ಮುಂಬೈಗೆ ಬಂದಿಳಿದ ಫ್ರಾನ್ಸ್ ವಶದಲ್ಲಿದ್ದ ಭಾರತೀಯ ಪ್ರಯಾಣಿಕರಿದ್ದ ವಿಮಾನ
ಮಾನವ ಕಳ್ಳಸಾಗಣೆ (Human trafficking) ಆರೋಪದ ಮೇಲೆ ಪ್ಯಾರಿಸ್ (Paris) ವಶದಲ್ಲಿದ್ದ ಸುಮಾರು 270 ಭಾರತೀಯ ಪ್ರಯಾಣಿಕರೊಂದಿಗೆ ಬಂಧನಕ್ಕೊಳಗಾಗಿದ್ದ ವಿಮಾನ ಮುಂಬೈಗೆ ಬಂದಿಳಿದಿದೆ. ಮಾನವ ಕಳ್ಳಸಾಗಣೆ ಶಂಕೆಯ ಮೇರೆಗೆ ಪ್ಯಾರಿಸ್ ಸಮೀಪದ ವತ್ರಿ ವಿಮಾನ ನಿಲ್ದಾಣದಲ್ಲಿ ನಾಲ್ಕು ದಿನಗಳ ಕಾಲ ನಿಲ್ಲಿಸಲಾಗಿದ್ದ ವಿಮಾನ ಕೊನೆಗೂ ಮಂಗಳವಾರ ಮುಂಜಾನೆ ಮುಂಬೈ ತಲುಪಿದೆ.

ಈ ಮೊದಲು ಈ ವಿಮಾನವು ಸೋಮವಾರ ಮಧ್ಯಾಹ್ನ 2:20 ಕ್ಕೆ ಮುಂಬೈ ತಲುಪಬೇಕಾಗಿತ್ತು, ಆದರೆ ಅದು ತಡವಾಯಿತು. ವಿಮಾನದಲ್ಲಿದ್ದ 50 ಪ್ರಯಾಣಿಕರು ಫ್ರಾನ್ಸ್‌ನಲ್ಲಿ ಆಶ್ರಯಕ್ಕಾಗಿ ಅರ್ಜಿ ಸಲ್ಲಿಸಿದ ಕಾರಣ ಹಿಂತಿರುಗಲು ಬಯಸುವುದಿಲ್ಲ ಎಂದು ಹೇಳಲಾಗಿದೆ. ನಂತರ ಕೆಲವು ಪ್ರಯಾಣಿಕರನ್ನು ಬಿಟ್ಟು ವಿಮಾನ ಮುಂಬೈಗೆ ಹೊರಟಿತು. ಆದರೆ, ವಿಮಾನದಲ್ಲಿ ಎಷ್ಟು ಪ್ರಯಾಣಿಕರಿದ್ದಾರೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.
ರೊಮೇನಿಯಾದ ಲೆಜೆಂಡ್ ಏರ್‌ಲೈನ್ಸ್‌ನ ಈ ವಿಮಾನವು 303 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿತ್ತು, ಅವರಲ್ಲಿ ಹೆಚ್ಚಿನವರು ಭಾರತೀಯರು. ವಿಮಾನವು ದುಬೈನಿಂದ ನಿಕರಾಗುವಾಗೆ ಹೊರಟು ತೈಲ ತುಂಬಲು ಫ್ರಾನ್ಸ್‌ನ ವತ್ರಿ ವಿಮಾನ ನಿಲ್ದಾಣದಲ್ಲಿ ಗುರುವಾರ ಬಂದಿಳಿದಿತ್ತು. ಈ ಸಮಯದಲ್ಲಿ, ಮಾನವ ಕಳ್ಳಸಾಗಣೆಯ ಬಲಿಪಶುಗಳನ್ನು ಅದರಲ್ಲಿ ಸಾಗಿಸಲಾಗುತ್ತಿದೆ ಎಂಬ ಮಾಹಿತಿಯನ್ನು ಫ್ರೆಂಚ್ ಅಧಿಕಾರಿಗಳಿಗೆ ಬಂದಿತ್ತು.
ಮಂಗಳವಾರ ಬೆಳಗ್ಗೆ ಭಾರತಕ್ಕೆ ತಲುಪಲಿದೆ ಫ್ರಾನ್ಸ್ ವಶದಲ್ಲಿದ್ದ ಭಾರತೀಯ ಪ್ರಯಾಣಿಕರ ವಿಮಾನ
ಆದ್ದರಿಂದ ವಿಮಾನವನ್ನು ಟೇಕ್ ಆಫ್ ಮಾಡುವುದನ್ನು ತಡೆಹಿಡಿಯಲಾಯಿತು. ವಿಚಾರಣೆ ನಡೆಸಿದ ಬಳಿಕ ಫ್ರೆಂಚ್ ಅಧಿಕಾರಿಗಳು ಈ A340 ವಿಮಾನಕ್ಕೆ ಪ್ರಯಾಣವನ್ನು ಪುನರಾರಂಭಿಸಲು ಅನುಮತಿ ನೀಡಿದರು.
ಕೆಲವು ಪ್ರಯಾಣಿಕರು ಮಧ್ಯ ಅಮೆರಿಕದ ನಿಕರಾಗುವಾಗೆ ತಮ್ಮ ಪ್ರಯಾಣವನ್ನು ಮುಂದುವರಿಸಲು ಬಯಸಿದ್ದಾರೆ ಎಂದು ಫ್ರೆಂಚ್ ಮಾಧ್ಯಮವು ಸೋಮವಾರ ವರದಿ ಮಾಡಿದೆ.
ವಿಮಾನ ನಿಲ್ದಾಣದಲ್ಲಿಯೇ ಎಲ್ಲಾ ಜನರಿಗೆ ಊಟ ಮತ್ತು ವಸತಿ ವ್ಯವಸ್ಥೆಯನ್ನು ಮಾಡಿತ್ತು. ಮಕ್ಕಳ ಶಿಕ್ಷಣಕ್ಕಾಗಿ ಶಿಕ್ಷಕರನ್ನು ನೇಮಿಸಲಾಗಿತ್ತು. ವಿಮಾನವನ್ನು ನಿರ್ವಹಿಸುವ ಖಾಸಗಿ ಜೆಟ್‌ನ ಸಿಬ್ಬಂದಿ ಸದಸ್ಯರನ್ನು ಫ್ರಾನ್ಸ್ ಕೂಡ ವಿಚಾರಣೆ ನಡೆಸಿತ್ತು. ಇದಾದ ಬಳಿಕ ಅವರನ್ನು ಬಿಡುಗಡೆಗೊಳಿಸಲಾಯಿತು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