ರಾಹುಲ್ ಗಾಂಧಿಯನ್ನು ‘ಚುನಾವಣಾ ಗಾಂಧಿ’ ಎಂದು ಲೇವಡಿ ಮಾಡಿದ ಬಿಆರ್​​ಎಸ್ ನಾಯಕಿ ಕವಿತಾ

ಬಿಆರ್‌ಎಸ್ ಮುಖ್ಯಸ್ಥ ಮತ್ತು ಮಾಜಿ ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್ ಅವರ ಪುತ್ರಿ ಕವಿತಾ "ಈ ಹೇಳಿಕೆಗಳನ್ನು ಲಘುವಾಗಿ ತೆಗೆದುಕೊಳ್ಳಬಾರದು" ಎಂದಿದ್ದಾರೆ. "ಭಾರತ್ ಜೋಡೋ" ಬಗ್ಗೆ ಮಾತನಾಡುವ ರಾಹುಲ್ ಗಾಂಧಿ ಅವರು , 'ಸನಾತನ ಧರ್ಮ'ವನ್ನು ಅವಮಾನಿಸಿದಾಗ ಭಾರತದಾದ್ಯಂತ ಕೋಟಿಗಟ್ಟಲೆ ನೋಯಿಸಿದಾಗ ಅದನ್ನು ಗಂಭೀರವಾಗಿ ತೆಗೆದುಕೊಂಡಿದ್ದರೆ ಇತರರು ಯಾರೂ ಹೇಳಿಕೆಗಳನ್ನು ನೀಡುತ್ತಿರಲಿಲ್ಲ ಎಂದಿದ್ದಾರೆ.

ರಾಹುಲ್ ಗಾಂಧಿಯನ್ನು 'ಚುನಾವಣಾ ಗಾಂಧಿ' ಎಂದು ಲೇವಡಿ ಮಾಡಿದ ಬಿಆರ್​​ಎಸ್ ನಾಯಕಿ ಕವಿತಾ
ಕೆ.ಕವಿತಾ
Follow us
|

Updated on: Dec 25, 2023 | 7:50 PM

ದೆಹಲಿ ಡಿಸೆಂಬರ್ 25: ಭಾರತ್ ರಾಷ್ಟ್ರ ಸಮಿತಿ ನಾಯಕಿ  ಕೆ.ಕವಿತಾ (K Kavitha) ಅವರು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ (Rahul Gandhi) ವಿರುದ್ಧ ವಾಗ್ದಾಳಿ ಮಾಡಿದ್ದಾರೆ. ವಿಧಾನಸಭಾ ಚುನಾವಣೆಯಲ್ಲಿ ತೆಲಂಗಾಣದಲ್ಲಿ (Telangana) ಕಾಂಗ್ರೆಸ್ ಪಕ್ಷ ಬಿಆರ್ ಎಸ್ ಪಕ್ಷವನ್ನು ಸೋಲಿಸಿ ಅಧಿಕಾರಕ್ಕೇರಿತ್ತು. ರಾಹುಲ್ ಗಾಂಧಿಯನ್ನು “ಚುನಾವಣಾ ಗಾಂಧಿ” ಎಂದು ಲೇವಡಿ ಮಾಡಿದ ಕವಿತಾ ಸೆಪ್ಟೆಂಬರ್‌ನಿಂದ ‘ಸನಾತನ ಧರ್ಮ’ ವಿವಾದ ಸೇರಿದಂತೆ ಪಕ್ಷದ ನೇತೃತ್ವದ ಇಂಡಿಯಾ ಒಕ್ಕೂಟ ಸದಸ್ಯರ ವಿವಾದಾತ್ಮಕ ಹೇಳಿಕೆಗಳ ಕುರಿತು ಅವರು ತಮ್ಮ ನಿಲುವನ್ನು ಸ್ಪಷ್ಟಪಡಿಸಬೇಕೆಂದು ಒತ್ತಾಯಿಸಿದರು.

