ಹಿಮಾಚಲ ಪ್ರದೇಶ: ಟ್ರಾಫಿಕ್ ಜಾಮ್ನಿಂದ ಬೇಸತ್ತು ನದಿಯಲ್ಲಿ ಮಹೀಂದ್ರಾ ಥಾರ್ ಓಡಿಸಿದ ಚಾಲಕನಿಗೆ ದಂಡ
ಹಿಮಾಚಲ ಪ್ರದೇಶದಲ್ಲಾದ ಟ್ರಾಫಿಕ್ ಜಾಮ್ ನೋಡಿ ತಲೆ ಕೆಡಿಸಿಕೊಂಡು ಮಹಿಂದ್ರಾ ಥಾರ್ ಅನ್ನು ನದಿಯಲ್ಲಿ ಓಡಿಸಿದ ಚಾಲಕನಿಗೆ ದಂಡ ವಿಧಿಸಲಾಗಿದೆ. ಹೆಚ್ಚಿನ ಸಂಖ್ಯೆಯ ಪ್ರವಾಸಿಗರು ಹಿಮಾಚಲ ಪ್ರದೇಶದ ಲಾಹೌಲ್-ಸ್ಪಿಟಿಗೆ ಆಗಮಿಸುತ್ತಿದ್ದಾರೆ. ಇದರಿಂದಾಗಿ ಗುಡ್ಡಗಾಡು ಪ್ರದೇಶಗಳಲ್ಲಿ ಭಾರೀ ಟ್ರಾಫಿಕ್ ಜಾಮ್ ಉಂಟಾಗಿದೆ.

ಈ ಟ್ರಾಫಿಕ್ ಜಾಮ್ ತಪ್ಪಿಸಲು, ವ್ಯಕ್ತಿಯೊಬ್ಬರು ತಮ್ಮ ಮಹೀಂದ್ರಾ ಥಾರ್ ಎಸ್‌ಯುವಿಯನ್ನು ನದಿಗೆ ಇಳಿಸಿದರು. ಇದು ಚಲನಚಿತ್ರದ ದೃಶ್ಯದಂತೆ ಕಂಡರೂ ಸಹ, ವಾಸ್ತವದಲ್ಲಿ ಬೇರೇನೋ ನಡೆದಿದೆ.
ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಪೊಲೀಸರು ಕ್ರಮ ಕೈಗೊಂಡಿದ್ದಾರೆ. ಚಾಲಕನಿಗೆ ದಂಡ ವಿಧಿಸಲಾಗಿದೆ. ಭವಿಷ್ಯದಲ್ಲಿ ಯಾವುದೇ ಪ್ರವಾಸಿಗರು ಇಂತಹ ಕೆಲಸವನ್ನು ಮಾಡದಂತೆ ನೋಡಿಕೊಳ್ಳಲು ಪೊಲೀಸ್ ಪಡೆಯನ್ನು ಸಹ ಅಲ್ಲಿ ನಿಯೋಜಿಸಲಾಗಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಕೆಲವರು ಈ ವಿಡಿಯೋದಲ್ಲಿ ಆನಂದ್ ಮಹೀಂದ್ರಾ ಅವರನ್ನು ಟ್ಯಾಗ್ ಮಾಡುತ್ತಿದ್ದಾರೆ. ಟ್ರಾಫಿಕ್ ಜಾಮ್ ತಪ್ಪಿಸಲು ವಾಹನವನ್ನು ನದಿಗೆ ಕೊಂಡೊಯ್ಯುವುದು ಅಪಾಯಕಾರಿ ಮಾತ್ರವಲ್ಲದೆ ನದಿ ಹಾಗೂ ಜಲಚರಗಳಿಗೆ ಹಾನಿಯನ್ನುಂಟುಮಾಡುತ್ತದೆ.
ಪೊಲೀಸರು ಕ್ರಮ ಕೈಗೊಂಡು ಚಾಲಕನಿಗೆ ದಂಡ ವಿಧಿಸಲಾಗಿದೆ. ಇತ್ತೀಚೆಗೆ ಲಾಹೌಲ್-ಸ್ಪಿತಿ ಜಿಲ್ಲೆಯಲ್ಲಿ ಥಾರ್ ಚಂದ್ರ ನದಿಯನ್ನು ದಾಟುತ್ತಿರುವ ವೀಡಿಯೊ ವೈರಲ್ ಆಗಿದೆ ಎಂದು ಹೇಳಲಾಗಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