಾಮ' ಎಂದು ಹೆಸರಿಸಲಾದ ವಿಮಾನ ನಿಲ್ದಾಣವನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದ್ದಾರೆ. ಪ್ರಸ್ತುತ ವಿಮಾನ ನಿಲ್ದಾಣದಿಂದ ಇಂಡಿಗೋ ಮತ್ತು ಏರ್ ಇಂಡಿಯಾ ಎಕ್ಸ್‌ಪ್ರೆಸ್ ಇಂದು ಹಾರಾಟ ನಡೆಸಲಿದೆ.

ಅಯೋಧ್ಯೆ: ಮಹರ್ಷಿ ವಾಲ್ಮೀಕಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಉದ್ಘಾಟಿಸಿದ ಪ್ರಧಾನಿ ನರೇಂದ್ರ ಮೋದಿ
ನರೇಂದ್ರ ಮೋದಿ
Follow us on

ಅಯೋಧ್ಯೆ ಡಿಸೆಂಬರ್ 30: ಪ್ರಧಾನಿ ನರೇಂದ್ರ ಮೋದಿ (Narendra Modi) ಇಂದು (ಶನಿವಾರ) ಅಯೋಧ್ಯೆಯಲ್ಲಿ (Ayodhya) ನೂತನವಾಗಿ ನಿರ್ಮಿಸಿರುವ ‘ಮಹರ್ಷಿ ವಾಲ್ಮೀಕಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಅಯೋಧ್ಯಧಾಮ’ (Maharishi Valmiki International Airport Ayodhya Dham) ಎಂದು ಹೆಸರಿಡಲಾದ ವಿಮಾನ ನಿಲ್ದಾಣ ಉದ್ಘಾಟಿಸಿದ್ದಾರೆ. ಅಯೋಧ್ಯೆ ವಿಮಾನ ನಿಲ್ದಾಣವು ಇಂದಿನಿಂದ (ಡಿಸೆಂಬರ್ 30)ದ ಕಾರ್ಯನಿರ್ವಹಿಸಲು ಸಿದ್ಧವಾಗಿದೆ. ವಿಮಾನ ನಿಲ್ದಾಣದ ಮೊದಲ ಹಂತದ ನಿರ್ಮಾಣಕ್ಕೆ ಅಂದಾಜು 1,450 ಕೋಟಿ ರೂ. ಖರ್ಚಾಗಿದೆ.

ಸರ್ಕಾರದ ಪ್ರಕಟಣೆ ಪ್ರಕಾರ, ವಿಮಾನ ನಿಲ್ದಾಣವು 2200 ಮೀಟರ್ ಉದ್ದದ ರನ್ ವೇ ಹೊಂದಿದೆ ಮತ್ತು A-321 ಮಾದರಿಯ ವಿಮಾನಗಳಿಗೆ ಸೂಕ್ತವಾಗಿದೆ. ಎರಡು ಲಿಂಕ್ ಟ್ಯಾಕ್ಸಿವೇಗಳು ಮತ್ತು ಗ್ರೌಂಡ್ ಸಪೋರ್ಟ್ ಎಕ್ವಿಪ್ಮೆಂಟ್ ಏರಿಯಾ ಜೊತೆಗೆ ಎಂಟು A321 ಗಳನ್ನು ಪಾರ್ಕಿಂಗ್ ಮಾಡಲು ಸೂಕ್ತವಾದ ಏಪ್ರನ್ ಅನ್ನು ಸಹ ನಿರ್ಮಿಸಲಾಗಿದೆ.


6,500 ಚದರ ಮೀಟರ್‌ಗಳಷ್ಟು ವಿಸ್ತಾರವಾಗಿರುವ ಹೊಸ ಟರ್ಮಿನಲ್ ಕಟ್ಟಡವು 600 ಪೀಕ್-ಅವರ್ ಪ್ರಯಾಣಿಕರಿಗೆ ಅವಕಾಶ ಕಲ್ಪಿಸಲು ವಿನ್ಯಾಸಗೊಳಿಸಲಾಗಿದ್ದು, ವಾರ್ಷಿಕ 10 ಲಕ್ಷ ಪ್ರಯಾಣಿಕರನ್ನು ನಿರ್ವಹಿಸುವ ಸಾಮರ್ಥ್ಯ ಹೊಂದಿದೆ. ಹಂತ 2 ರ ಅಡಿಯಲ್ಲಿ, 50,000 ಚದರ ಮೀಟರ್‌ನ ಹೊಸ ಟರ್ಮಿನಲ್ ಕಟ್ಟಡವನ್ನು ಅಭಿವೃದ್ಧಿಪಡಿಸಲು ಯೋಜಿಸಲಾಗಿದೆ, ಇದು ಪೀಕ್ ಸಮಯದಲ್ಲಿ 4,000 ಪ್ರಯಾಣಿಕರಿಗೆ ಮತ್ತು ವಾರ್ಷಿಕವಾಗಿ 60 ಲಕ್ಷ ಪ್ರಯಾಣಿಕರಿಗೆ ಸೇವೆ ಸಲ್ಲಿಸಲು ಸಾಧ್ಯವಾಗುತ್ತದೆ.

