New Parliament Building Inauguration: ನೂತನ ಸಂಸತ್ ಭವನ ಉದ್ಘಾಟಿಸಿದ ಪ್ರಧಾನಿ ಮೋದಿ

|

Updated on: May 28, 2023 | 9:18 AM

ಪ್ರಧಾನಿ ನರೇಂದ್ರ ಮೋದಿ ನೂತನ ಸಂಸತ್​ ಭವನದ ಉದ್ಘಾಟನಾ ಕಾರ್ಯಕ್ರಮವನ್ನು ನೆರವೇರಿಸಿದ್ದಾರೆ.

New Parliament Building Inauguration: ನೂತನ ಸಂಸತ್ ಭವನ ಉದ್ಘಾಟಿಸಿದ ಪ್ರಧಾನಿ ಮೋದಿ
ನರೇಂದ್ರ ಮೋದಿ
Follow us on

ಪ್ರಧಾನಿ ನರೇಂದ್ರ ಮೋದಿ(Narendra Modi) ನೂತನ ಸಂಸತ್​ ಭವನದ ಉದ್ಘಾಟನಾ ಕಾರ್ಯಕ್ರಮವನ್ನು ನೆರವೇರಿಸಿದ್ದಾರೆ. ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರ ಆಸನದ ಬಳಿ ಐತಿಹಾಸಿಕ ರಾಜದಂಡ ಸೆಂಗೋಲ್​ ಸ್ಥಾಪಿಸಲಾಯಿತು. ಇದೇ ಸಂದರ್ಭದಲ್ಲಿ ಪೂಜೆ ಹಾಗೂ ಸರ್ವಧರ್ಮ ಪ್ರಾರ್ಥನೆ ನಡೆಯಿತು. ನೂತನ ಕಟ್ಟಡದ ಸ್ಮರಣ ಫಲಕವನ್ನು ಅನಾವರಣಗೊಳಿಸಿದರು. ಸಮಾರಂಭದಲ್ಲಿ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಮತ್ತು ಅಧೀನಂ ಗಣ್ಯರು ಉಪಸ್ಥಿತರಿದ್ದರು.

ಸಾಂಪ್ರದಾಯಿಕ ಉಡುಗೆ ತೊಟ್ಟಿದ್ದ ಮೋದಿ ಅವರು ಸಂಸತ್ತಿನ ಗೇಟ್ ನಂ.1 ರಿಂದ ಸಂಸತ್ ಆವರಣಕ್ಕೆ ಕಾಲಿಟ್ಟರು ಮತ್ತು ಅವರನ್ನು ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಸ್ವಾಗತಿಸಿದರು.

 

ನೂತನ ಸಂಸತ್ ಭವನ ಕಟ್ಟಡ ನಿರ್ಮಾಣಕ್ಕಾಗಿ ಶ್ರಮಿಸಿದ ಕಾರ್ಮಿಕರಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಸನ್ಮಾನ ಮಾಡಿದರು.
ಸಾಂಪ್ರದಾಯಿಕ ಶಾಲು ಹೊದಿಸಿ, ಸ್ಮರಣಿಕೆ ನೀಡುವ ಮೂಲಕ ಕಾರ್ಮಿಕರಿಗೆ ಪ್ರಧಾನಿ ಮೋದಿಯವರು ಗೌರವ ಸಲ್ಲಿಸಿದರು. ಆಗಸ್ಟ್ 14, 1947 ರಂದು ಬ್ರಿಟಿಷ್ ಗುಲಾಮಗಿರಿ ಆಳ್ವಿಕೆಯಿಂದ ಮುಕ್ತಿ ಪಡೆದ ಭಾರತಕ್ಕೆ ಅಧಿಕಾರವನ್ನು ಹಸ್ತಾಂತರಿಸುವ ಸೂಚಕವಾಗಿ ಸಂಗೋಲ್ ಅನ್ನು ಭಾರತೀಯಕರಿಗೆ ಬ್ರಿಟೀಷರು ನೀಡಿದ್ದರು.

ಮತ್ತಷ್ಟು ಓದಿ: New Parliament Building: ಸಂಸತ್ತಿನಲ್ಲಿ ಸೆಂಗೋಲ್​ ಪ್ರತಿಷ್ಠಾಪನೆ, ಪ್ರಧಾನಿ ಮೋದಿಯಿಂದ ಸಾಷ್ಟಾಂಗ ನಮಸ್ಕಾರ, ಸೆಂಗೋಲ್​ನ ಮಹತ್ವ ಏನು?

ಸ್ವತಂತ್ರ ಭಾರತದ ಮೊದಲ ಪ್ರಧಾನಮಂತ್ರಿ ಜವಾಹರ್ ಲಾಲ್ ನೆಹರು ಅವರು ಬ್ರಿಟೀಷರಿಂದ ಈ ಸೆಂಗೋಲ್’ನ್ನು ಪಡೆದಿದ್ದರು. ಸೆಂಗೋಲ್ ಆಡಳಿತಗಾರನು ಕಾನೂನಿನ ಅಡಿಯಲ್ಲಿರುತ್ತಾನೆ ಎಂಬುದರ ಸಂಕೇತವಾಗಿದೆ. ಜಗತ್ತನ್ನು ಸಂಕೇತಿಸುವ ಸೆಂಗೋಲ್‌ನ ಮಂಡಲವು ಶಿವನ ಪವಿತ್ರ ಗೂಳಿಯಾದ ನಂದಿಯ ಕೆತ್ತನೆಯಿಂದ ಒಳಗೊಂಡಿದೆ. ಚಿನ್ನದ ರಾಜದಂಡದ ಮೂಲವು ಚೋಳ ಸಾಮ್ರಾಜ್ಯದಲ್ಲಿ ಅದರ ಮೂಲವನ್ನು ಹೊಂದಿದೆ. ಒಬ್ಬ ರಾಜನಿಂದ ಮತ್ತೊಬ್ಬ ರಾಜನಿಗೆ ಅಧಿಕಾರದ ವರ್ಗಾವಣೆಯು ನ್ಯಾಯದ ಸಂಕೇತವಾದ ನಂದಿಯ ಕೆತ್ತನೆಯನ್ನು ಹೊಂದಿರುವ ಚಿನ್ನದ ಕೋಲು ಸೆಂಗೋಲ್ ನ್ನು ಹಸ್ತಾಂತರಿಸುವ ಮೂಲಕ ಗುರುತಿಸಲ್ಪಟ್ಟಿದೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 9:09 am, Sun, 28 May 23