ಟೂರಿಸಂಗೆ ಉತ್ತೇಜನ, ಸಮುದ್ರದ ಮೂಲಕ ಅಂಡಮಾನ್ ದ್ವೀಪಗಳಿಗೆ OFC ಸಂಪರ್ಕ ಸಿಕ್ತು!

| Updated By: ಸಾಧು ಶ್ರೀನಾಥ್​

Updated on: Aug 10, 2020 | 12:47 PM

ನವದೆಹಲಿ: ಚೆನ್ನೈ ಮತ್ತು ಅಂಡಮಾನ್, ನಿಕೋಬಾರ್ ದ್ವೀಪಗಳ ನಡುವೆ ಸಮುದ್ರ ಮಾರ್ಗವಾಗಿ OFC ಸಂಪರ್ಕ ಕಲ್ಪಿಸುವ ಯೋಜನೆಯನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಪ್ರಧಾನಿ ನರೇಂದ್ರ ಮೋದಿ ಉದ್ಘಾಟನೆ ಮಾಡಿದ್ದಾರೆ. ದೇಶದ ಮುಖ್ಯ ಭಾಗದಿಂದ ಸಮುದ್ರ ಮಾರ್ಗದ ಮೂಲಕ ಅಂಡಮಾನ್, ನಿಕೋಬಾರ್ ದ್ವೀಪಗಳಿಗೆ ಆಪ್ಟಿಕಲ್ ಫೈಬರ್ ಕೇಬಲ್ ಸಂಪರ್ಕ ಯೋಜನೆಗೆ 2018 ರ ಡಿಸೆಂಬರ್ 30 ರಂದು ಮೋದಿ ಶಂಕುಸ್ಥಾಪನೆ ಮಾಡಿದ್ದರು. ಈಗ 2,300 ಕಿ.ಮೀ. ಸಮುದ್ರ ಮಾರ್ಗದಲ್ಲಿ 1,224 ಕೋಟಿ ರೂ ವೆಚ್ಚದಲ್ಲಿ OFC ಸಂಪರ್ಕ ಯೋಜನೆಯನ್ನು […]

ಟೂರಿಸಂಗೆ ಉತ್ತೇಜನ, ಸಮುದ್ರದ ಮೂಲಕ ಅಂಡಮಾನ್ ದ್ವೀಪಗಳಿಗೆ OFC ಸಂಪರ್ಕ ಸಿಕ್ತು!
Follow us on

ನವದೆಹಲಿ: ಚೆನ್ನೈ ಮತ್ತು ಅಂಡಮಾನ್, ನಿಕೋಬಾರ್ ದ್ವೀಪಗಳ ನಡುವೆ ಸಮುದ್ರ ಮಾರ್ಗವಾಗಿ OFC ಸಂಪರ್ಕ ಕಲ್ಪಿಸುವ ಯೋಜನೆಯನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಪ್ರಧಾನಿ ನರೇಂದ್ರ ಮೋದಿ ಉದ್ಘಾಟನೆ ಮಾಡಿದ್ದಾರೆ.

ದೇಶದ ಮುಖ್ಯ ಭಾಗದಿಂದ ಸಮುದ್ರ ಮಾರ್ಗದ ಮೂಲಕ ಅಂಡಮಾನ್, ನಿಕೋಬಾರ್ ದ್ವೀಪಗಳಿಗೆ ಆಪ್ಟಿಕಲ್ ಫೈಬರ್ ಕೇಬಲ್ ಸಂಪರ್ಕ ಯೋಜನೆಗೆ 2018 ರ ಡಿಸೆಂಬರ್ 30 ರಂದು ಮೋದಿ ಶಂಕುಸ್ಥಾಪನೆ ಮಾಡಿದ್ದರು. ಈಗ 2,300 ಕಿ.ಮೀ. ಸಮುದ್ರ ಮಾರ್ಗದಲ್ಲಿ 1,224 ಕೋಟಿ ರೂ ವೆಚ್ಚದಲ್ಲಿ OFC ಸಂಪರ್ಕ ಯೋಜನೆಯನ್ನು ಮೋದಿ ಲೋಕಾರ್ಪಣೆ ಮಾಡಿದ್ದಾರೆ.

ಟೂರಿಸಂಗೆ ಉತ್ತೇಜನ
ಈ ಟೆಲಿಕಾಂ, ಬ್ರಾಡ್ ಬ್ಯಾಂಡ್ ಸಂಪರ್ಕದಿಂದ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಿಗೆ ಹೈ ಸ್ಪೀಡ್ ಇಂಟರ್ ನೆಟ್ ಸಂಪರ್ಕ ಸಿಗಲಿದೆ. ದ್ವೀಪಗಳ ಟೂರಿಸಂಗೆ ಉತ್ತೇಜನ ಸಿಗಲಿದೆ. ಹಾಗೇನೆ ಉದ್ಯೋಗ ಸೃಷ್ಟಿಗೆ ಕೂಡಾ ಅವಕಾಶವಾಗಲಿದೆ. ಆರ್ಥಿಕಾಭಿವೃದ್ಧಿ , ಜನರ ಜೀವನಮಟ್ಟ ಸುಧಾರಣೆ ಸಾಧ್ಯವಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.