ತೆಲಂಗಾಣ ಮಹಿಳಾ ಬಸ್ ಪ್ರಯಾಣಿಕರಿಗೆ ಐಪಿಎಸ್​ ಅಧಿಕಾರಿ ಸಜ್ಜನ ಮನವಿ, ಕರ್ನಾಟಕ ಪ್ರಯಾಣಿಕರಿಗೂ ಇದು ಒಳ್ಳೆಯ ಸಲಹೆ, ಒಮ್ಮೆ ಕೇಳಿ

ತೆಲಂಗಾಣದಲ್ಲಿ ನೂತನ ಕಾಂಗ್ರೆಸ್​ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ಚುನಾವಣಾಪೂರ್ವದ ವಾಗ್ದಾನದಂತೆ, ಕರ್ನಾಟಕದ ಮಾದರಿಯಂತೆ ಮಹಿಳಾ ಪ್ರಯಾಣಿಕರಿಗೆ ಅನುಕೂಲವಾಗುವಂತೆ ಮಹಾಲಕ್ಷ್ಮಿ ಉಚಿತ ಬಸ್ ಯೋಜನೆ ಜಾರಿಗೆ ತಂದಿದೆ. ಆದರೆ ಉಚಿತ ಬಸ್ ಯೋಜನೆಯು ನಾನಾ ಅವಾಂತರಗಳನ್ನೂ ಸೃಷ್ಟಿಸುತ್ತಿದೆ. ಕರ್ನಾಟಕದಲ್ಲಿ ನಡೆದಂತಹ ವಿದ್ಯಮಾನಗಳು ತೆಲಂಗಾಣದಲ್ಲೂ ನಡೆಯುತ್ತಿವೆ. ಈ ಹಿನ್ನೆಲೆಯಲ್ಲಿ ಅಲ್ಲಿನ ಸಾರಿಗೆ ನಿಗಮದ (TS RTC) ಮುಖ್ಯಸ್ಥ, ಕನ್ನಡಿಗ, ಐಪಿಎಸ್ ಅಧಿಕಾರಿ ಸಜ್ಜನರ್ ಅವರು ಮಹಿಳೆಯರಿಗೆ ಉಚಿತ ಸಲಹೆ ನೀಡಿದ್ದಾರೆ. ಕರ್ನಾಟಕ ಪ್ರಯಾಣಿಕರಿಗೂ ಇದು ಒಳ್ಳೆಯ ಸಲಹೆಯೇ... ಒಮ್ಮೆ ಕೇಳಿ.

ತೆಲಂಗಾಣ ಮಹಿಳಾ  ಬಸ್ ಪ್ರಯಾಣಿಕರಿಗೆ ಐಪಿಎಸ್​ ಅಧಿಕಾರಿ ಸಜ್ಜನ ಮನವಿ, ಕರ್ನಾಟಕ ಪ್ರಯಾಣಿಕರಿಗೂ ಇದು ಒಳ್ಳೆಯ ಸಲಹೆ, ಒಮ್ಮೆ ಕೇಳಿ
ತೆಲಂಗಾಣ ಮಹಿಳಾ ಬಸ್ ಪ್ರಯಾಣಿಕರಿಗೆ ಐಪಿಎಸ್​ ಅಧಿಕಾರಿ ಸಜ್ಜನ ಮನವಿ
Follow us
|

