ಬಿಜೆಪಿ ಮಾತ್ರ ಪ್ಯಾನ್ ಇಂಡಿಯಾ ಪಾರ್ಟಿ: ದೆಹಲಿಯಲ್ಲಿ ಬಿಜೆಪಿ ಕಚೇರಿ ಉದ್ಘಾಟಿಸಿ ಮೋದಿ ಭಾಷಣ

|

Updated on: Mar 28, 2023 | 9:07 PM

ಬಿಜೆಪಿ ತನ್ನ ಮೊದಲ ಸಾರ್ವತ್ರಿಕ ಚುನಾವಣೆಯಲ್ಲಿ ಕೇವಲ 2 ಸ್ಥಾನ ಗಳಿಸಿದ್ದು, 2019 ರ ಲೋಕಸಭೆ ಚುನಾವಣೆಯಲ್ಲಿ ಇದು 300 ಕ್ಕೆ ಏರಿತು. 1984ರ ಚುನಾವಣೆಯ ನಂತರ ಬಿಜೆಪಿ ಏನೂ ಇಲ್ಲವಾದಂತ ಸ್ಥಿತಿಯಲ್ಲಿತ್ತು. ಹೀಗಿದ್ದರೂ ಪಕ್ಷ ಎಂದಿಗೂ ತನ್ನ ಚೈತನ್ಯವನ್ನು ಕಳೆದುಕೊಳ್ಳಲಿಲ್ಲ.

ಬಿಜೆಪಿ ಮಾತ್ರ ಪ್ಯಾನ್ ಇಂಡಿಯಾ ಪಾರ್ಟಿ: ದೆಹಲಿಯಲ್ಲಿ ಬಿಜೆಪಿ ಕಚೇರಿ ಉದ್ಘಾಟಿಸಿ ಮೋದಿ ಭಾಷಣ
ನರೇಂದ್ರ ಮೋದಿ
Follow us on

ದೆಹಲಿ: ದೆಹಲಿಯಲ್ಲಿ ಬಿಜೆಪಿಯ (BJP) ವಸತಿ ಸಂಕೀರ್ಣ ಮತ್ತು ಸಭಾಂಗಣವನ್ನು ಉದ್ಘಾಟಿಸಿದ ಪ್ರಧಾನಿ ನರೇಂದ್ರ ಮೋದಿ(Narendra Modi), ಭಾರತೀಯ ಜನಸಂಘದಿಂದ ಇಂದಿನ ಬಿಜೆಪಿವರೆಗಿನ  ಪ್ರಯಾಣವನ್ನು ನೆನಪಿಸಿಕೊಂಡಿದ್ದಾರೆ. ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಮೋದಿ, ಬಿಜೆಪಿಯ ಬೆಳವಣಿಗೆಯ ದಾರಿಯನ್ನು ಮೆಲುಕು ಹಾಕಿದ್ದಾರೆ. ತಮ್ಮ ಭಾಷಣದಲ್ಲಿ ವಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದ ಪ್ರಧಾನಿ ಭಾರತದ ಎಲ್ಲಾ ಭ್ರಷ್ಟ ಮುಖಗಳು ಈಗ ಒಂದು ವೇದಿಕೆಯಲ್ಲಿ ಒಂದಾಗುತ್ತಿವೆ ಎಂದು ಹೇಳಿದರು. ಭಾರತವು ಮಹಾನ್ ವಿಷಯಗಳ ಮುಂದಿರುವಾಗ ಭಾರತದ ಒಳಗೆ ಮತ್ತು ಹೊರಗೆ ಭಾರತ ವಿರೋಧಿ ಶಕ್ತಿಗಳು ಒಗ್ಗೂಡುವುದು ಸಹಜ ಎಂದು ಪ್ರಧಾನಿ ಮೋದಿ (PM Modi) ಹೇಳಿದರು. ಭಾರತವು ಸಾಂವಿಧಾನಿಕ ಸಂಸ್ಥೆಗಳಿಂದ ಬಲವಾದ ಅಡಿಪಾಯವನ್ನು ಹೊಂದಿದೆ. ಅದರಿಂದಾಗಿಯೇ ಅವರು ಹೆದರಿದ್ದಾರೆ. ಅವರ ವಿಶ್ವಾಸಾರ್ಹತೆಯನ್ನು ಪ್ರಶ್ನಿಸಲಾಗುತ್ತಿದೆ. ಭ್ರಷ್ಟರ ವಿರುದ್ಧ ಏಜೆನ್ಸಿಗಳು ಕ್ರಮ ಕೈಗೊಂಡಾಗ ಏಜೆನ್ಸಿಗಳು ದಾಳಿಗೆ ಒಳಗಾಗುತ್ತವೆ. ನ್ಯಾಯಾಲಯ ತೀರ್ಪು ನೀಡಿದಾಗ ಅದನ್ನು ಪ್ರಶ್ನಿಸಲಾಗುತ್ತದೆ. ಕೆಲವು ಪಕ್ಷಗಳು ಒಗ್ಗೂಡಿ ಭ್ರಷ್ಟಾಚಾರಿ ಬಚಾವೋ ಅಭಿಯಾನ ನಡೆಸುತ್ತಿರುವುದನ್ನು ನೀವೆಲ್ಲರೂ ನೋಡುತ್ತಿದ್ದೀರಿ ಎಂದು ಪ್ರಧಾನಿ ಮೋದಿ ಹೇಳಿದರು.

