AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಫ್ರಾನ್ಸ್‌ನಿಂದ ಹಿಂದಿರುಗಿದ ಗುಜರಾತಿನ 20 ಪ್ರಯಾಣಿಕರ ವಿಚಾರಣೆ

ನಾವು ವಿಚಾರಣೆಗೊಳಪಡಿಸಿದ್ದರೂ ಯಾರೂ ಸತ್ಯವನ್ನು ಬಹಿರಂಗಪಡಿಸುತ್ತಿಲ್ಲ. ಅವರು ಪ್ರವಾಸಿಗರಾಗಿ ಅಲ್ಲಿಗೆ ಹೋಗಿದ್ದಾರೆಂದು ಅವರು ಹೇಳುತ್ತಾರೆ. ನಾವು ಎಲ್ಲಾ ಕೋನಗಳಿಂದ ಪ್ರಕರಣವನ್ನು ತನಿಖೆ ಮಾಡುತ್ತಿದ್ದೇವೆ ಎಂದು ಅವರು ಹೇಳಿದರು. ಮಂಗಳವಾರ, ಸಿಐಡಿ (ಅಪರಾಧ) ಪೊಲೀಸ್ ಅಧೀಕ್ಷಕ ಸಂಜಯ್ ಖಾರತ್ ಅವರು ಈ ವಿಷಯದ ತನಿಖೆಗಾಗಿ ಸಿಐಡಿ ನಾಲ್ಕು ತಂಡಗಳನ್ನು ರಚಿಸಿರುವುದಾಗಿ ಹೇಳಿದ್ದಾರೆ.

ಫ್ರಾನ್ಸ್‌ನಿಂದ ಹಿಂದಿರುಗಿದ ಗುಜರಾತಿನ 20 ಪ್ರಯಾಣಿಕರ ವಿಚಾರಣೆ
ವಿಮಾನದಲ್ಲಿದ್ದ ಪ್ರಯಾಣಿಕರು
ರಶ್ಮಿ ಕಲ್ಲಕಟ್ಟ
|

Updated on: Dec 30, 2023 | 12:48 PM

Share

ಅಹಮದಾಬಾದ್ ಡಿಸೆಂಬರ್ 30: ಫ್ರಾನ್ಸ್‌ನಿಂದ (France) ಮಧ್ಯಮಾರ್ಗದಲ್ಲಿ ವಾಪಸ್ ಕಳುಹಿಸಲಾಗಿದ್ದ ನಿಕರಾಗುವಾ(Nicaragua) ವಿಮಾನದಲ್ಲಿದ್ದ ಗುಜರಾತ್‌ನ (Gujarat) ಕನಿಷ್ಠ 20 ಪ್ರಯಾಣಿಕರನ್ನು ರಾಜ್ಯದಿಂದ ಕಾರ್ಯಾಚರಣೆ ನಡೆಸುತ್ತಿರುವ ಶಂಕಿತ ಅಕ್ರಮ ವಲಸೆ ಜಾಲವನ್ನು ಪತ್ತೆಹಚ್ಚುವ ಪ್ರಯತ್ನದಲ್ಲಿ ಪೊಲೀಸರು ವಿಚಾರಣೆ ನಡೆಸಿದ್ದಾರೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 276 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಏರ್‌ಬಸ್ A340 ವಿಮಾನವು ನಿಕರಾಗುವಾಗೆ ತೆರಳುತ್ತಿದ್ದು, ಮಾನವ ಕಳ್ಳಸಾಗಣೆ ಶಂಕೆಯಿಂದಾಗಿ ನಾಲ್ಕು ದಿನಗಳ ಕಾಲ ಫ್ರಾನ್ಸ್‌ನಲ್ಲಿ ವಶದಲ್ಲಿರಿಸಲಾಗಿತ್ತು. ಈ ವಿಮಾನ ಡಿಸೆಂಬರ್ 26ರಂದು ಬೆಳಗ್ಗೆ ಮುಂಬೈಗೆ ವಾಪಸ್ ಆಗಿತ್ತು.

