ಶಿಕ್ಷಣಕ್ಕಾಗಿ ಮೊಬೈಲ್ ಕದ್ದ PUC ವಿದ್ಯಾರ್ಥಿನಿಗೆ, ಅದರ ಮಾಲೀಕ ಮಾಡಿದ್ದೇನು ಗೊತ್ತಾ?
ಇಂದೋರ್: 16 ವರ್ಷದ ಯುವತಿಯೊಬ್ಬಳು ತನ್ನ ವಿದ್ಯಾಭ್ಯಾಸಕ್ಕಾಗಿ ಕಾಲೇಜಿನ ಶುಲ್ಕ ಪಾವತಿಸಲು, ತನ್ನ ತಾಯಿ ಕೆಲಸ ಮಾಡಲು ತೆರಳಿದ್ದ ಮನೆ ಯಜಮಾನನ ಫೋನ್ ಕದ್ದು ಅಡಮಾನ ಇಟ್ಟಿರುವ ಘಟನೆ ಇಂದೋರ್ ನಲ್ಲಿ ನಡೆದಿದೆ. ಫೋನ್ ಕಾಣದಾದಾಗ ಗಾಬರಿಗೊಂಡ ಮನೆ ಯಜಮಾನ ಧೀರಜ್ ದುಬೆ ಈ ವಿಚಾರವಾಗಿ ದ್ವಾರಕಪುರಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಆದರೆ ಪೊಲೀಸರಿಂದ ಯಾವುದೇ ಪ್ರಯೋಜನ ಆಗದ್ದನ್ನು ಕಂಡ ಫೋನ್ ಮಾಲಿಕ, ಫೋನ್ ಕಳ್ಳತನವಾದ ದಿನದಂದು ತನ್ನ ಮನೆಗೆ ಬಂದಿದ್ದ ಜನರ ಪಟ್ಟಿ ಮಾಡಿದ್ದಾನೆ. […]
ಇಂದೋರ್: 16 ವರ್ಷದ ಯುವತಿಯೊಬ್ಬಳು ತನ್ನ ವಿದ್ಯಾಭ್ಯಾಸಕ್ಕಾಗಿ ಕಾಲೇಜಿನ ಶುಲ್ಕ ಪಾವತಿಸಲು, ತನ್ನ ತಾಯಿ ಕೆಲಸ ಮಾಡಲು ತೆರಳಿದ್ದ ಮನೆ ಯಜಮಾನನ ಫೋನ್ ಕದ್ದು ಅಡಮಾನ ಇಟ್ಟಿರುವ ಘಟನೆ ಇಂದೋರ್ ನಲ್ಲಿ ನಡೆದಿದೆ.
ಫೋನ್ ಕಾಣದಾದಾಗ ಗಾಬರಿಗೊಂಡ ಮನೆ ಯಜಮಾನ ಧೀರಜ್ ದುಬೆ ಈ ವಿಚಾರವಾಗಿ ದ್ವಾರಕಪುರಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಆದರೆ ಪೊಲೀಸರಿಂದ ಯಾವುದೇ ಪ್ರಯೋಜನ ಆಗದ್ದನ್ನು ಕಂಡ ಫೋನ್ ಮಾಲಿಕ, ಫೋನ್ ಕಳ್ಳತನವಾದ ದಿನದಂದು ತನ್ನ ಮನೆಗೆ ಬಂದಿದ್ದ ಜನರ ಪಟ್ಟಿ ಮಾಡಿದ್ದಾನೆ. ಆ ದಿನದಂದು ಮನೆ ಕೆಲಸ ಮಾಡಲು ಬಂದಿದ್ದ ಮಹಿಳೆಯ ಜೊತೆ ಇದ್ದ ಹುಡುಗಿ ತನ್ನ ಮೊಬೈಲನ್ನು ಸ್ವಿಚ್ ಆಫ್ ಮಾಡಿ ತೆಗೆದುಕೊಂಡು ಹೋಗಿರಬಹುದೆಂದು ಶಂಕಿಸಿದ್ದಾನೆ.
ಕೂಡಲೇ ಆ ಹುಡುಗಿಯನ್ನು ಪ್ರಶ್ನಿಸಿದಾಗ ಈ ವಿಚಾರ ನಿಜಾಂಶ ಬೆಳಕಿಗೆ ಬಂದಿದೆ. ಹುಡುಗಿ ತನ್ನ 12ನೇ ತರಗತಿಯ ಶಾಲಾ ಶುಲ್ಕವನ್ನು ಪಾವತಿ ಮಾಡಲು ಹಣವಿಲ್ಲದಿದ್ದರಿಂದ, ಮೊಬೈಲ್ ಕದ್ದು, ಅಡಮಾನ ಇಟ್ಟಿರುವುದಾಗಿ ಹೇಳಿದ್ದಾಳೆ.ಜೊತೆಗೆ ಅಡಮಾನವಿಟ್ಟು ಬಂದಿದ್ದ ಹಣದಲ್ಲಿ 1,600 ರೂಪಾಯಿಯನ್ನು ಶಾಲಾ ಶುಲ್ಕ ಕಟ್ಟಿರುವ ರಶೀದಿ ತೋರಿಸಿದ್ದಾಳೆ. ಹಾಗೂ ನಾನು ಕೆಲಸಕ್ಕೆ ಸೇರಿದ ನಂತರ ಅದನ್ನು ಬಿಡಿಸಿ ಕೊಡಲು ಯೋಚಿಸಿದ್ದಳು ಎಂದು ತಿಳಿಸಿದ್ದಾಳೆ.
ಈ ವಿಚಾರ ತಿಳಿದ ಫೋನ್ ಮಾಲಿಕ ಸ್ವಲ್ಪ ಸಮಯ ದಿಗ್ಬ್ರಾಂತನಾಗಿದ್ದಾನೆ. ನಂತರ ಹುಡುಗಿಯ ಶಾಲಾ ಶುಲ್ಕವನ್ನು ಪೂರ್ತಿಯಾಗಿ ಪಾವತಿಸುವ ಜೊತೆಗೆ, ಹುಡುಗಿಯ ಮೇಲೆ ದೂರು ನೀಡದಿರಲು ನಿಶ್ಚಯಿಸಿದ್ದಾನೆ. ನಂತರ ಈ ವಿಚಾರ ತಿಳಿದ ಸ್ವಲ್ಪ ಜನ, ಹುಡುಗಿಯ ವಿದ್ಯಾಭ್ಯಾಸಕ್ಕಾಗಿ ಸಹಾಯ ಮಾಡಲು ಮುಂದೆ ಬಂದಿದ್ದಾರೆ ಎಂದೂ ತಿಳಿದುಬಂದಿದೆ.