Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಂಗಳವಾರ ಬೆಳಗ್ಗೆ ಭಾರತಕ್ಕೆ ತಲುಪಲಿದೆ ಫ್ರಾನ್ಸ್ ವಶದಲ್ಲಿದ್ದ ಭಾರತೀಯ ಪ್ರಯಾಣಿಕರ ವಿಮಾನ

ಭಾರತೀಯ ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಏರ್‌ಬಸ್ A340 ನಿಕರಾಗುವಾಗೆ ಹೋಗುತ್ತಿದ್ದಾಗ ವ್ಯಾಟ್ರಿ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಯಿತು ಎಂದು ಸುದ್ದಿ ಸಂಸ್ಥೆ ಎಎಫ್​​ಬಿ ವರದಿ ಮಾಡಿದೆ. ಮಾನವ ಕಳ್ಳಸಾಗಣೆಯ ಸಂಭಾವ್ಯ ಸಂತ್ರಸ್ತರನ್ನು ಹೊತ್ತೊಯ್ಯುತ್ತಿದೆ ಎಂಬ ಅನಾಮಧೇಯ ಸುಳಿವು ನಂತರ ವಿಮಾನವನ್ನು ಕೆಳಗಿಳಿಸಲಾಗಿತ್ತು

ಮಂಗಳವಾರ ಬೆಳಗ್ಗೆ ಭಾರತಕ್ಕೆ ತಲುಪಲಿದೆ ಫ್ರಾನ್ಸ್ ವಶದಲ್ಲಿದ್ದ ಭಾರತೀಯ ಪ್ರಯಾಣಿಕರ ವಿಮಾನ
ಪ್ರಾತಿನಿಧಿಕ ಚಿತ್ರ
Follow us
ರಶ್ಮಿ ಕಲ್ಲಕಟ್ಟ
|

Updated on:Dec 25, 2023 | 9:44 PM

ದೆಹಲಿ ಡಿಸೆಂಬರ್ 25: ಮಾನವ ಕಳ್ಳಸಾಗಣೆ (human trafficking) ಆರೋಪದ ಮೇಲೆ ಪ್ಯಾರಿಸ್ (Paris) ವಶದಲ್ಲಿದ್ದ  ಸುಮಾರು 300 ಭಾರತೀಯ ಪ್ರಯಾಣಿಕರೊಂದಿಗೆ ಬಂಧನಕ್ಕೊಳಗಾದ ವಿಮಾನವನ್ನು ಫ್ರೆಂಚ್ ಪೊಲೀಸರು ಹೊರಡಲು ಅನುಮತಿ ನೀಡಿದ್ದಾರೆ. ಭಾರತೀಯ ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ದುಬೈನಿಂದ ಹೊರಟ ಏರ್‌ಬಸ್ A340 ನಿಕರಾಗುವಾಗೆ(Nicaragua) ಹೋಗುತ್ತಿದ್ದಾಗ  ಇಂಧನ ತುಂಬಿಸಲು  ವ್ಯಾಟ್ರಿ ವಿಮಾನ ನಿಲ್ದಾಣದಲ್ಲಿ ನಿಲ್ಲಿಸಿದಾಗ ಬಂಧಿಸಲಾಯಿತು ಎಂದು ಸುದ್ದಿ ಸಂಸ್ಥೆ ಎಎಫ್​​ಬಿ ವರದಿ ಮಾಡಿದೆ. ಮಾನವ ಕಳ್ಳಸಾಗಣೆಯ ಸಂಭಾವ್ಯ ಸಂತ್ರಸ್ತರನ್ನು ಹೊತ್ತೊಯ್ಯುತ್ತಿದೆ ಎಂಬ ಅನಾಮಧೇಯ ಸುಳಿವು ನಂತರ ವಿಮಾನವನ್ನು ಕೆಳಗಿಳಿಸಲಾಗಿತ್ತು. ನಾಳೆ (ಮಂಗಳವಾರ) ಬೆಳಗ್ಗಿನ ಜಾವ ವಿಮಾನ ಮುಂಬೈ ತಲುಪುವ ನಿರೀಕ್ಷೆ ಇದೆ.

ಈ ಬಗ್ಗೆ ಫ್ರಾನ್ಸ್‌ನಲ್ಲಿರುವ ಭಾರತದ ರಾಯಭಾರ ಕಚೇರಿ ಟ್ವೀಟ್ ಮಾಡಿದ್ದು “ಭಾರತೀಯ ಪ್ರಯಾಣಿಕರು ಮನೆಗೆ ಮರಳಲು ಮತ್ತು ಆತಿಥ್ಯವನ್ನು ನೀಡಲು ಅನುವು ಮಾಡಿಕೊಡುವ ಪರಿಸ್ಥಿತಿಯನ್ನು ತ್ವರಿತವಾಗಿ ಪರಿಹರಿಸಿದ್ದಕ್ಕಾಗಿ ಫ್ರೆಂಚ್ ಸರ್ಕಾರ ಮತ್ತು ವಾಟ್ರಿ ವಿಮಾನ ನಿಲ್ದಾಣಕ್ಕೆ ಧನ್ಯವಾದಗಳು. ಪ್ರಯಾಣಿಕರ ಯೋಗಕ್ಷೇಮ ಮತ್ತು ಸುಗಮ ಮತ್ತು ಸುರಕ್ಷಿತ ವಾಪಸಾತಿಯನ್ನು ಖಚಿತಪಡಿಸಿಕೊಳ್ಳಲು ರಾಯಭಾರ ಕಚೇರಿ ತಂಡದೊಂದಿಗೆ ನಿಕಟವಾಗಿ ಕೆಲಸ ಮಾಡುತ್ತಿದ್ದೇವೆ ಎಂದಿದೆ.

