ಹಿಂದೂ ಎಂಬುದು ಧರ್ಮವಲ್ಲ, ಮೋಸ: ಎಸ್​​ಪಿ ನಾಯಕ ಸ್ವಾಮಿ ಪ್ರಸಾದ್ ಮೌರ್ಯ

1955 ರಲ್ಲಿ, ಸುಪ್ರೀಂಕೋರ್ಟ್ ತನ್ನ ಆದೇಶದಲ್ಲಿ ಹಿಂದೂ ಧರ್ಮವಲ್ಲ ಆದರೆ ಜೀವನ ವಿಧಾನ ಎಂದು ಹೇಳಿದೆ. ಇದು 200 ಕ್ಕೂ ಹೆಚ್ಚು ಧರ್ಮಗಳ ಒಕ್ಕೂಟವಾಗಿದೆ. ಮೋಹನ್ ಭಾಗವತ್ ಕೂಡ ಒಂದಲ್ಲ ಎರಡೆರಡು ಬಾರಿ ಹಿಂದೂ ಎನ್ನುವುದು ಧರ್ಮವಲ್ಲ, ಜೀವನ ವಿಧಾನ ಎಂದು ಹೇಳಿದ್ದರು ಎಂದ ಸಮಾಜವಾದಿ ಪಕ್ಷದ ಸ್ವಾಮಿ ಪ್ರಸಾದ್ ಮೌರ್ಯ.

ಹಿಂದೂ ಎಂಬುದು ಧರ್ಮವಲ್ಲ, ಮೋಸ: ಎಸ್​​ಪಿ ನಾಯಕ ಸ್ವಾಮಿ ಪ್ರಸಾದ್ ಮೌರ್ಯ
ಸ್ವಾಮಿ ಪ್ರಸಾದ್ ಮೌರ್ಯ
Follow us
ರಶ್ಮಿ ಕಲ್ಲಕಟ್ಟ
|

Updated on: Dec 26, 2023 | 12:57 PM

ದೆಹಲಿ ಡಿಸೆಂಬರ್ 26: ಆಗಾಗ್ಗೆ ವಿವಾದಿತ ಹೇಳಿಕೆಗಳಿಂದ ಸುದ್ದಿಯಾಗುತ್ತಿರುವ ಸಮಾಜವಾದಿ ಪಕ್ಷದ (Samajwadi Party) ನಾಯಕ ಸ್ವಾಮಿ ಪ್ರಸಾದ್ ಮೌರ್ಯ (Swami Prasad Maurya) ಇದೀಗ ಹಿಂದೂ ಏಕ್ ಧೋಖಾ ಹೈ (ಹಿಂದೂ ಎಂಬುದು ಮೋಸ) ಎಂಬ ಹೇಳಿಕೆ ನೀಡಿ ವಿವಾದ ಮೈಮೇಲೆ ಎಳೆದುಕೊಂಡಿದ್ದಾರೆ. ಮೌರ್ಯ ಅವರು ಹಿಂದೂ (Hindu) ಧರ್ಮವನ್ನು “ಮೋಸ” ಎಂದು ಕರೆದಿದ್ದಲ್ಲದೆ, ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಮುಖ್ಯಸ್ಥ ಮೋಹನ್ ಭಾಗವತ್ ಮತ್ತು ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಇದೇ ಮಾತನ್ನು ಹೇಳಿದ್ದಾರೆ ಎಂದಿದ್ದಾರೆ.

