ವೀರ್ ಬಾಲ್ ದಿವಸ್: ನಮ್ಮ ಪರಂಪರೆಯ ಬಗ್ಗೆ ಇತರ ದೇಶಗಳು ಗೌರವಿಸುತ್ತಿದೆ: ಪ್ರಧಾನಿ ಮೋದಿ

Veer Bal Divas: ದೆಹಲಿಯ ಭಾರತ್ ಮಂಟಪದಲ್ಲಿ "ವೀರ್ ಬಾಲ್ ದಿವಸ್" ಕಾರ್ಯಕ್ರಮದಲ್ಲಿ ಭಾಗವಹಿಸಿದರು. ದೆಹಲಿಯಲ್ಲಿ ಯುವಕರ ಮಾರ್ಚ್-ಪಾಸ್ಟ್​​​ಗೆ ಹಸಿರು ನಿಶಾನೆ ತೋರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದಾರೆ. ವೀರ್ ಬಲ್ ದಿವಸ್ ಭಾರತೀಯತೆಯ ರಕ್ಷಣೆ ಹಂತದ ಸಂಕೇತವಾಗಿದೆ ಎಂದು ಹೇಳಿದರು.

ವೀರ್ ಬಾಲ್ ದಿವಸ್: ನಮ್ಮ ಪರಂಪರೆಯ ಬಗ್ಗೆ ಇತರ ದೇಶಗಳು ಗೌರವಿಸುತ್ತಿದೆ: ಪ್ರಧಾನಿ ಮೋದಿ
Follow us
ಅಕ್ಷಯ್​ ಪಲ್ಲಮಜಲು​​
|

Updated on:Dec 26, 2023 | 12:53 PM

ದೆಹಲಿ, ಡಿ.26: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಇಂದು (ಡಿ.26) ದೆಹಲಿಯ ಭಾರತ್ ಮಂಟಪದಲ್ಲಿ “ವೀರ್ ಬಾಲ್ ದಿವಸ್” (Veer Baal Diwas) ಕಾರ್ಯಕ್ರಮದಲ್ಲಿ ಭಾಗವಹಿಸಿದರು. ದೆಹಲಿಯಲ್ಲಿ ಯುವಕರ ಮಾರ್ಚ್-ಪಾಸ್ಟ್​​​ಗೆ ಹಸಿರು ನಿಶಾನೆ ತೋರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದಾರೆ. ವೀರ್ ಬಲ್ ದಿವಸ್ ಭಾರತೀಯತೆಯ ರಕ್ಷಣೆ ಹಂತದ ಸಂಕೇತವಾಗಿದೆ ಎಂದು ಹೇಳಿದರು. ಈ ವರ್ಷ ಅಮೇರಿಕಾ, ಬ್ರಿಟನ್, ಆಸ್ಟ್ರೇಲಿಯಾ, ನ್ಯೂಜಿಲೆಂಡ್, ಯುಎಇ ಮತ್ತು ಗ್ರೀಸ್ ಕೂಡ ‘ವೀರ್ ಬಾಲ್ ದಿವಸ್’ ಕಾರ್ಯಕ್ರಮಗಳನ್ನು ಆಯೋಜಿಸಿವೆ ಎಂದು ಹೇಳಿದರು.

ಭಾರತ ಅತಿ ಹೆಚ್ಚು ಯುವ ಶಕ್ತಿ ಹೊಂದಿರುವ ರಾಷ್ಟ್ರ ಮತ್ತು ದೇಶದ ಭವಿಷ್ಯದ ಅಭಿವೃದ್ಧಿಗೆ ಅವರ ಪಾತ್ರ ದೊಡ್ಡದು ಎಂದು ಹೇಳಿದರು. ನಾವು ಇಂದು ದೇಶದ ಅಮೃತ ಕಾಲದಲ್ಲಿದ್ದೇವೆ. ಅನೇಕ ವಿಚಾರಗಳಿಂದ ಭಾರತ ಭವಿಷ್ಯದ ಭವ್ಯವಾದ ಅಧ್ಯಾಯವನ್ನು ಬರೆಯುತ್ತಿವೆ. ನಮ್ಮ ದೇಶದಲ್ಲಿ ಅತಿ ಹೆಚ್ಚು ಯುವ ಸಂಖ್ಯೆ ಇದೆ. ಈ ಯುವ ಶಕ್ತಿ ಭಾರತವನ್ನು ಎತ್ತರಕ್ಕೆ ಕೊಂಡೊಯ್ಯಬಲ್ಲದು ಎಂದು ಹೇಳಿದರು.