ಇಲ್ಲಿಯವರೆಗೆ ಏನೇನಾಯಿತು?

ಫ್ರೆಂಚ್ ಪ್ರಾಸಿಕ್ಯೂಟರ್‌ಗಳು ಪ್ರಯಾಣಿಕರನ್ನು ಎರಡು ದಿನಗಳ ಕಾಲ ಪ್ರಶ್ನಿಸಿ ವಿಮಾನವನ್ನು ಹೊರಡಲು ಅನುಮತಿ ನೀಡಿದರು. ಎಎಫ್‌ಪಿ ಪ್ರಕಾರ ಪ್ರಯಾಣಿಕರನ್ನು ಭಾರತಕ್ಕೆ ಕಳುಹಿಸಲಾಗುವುದು ಎಂದು ಸ್ಥಳೀಯ ಬಾರ್ ಅಸೋಸಿಯೇಷನ್‌ನ ಮುಖ್ಯಸ್ಥ ಫ್ರಾಂಕೋಯಿಸ್ ಪ್ರೊಕ್ಯೂರ್ ಹೇಳಿದ್ದಾರೆ. ಭಾರತೀಯರು ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ಕೆಲಸಗಾರರಾಗಿರಬಹುದು, ಅವರು ಯುನೈಟೆಡ್ ಸ್ಟೇಟ್ಸ್ ಅಥವಾ ಕೆನಡಾಕ್ಕೆ ಹೋಗಲು ನಿಕರಾಗುವಾಕ್ಕೆ ಬಂದರು ಎಂದು ಅವರು ಹೇಳಿದ್ದಾರೆ. ತನಿಖೆಯ ಸಮಯದಲ್ಲಿ ವಿಮಾನದ ಪ್ರಯಾಣಿಕರನ್ನು ವಿಮಾನ ನಿಲ್ದಾಣದಲ್ಲಿ ಕೂರಿಸಿದ್ದು, ಅವರಿಗೆ ಹಾಸಿಗೆಗಳು, ಶೌಚಾಲಯ ಸೌಲಭ್ಯ ಒದಗಿಸಲಾಗಿತ್ತು. ಪ್ಯಾರಿಸ್ ಪ್ರಾಸಿಕ್ಯೂಟರ್‌ಗಳ ಪ್ರಕಾರ ಪ್ರಯಾಣಿಕರಲ್ಲಿ 11 ಅಪ್ರಾಪ್ತ ವಯಸ್ಕರು ಸೇರಿದ್ದಾರೆ.

ಇದನ್ನೂ ಓದಿ:ಇಸ್ರೋ ಚಂದ್ರಯಾನ ಮಹಾಕ್ವಿಜ್; 300ಕ್ಕೂ ಹೆಚ್ಚು ಮಂದಿಗೆ ಬಹುಮಾನ; ಮೊದಲು ಬಂದವರಿಗೆ ಲಕ್ಷ ರೂ; ನೀವೂ ಪಾಲ್ಗೊಳ್ಳುವುದು ಹೇಗೆ? ಇಲ್ಲಿದೆ ಡೀಟೇಲ್ಸ್ 

ವಿಮಾನ ಹೊರಡಲು ತಡ ಯಾಕೆ?

ಇನ್ನು ಮೂವರು ಪ್ರಯಾಣಿಕರನ್ನು ಬಂಧಿಸುವುದು ಕಾನೂನುಬಾಹಿರ ಎಂದು ಫ್ರೆಂಚ್ ನ್ಯಾಯಾಲಯ ತೀರ್ಪು ನೀಡಿದ ನಂತರ ವಿಮಾನವನ್ನು ಹೊರಡಲು ಅನುಮತಿ ನೀಡಲಾಗಿದೆ ಎಂದು ಎಎಫ್‌ಪಿ ವರದಿ ಮಾಡಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 9:41 pm, Mon, 25 December 23