“1955 ರಲ್ಲಿ, ಸುಪ್ರೀಂಕೋರ್ಟ್ ತನ್ನ ಆದೇಶದಲ್ಲಿ ಹಿಂದೂ ಧರ್ಮವಲ್ಲ ಆದರೆ ಜೀವನ ವಿಧಾನ ಎಂದು ಹೇಳಿದೆ. ಇದು 200 ಕ್ಕೂ ಹೆಚ್ಚು ಧರ್ಮಗಳ ಒಕ್ಕೂಟವಾಗಿದೆ. ಮೋಹನ್ ಭಾಗವತ್ ಕೂಡ ಒಂದಲ್ಲ ಎರಡೆರಡು ಬಾರಿ ಹಿಂದೂ ಎನ್ನುವುದು ಧರ್ಮವಲ್ಲ, ಜೀವನ ವಿಧಾನ ಎಂದು ಹೇಳಿದ್ದರು. ಪ್ರಧಾನಿ ನರೇಂದ್ರ ಮೋದಿ ಕೂಡ ಹಿಂದೂ ಧರ್ಮವಲ್ಲ ಎಂದು ಹೇಳಿದ್ದಾರೆ. ಗಡ್ಕರಿ ಕೂಡ ಇದೇ ಮಾತನ್ನು ಮಾಧ್ಯಮ ಸಂವಾದದಲ್ಲಿ ಹೇಳಿದ್ದರು” ಎಂದು ಸೋಮವಾರ ನವದೆಹಲಿಯಲ್ಲಿ ನಡೆದ ರಾಷ್ಟ್ರೀಯ ಬೌದ್ಧ ಮತ್ತು ಬಹುಜನ ಹಕ್ಕುಗಳ ಸಮ್ಮೇಳನದಲ್ಲಿ ಮಾತನಾಡಿದ ಮೌರ್ಯ ಹೇಳಿದ್ದಾರೆ.

“ಆದರೆ ಅವರು ಇದನ್ನು ಹೇಳಿದಾಗ, ಯಾರ ಭಾವನೆಗಳಿಗೂ ಧಕ್ಕೆಯಾಗುವುದಿಲ್ಲ. ಆದರೆ ಸ್ವಾಮಿ ಪ್ರಸಾದ್ ಮೌರ್ಯ ಅವರು ಹಿಂದೂ ಧರ್ಮವಲ್ಲ, ಮೋಸ ಮತ್ತು ನಾವು ಹಿಂದೂ ಧರ್ಮ ಎಂದು ಕರೆಯುವುದು ಕೆಲವು ಜನರಿಗೆ ವ್ಯಾಪಾರವಾಗಿದೆ ಎಂದು ಹೇಳಿದಾಗ, ಇಡೀ ದೇಶದಲ್ಲಿ ಆಕ್ರೋಶ ಭುಗಿಲೇಳುತ್ತದೆ ಎಂದಿದ್ದಾರೆ.

1955ರಲ್ಲಿ ಸುಪ್ರೀಂಕೋರ್ಟ್ ಇದೇ ಮಾತನ್ನು ಹೇಳಿದಾಗ ಯಾರೂ ಅಸಮಾಧಾನ ವ್ಯಕ್ತಪಡಿಸಲಿಲ್ಲ. ಆದರೆ ಸ್ವಾಮಿ ಪ್ರಸಾದ್ ಮೌರ್ಯ ಹೇಳಿದಾಗ, ದೇಶಾದ್ಯಂತ ಎಫ್‌ಐಆರ್‌ಗಳು ದಾಖಲಾಗಿವೆ. ಭಾರತೀಯ ಸಂವಿಧಾನವು ಹೇಳುತ್ತಿರುವಂತೆಯೇ ನಾನು ಹೇಳುತ್ತಿದ್ದೇನೆ ಎಂದಿದ್ದಾರೆ ಅವರು.