ಇಲ್ಲಿ ಯುವ ಶಕ್ತಿಯ ಹುಟ್ಟು, ಪ್ರದೇಶಗಳನ್ನು ನೋಡದೆ ಕೆಲಸ ಮಾಡಬೇಕಿದೆ. ಹಾಗೂ ಪ್ರತಿಯೊಬ್ಬ ಯುವಕ-ಯುವತಿಯು ನಮ್ಮ ದೇಶದ ಅಭಿವೃದ್ಧಿಗಾಗಿ ಕೆಲಸ ಮಾಡಬೇಕಿದೆ ಎಂದು ಹೇಳಿದರು. ಈ ಕಲ್ಪನೆಯನ್ನು ನಮ್ಮ ಸರ್ಕಾರ ಯುವಶಕ್ತಿಗಳಿಗೆ ನೀಡಿದೆ. ಇನ್ನು ಇದನ್ನು ಮುನ್ನಡೆಸುವ ಕೆಲಸ ಈ ಯುವ ಸಮಾಜದ್ದು. ಹಾಗೂ ನಮ್ಮ ದೇಶದ ಆರ್ಥಿಕತೆಯಲ್ಲೂ ಬಲವರ್ಧನೆಯನ್ನು ಹೊಂದಿದೆ.

ನಮ್ಮ ಇಂದಿನ ಯುವ ಶಕ್ತಿ ಆರೋಗ್ಯವಾಗಿರಬೇಕು. ತಮ್ಮ ಫಿಟ್​​​ ಬಗ್ಗೆ ಹೆಚ್ಚು ಗಮನ ನೀಡಬೇಕು. ಕೆಟ್ಟ ಅಭ್ಯಾಸಗಳಲ್ಲಿ ತೋಡಗಿಸಿಕೊಳ್ಳಬಾರದು. ಆಧುನಿಕತೆ ಕಡೆಗೆ ಹೋಗಬೇಕು. ಆದರೆ ಅದರಲ್ಲಿ ಕೆಟ್ಟದು ಯಾವುದು. ಒಳ್ಳೆಯದು ಯಾವುದು ಎಂದು ತಿಳಿದುಕೊಳ್ಳಬೇಕು. ಡಿಜಿಟಲ್​​​​ ಬಗ್ಗೆ ಹೆಚ್ಚು ತಿಳಿದುಕೊಳ್ಳಬೇಕು. ಈ ಸಮಯದಲ್ಲಿ ಮಾದಕ ವಸ್ತುಗಳ ವಿರುದ್ಧ ಆಂದೋಲನ ನಡೆಸುವಂತೆ ಧಾರ್ಮಿಕ ಮುಖಂಡರು ಮತ್ತು ಸಾಮಾಜಿಕ ಸಂಘಟನೆಗಳಿಗೆ ಮೋದಿ ಮನವಿ ಮಾಡಿದರು.

ಇದನ್ನೂ ಓದಿ: ಸಬ್​ಕಾ ಸಾಥ್, ಸಬ್​ಕಾ ವಿಕಾಸ್ ಲೋಕ ಕಲ್ಯಾಣಕ್ಕೆ ಮಾರ್ಗದರ್ಶಿ ಸೂತ್ರವಾಗಬಹುದು: ಮೋದಿ

ಇಂದು ನಾವು ನಮ್ಮ ಪರಂಪರೆಯ ಬಗ್ಗೆ ಹೆಮ್ಮೆ ಪಡುತ್ತಿರುವಾಗ ಜಗತ್ತು ನಮ್ಮ ನೋಡುತ್ತಿದೆ. ಹಾಗೂ ನಮ್ಮನ್ನು ಅನುಸರಿಸುತ್ತಿದ್ದಾರೆ. ಭಾರತ ಈಗ ತುಂಬಾ ವಿಭಿನ್ನವಾಗಿದೆ. ಇಂದಿನ ಭಾರತವು ತನ್ನದೇ ಆದ ಜನರು, ಸಾಮರ್ಥ್ಯ ಮತ್ತು ಸ್ಫೂರ್ತಿಗಳಲ್ಲಿ ವಿಶ್ವಾಸವನ್ನು ಹೊಂದಿದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಕೇಂದ್ರ ಸಚಿವೆ ಸ್ಮೃತಿ ಇರಾನಿ ಮತ್ತು ಇತರ ಬಿಜೆಪಿ ನಾಯಕರು ಉಪಸ್ಥಿತರಿದ್ದರು.

ಗುರು ಗೋಬಿಂದ್ ಸಿಂಗ್ ಅವರ ಪುತ್ರರಾದ ಸಾಹಿಬ್‌ಜಾದಾಸ್ ಬಾಬಾ ಜೊರಾವರ್ ಸಿಂಗ್ ಮತ್ತು ಬಾಬಾ ಫತೇ ಸಿಂಗ್ ಅವರ ಹುತಾತ್ಮರ ನೆನಪಿಗಾಗಿ ಡಿಸೆಂಬರ್ 26ನ್ನು ‘ವೀರ್ ಬಾಲ್ ದಿವಸ್’ ಎಂದು ಆಚರಿಸಲಾಗುವುದು ಎಂದು ಕಳೆದ ವರ್ಷ ಪ್ರಧಾನಿ ಮೋದಿ ಘೋಷಿಸಿದರು .