ಆ ಪ್ರಯಾಣಿಕರಲ್ಲಿ ಗುಜರಾತ್‌ನಿಂದ ಕನಿಷ್ಠ 60 ಮಂದಿ ಸೇರಿದ್ದಾರೆ, ಅವರು ಈಗಾಗಲೇ ತಮ್ಮ ಊರು ಸೇರಿದ್ದಾರೆ. ಲ್ಯಾಟಿನ್ ಅಮೆರಿಕ ತಲುಪಿದ ನಂತರ ಅವರು ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾಕ್ಕೆ ಅಕ್ರಮವಾಗಿ ದಾಟಲು ಯಾವುದೇ ಯೋಜನೆಯನ್ನು ಹೊಂದಿದ್ದೀರಾ ಎಂದು ಕಂಡುಹಿಡಿಯಲು ಇಲಾಖೆಯಿಂದ ಅವರನ್ನು ವಿಚಾರಣೆ ನಡೆಸಲಾಗುತ್ತಿದೆ ಎಂದು ಅಪರಾಧ ತನಿಖಾ ಇಲಾಖೆಯ (ಸಿಐಡಿ) ಹಿರಿಯ ಅಧಿಕಾರಿ ಹೇಳಿರುವುದಾಗಿ ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.

ಅವರನ್ನು ಫ್ರಾನ್ಸ್‌ನಿಂದ ವಾಪಸ್ ಕಳುಹಿಸಲಾಗಿದೆ. ಅವರು ನಿಕರಾಗುವಾದಲ್ಲಿ ಬಂದಿಳಿದ ನಂತರ ಅಕ್ರಮವಾಗಿ ಯುಎಸ್‌ಗೆ ಪ್ರವೇಶಿಸಲು ಯೋಜಿಸಿದ್ದರು ಎಂಬ ವದಂತಿ ಇತ್ತು. ಆದಾಗ್ಯೂ, ಅವರು ಪ್ರವಾಸಿಗರಾಗಿ ಅಲ್ಲಿಗೆ ಹೋಗುತ್ತಿದ್ದಾರೆ ಎಂದು ಅವರು ನಮಗೆ ತಿಳಿಸಿದ್ದಾರೆ. ಅವರ ಪ್ರವಾಸದ ಹಿಂದಿರುವ ಏಜೆಂಟ್ ಯಾರು ಎಂಬುದನ್ನು ಕಂಡುಹಿಡಿಯಲು ನಾವು ವಿವರಗಳನ್ನು ಪಡೆಯುತ್ತಿದ್ದೇವೆಎಂದು ಸಿಐಡಿ ಅಪರಾಧ ಮತ್ತು ರೈಲ್ವೆಯ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಎಸ್‌ಪಿ ರಾಜ್‌ಕುಮಾರ್ ಹೇಳಿದ್ದಾರೆ.

ಹಿಂದಿರುಗಿದ 60 ಮಂದಿಯಲ್ಲಿ, ಸುಮಾರು 20 ಮಂದಿಯನ್ನು ಈಗಾಗಲೇ ಏಜೆನ್ಸಿ ವಿಚಾರಣೆಗೊಳಪಡಿಸಿದೆ.

ಅವರು ಮಧ್ಯ ಅಮೆರಿಕಕ್ಕೆ ಹೋಗಲು ಅಸಲಿ ಅಥವಾ ನಕಲಿ ದಾಖಲೆಗಳನ್ನು ಬಳಸಿದ್ದಾರೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ನಾವು ಅವರ ದಾಖಲೆಗಳನ್ನು ಪರಿಶೀಲಿಸುತ್ತಿದ್ದೇವೆ. ನಾವು ಅವರ ಹಣಕಾಸಿನ ವಹಿವಾಟುಗಳನ್ನು ಸಹ ಪರಿಶೀಲಿಸುತ್ತೇವೆ. ಏಕೆಂದರೆ, ಅವರು ಸಾಮಾನ್ಯ ಪ್ರವಾಸಿಗರಾಗಿ ಹೋಗುತ್ತಿದ್ದರೆ ಯಾರೊಂದಿಗೂ ಹೆಚ್ಚಿನ ಹಣವನ್ನು ಪಾವತಿಸಬಾರದದು ಎಂದು ಹಿರಿಯ ಐಪಿಎಸ್ ಅಧಿಕಾರಿ ಹೇಳಿದ್ದಾರೆ.

ನಾವು ವಿಚಾರಣೆಗೊಳಪಡಿಸಿದ್ದರೂ ಯಾರೂ ಸತ್ಯವನ್ನು ಬಹಿರಂಗಪಡಿಸುತ್ತಿಲ್ಲ. ಅವರು ಪ್ರವಾಸಿಗರಾಗಿ ಅಲ್ಲಿಗೆ ಹೋಗಿದ್ದಾರೆಂದು ಅವರು ಹೇಳುತ್ತಾರೆ. ನಾವು ಎಲ್ಲಾ ಕೋನಗಳಿಂದ ಪ್ರಕರಣವನ್ನು ತನಿಖೆ ಮಾಡುತ್ತಿದ್ದೇವೆ ಎಂದು ಅವರು ಹೇಳಿದರು. ಮಂಗಳವಾರ, ಸಿಐಡಿ (ಅಪರಾಧ) ಪೊಲೀಸ್ ಅಧೀಕ್ಷಕ ಸಂಜಯ್ ಖಾರತ್ ಅವರು ಈ ವಿಷಯದ ತನಿಖೆಗಾಗಿ ಸಿಐಡಿ ನಾಲ್ಕು ತಂಡಗಳನ್ನು ರಚಿಸಿದ್ದಾರೆ ಎಂದು ಹೇಳಿದರು.