ನೀರಿಗಾಗಿ ಪ್ರಾಣ ಕಳೆದುಕೊಂಡ ಕೋತಿ ಮರಿ: ಇಲ್ಲಿದೆ ಮನಕಲಕುವ ದೃಶ್ಯ
ನೀರಿಗಾಗಿ ಪ್ರಾಣ ಕಳೆದುಕೊಂಡ ಕೋತಿ ಮರಿ: ಇಲ್ಲಿದೆ ಮನಕಲಕುವ ದೃಶ್ಯ
ರೋಹಿತ್ ಶರ್ಮಾಗೆ ಬಿಸಿಸಿಐನಿಂದ ವಿಶೇಷ ಗೌರವ; ವಿಡಿಯೋ ನೋಡಿ
ರೋಹಿತ್ ಶರ್ಮಾಗೆ ಬಿಸಿಸಿಐನಿಂದ ವಿಶೇಷ ಗೌರವ; ವಿಡಿಯೋ ನೋಡಿ
ಬುಸ್ ಬುಸ್ ನಾಗಪ್ಪನಿಂದ ಬೈಕ್ ಸವಾರ ಬಚಾವ್: ಎದೆ ಝಲ್​ ಎನ್ನಿಸುವ ವಿಡಿಯೋ
ಬುಸ್ ಬುಸ್ ನಾಗಪ್ಪನಿಂದ ಬೈಕ್ ಸವಾರ ಬಚಾವ್: ಎದೆ ಝಲ್​ ಎನ್ನಿಸುವ ವಿಡಿಯೋ
‘ಹಾಯ್ ಜನರೇ’: ರೀಲ್ಸ್ ಮಾತ್ರವಲ್ಲ ಈಗ ಸಿನಿಮಾಕ್ಕೂ ಬಂದ ಕಿಪಿ ಕೀರ್ತಿ
‘ಹಾಯ್ ಜನರೇ’: ರೀಲ್ಸ್ ಮಾತ್ರವಲ್ಲ ಈಗ ಸಿನಿಮಾಕ್ಕೂ ಬಂದ ಕಿಪಿ ಕೀರ್ತಿ
ವರದಿಯ ಬಗ್ಗೆ ಸಿಎಂ ಎಲ್ಲರ ಅಭಿಪ್ರಾಯ ಕೇಳಿದ್ದಾರೆ: ರಾಮಲಿಂಗಾರೆಡ್ಡಿ
ವರದಿಯ ಬಗ್ಗೆ ಸಿಎಂ ಎಲ್ಲರ ಅಭಿಪ್ರಾಯ ಕೇಳಿದ್ದಾರೆ: ರಾಮಲಿಂಗಾರೆಡ್ಡಿ
ಬಿಜೆಪಿಯನ್ನು ಬಹುಮತದೊಂದಿಗೆ ಅಧಿಕಾರಕ್ಕೆ ತರೋದು ಎಲ್ಲರ ಸಂಕಲ್ಪ: ವಿಜಯೇಂದ್ರ
ಬಿಜೆಪಿಯನ್ನು ಬಹುಮತದೊಂದಿಗೆ ಅಧಿಕಾರಕ್ಕೆ ತರೋದು ಎಲ್ಲರ ಸಂಕಲ್ಪ: ವಿಜಯೇಂದ್ರ
ಮೋದಿಯನ್ನು ಭೇಟಿಯಾಗಿ ವಕ್ಫ್ ಕಾಯ್ದೆಗೆ ಧನ್ಯವಾದ ಸಲ್ಲಿಸಿದ ಮುಸ್ಲಿಂ ನಿಯೋಗ!
ಮೋದಿಯನ್ನು ಭೇಟಿಯಾಗಿ ವಕ್ಫ್ ಕಾಯ್ದೆಗೆ ಧನ್ಯವಾದ ಸಲ್ಲಿಸಿದ ಮುಸ್ಲಿಂ ನಿಯೋಗ!
ಮುಷ್ಕರದಿಂದ ಸಾರ್ವಜನಿಕರಿಗಾದ ತೊಂದರೆಗಾಗಿ ವಿಷಾದಿಸುತ್ತೇವೆ: ಷಣ್ಮುಗಪ್ಪ
ಮುಷ್ಕರದಿಂದ ಸಾರ್ವಜನಿಕರಿಗಾದ ತೊಂದರೆಗಾಗಿ ವಿಷಾದಿಸುತ್ತೇವೆ: ಷಣ್ಮುಗಪ್ಪ
ಎಲ್ಲ ಧರ್ಮಗಳಲ್ಲೂ ಶೋಷಿತರು ಮತ್ತು ಬಡವರಿದ್ದಾರೆ: ಡಿಕೆ ಸುರೇಶ್
ಎಲ್ಲ ಧರ್ಮಗಳಲ್ಲೂ ಶೋಷಿತರು ಮತ್ತು ಬಡವರಿದ್ದಾರೆ: ಡಿಕೆ ಸುರೇಶ್
ಅಡುಗೆ ಅನಿಲ ಸಿಲಿಂಡರ್ ಬೆಲೆಯೇರಿಕೆ ವಿರುದ್ಧ ಕಾಂಗ್ರೆಸ್ ನಾಯಕರ ಪ್ರತಿಭಟನೆ
ಅಡುಗೆ ಅನಿಲ ಸಿಲಿಂಡರ್ ಬೆಲೆಯೇರಿಕೆ ವಿರುದ್ಧ ಕಾಂಗ್ರೆಸ್ ನಾಯಕರ ಪ್ರತಿಭಟನೆ