“ಬ್ರಾಹ್ಮಣರು, ಕ್ಷತ್ರಿಯರು ಮತ್ತು ವೈಶ್ಯರು ಒಟ್ಟಾಗಿ ಜನಸಂಖ್ಯೆಯ ಶೇಕಡಾ ಎಂಟರಷ್ಟಿದ್ದಾರೆ. ಈ ಎಂಟು ಪ್ರತಿಶತವು ಸ್ವಂತವಾಗಿ ಸರ್ಕಾರ ರಚಿಸಲು ಸಾಧ್ಯವಿಲ್ಲ. ಇವು ಹಿಂದುಳಿದ ವರ್ಗಗಳ ಶೋಷಣೆ ಮಾಡಿ ಹಿಂದೂ ಹೆಸರಿನಲ್ಲಿ ಸರ್ಕಾರ ರಚಿಸಿವೆ. ಮತದ ಉದ್ದೇಶಕ್ಕಾಗಿ ನಾವು ಹಿಂದೂಗಳು. ಆದರೆ ಸರ್ಕಾರ ರಚಿಸಿದ ನಂತರ ನಾವು ಹಿಂದೂಗಳಲ್ಲ. ಹಾಗಿದ್ದಲ್ಲಿ, ಅವರು ಎಂದಿಗೂ ಪರಿಶಿಷ್ಟ ಜಾತಿಗಳು, ಪರಿಶಿಷ್ಟ ಪಂಗಡಗಳು ಅಥವಾ ಹಿಂದುಳಿದ ಜಾತಿಗಳಿಗೆ ಮೀಸಲಾತಿಯನ್ನು ರದ್ದುಗೊಳಿಸುತ್ತಿರಲಿಲ್ಲ ಎಂದು ಮೌರ್ಯ ಹೇಳಿದರು.

ಅಧಿಕಾರದ ಉನ್ನತ ಸ್ತರದಲ್ಲಿ ಕುಳಿತವರು ಮೀಸಲಾತಿಯನ್ನು ದೂರ ಮಾಡುವ ಮೂಲಕ ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸುತ್ತಿದ್ದಾರೆ ಎಂದು ಸಮಾಜವಾದಿ ಪಕ್ಷದ ಎಂಎಲ್‌ಸಿ ಹೇಳಿದರು.

ಸಂವಿಧಾನದ ಮೇಲೆ ಪ್ರಮಾಣ ಮಾಡುವವರು, ಪ್ರಧಾನಿ ಮತ್ತು ಮುಖ್ಯಮಂತ್ರಿಗಳು, ಅಧಿಕಾರದ ಚುಕ್ಕಾಣಿ ಹಿಡಿದವರು ಮನುವಾದಕ್ಕೆ ಆದ್ಯತೆ ನೀಡುತ್ತಿದ್ದಾರೆ. ಸಂವಿಧಾನವನ್ನು ನಿಷ್ಪರಿಣಾಮಕಾರಿಯಾಗಿ ಮಾಡಲಾಗುತ್ತಿದೆ. ಮೀಸಲಾತಿಗಳನ್ನು ತೆಗೆದುಹಾಕಲಾಗುತ್ತಿದೆ. ಪ್ರಜಾಪ್ರಭುತ್ವವನ್ನೂ ದುರ್ಬಲಗೊಳಿಸಲಾಗುತ್ತಿದೆ. ಸುಮಾರು 150 ಸಂಸದರನ್ನು ಸಂಸತ್ತಿನಿಂದ ಅನರ್ಹಗೊಳಿಸಲಾಯಿತು. ಇದು ಪ್ರಜಾಪ್ರಭುತ್ವದ ವಿರುದ್ಧದ ಷಡ್ಯಂತ್ರವಲ್ಲವೇ? ಸರ್ಕಾರ ತನ್ನ ಮಾತನ್ನು ತನ್ನ ಜನರ ಮೇಲೆ ಹೇರುತ್ತಿಲ್ಲವೇ? ಎಂದು ಮೌರ್ಯ ಪ್ರಶ್ನಿಸಿದ್ದಾರೆ.

ಸ್ವಾಮಿ ಪ್ರಸಾದ್ ಮೌರ್ಯ ವಿವಾದಾತ್ಮಕ ಹೇಳಿಕೆಗಳು

ಸ್ವಾಮಿ ಪ್ರಸಾದ್ ಮೌರ್ಯ ಅವರು ತಮ್ಮ ‘ರಾಮಚರಿತಮಾನಸ್’ ಹೇಳಿಕೆಗಳ ಮೂಲಕ ದೊಡ್ಡ ವಿವಾದವನ್ನು ಹುಟ್ಟುಹಾಕಿದ್ದರು. ಈ ಹಿಂದೆ ಆಗಸ್ಟ್‌ನಲ್ಲಿ ಹಿಂದೂ ಧರ್ಮ “ಮೋಸ” ಎಂದು ಹೇಳಿದ್ದರು.