Updated on: Dec 23, 2023 | 10:47 AM

ತೆಲಂಗಾಣದಲ್ಲಿ ನೂತನ ಕಾಂಗ್ರೆಸ್​ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ಚುನಾವಣಾಪೂರ್ವದ ವಾಗ್ದಾನದಂತೆ, ಕರ್ನಾಟಕದ ಮಾದರಿಯಂತೆ ಮಹಿಳಾ ಪ್ರಯಾಣಿಕರಿಗೆ ಅನುಕೂಲವಾಗುವಂತೆ ಮಹಾಲಕ್ಷ್ಮಿ ಉಚಿತ ಬಸ್ ಯೋಜನೆ ಜಾರಿಗೆ ತಂದಿದೆ. ಆದರೆ ಉಚಿತ ಬಸ್ ಯೋಜನೆಯು ನಾನಾ ಅವಾಂತರಗಳನ್ನೂ ಸೃಷ್ಟಿಸುತ್ತಿದೆ. ಕರ್ನಾಟಕದಲ್ಲಿ ನಡೆದಂತಹ ವಿದ್ಯಮಾನಗಳು ತೆಲಂಗಾಣದಲ್ಲೂ ನಡೆಯುತ್ತಿವೆ. ಈ ಹಿನ್ನೆಲೆಯಲ್ಲಿ ಅಲ್ಲಿನ ಸಾರಿಗೆ ನಿಗಮದ (TS RTC) ಮುಖ್ಯಸ್ಥ, ಕನ್ನಡಿಗ, ಐಪಿಎಸ್ ಅಧಿಕಾರಿ ಸಜ್ಜನರ್ ಅವರು ಮಹಿಳೆಯರಿಗೆ ಉಚಿತ ಸಲಹೆ ನೀಡಿದ್ದಾರೆ. ಕರ್ನಾಟಕ ಪ್ರಯಾಣಿಕರಿಗೂ ಇದು ಒಳ್ಳೆಯ ಸಲಹೆಯೇ… ಒಮ್ಮೆ ಕೇಳಿ.

ತೆಲಂಗಾಣ ನೂತನ ಸರ್ಕಾರ ಜಾರಿಗೆ ತಂದಿರುವ ಮಹತ್ವಾಕಾಂಕ್ಷಿ ‘ಮಹಾಲಕ್ಷ್ಮಿ’ ಯೋಜನೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ತೆಲಂಗಾಣ ಸರ್ಕಾರವು ಎಲ್ಲ ಬಸ್‌ಗಳಲ್ಲಿ ತೆಲಂಗಾಣದಾದ್ಯಂತ ಮಹಿಳೆಯರಿಗೆ ಉಚಿತ ಬಸ್ ಸೌಲಭ್ಯವನ್ನು ಒದಗಿಸುತ್ತಿದೆ. ಈ ವ್ಯವಸ್ಥೆ ಇದೇ ಡಿಸೆಂಬರ್​​ 9ರಿಂದ ಜಾರಿಗೆ ಬಂದಿದೆ. ತೆಲಂಗಾಣದಾದ್ಯಂತ ಮಹಿಳೆಯರು ಉಚಿತ ಬಸ್ ಪ್ರಯಾಣವನ್ನು ವ್ಯಾಪಕವಾಗಿ ಬಳಸುತ್ತಿದ್ದಾರೆ. ಮಹಿಳೆಯರು ಹಿಂದೆಂದೂ ಕಾಣದಷ್ಟು ಪ್ರಮಾಣದಲ್ಲಿ ಪ್ರಯಾಣವನ್ನು (Bus Passengers) ಕೈಗೊಳ್ಳುತ್ತಿದ್ದಾರೆ. ಆದರೆ, ಉಚಿತ ಬಸ್ ಪ್ರಯಾಣದ ಬಗ್ಗೆ ನಾನಾ ಸಮಸ್ಯೆಗಳು ಆರ್‌ಟಿಸಿ ಗಮನಕ್ಕೆ ಬರುತ್ತಿವೆ. ಇತ್ತೀಚೆಗಷ್ಟೇ ಆರ್‌ಟಿಸಿ ಎಂಡಿ ಸಜ್ಜನರ್ ಈ ವಿಚಾರದಲ್ಲಿ ಮಹತ್ವದ ಘೋಷಣೆ ಮಾಡಿದ್ದಾರೆ. ಮಹಿಳಾ ಪ್ರಯಾಣಿಕರಿಗೆ ಮನವಿ ಮಾಡುವ ವಿಡಿಯೋ ಸಂದೇಶವನ್ನು ಬಿಡುಗಡೆ ಮಾಡಿದ್ದಾರೆ.