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 12:08 pm, Tue, 26 December 23

ತಂದೆ ಮುಖ ನೋಡಿ ಅಳು ನಿಲ್ಲಿಸಲೇ ಇಲ್ಲ ಉಗ್ರಂ ಮಂಜು; ಎಮೋಷನಲ್ ಎಪಿಸೋಡ್
ತಂದೆ ಮುಖ ನೋಡಿ ಅಳು ನಿಲ್ಲಿಸಲೇ ಇಲ್ಲ ಉಗ್ರಂ ಮಂಜು; ಎಮೋಷನಲ್ ಎಪಿಸೋಡ್
ಪೊಲೀಸರ ಮೇಲೆ ಅಪಾರ ನಂಬಿಕೆಯಿದೆ, ಸಿಬಿಐ ತನಿಖೆ ಬೇಕಿಲ್ಲ: ಸಿದ್ದರಾಮಯ್ಯ
ಪೊಲೀಸರ ಮೇಲೆ ಅಪಾರ ನಂಬಿಕೆಯಿದೆ, ಸಿಬಿಐ ತನಿಖೆ ಬೇಕಿಲ್ಲ: ಸಿದ್ದರಾಮಯ್ಯ
ಸಂವಿಧಾನದ ಆಶಯಗಳಿಗೆ ಕಾಂಗ್ರೆಸ್​ನಿಂದ ಅಪಪ್ರಚಾರ: ಸಿಟಿ ರವಿ
ಸಂವಿಧಾನದ ಆಶಯಗಳಿಗೆ ಕಾಂಗ್ರೆಸ್​ನಿಂದ ಅಪಪ್ರಚಾರ: ಸಿಟಿ ರವಿ
ಯುವಕ ಯುವತಿಯರ ಜೊತೆ ಮಧ್ಯವಯಸ್ಕ ಮಹಿಳೆಯರೂ ಪಬ್​ಗೆ ಬಂದಿದ್ದರು
ಯುವಕ ಯುವತಿಯರ ಜೊತೆ ಮಧ್ಯವಯಸ್ಕ ಮಹಿಳೆಯರೂ ಪಬ್​ಗೆ ಬಂದಿದ್ದರು
ಹೊಸ ವರ್ಷಕ್ಕೆ ಸಿಹಿ ಸುದ್ದಿ ಕೊಟ್ಟ ಶಿವಣ್ಣ: ವಿಡಿಯೋ ನೋಡಿ
ಹೊಸ ವರ್ಷಕ್ಕೆ ಸಿಹಿ ಸುದ್ದಿ ಕೊಟ್ಟ ಶಿವಣ್ಣ: ವಿಡಿಯೋ ನೋಡಿ
ನ್ಯೂ ಈಯರ್ ರೆವೆಲ್ಲರ್​​ಗಳ ಅಮಲಿನ ಹಾವಭಾವಗಳು ನಗೆ ಹುಟ್ಟಿಸುವಂತಿದ್ದವು!
ನ್ಯೂ ಈಯರ್ ರೆವೆಲ್ಲರ್​​ಗಳ ಅಮಲಿನ ಹಾವಭಾವಗಳು ನಗೆ ಹುಟ್ಟಿಸುವಂತಿದ್ದವು!
ಗುಂಡಿನ ಮತ್ತೇ ಗಮ್ಮತ್ತು, ಗೆಳೆಯ ಹೊತ್ತೊಯ್ಯದಿದ್ದರೆ ಕಾದಿತ್ತು ಆಪತ್ತು
ಗುಂಡಿನ ಮತ್ತೇ ಗಮ್ಮತ್ತು, ಗೆಳೆಯ ಹೊತ್ತೊಯ್ಯದಿದ್ದರೆ ಕಾದಿತ್ತು ಆಪತ್ತು
ಕಂಠಮಟ್ಟ ಕುಡಿದು ರಸ್ತೆಯಲ್ಲಿ ಓಲಾಡುತ್ತಇತರರ ಕಣ್ಣಿಗೆ ಆಹಾರವಾದ ಯುವತಿಯರು
ಕಂಠಮಟ್ಟ ಕುಡಿದು ರಸ್ತೆಯಲ್ಲಿ ಓಲಾಡುತ್ತಇತರರ ಕಣ್ಣಿಗೆ ಆಹಾರವಾದ ಯುವತಿಯರು
New Year Party: ಕೋರಮಂಗಲದಲ್ಲಿ ಮದ್ಯದ ಮತ್ತಲ್ಲಿ ತೂರಾಡಿದ ಯುವಕ ಯುವತಿಯರು
New Year Party: ಕೋರಮಂಗಲದಲ್ಲಿ ಮದ್ಯದ ಮತ್ತಲ್ಲಿ ತೂರಾಡಿದ ಯುವಕ ಯುವತಿಯರು
ಹೊಸ ವರ್ಷಾಚರಣೆಗೆ ಮೈಸೂರಿನಲ್ಲಿ ಯುವತಿಯರ ಮಸ್ತ್ ಡ್ಯಾನ್ಸ್: ವಿಡಿಯೋ ನೋಡಿ
ಹೊಸ ವರ್ಷಾಚರಣೆಗೆ ಮೈಸೂರಿನಲ್ಲಿ ಯುವತಿಯರ ಮಸ್ತ್ ಡ್ಯಾನ್ಸ್: ವಿಡಿಯೋ ನೋಡಿ