‘X’ ನಲ್ಲಿ ಪೋಸ್ಟ್ ಮಾಡಿದ ವಿಡಿಯೊದಲ್ಲಿ ಮೌರ್ಯ ಅವರು, “ಬ್ರಾಹ್ಮಣವಾದದ ಬೇರುಗಳು ತುಂಬಾ ಆಳವಾಗಿವೆ ಮತ್ತು ಎಲ್ಲಾ ಅಸಮಾನತೆಗೆ ಬ್ರಾಹ್ಮಣತ್ವವೂ ಕಾರಣ. ಹಿಂದೂ ಎಂಬ ಧರ್ಮವಿಲ್ಲ, ಹಿಂದೂ ಧರ್ಮ ಕೇವಲ ನೆಪ ಮಾತ್ರ. ಅದೇ ಬ್ರಾಹ್ಮಣ ಧರ್ಮವನ್ನು ಹಿಂದೂ ಧರ್ಮ ಎಂದು ಕರೆಯುವ ಮೂಲಕ ಈ ದೇಶದ ದಲಿತರು, ಆದಿವಾಸಿಗಳು ಮತ್ತು ಹಿಂದುಳಿದ ಜನರನ್ನು ಬಲೆಗೆ ಬೀಳಿಸುವ ಸಂಚು ನಡೆಯುತ್ತಿದೆ.

“ಲಕ್ಷ್ಮಿ ನಾಲ್ಕು ಕೈಗಳೊಂದಿಗೆ ಹೇಗೆ ಹುಟ್ಟುತ್ತಾಳೆ? ಎಂದು ಪ್ರಶ್ನಿಸಿದ್ದರು ಮೌರ್ಯ. ಜಗತ್ತಿನಲ್ಲಿ ಎಲ್ಲಿಯಾದರೂ ಜನಿಸಿದ ಪ್ರತಿ ಮಗುವಿಗೆ ಎರಡು ಕೈಗಳು, ಎರಡು ಕಾಲುಗಳು, ಎರಡು ಕಿವಿಗಳು ಮತ್ತು ಎರಡು ಕಣ್ಣುಗಳಿವೆ ಮತ್ತು ಎಂಟು ಕೈಗಳು ಮತ್ತು ಹತ್ತು ಕೈಗಳ ಮಗು ಇದುವರೆಗೆ ಹುಟ್ಟಿಲ್ಲವಾದರೆ ಹೇಗೆ ಲಕ್ಷ್ಮಿ ದೇವಿಯು ನಾಲ್ಕು ಕೈಗಳಿಂದ ಹುಟ್ಟಿದ್ದು ಹೇಗೆ ಎಂದು ಕೇಳಿದ್ದರು.

ಇದನ್ನೂ ಓದಿ: Hate speech case: ಸಮಾಜವಾದಿ ಪಕ್ಷದ ನಾಯಕ ಅಜಂ ಖಾನ್ ಮೇಲ್ಮನವಿಯನ್ನು ತಿರಸ್ಕರಿಸಿದ ಕೋರ್ಟ್

ಬಿಜೆಪಿ ಪ್ರತಿಕ್ರಿಯೆ

ಮೌರ್ಯ ಅವರು ಹೇಳಿರುವ “ಹಿಂದೂ ಏಕ್ ಧೋಖಾ ಹೈ” ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಕೇಂದ್ರ ಸಚಿವ ನಿತ್ಯಾನಂದ ರಾಯ್ ಅವರು, “ಸ್ವಾಮಿ ಪ್ರಸಾದ್ ಮೌರ್ಯ ಅಥವಾ ಇಂಡಿಯಾ  ಮೈತ್ರಿಕೂಟದ ಯಾವುದೇ ನಾಯಕರಾಗಲಿ, ಅವರಿಗೆ ‘ಧರ್ಮ’ದ ಅರ್ಥ ಅರ್ಥವಾಗುವುದಿಲ್ಲ. ಅವರ ಸಿದ್ಧಾಂತವು ಸಮಾಧಾನಗೊಳಿಸುವಿಕೆಯ ಮೇಲೆ ಆಧಾರಿತವಾಗಿದೆ ಮತ್ತು ಇದನ್ನು ಮತಕ್ಕಾಗಿ ಮಾಡಲಾಗುತ್ತದೆ.