“ನಾವು ಇಂದು ಅನೇಕ ರಾಜಕೀಯ ನಾಯಕರಿಂದ ದುರದೃಷ್ಟಕರ ಹೇಳಿಕೆಗಳನ್ನು ನೋಡುತ್ತಿದ್ದೇವೆ. ಕೆಲವು ವರ್ಗಗಳ ಮತಗಳನ್ನು ಗಳಿಸುವ ಈ ಪ್ರಕ್ರಿಯೆಯು ಅಂತಿಮವಾಗಿ ನಾವು ಊಹಿಸಲು ಸಾಧ್ಯವಾಗದ ರೀತಿಯಲ್ಲಿ ದೇಶವನ್ನು ವಿಭಜಿಸುತ್ತದೆ. ಉದಾಹರಣೆಗೆ, ಕೆಲವು ಪಕ್ಷಗಳು ‘ಸನಾತನ ಧರ್ಮ’ ಕುರಿತು ಮಾತನಾಡಿದಾಗ ಅಥವಾ ಶೌಚಾಲಯಗಳು ಸ್ವಚ್ಛಗೊಳಿಸುವ ಕಾರ್ಮಿಕರನ್ನು ಅವಮಾನಿಸುವ ಹೇಳಿಕೆಗಳು ಎಂದು ಕವಿತಾ ಹೇಳಿದ್ದಾರೆ,

‘ಸನಾತನ ಧರ್ಮ’ ಬಗ್ಗೆ ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್ ಹೇಳಿಕೆ ನೀಡಿದ್ದು ವಿವಾವದವಾಗಿತ್ತು. ಅದೇ ರೀತಿ ಕಾರ್ಮಿಕರನ್ನು ಅವಮಾನಿಸಿದ್ದು ಎಂದು ಕವಿತಾ ಇಲ್ಲಿ ಉಲ್ಲೇಖಿಸಿದ್ದು 2019 ರಲ್ಲಿ ಡಿಎಂಕೆ ನಾಯಕ ದಯಾನಿಧಿ ಮಾರನ್ ಅವರ ವಿಡಿಯೊ ಬಗ್ಗೆ ಆಗಿತ್ತು. ಮಾರನ್ ಅವರು ಉತ್ತರ ಪ್ರದೇಶ ಮತ್ತು ಬಿಹಾರ ಜನರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದು ಅವರು ಉದ್ಯೋಗಕ್ಕಾಗಿ ದಕ್ಷಿಣ ಭಾರತಕ್ಕೆ ಬರುತ್ತಿದ್ದಾರೆ ಎಂದಿದ್ದರು.

ತಮಿಳುನಾಡಿನ ಆಡಳಿತಾರೂಢ ಡಿಎಂಕೆ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡಿದೆ. ಎರಡೂ ಇಂಡಿಯಾ ಬ್ಲಾಕ್‌ನ ಭಾಗವಾಗಿದೆ.

ಬಿಆರ್‌ಎಸ್ ಮುಖ್ಯಸ್ಥ ಮತ್ತು ಮಾಜಿ ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್ ಅಥವಾ ಕೆಸಿಆರ್ ಅವರ ಪುತ್ರಿ ಕವಿತಾ “ಈ ಹೇಳಿಕೆಗಳನ್ನು ಲಘುವಾಗಿ ತೆಗೆದುಕೊಳ್ಳಬಾರದು” ಎಂದಿದ್ದಾರೆ. “ಭಾರತ್ ಜೋಡೋ” ಬಗ್ಗೆ ಮಾತನಾಡುವ ರಾಹುಲ್ ಗಾಂಧಿ ಅವರು , ‘ಸನಾತನ ಧರ್ಮ’ವನ್ನು ಅವಮಾನಿಸಿದಾಗ ಭಾರತದಾದ್ಯಂತ ಕೋಟಿಗಟ್ಟಲೆ ನೋಯಿಸಿದಾಗ ಅದನ್ನು ಗಂಭೀರವಾಗಿ ತೆಗೆದುಕೊಂಡಿದ್ದರೆ ಇತರರು ಯಾರೂ ಹೇಳಿಕೆಗಳನ್ನು ನೀಡುತ್ತಿರಲಿಲ್ಲ ಎಂದಿದ್ದಾರೆ.

