ದೆಹಲಿ: ಮುಂದಿನ 18 ತಿಂಗಳ ಅವಧಿಯಲ್ಲಿ 10 ಲಕ್ಷ ಜನರನ್ನು ಸರ್ಕಾರಿ ಉದ್ಯೋಗಗಳಲ್ಲಿ ನೇಮಕ ಮಾಡಿಕೊಳ್ಳುವುದಾಗಿ ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಘೋಷಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಎಲ್ಲಾ ಇಲಾಖೆಗಳು ಮತ್ತು ಸಚಿವಾಲಯಗಳಲ್ಲಿನ ಮಾನವ ಸಂಪನ್ಮೂಲಗಳ(Human Resources) ಸ್ಥಿತಿಯನ್ನು ಪರಿಶೀಲಿಸಿದ್ದು ಮುಂದಿನ 1.5 ವರ್ಷಗಳಲ್ಲಿ 10 ಲಕ್ಷ ಜನರನ್ನು ಮಿಷನ್ ಮೋಡ್‌ನಲ್ಲಿ ಸರ್ಕಾರದಿಂದ ನೇಮಕಾತಿ ಮಾಡುವಂತೆ ಸೂಚನೆ ನೀಡಿದರು ಎಂದು ಪ್ರಧಾನಮಂತ್ರಿಯವರ ಕಚೇರಿ ಟ್ವೀಟ್ ಮಾಡಿದೆ. ಚುನಾವಣಾ ಭರವಸೆಗೆ ವಿರುದ್ಧವಾಗಿ ಉದ್ಯೋಗದ ಕೊರತೆಯ ಬಗ್ಗೆ ಸರ್ಕಾರವು ತೀವ್ರ ಟೀಕೆಗಳನ್ನು ಎದುರಿಸುತ್ತಿರುವ ಸಮಯದಲ್ಲಿ ಈ ಹೇಳಿಕೆ ಬಂದಿದೆ. ಈ ಘೋಷಣೆಗೆ ಪ್ರತಿಕ್ರಿಯಿಸಿದ ಕಾರ್ಮಿಕ ಸಚಿವ ಭೂಪೇಂದ್ರ ಯಾದವ್ (Bhupendra Yadav), “ಪ್ರಧಾನಿ ಅವರ ನೇತೃತ್ವದಲ್ಲಿ ಭಾರತದ ಪ್ರಬಲ ಆರ್ಥಿಕತೆಯ ಪ್ರಯಾಣವು ನಾವು ಮಾನವ-ಕೇಂದ್ರಿತ ಅಭಿವೃದ್ಧಿಯ ಹಾದಿಯಲ್ಲಿ ಉಳಿಯುವುದನ್ನು ಖಚಿತಪಡಿಸಿದೆ. 10 ಲಕ್ಷ ಜನರನ್ನು ನೇಮಿಸಿಕೊಳ್ಳುವುದರಿಂದ ಸರ್ಕಾರವು ಗುರಿಗಳನ್ನು ತಲುಪಲು ಸಹಾಯ ಮಾಡುವುದಲ್ಲದೆ, ಸಂಪೂರ್ಣ ಆತ್ಮನಿರ್ಭರ್ ಭಾರತ್ ಕಡೆಗೆ ನಡಿಗೆಯನ್ನು ಬಲಪಡಿಸುತ್ತದೆ ಎಂದಿದ್ದಾರೆ. ಸರ್ಕಾರದ ಎಲ್ಲ ಇಲಾಖೆ ಮತ್ತು ಸಚಿವಾಲಯದಲ್ಲಿ 10 ಲಕ್ಷ ಜನರನ್ನು ನೇಮಿಸಿಕೊಳ್ಳುವ ಪ್ರಧಾನಿ ನರೇಂದ್ರ ಮೋದಿಯವರ ನಿರ್ಧಾರ ಪ್ರಕಾರ ಶಿಕ್ಷಣ ಸಚಿವಾಲಯ ಮತ್ತು ಸ್ಕಿಲ್ ಇಂಡಿಯಾ ಮುಂದಿನ 1.5 ವರ್ಷಗಳಲ್ಲಿ ತಮ್ಮ ಇಲಾಖೆಗಳಲ್ಲಿನ ಎಲ್ಲಾ ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಬದ್ಧವಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.