ಇದನ್ನೂ ಓದಿ:ಮುಂಬೈಗೆ ಬಂದಿಳಿದ ಫ್ರಾನ್ಸ್​ ವಶದಲ್ಲಿದ್ದ ಭಾರತೀಯ ಪ್ರಯಾಣಿಕರಿದ್ದ ವಿಮಾನ 

ಅಮೆರಿಕ ಮತ್ತು ಇತರ ದೇಶಗಳಿಗೆ (ಕಾನೂನುಬಾಹಿರವಾಗಿ) ಪ್ರವೇಶಿಸಲು ಈ ಜನರಿಗೆ ಸಹಾಯ ಮಾಡುವ ಭರವಸೆ ನೀಡಿದ ಏಜೆಂಟರ ವಿರುದ್ಧ ಕ್ರಮ ತೆಗೆದುಕೊಳ್ಳಲು ಸಿಐಡಿ (ಅಪರಾಧ) ಬಯಸಿದೆ ಎಂದು ಖಾರತ್ ಹೇಳಿದ್ದಾರೆ. ರೊಮೇನಿಯನ್ ಚಾರ್ಟರ್ ಕಂಪನಿ ಲೆಜೆಂಡ್ ಏರ್‌ಲೈನ್ಸ್ ನಿರ್ವಹಿಸುತ್ತಿದ್ದ ಮತ್ತು ನಿಕರಾಗುವಾಗೆ ಹೊರಟಿದ್ದ ಚಾರ್ಟರ್ಡ್ ಫ್ಲೈಟ್, ಫ್ರೆಂಚ್ ಪೋಲೀಸ್ ಮಧ್ಯಪ್ರವೇಶಿಸಿದಾಗ ದುಬೈನಿಂದ ಮಾರ್ಗದಲ್ಲಿ ತಾಂತ್ರಿಕ ನಿಲುಗಡೆಗಾಗಿ ಡಿಸೆಂಬರ್ 21 ರಂದು ಪ್ಯಾರಿಸ್ ಬಳಿಯ ವ್ಯಾಟ್ರಿಯಲ್ಲಿ ಇಳಿಯಿತು.ಅಲ್ಲಿ ಫ್ರೆಂಚ್ ಅಧಿಕಾರಿಗಳು ನ್ಯಾಯಾಂಗ ತನಿಖೆ ನಡೆಸಿದ್ದರು.

ಅಮೆರಿಕದಲ್ಲಿ ಆಶ್ರಯ ಪಡೆಯುವವರಿಗೆ ನಿಕರಾಗುವಾ ಜನಪ್ರಿಯ ತಾಣವಾಗಿದೆ. ಯುಎಸ್ ಕಸ್ಟಮ್ಸ್ ಮತ್ತು ಬಾರ್ಡರ್ ಪೆಟ್ರೋಲ್ (CBP) ಯಿಂದ ಲಭ್ಯವಾದ ಮಾಹಿತಿಯ ಪ್ರಕಾರ 2023 ಹಣಕಾಸು ವರ್ಷದಲ್ಲಿ 96,917 ಭಾರತೀಯರು ಅಕ್ರಮವಾಗಿ ಯುಎಸ್ ಪ್ರವೇಶಿಸಲು ಪ್ರಯತ್ನಿಸಿದ್ದಾರೆ, ಇದು ಹಿಂದಿನ ವರ್ಷಕ್ಕಿಂತ 51.61 ರಷ್ಟು ಹೆಚ್ಚು. ಕನಿಷ್ಠ 41,770 ಭಾರತೀಯರು ಮೆಕ್ಸಿಕನ್ ಭೂ ಗಡಿಯ ಮೂಲಕ ಯುಎಸ್ ಪ್ರವೇಶಿಸಲು ಪ್ರಯತ್ನಿಸಿದ್ದಾರೆ ಎಂದು CBP ಡೇಟಾ ತೋರಿಸುತ್ತದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?