ಸಜ್ಜನರ್ ಮಾತನಾಡಿ, ಕಡಿಮೆ ದೂರದವರೆಗೆ ಪ್ರಯಾಣಿಸುವ ಮಹಿಳೆಯರು ಎಕ್ಸ್‌ಪ್ರೆಸ್‌ ಬಸ್‌ಗಳಲ್ಲಿ ಹೆಚ್ಚು ಪ್ರಯಾಣಿಸುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ. ಇದರಿಂದ ದೂರದ ಪ್ರಯಾಣಿಕರಿಗೆ ತೀವ್ರ ತೊಂದರೆಯಾಗುತ್ತಿದೆ. ಕಡಿಮೆ ದೂರ ಪ್ರಯಾಣಿಸುವವರು ಲಘು ಬಸ್ಸುಗಳನ್ನು ಹತ್ತುವಂತಾಗಲಿ. ಬಸ್​ ಸಿಬ್ಬಂದಿಗೆ ಸಹಕರಿಸುವಂತೆ ಸಜ್ಜನರ್ ಕೋರಿದ್ದಾರೆ. ಅಲ್ಲದೆ, ಕೆಲವು ಮಹಿಳೆಯರು ಬಸ್‌ಗಳನ್ನು ನಿಗದಿತ ಸ್ಟೇಜ್​​​/ ನಿಲ್ದಾಣಗಳಲ್ಲಿ ನಿಲ್ಲಿಸುವ ಬದಲು ಮಾರ್ಗ ಮಧ್ಯದಲ್ಲಿ ಎಲ್ಲಂದರಲ್ಲಿ ನಿಲ್ಲಿಸುವಂತೆ ಸಿಬ್ಬಂದಿಯ ಮೇಲೆ ಒತ್ತಡ ಹೇರುತ್ತಿದ್ದಾರೆ, ಇದರಿಂದ ಪ್ರಯಾಣದ ಸಮಯ ಹೆಚ್ಚಾಗುತ್ತದೆ. ಬೇರೆ ಪ್ರಯಾಣಿಕರಿಗೆ ತೊಂದರೆಯಾಗುತ್ತದೆ ಎಂದಿದ್ದಾರೆ ಸಜ್ಜನವರ್​.

ಇನ್ನು ಮುಂದೆ ಅನುಮತಿ ಪಡೆದ ನಿಲ್ದಾಣಗಳಲ್ಲಿ ಮಾತ್ರ ಎಕ್ಸ್‌ಪ್ರೆಸ್ ಬಸ್‌ಗಳು ಲಭ್ಯವಿರುತ್ತವೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ದೂರದ ಪ್ರಯಾಣಿಕರಿಗೆ ಆದ್ಯತೆ ನೀಡುವಂತೆ ಸಜ್ಜನರ್ ಸಿಬ್ಬಂದಿಗೆ ಸೂಚಿಸಿದ್ದಾರೆ. ಮಹಾಲಕ್ಷ್ಮಿ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಮಹಿಳೆಯರು, ಮಕ್ಕಳು ಮತ್ತು ತೃತೀಯಲಿಂಗಿಗಳಿಗೆ ಹೆಚ್ಚಿನ ಸಹಕಾರ ನೀಡಬೇಕು ಎಂದು ಸಜ್ಜನರ್ ಸಾರ್ವತ್ರಿಕವಾಗಿ ಮನವಿ ಮಾಡಿದ್ದಾರೆ.