ವೆಚ್ಚ ಇಲಾಖೆಯು ಸಿದ್ಧಪಡಿಸಿದ ಕೇಂದ್ರ ಸರ್ಕಾರಿ ನಾಗರಿಕ ನೌಕರರ ವೇತನ ಮತ್ತು ಭತ್ಯೆಗಳ ವಾರ್ಷಿಕ ವರದಿ (2019-20) ಪ್ರಕಾರ, ಮಾರ್ಚ್ 01, 2020 ರಂತೆ ಒಟ್ಟು ಸಾಮಾನ್ಯ ಕೇಂದ್ರ ಸರ್ಕಾರಿ ನಾಗರಿಕ ನೌಕರರ ಸಂಖ್ಯೆ 31.91 ಲಕ್ಷಗಳು. 40.78 ರ ಮಂಜೂರಾದ ಹುದ್ದೆಗಳಿದ್ದು ಶೇ 21.75 ಹುದ್ದೆಗಳು ಖಾಲಿ ಇವೆ. ಏತನ್ಮಧ್ಯೆ, ಬಜೆಟ್ ದಾಖಲೆಗಳು ಕೇಂದ್ರ ಸರ್ಕಾರದ ಎಲ್ಲ ಸಚಿವಾಲಯಗಳು ಮತ್ತು ಇಲಾಖೆಗಳಲ್ಲಿ ಉದ್ಯೋಗಗಳು 2020 ಕ್ಕೆ ಹೋಲಿಸಿದರೆ ಮಾರ್ಚ್ 2022 ರ ಅಂತ್ಯದ ವೇಳೆಗೆ 2.84 ಲಕ್ಷಕ್ಕಿಂತ ಹೆಚ್ಚಾಗಲಿದೆ ಎಂದು ಅಂದಾಜಿಸಲಾಗಿದೆ. ಆದಾಗ್ಯೂ, ಅತಿದೊಡ್ಡ ಉದ್ಯೋಗ ಒದಗಿಸುವ ರೈಲ್ವೆ ಇಲಾಖೆ ಈ ಅವಧಿಯಲ್ಲಿ 50,000 ಕ್ಕೂ ಹೆಚ್ಚು ಕುಸಿತವನ್ನು ಕಂಡಿದೆ.
PM @narendramodi reviewed the status of Human Resources in all departments and ministries and instructed that recruitment of 10 lakh people be done by the Government in mission mode in next 1.5 years.
— PMO India (@PMOIndia) June 14, 2022
ಒಂದು ಕೇಂದ್ರ ಸಚಿವಾಲಯ ಮತ್ತು ಇಲಾಖೆಯನ್ನು ಹೊರತುಪಡಿಸಿ ಎಲ್ಲಾ ಮಾರ್ಚ್ 2020 ರಿಂದ 2022 ರವರೆಗೆ ಅಂದಾಜು ಹೆಚ್ಚಳವನ್ನು ತೋರಿಸಿದೆ. ಗೃಹ ಸಚಿವಾಲಯದ ಅಧೀನದಲ್ಲಿರುವ ಪೊಲೀಸ್ ಇಲಾಖೆಯ ಉದಾಹರಣೆಯನ್ನು ತೆಗೆದುಕೊಂಡರೆ, ಈ ವರ್ಷದ ಮಾರ್ಚ್ ಅಂತ್ಯದ ವೇಳೆಗೆ 10.03 ಲಕ್ಷದಿಂದ 11.42 ಲಕ್ಷಕ್ಕಿಂತ ಹೆಚ್ಚಾಗುವ ಸಾಧ್ಯತೆಯಿದೆ ಎಂದು ಅಂದಾಜಿಸಲಾಗಿದೆ, ಇದು ಶೇಕಡಾ 13 ಕ್ಕಿಂತ ಹೆಚ್ಚಿನ ಬೆಳವಣಿಗೆಯನ್ನು ತೋರಿಸುತ್ತದೆ. ಅದೇ ರೀತಿ ಅಂಚೆ ಇಲಾಖೆಯಲ್ಲಿನ ಸಾಮರ್ಥ್ಯವು 4.03 ಲಕ್ಷದಿಂದ 4.21 ಲಕ್ಷಕ್ಕೆ ಏರುತ್ತದೆ ಎಂದು ಅಂದಾಜಿಸಲಾಗಿದೆ, ಇದು ಶೇ 4 ಕ್ಕಿಂತ ಹೆಚ್ಚಿನ ಹೆಚ್ಚಳವನ್ನು ತೋರಿಸುತ್ತದೆ. ಆದಾಗ್ಯೂ, ಮಾರ್ಚ್ ವೇಳೆಗೆ ಸಾಮರ್ಥ್ಯವು ಕಡಿಮೆಯಾಗಲಿದೆ ಎಂದು ಅಂದಾಜಿಸಲಾಗುವ ಏಕೈಕ ಇಲಾಖೆಯಾಗಿದೆ ರೈಲ್ವೆ. ಮಾರ್ಚ್ 2020 ರ ಅಂತ್ಯದ ವೇಳೆಗೆ ಈ ಸಂಖ್ಯೆ 12.5 ಲಕ್ಷಕ್ಕಿಂತ ಹೆಚ್ಚಿತ್ತು . ಇದ್ದು 12 ಲಕ್ಷಕ್ಕಿಂತ ಸ್ವಲ್ಪ ಕಡಿಮೆಯಾಗಬಹುದು ಎಂದು ಅಂದಾಜಿಸಲಾಗಿದೆ.
ದೇಶದ ಇತರ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ ಪ್ರಮುಖ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ
Published On - 3:32 pm, Tue, 14 June 22