ಕಳೆದ ತಿಂಗಳು ಬಿಜೆಪಿ ಅಧ್ಯಕ್ಷ ಭೂಪೇಂದ್ರ ಚೌಧರಿ ಅವರು ಲಕ್ಷ್ಮಿ ದೇವಿಯ ಮೇಲಿನ ಮೌರ್ಯ ಹೇಳಿಕೆಗೆ ಸಂಬಂಧಿಸಿದಂತೆ ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ವಿರುದ್ಧ ವಾಗ್ದಾಳಿ ನಡೆಸಿದ್ದರು. ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರು ರಾಮಾಯಣದ ಅವಮಾನದ ಬಗ್ಗೆ ಮೌನ ವಹಿಸಿದ್ದರು. ಈಗ ಮಾತಾ ಮಹಾಲಕ್ಷ್ಮಿ ಜೀ ಅವರ ಅವಮಾನದ ಬಗ್ಗೆ ಮೌನವಾಗಿದ್ದಾರೆ ಎಂದು ಚೌಧರಿ ಹೇಳಿದರು. ಸ್ವಾಮಿ ಪ್ರಸಾದ್ ಮೌರ್ಯ ಅವರನ್ನು ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯನ್ನಾಗಿ ಮಾಡುವ ಮೂಲಕ ಸನಾತನ ಹಿಂದೂ ಧರ್ಮವನ್ನು ಅವಮಾನಿಸುವ ಕಾರ್ಯಸೂಚಿಯನ್ನು ಎಸ್‌ಪಿ ಮುಖ್ಯಸ್ಥರೇ ಹಸ್ತಾಂತರಿಸಿದ್ದಾರೆ ಎಂದು ಇದು ಸಾಬೀತುಪಡಿಸುತ್ತದೆ ಎಂದು ಚೌಧರಿ ಹೇಳಿದ್ದರು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಚಾಮುಂಡಿ ಬೆಟ್ಟಕ್ಕೆ ಬಂದ ಸುದೀಪ್​; ಕಿಚ್ಚನ ನೋಡಲು ಜನಸಾಗರ
ಚಾಮುಂಡಿ ಬೆಟ್ಟಕ್ಕೆ ಬಂದ ಸುದೀಪ್​; ಕಿಚ್ಚನ ನೋಡಲು ಜನಸಾಗರ
ಸುದೀಪ್ ಇರುವಾಗಲೇ ಬಿಗ್ ಬಾಸ್ ಸ್ಪರ್ಧಿಗಳಿಗೆ ಸುತ್ತಿಗೆ ಪೆಟ್ಟು, ಮಾತಿನ ಏಟು
ಸುದೀಪ್ ಇರುವಾಗಲೇ ಬಿಗ್ ಬಾಸ್ ಸ್ಪರ್ಧಿಗಳಿಗೆ ಸುತ್ತಿಗೆ ಪೆಟ್ಟು, ಮಾತಿನ ಏಟು
ಹೊಸ ವರ್ಷ ಆಚರಣೆಗೆ ಬೆಂಗಳೂರು ಸಿದ್ಧ: ಬಂದೋಬಸ್ತ್ ಹೇಗಿರುತ್ತೆ ಗೊತ್ತಾ?
