PM Narendra Modi: ವಿಶೇಷ ವ್ಯಕ್ತಿಗಳ ಬಗ್ಗೆ ಸದಾ ಅಕ್ಕರೆ ತೋರುವ ಪ್ರಧಾನಿ ನರೇಂದ್ರ ಮೋದಿ

|

Updated on: Apr 16, 2023 | 6:35 PM

ಪ್ರಧಾನಿ ನರೇಂದ್ರ ಮೋದಿಯವರಿಗೆ ಸಮಾಜದ ಎಲ್ಲ ವರ್ಗದ ವ್ಯಕ್ತಿಗಳ ಬಗ್ಗೆಯೂ ವಿಶೇಷ ಅಕ್ಕರೆ, ಪ್ರೀತಿ. ಅವರು ಯಾವುದೇ ಕಾರ್ಯಕ್ರಮ, ಸಮಾವೇಶಕ್ಕೆ ಹೋದರೂ, ಅಲ್ಲಿ ವಿಶೇಷ ಚೇತನರ ಬಗ್ಗೆ ಹೆಚ್ಚಿನ ಅಕ್ಕರೆ ತೋರುತ್ತಾರೆ. ಕಾಳಜಿ ವಹಿಸುತ್ತಾರೆ.

ಪ್ರಧಾನಿ ನರೇಂದ್ರ ಮೋದಿಯವರಿಗೆ ಸಮಾಜದ ಎಲ್ಲ ವರ್ಗದ ವ್ಯಕ್ತಿಗಳ ಬಗ್ಗೆಯೂ ವಿಶೇಷ ಅಕ್ಕರೆ, ಪ್ರೀತಿ. ಅವರು ಯಾವುದೇ ಕಾರ್ಯಕ್ರಮ, ಸಮಾವೇಶಕ್ಕೆ ಹೋದರೂ, ಅಲ್ಲಿ ವಿಶೇಷ ಚೇತನರ ಬಗ್ಗೆ ಹೆಚ್ಚಿನ ಅಕ್ಕರೆ ತೋರುತ್ತಾರೆ. ಕಾಳಜಿ ವಹಿಸುತ್ತಾರೆ. ಅವರ ಪ್ರೀತಿ ಪಾತ್ರರಾದ ವಿಶೇಷ ವ್ಯಕ್ತಿಗಳು ಈ ಬಗ್ಗೆ ಹಲವು ಸಂದರ್ಭಗಳಲ್ಲಿ ತಮ್ಮ ಅನುಭವ ಹೇಳಿಕೊಂಡಿದ್ದು, ಸ್ವತಃ ಪ್ರಧಾನಿಯೇ ವಿಶೇಷ ಆಸ್ಥೆ ವಹಿಸಿ ನಮ್ಮಲ್ಲಿ ಮಾತನಾಡಿದರು, ಫೋಟೊ ತೆಗೆಸಿಕೊಂಡರು ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ. ಮೊನ್ನೆ ಕೂಡ ತಮಿಳುನಾಡು ಪ್ರವಾಸದ ಸಂದರ್ಭದಲ್ಲಿ ಪ್ರಧಾನಿ ಮೋದಿಯವರು ವಿಶೇಷ ಚೇತನ ವ್ಯಕ್ತಿಯೊಬ್ಬರನ್ನು ಭೇಟಿಯಾಗಿ, ಉಭಯ ಕುಶಲೋಪರಿ ನಡೆಸಿದ್ದಾರೆ. ಜತೆಗೆ ಸೆಲ್ಫಿಯನ್ನೂ ತೆಗೆದುಕೊಂಡು ಪೋಸ್ಟ್ ಮಾಡಿದ್ದಾರೆ. ಮೋದಿಯವರ ಈ ನಡೆ, ಜನಮೆಚ್ಚುಗೆ ಗಳಿಸಿದೆ.

Published on: Apr 16, 2023 06:35 PM