ನಾಗವಲ್ಲಿ ಮಿಂಚು ರಾಧಿಕಾ ಕಣ್ಣಲ್ಲಿ ಕಾಣಿಸಿತು: ರಮೇಶ್ ಅರವಿಂದ್
ನಾಗವಲ್ಲಿ ಮಿಂಚು ರಾಧಿಕಾ ಕಣ್ಣಲ್ಲಿ ಕಾಣಿಸಿತು: ರಮೇಶ್ ಅರವಿಂದ್
ಇಲ್ಲಿ ನಾನೇ ಅಭ್ಯರ್ಥಿ: ಅಚ್ಚರಿ ಹೇಳಿಕೆ ನೀಡಿದ ಡಿಸಿಎಂ ಡಿಕೆ ಶಿವಕುಮಾರ್​
ಇಲ್ಲಿ ನಾನೇ ಅಭ್ಯರ್ಥಿ: ಅಚ್ಚರಿ ಹೇಳಿಕೆ ನೀಡಿದ ಡಿಸಿಎಂ ಡಿಕೆ ಶಿವಕುಮಾರ್​
ಬಿಹಾರದಲ್ಲಿ ಪ್ರವಾಹ ಭೀತಿ; ನೂರಾರು ಹಳ್ಳಿಗಳಿಗೆ ನುಗ್ಗಿದ ಗಂಗಾ ನದಿ ನೀರು
ಬಿಹಾರದಲ್ಲಿ ಪ್ರವಾಹ ಭೀತಿ; ನೂರಾರು ಹಳ್ಳಿಗಳಿಗೆ ನುಗ್ಗಿದ ಗಂಗಾ ನದಿ ನೀರು
ಹಾಡಹಗಲೇ ಮೆಡಿಕಲ್ ಶಾಪ್​ಗೆ ನುಗ್ಗಿ ದರೋಡೆ ಮಾಡಿದ ಕಳ್ಳರು; ವಿಡಿಯೋ ವೈರಲ್
ಹಾಡಹಗಲೇ ಮೆಡಿಕಲ್ ಶಾಪ್​ಗೆ ನುಗ್ಗಿ ದರೋಡೆ ಮಾಡಿದ ಕಳ್ಳರು; ವಿಡಿಯೋ ವೈರಲ್
ಇದ್ದಕ್ಕಿದ್ದಂತೆ ರೈಲ್ವೆ ಪ್ಲಾಟ್​ಫಾರ್ಮ್​ ಮೇಲೆ 6 ಅಡಿ ಉದ್ದದ ಹಾವು ಪ್ರತ್ಯ
ಇದ್ದಕ್ಕಿದ್ದಂತೆ ರೈಲ್ವೆ ಪ್ಲಾಟ್​ಫಾರ್ಮ್​ ಮೇಲೆ 6 ಅಡಿ ಉದ್ದದ ಹಾವು ಪ್ರತ್ಯ
ರಾಮನಗರದಲ್ಲಿ ಕೇಂದ್ರ ಸಚಿವ ಕುಮಾರಸ್ವಾಮಿಗೆ ಕೌಂಟರ್ ಕೊಟ್ಟ ಡಿಕೆಶಿ
ರಾಮನಗರದಲ್ಲಿ ಕೇಂದ್ರ ಸಚಿವ ಕುಮಾರಸ್ವಾಮಿಗೆ ಕೌಂಟರ್ ಕೊಟ್ಟ ಡಿಕೆಶಿ
ಬೀದರ್​​ನ ಐತಿಹಾಸಿಕ ಕೋಟೆ ಆವರಣದಲ್ಲಿ ಏರ್ ಶೋ ಪ್ರದರ್ಶನ
ಬೀದರ್​​ನ ಐತಿಹಾಸಿಕ ಕೋಟೆ ಆವರಣದಲ್ಲಿ ಏರ್ ಶೋ ಪ್ರದರ್ಶನ
ಬಾಂಗ್ಲಾ ತಂಡದ ಫೀಲ್ಡಿಂಗ್ ಸೆಟ್ ಮಾಡಿದ ರಿಷಭ್ ಪಂತ್
ಬಾಂಗ್ಲಾ ತಂಡದ ಫೀಲ್ಡಿಂಗ್ ಸೆಟ್ ಮಾಡಿದ ರಿಷಭ್ ಪಂತ್
ದರ್ಬಾರ್ ಗಲ್ಲಿಯಲ್ಲಿ ರಸ್ತೆಯುದ್ದಕ್ಕೂ ಪ್ಯಾಲೆಸ್ತೀನ್ ಧ್ವಜ ಶಾಮಿಯಾನ
ದರ್ಬಾರ್ ಗಲ್ಲಿಯಲ್ಲಿ ರಸ್ತೆಯುದ್ದಕ್ಕೂ ಪ್ಯಾಲೆಸ್ತೀನ್ ಧ್ವಜ ಶಾಮಿಯಾನ
ಚನ್ನಪಟ್ಟಣ: ಹೈಟೆಕ್ ಕ್ರೀಡಾಂಗಣ ನಿರ್ಮಾಣಕ್ಕೆ ಡಿಕೆಶಿ ಶಂಕುಸ್ಥಾಪನೆ
ಚನ್ನಪಟ್ಟಣ: ಹೈಟೆಕ್ ಕ್ರೀಡಾಂಗಣ ನಿರ್ಮಾಣಕ್ಕೆ ಡಿಕೆಶಿ ಶಂಕುಸ್ಥಾಪನೆ