ಹೊಸ ವರ್ಷ ಆಚರಣೆಗೆ ಬೆಂಗಳೂರು ಸಿದ್ಧ: ಬಂದೋಬಸ್ತ್ ಹೇಗಿರುತ್ತೆ ಗೊತ್ತಾ?
ಬೆಂಕಿ ಹೊತ್ತಿಕೊಂಡ ಏರ್​ ಕೆನಡಾ ವಿಮಾನ ಲ್ಯಾಂಡಿಂಗ್ ಆಗಿದ್ಹೇಗೆ ನೋಡಿ
ಬೆಂಕಿ ಹೊತ್ತಿಕೊಂಡ ಏರ್​ ಕೆನಡಾ ವಿಮಾನ ಲ್ಯಾಂಡಿಂಗ್ ಆಗಿದ್ಹೇಗೆ ನೋಡಿ
ಹೈ ಡ್ರಾಮಾ... ಕಾಲಲ್ಲಿ ಕ್ಯಾಚ್ ಹಿಡಿದ ಕೆಎಲ್ ರಾಹುಲ್, ಗೆರೆ ದಾಟಿದ ಬುಮ್ರಾ
ಹೈ ಡ್ರಾಮಾ... ಕಾಲಲ್ಲಿ ಕ್ಯಾಚ್ ಹಿಡಿದ ಕೆಎಲ್ ರಾಹುಲ್, ಗೆರೆ ದಾಟಿದ ಬುಮ್ರಾ
ಸರ್ಕಾರಿ ಶಾಲೆಯ ಮಕ್ಕಳಿಗೆ ವಿಮಾನ ಪ್ರಯಾಣ ಭಾಗ್ಯ, ಪಾಲಕರ ಖುಷಿ ನೋಡಿ
ಸರ್ಕಾರಿ ಶಾಲೆಯ ಮಕ್ಕಳಿಗೆ ವಿಮಾನ ಪ್ರಯಾಣ ಭಾಗ್ಯ, ಪಾಲಕರ ಖುಷಿ ನೋಡಿ
Video: ಭೀಕರ ಅಪಘಾತ, ಅಗ್ನಿಶಾಮಕ ವಾಹನಕ್ಕೆ ಡಿಕ್ಕಿ ಹೊಡೆದ ಹೈಸ್ಪೀಡ್ ರೈಲು
Video: ಭೀಕರ ಅಪಘಾತ, ಅಗ್ನಿಶಾಮಕ ವಾಹನಕ್ಕೆ ಡಿಕ್ಕಿ ಹೊಡೆದ ಹೈಸ್ಪೀಡ್ ರೈಲು
ಬೆಳ್ಳಂಬೆಳಗ್ಗೆ ಬಾರ್​ಗಳ ಮೇಲೆ ದಾಳಿ, ಮಾಲೀಕರ ಕಿಕ್ ಇಳಿಸಿದ ಪೊಲೀಸರು
ಬೆಳ್ಳಂಬೆಳಗ್ಗೆ ಬಾರ್​ಗಳ ಮೇಲೆ ದಾಳಿ, ಮಾಲೀಕರ ಕಿಕ್ ಇಳಿಸಿದ ಪೊಲೀಸರು
ತ್ರಿವಿಕ್ರಮ್​ ಬಗ್ಗೆ ಭವ್ಯಾ ಹೇಳಿದ ಮಾತು ಕೇಳಿ ನಕ್ಕ ಕಿಚ್ಚ
ತ್ರಿವಿಕ್ರಮ್​ ಬಗ್ಗೆ ಭವ್ಯಾ ಹೇಳಿದ ಮಾತು ಕೇಳಿ ನಕ್ಕ ಕಿಚ್ಚ
3 ಸುಲಭ ಕ್ಯಾಚ್ ಕೈಚೆಲ್ಲಿದ ಜೈಸ್ವಾಲ್: ಆಕ್ರೋಶ ಹೊರಹಾಕಿದ ರೋಹಿತ್ ಶರ್ಮಾ
3 ಸುಲಭ ಕ್ಯಾಚ್ ಕೈಚೆಲ್ಲಿದ ಜೈಸ್ವಾಲ್: ಆಕ್ರೋಶ ಹೊರಹಾಕಿದ ರೋಹಿತ್ ಶರ್ಮಾ