1984 ರಲ್ಲಿ ನಡೆದದ್ದನ್ನು ಭಾರತ ಎಂದಿಗೂ ಮರೆಯುವುದಿಲ್ಲ. ಆ  ಕರಾಳ ಅವಧಿ ಎಂದು ನೆನಪಿನಲ್ಲಿ ಉಳಿಯುತ್ತದೆ. ನಂತರದ ಚುನಾವಣೆಯಲ್ಲಿ ಕಾಂಗ್ರೆಸ್ ಪ್ರಚಂಡ ಗೆಲುವು ಸಾಧಿಸಿತು. ಆದರೆ ನಾವು ಬಿಟ್ಟುಕೊಡಲಿಲ್ಲ. ನಾವು ನಿರಾಶೆಗೊಳ್ಳಲಿಲ್ಲ. ನಾವು ಯಾರನ್ನೂ ದೂಷಿಸಲಿಲ್ಲ, ನಾವು ದಾಳಿ-ಪ್ರತಿದಾಳಿಗೆ ಸಿಲುಕಿಲ್ಲ, ಬದಲಿಗೆ, ತಳಮಟ್ಟದಲ್ಲಿ ಕೆಲಸ ಮಾಡಲು ಮತ್ತು ಪಕ್ಷವನ್ನು ಬಲಪಡಿಸಲು ನಾವು ಜನರ ನಡುವೆ ಹೋಗಿದ್ದೇವೆ ಎಂದು ಪ್ರಧಾನಿ ಮೋದಿ ಹೇಳಿದರು.

2 ಲೋಕಸಭಾ ಸ್ಥಾನಗಳಿಸಿದ್ದ ನಾವು 2019ರ ಚುನಾವಣೆಯಲ್ಲಿ ನಾವು 303ಕ್ಕೆ ತಲುಪಿದ್ದೇವೆ. ಹಲವು ರಾಜ್ಯಗಳಲ್ಲಿ ಬಿಜೆಪಿ ಶೇ.50ಕ್ಕಿಂತ ಹೆಚ್ಚು ಮತಗಳನ್ನು ಪಡೆಯುತ್ತದೆ. ಇಂದು, ಕುಟುಂಬ ನಡೆಸುವ ಪಕ್ಷಗಳ ಹೊರತು ಪಡಿಸಿ ಉತ್ತರದಿಂದ ದಕ್ಷಿಣಕ್ಕೆ ಬಿಜೆಪಿ ಏಕೈಕ ಪ್ಯಾನ್-ಇಂಡಿಯನ್ ಪಕ್ಷವಾಗಿದೆ. ಯುವಕರಿಗೆ ಕೆಲಸ ಮಾಡಲು ಅವಕಾಶ ನೀಡುವ ಏಕೈಕ ಪಕ್ಷವಾಗಿದೆ ಬಿಜೆಪಿ ಎಂದು ಪ್ರಧಾನಿ ಮೋದಿ ಹೇಳಿದರು.

ಇದನ್ನೂ ಓದಿ:19 ಪಕ್ಷಗಳ ಬೆಂಬಲವಿದೆ, ರಾಹುಲ್ ಗಾಂಧಿ ತಮ್ಮ ಬಂಗಲೆ ಬಗ್ಗೆ ಚಿಂತಿಸುತ್ತಿಲ್ಲ: ಕಾಂಗ್ರೆಸ್

ಬಿಜೆಪಿ ಕೇವಲ ಚುನಾವಣೆಯಲ್ಲಿ ಸ್ಪರ್ಧಿಸುವ ಗುರಿ ಹೊಂದಿಲ್ಲ. ಅದೊಂದು ವ್ಯವಸ್ಥೆ, ಚಿಂತನೆ, ಆಂದೋಲನ, ಬದಲಾವಣೆಯ ಜೀವ ಸೆಲೆ ಎಂದಿದ್ದಾರೆ. ಈಶಾನ್ಯ ಮತ್ತು ದಕ್ಷಿಣ ಭಾರತದಲ್ಲಿ ತನ್ನ ಹೆಜ್ಜೆಗುರುತುಗಳನ್ನು ವಿಸ್ತರಿಸಿದ್ದಕ್ಕಾಗಿ ಪಕ್ಷದ ಕಾರ್ಯಕರ್ತರನ್ನು ಅಭಿನಂದಿಸಿದ ಪ್ರಧಾನಿ ಮೋದಿ, “ಕರ್ನಾಟಕದಲ್ಲಿ ನಾವು ಇನ್ನೂ ನಂ.1 ಪಕ್ಷ. ತೆಲಂಗಾಣ, ಆಂಧ್ರಪ್ರದೇಶದಲ್ಲೂ ಬಿಜೆಪಿ ಮೇಲೆ ಜನರ ವಿಶ್ವಾಸ ಹೆಚ್ಚುತ್ತಿದೆ. ತಮಿಳುನಾಡು ಮತ್ತು ಕೇರಳದಲ್ಲಿ ಬಿಜೆಪಿ ಪ್ರತಿ ಬೂತ್‌ನಲ್ಲಿದೆ ಎಂದಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Published On - 8:23 pm, Tue, 28 March 23