ಅವರು ಈ ರಾಷ್ಟ್ರದ ಜನರಿಗೆ ಉತ್ತರ ನೀಡಬೇಕು. ನಾನು ಅವರನ್ನು ‘ಚುನಾವಣಾ ಗಾಂಧಿ’ ಎಂದು ಕರೆಯುತ್ತೇನೆ ಏಕೆಂದರೆ ಅವರು ಚುನಾವಣಾ ಸಮಯದಲ್ಲಿ ಹೊರತುಪಡಿಸಿ ಎಂದಿಗೂ ಕೆಲಸ ಮಾಡುವುದಿಲ್ಲ. ಹಾಗಾಗಿ ನಾನು ಈಗ ಅವರಲ್ಲಿ ಮಾಡುವ ವಿನಂತಿ ಏನೆಂದರೆ  ಲೋಕಸಭೆ ಚುನಾವಣೆ ಬರುತ್ತಿದೆ. ನೀವು ಕಾರ್ಮಿಕರ ಬಗ್ಗೆ ಅಗೌರವ ಹೊಂದಿಲ್ಲ ಮತ್ತು ಜನರು ಸಂಸತ್ತಿನಲ್ಲಿ ಎದ್ದುನಿಂತು ರಾಜ್ಯಗಳ ಗುಂಪನ್ನು ಅವಮಾನಿಸಲು ಸಾಧ್ಯವಿಲ್ಲ ಎಂದು ಜನರಿಗೆ ತಿಳಿಸಿ. ನೀವು ಎದ್ದು ನಿಲ್ಲಬೇಕು. ‘ಭಾರತ್ ಜೋಡೋ ಯಾತ್ರೆ’ ಜೊತೆಗೆ ‘PR’ ಮಾಡಬೇಡಿ, ಆದರೆ ಇದು ತಪ್ಪು ಎಂದು ಹೇಳಬೇಕು ಎಂದು ಕವಿತಾ ಒತ್ತಾಯಿಸಿದ್ದಾರೆ.

ಇದನ್ನೂ ಓದಿ:ಜಗದೀಪ್ ಧನ್ಖರ್ ಅನುಕರಣೆ ವಿವಾದ; ರಾಹುಲ್ ಗಾಂಧಿ ಮಾಡಿದ್ದರಲ್ಲಿ ತಪ್ಪೇನಿದೆ?: ಕಪಿಲ್ ಸಿಬಲ್