ಅಯೋಧ್ಯೆಗೆ ಕಾರ್ಯಾಚರಣೆ ನಡೆಸಲಿರುವ ವಿಮಾನಗಳ ವಿವರಗಳು

ಇಂಡಿಗೋ ಮತ್ತು ಏರ್ ಇಂಡಿಯಾ ಎಕ್ಸ್‌ಪ್ರೆಸ್  ವಿಮಾನ ನಿಲ್ದಾಣಕ್ಕೆ ಉದ್ಘಾಟನಾ ವಿಮಾನಗಳನ್ನು ನಿರ್ವಹಿಸುತ್ತವೆ. ಇಂಡಿಗೋ ಜನವರಿ 15 ರಿಂದ ಮುಂಬೈ ಮತ್ತು ಅಯೋಧ್ಯೆ ನಡುವೆ ದೈನಂದಿನ ವಿಮಾನ ಸಂಚಾರ ನಡೆಸಲಿದೆ.

ಮುಂಬೈನಿಂದ ವಿಮಾನವು ಮಧ್ಯಾಹ್ನ 12:30 ಕ್ಕೆ ಹೊರಟು ಮಧ್ಯಾಹ್ನ 2:45 ಕ್ಕೆ ಅಯೋಧ್ಯೆಯನ್ನು ತಲುಪುತ್ತದೆ. ನಂತರ ಅಯೋಧ್ಯೆಯಿಂದ ವಿಮಾನವು 3:15 ಕ್ಕೆ ಹೊರಟು ಸಂಜೆ 5:40 ಕ್ಕೆ ಮುಂಬೈಗೆ ಇಳಿಯಲಿದೆ ಎಂದು ಇಂಡಿಗೋ ವೇಳಾಪಟ್ಟಿ ಹಂಚಿಕೊಂಡಿದೆ. ಏರ್ ಇಂಡಿಯಾ ಎಕ್ಸ್‌ಪ್ರೆಸ್ ಡಿಸೆಂಬರ್ 30 ರಂದು ಅಯೋಧ್ಯೆ ಮತ್ತು ದೆಹಲಿ ನಡುವೆ ತನ್ನ ಉದ್ಘಾಟನಾ ವಿಮಾನಗಳನ್ನು ನಿರ್ವಹಿಸುತ್ತದೆ. ಇದರ ನಂತರ, ವಿಮಾನಯಾನವು ಜನವರಿ 17 ರಿಂದ ಎರಡು ಪ್ರಮುಖ ಮೆಟ್ರೋಗಳಾದ ಬೆಂಗಳೂರು ಮತ್ತು ಕೋಲ್ಕತ್ತಾದಿಂದ ಅಯೋಧ್ಯೆಗೆ ನೇರ ವಿಮಾನಯಾನವನ್ನು ಪ್ರಾರಂಭಿಸುತ್ತದೆ.

ಇದನ್ನೂ ಓದಿ: ಮಂಗಳೂರು-ಮಡಗಾವ್‌ ಹಾಗೂ ಕೊಯಮತ್ತೂರು-ಬೆಂಗಳೂರು ವಂದೇ ಭಾರತ್​ ರೈಲಿಗೆ ಚಾಲನೆ ಕೊಟ್ಟ ಪ್ರಧಾನಿ ಮೋದಿ

ಬೆಂಗಳೂರಿನ ಪ್ರಯಾಣಿಕರಿಗೆ ಮೊದಲ ವಿಮಾನವು ಜನವರಿ 17 ರಂದು ಬೆಳಿಗ್ಗೆ 8.05 ಕ್ಕೆ ಹೊರಡಲಿದ್ದು, 10.35 ಕ್ಕೆ ಅಯೋಧ್ಯೆಯನ್ನು ತಲುಪಲಿದೆ. ಹಿಂದಿರುಗುವ ವಿಮಾನವು ಮಧ್ಯಾಹ್ನ 3.40 ಕ್ಕೆ ಅಯೋಧ್ಯೆಯಿಂದ ಹೊರಟು ಸಂಜೆ 6.10 ಕ್ಕೆ ಬೆಂಗಳೂರು ತಲುಪಲಿದೆ. ಕೋಲ್ಕತ್ತಾದಿಂದ ವಿಮಾನವು ಅಯೋಧ್ಯೆಯಿಂದ ಬೆಳಿಗ್ಗೆ 11.05 ಕ್ಕೆ ಟೇಕ್ ಆಫ್ ಆಗಲಿದ್ದು, ಮಧ್ಯಾಹ್ನ 12.50 ಕ್ಕೆ ಕೋಲ್ಕತ್ತಾದಲ್ಲಿ ಇಳಿಯಲಿದೆ. ಕೋಲ್ಕತ್ತಾ-ಅಯೋಧ್ಯೆ ವಿಮಾನವು ಕೋಲ್ಕತ್ತಾದಿಂದ ಮಧ್ಯಾಹ್ನ 1:25 ಕ್ಕೆ ಹೊರಡಲಿದ್ದು, ಮಧ್ಯಾಹ್ನ 3.10 ಕ್ಕೆ ಅಯೋಧ್ಯೆಯನ್ನು ತಲುಪಲಿದೆ.

ಬುಕಿಂಗ್‌ಗಳು ಏರ್‌ಲೈನ್‌ನ ಮೊಬೈಲ್ ಅಪ್ಲಿಕೇಶನ್ ಮತ್ತು ವೆಬ್‌ಸೈಟ್ airindiaexpress.com ಮತ್ತು ಇತರ ಪ್ರಮುಖ ಬುಕಿಂಗ್ ಪ್ಲಾಟ್‌ಫಾರ್ಮ್‌ಗಳ ಮೂಲಕ ಲಭ್ಯವಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 1:59 pm, Sat, 30 December 23