AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಟನ್​ ಸಾಂಬಾರಿನಲ್ಲಿ ಮೂಳೆ ಸಿಗಲಿಲ್ಲ ಎಂದು ಮದುವೆಯನ್ನೇ ರದ್ದುಗೊಳಿಸಿದ ವರ

ಮಟನ್​ ಸಾಂಬಾರಿನಲ್ಲಿ ಮೂಳೆ ಸಿಗಲಿಲ್ಲ ಎಂದು ಮದುವೆಯನ್ನೇ ರದ್ದುಗೊಳಿಸಿರುವ ಘಟನೆ ತೆಲಂಗಾಣದಲ್ಲಿ ನಡೆದಿದೆ. ಮಟನ್​ನಲ್ಲಿ ಮೂಳೆ ಸಿಗಲಿಲ್ಲ ಎನ್ನುವ ಕಾರಣಕ್ಕೆ ಶುರುವಾದ ಜಗಳದಿಂದಾಗಿ ಮದುವೆ ರದ್ದುಗೊಂಡಿದೆ. ತೆಲಂಗಾಣದ ನಿಜಾಮಾಬಾದ್​ ಜಿಲ್ಲೆಯಲ್ಲಿ ಘಟನೆ ನಡೆದಿದೆ, ವಧು, ವರರಿಬ್ಬರು ಒಪ್ಪಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಮದುವೆಯ ದಿನವೂ ನಿಶ್ಚಯವಾಗಿತ್ತು.

ಮಟನ್
ನಯನಾ ರಾಜೀವ್
|

Updated on:Dec 26, 2023 | 9:26 AM

Share

ಮಟನ್​ ಸಾಂಬಾರಿನಲ್ಲಿ ಮೂಳೆ ಸಿಗಲಿಲ್ಲ ಎಂದು ಮದುವೆಯನ್ನೇ ರದ್ದುಗೊಳಿಸಿರುವ ಘಟನೆ ತೆಲಂಗಾಣದಲ್ಲಿ ನಡೆದಿದೆ. ಮಟನ್​ನಲ್ಲಿ ಮೂಳೆ ಸಿಗಲಿಲ್ಲ ಎನ್ನುವ ಕಾರಣಕ್ಕೆ ಶುರುವಾದ ಜಗಳದಿಂದಾಗಿ ಮದುವೆ ರದ್ದುಗೊಂಡಿದೆ. ತೆಲಂಗಾಣದ ನಿಜಾಮಾಬಾದ್​ ಜಿಲ್ಲೆಯಲ್ಲಿ ಘಟನೆ ನಡೆದಿದೆ, ವಧು, ವರರಿಬ್ಬರು ಒಪ್ಪಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಮದುವೆಯ ದಿನವೂ ನಿಶ್ಚಯವಾಗಿತ್ತು.

ಆ ಖುಷಿಯಲ್ಲಿ ಮಾಂಸದೂಟವನ್ನು ಏರ್ಪಡಿಸಿದ್ದರು, ಮಧುಮಗನ ಕುಟುಂಬದ ಸದಸ್ಯರು ಭಾಗವಹಿಸಿದ್ದರು. ಎಲ್ಲವೂ ಸುಸೂತ್ರವಾಗಿ ನಡೆಯುತ್ತಿರುವಾಗ ಇದ್ದಕ್ಕಿದ್ದಂತೆ ಅತಿಥಿಗಳು ಮಾಂಸಾಹಾರಿ ಖಾದ್ಯ ಮಟನ್​ ಸಾಂಬಾರಿನಲ್ಲಿ ಮೂಳೆ ಸಿಗಲಿಲ್ಲ ಎಂದು ಗಲಾಟೆ ಶುರು ಮಾಡಿದ್ದರು. ಇದು ಅಂತಿಮವಾಗಿ ಎರಡೂ ಪಕ್ಷಗಳ ನಡುವೆ ಜಗಳಕ್ಕೆ ಕಾರಣವಾಯಿತು.

ಸಮಸ್ಯೆ ಸ್ಥಳೀಯ ಪೊಲೀಸ್ ಠಾಣೆಗೆ ತಲುಪಿತು, ಮಾಂಸದ ವಿಚಾರಕ್ಕೆ ಸಂಬಂಧಿಸಿದಂತೆ ವರನ ಕಡೆಯವರಿಗೆ ಮನವರಿಕೆ ಮಾಡಲು ಅಧಿಕಾರಿಗಳು ಪ್ರಯತ್ನಿಸಿದರು.

ಆದರೆ, ವಧುವಿನ ಮನೆಯವರು ಮಾಂಸಾಹಾರದಲ್ಲಿ ಮೂಳೆಯನ್ನು ನೀಡದೆ ಅವಮಾನ ಮಾಡಿದ್ದಾರೆ ಎಂದು ವಾದಿಸಿದರು. ವಧುವಿನ ಮನೆಯವರು ಈ ಬಗ್ಗೆ ಮೊದಲೇ ತಿಳಿಸಿರಲಿಲ್ಲ, ಮೂಳೆಯನ್ನು ಊಟದಲ್ಲಿ ಸೇರಿಸಲಿಲ್ಲ ಎಂದು ವಾದಿಸಿದರು.

ಕೊನೆಗೆ ಎರಡೂ ಕಡೆಯವರು ತಮ್ಮ ತಮ್ಮ ಊರುಗಳಿಗೆ ತೆರಳಿ ಮದುವೆ ರದ್ದತಿಗೆ ಕಾರಣವಾದ ವಿಚಾರವನ್ನು ನೋಡಿ ಪೊಲೀಸರು ಹಾಗೂ ಸ್ಥಳೀಯರು ಆಶ್ಚರ್ಯಚಕಿತರಾದರು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 9:26 am, Tue, 26 December 23

ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ

ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ

ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!

ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು

ಪರಪ್ಪನ ಅಗ್ರಹಾರ ಮಹಿಳಾ ಪೊಲೀಸ್ ಸಿಬ್ಬಂದಿಗೆ ಠಾಣೆಯಲ್ಲಿ ಸೀಮಂತ

ಪ್ರೋಮೊನಲ್ಲೇ ಶಾಕ್ ಕೊಟ್ಟ ಬಿಗ್​​ಬಾಸ್: ಮನೆಯಿಂದ ಇಬ್ಬರು ಹೊರಕ್ಕೆ

ದುರಹಂಕಾರದಿಂದ ಬಿಗ್ ಬಾಸ್ ನಿರೂಪಣೆ ಬೇಡ ಅಂತ ನಾನು ಹೇಳಲಿಲ್ಲ: ಸುದೀಪ್

ಯಶಸ್ವಿ ಜೈಸ್ವಾಲ್ ಸ್ಫೋಟಕ ಸೆಂಚುರಿ: ಮುಂಬೈ ದಾಖಲೆಯ ರನ್ ಚೇಸ್​

ಮೊಟ್ಟೆಗಳಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆ?: ಭಾರಿ ಚರ್ಚೆ

‘ಮಾರ್ಕ್’ ಸಿನಿಮಾದಲ್ಲಿ ಹೀರೋಯಿನ್ ಇಲ್ಲ ಯಾಕೆ? ಉತ್ತರಿಸಿದ ಕಿಚ್ಚ ಸುದೀಪ್