2014 ರಿಂದ ತೆಲಂಗಾಣವನ್ನು ಆಳುತ್ತಿದ್ದ ಬಿಆರ್​​ಎಸ್ ಪಕ್ಷವನ್ನು ಕಾಂಗ್ರೆಸ್ ಸೋಲಿಸಿದ ಕೆಲವೇ ವಾರಗಳ ನಂತರ ಕವಿತಾ ಅವರಿಂದ ವಾಗ್ದಾಳಿ ನಡೆದಿದೆ. ತೆಲಂಗಾಣ ವಿಧಾನಸಭಾ ಚುನಾವಣೆ ವೇಳೆ ರಾಜ್ಯದಲ್ಲಿ ಈ ಎರಡು ಪಕ್ಷಗಳಿಂದ ಮಾತ್ರವಲ್ಲದೆ ಬಿಜೆಪಿಯಿಂದಲೂ ಹೈ-ವೋಲ್ಟೇಜ್ ಪ್ರಚಾರ ನಡೆದಿತ್ತು. ಪ್ರಧಾನ ಮಂತ್ರಿ ನರೇಂದ್ರ ಮೋದಿ ತನ್ನ ‘ಮಿಷನ್ ಸೌತ್’ ಯೋಜನೆಯ ಭಾಗವಾಗಿ ಅನೇಕ ಬಾರಿ ಕಾಣಿಸಿಕೊಂಡಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇಲ್ಲಿ ನಾನೇ ಅಭ್ಯರ್ಥಿ: ಅಚ್ಚರಿ ಹೇಳಿಕೆ ನೀಡಿದ ಡಿಸಿಎಂ ಡಿಕೆ ಶಿವಕುಮಾರ್​
ಇಲ್ಲಿ ನಾನೇ ಅಭ್ಯರ್ಥಿ: ಅಚ್ಚರಿ ಹೇಳಿಕೆ ನೀಡಿದ ಡಿಸಿಎಂ ಡಿಕೆ ಶಿವಕುಮಾರ್​
ಬಿಹಾರದಲ್ಲಿ ಪ್ರವಾಹ ಭೀತಿ; ನೂರಾರು ಹಳ್ಳಿಗಳಿಗೆ ನುಗ್ಗಿದ ಗಂಗಾ ನದಿ ನೀರು
ಬಿಹಾರದಲ್ಲಿ ಪ್ರವಾಹ ಭೀತಿ; ನೂರಾರು ಹಳ್ಳಿಗಳಿಗೆ ನುಗ್ಗಿದ ಗಂಗಾ ನದಿ ನೀರು
ಹಾಡಹಗಲೇ ಮೆಡಿಕಲ್ ಶಾಪ್​ಗೆ ನುಗ್ಗಿ ದರೋಡೆ ಮಾಡಿದ ಕಳ್ಳರು; ವಿಡಿಯೋ ವೈರಲ್
ಹಾಡಹಗಲೇ ಮೆಡಿಕಲ್ ಶಾಪ್​ಗೆ ನುಗ್ಗಿ ದರೋಡೆ ಮಾಡಿದ ಕಳ್ಳರು; ವಿಡಿಯೋ ವೈರಲ್
ಇದ್ದಕ್ಕಿದ್ದಂತೆ ರೈಲ್ವೆ ಪ್ಲಾಟ್​ಫಾರ್ಮ್​ ಮೇಲೆ 6 ಅಡಿ ಉದ್ದದ ಹಾವು ಪ್ರತ್ಯ
ಇದ್ದಕ್ಕಿದ್ದಂತೆ ರೈಲ್ವೆ ಪ್ಲಾಟ್​ಫಾರ್ಮ್​ ಮೇಲೆ 6 ಅಡಿ ಉದ್ದದ ಹಾವು ಪ್ರತ್ಯ
ರಾಮನಗರದಲ್ಲಿ ಕೇಂದ್ರ ಸಚಿವ ಕುಮಾರಸ್ವಾಮಿಗೆ ಕೌಂಟರ್ ಕೊಟ್ಟ ಡಿಕೆಶಿ
ರಾಮನಗರದಲ್ಲಿ ಕೇಂದ್ರ ಸಚಿವ ಕುಮಾರಸ್ವಾಮಿಗೆ ಕೌಂಟರ್ ಕೊಟ್ಟ ಡಿಕೆಶಿ
ಬೀದರ್​​ನ ಐತಿಹಾಸಿಕ ಕೋಟೆ ಆವರಣದಲ್ಲಿ ಏರ್ ಶೋ ಪ್ರದರ್ಶನ
ಬೀದರ್​​ನ ಐತಿಹಾಸಿಕ ಕೋಟೆ ಆವರಣದಲ್ಲಿ ಏರ್ ಶೋ ಪ್ರದರ್ಶನ
ಬಾಂಗ್ಲಾ ತಂಡದ ಫೀಲ್ಡಿಂಗ್ ಸೆಟ್ ಮಾಡಿದ ರಿಷಭ್ ಪಂತ್
ಬಾಂಗ್ಲಾ ತಂಡದ ಫೀಲ್ಡಿಂಗ್ ಸೆಟ್ ಮಾಡಿದ ರಿಷಭ್ ಪಂತ್
ದರ್ಬಾರ್ ಗಲ್ಲಿಯಲ್ಲಿ ರಸ್ತೆಯುದ್ದಕ್ಕೂ ಪ್ಯಾಲೆಸ್ತೀನ್ ಧ್ವಜ ಶಾಮಿಯಾನ
ದರ್ಬಾರ್ ಗಲ್ಲಿಯಲ್ಲಿ ರಸ್ತೆಯುದ್ದಕ್ಕೂ ಪ್ಯಾಲೆಸ್ತೀನ್ ಧ್ವಜ ಶಾಮಿಯಾನ
ಚನ್ನಪಟ್ಟಣ: ಹೈಟೆಕ್ ಕ್ರೀಡಾಂಗಣ ನಿರ್ಮಾಣಕ್ಕೆ ಡಿಕೆಶಿ ಶಂಕುಸ್ಥಾಪನೆ
ಚನ್ನಪಟ್ಟಣ: ಹೈಟೆಕ್ ಕ್ರೀಡಾಂಗಣ ನಿರ್ಮಾಣಕ್ಕೆ ಡಿಕೆಶಿ ಶಂಕುಸ್ಥಾಪನೆ
ಬೆಳಗಾವಿ: ರೋಗಿ ಕೈಗೆ ಕೊಳಲು ಕೊಟ್ಟು ಶಸ್ತ್ರ ಚಿಕಿತ್ಸೆ ಮಾಡಿದ ವೈದ್ಯರು
ಬೆಳಗಾವಿ: ರೋಗಿ ಕೈಗೆ ಕೊಳಲು ಕೊಟ್ಟು ಶಸ್ತ್ರ ಚಿಕಿತ್ಸೆ ಮಾಡಿದ ವೈದ್ಯರು