ಕೋವಿಡ್ನಿಂದ ಮೃತಪಟ್ಟಿದ್ದ ವ್ಯಕ್ತಿ 2 ವರ್ಷಗಳ ಬಳಿಕ ಮನೆಗೆ ಬಂದಾಗ..
ವ್ಯಕ್ತಿಯೊಬ್ಬ ಗುಜರಾತ್ನ ಆಸ್ಪತ್ರೆಯೊಂದರಲ್ಲಿ ಕೊರೊನಾ(Corona) ಸೋಂಕಿನಿಂದಾಗಿ ಮೃತಪಟ್ಟಿದ್ದರು. ಇದೀಗ ಎರಡು ವರ್ಷದ ಬಳಿಕ ಮನೆಗೆ ಬಂದು ಅಚ್ಚರಿ ಮೂಡಿಸಿದ್ದಾರೆ. ಕುಟುಂಬದವರು ಅಂತಿಮ ವಿಧಿ ವಿಧಾನಗಳನ್ನು ಕೂಡ ನೆರವೇರಿಸಿದ್ದರು.
ವ್ಯಕ್ತಿಯೊಬ್ಬ ಗುಜರಾತ್ನ ಆಸ್ಪತ್ರೆಯೊಂದರಲ್ಲಿ ಕೊರೊನಾ(Corona) ಸೋಂಕಿನಿಂದಾಗಿ ಮೃತಪಟ್ಟಿದ್ದರು. ಇದೀಗ ಎರಡು ವರ್ಷದ ಬಳಿಕ ಮನೆಗೆ ಬಂದು ಅಚ್ಚರಿ ಮೂಡಿಸಿದ್ದಾರೆ. ಕುಟುಂಬದವರು ಅಂತಿಮ ವಿಧಿ ವಿಧಾನಗಳನ್ನು ಕೂಡ ನೆರವೇರಿಸಿದ್ದರು. ಕಮಲೇಶ್ ಪಾಟೀದಾರ್( 35) ಅವರ ಅವರ ಅಂತ್ಯಕ್ರಿಯೆ ಸುಮಾರು 2 ವರ್ಷಗಳ ಹಿಂದೆ ನಡೆದಿತ್ತು. ಈಗ ಇದ್ದಕ್ಕಿದ್ದಂತೆ ಬೆಳಗ್ಗೆ 6 ಗಂಟೆಯ ಸುಮಾರಿಗೆ ಕರೋಡ್ಕಳದಲ್ಲಿರುವ ಗ್ರಾಮದಲ್ಲಿರುವ ತನ್ನ ತಾಯಿಯ ಚಿಕ್ಕಮ್ಮನ ಮನೆಗೆ ಬಂದು ಬಾಗಿಲು ತಟ್ಟಿದಾಗ ಎಲ್ಲರೂ ಆಶ್ಚರ್ಯಚಕಿತರಾಗಿದ್ದಾರೆ.
ಕೋವಿಡ್ನ 2ನೇ ಅಲೆ ಸಂದರ್ಭದಲ್ಲಿ ಕಮಲೇಶ್ ತೀವ್ರ ಅನಾರೋಗ್ಯಕ್ಕೆ ತುತ್ತಾಗಿದ್ದರು. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು, ನಂತರ ವೈದ್ಯರು ಮೃತಪಟ್ಟಿದ್ದಾರೆ ಎಂದು ಘೋಷಿಸಿದ್ದರು, ಕೊರೊನಾ ಬಂದಿರುವ ಕಾರಣ ವ್ಯಕ್ತಿಯ ದೇಹವನ್ನು ಕುಟುಂಬದವರಿಗೆ ಹಸ್ತಾಂತರಿಸಿರಲಿಲ್ಲ.
ಇದೀಗ ಅವರು ಮರಳಿ ಮನೆಗೆ ಬಂದಿದ್ದಾರೆ, ಇಷ್ಟು ದಿನ ಎಲ್ಲಿ ಉಳಿದುಕೊಂಡಿದ್ದರು ಎಂಬುದರ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಕುಟುಂಬ ಸದಸ್ಯರ ಪ್ರಕಾರ, ಕಮಲೇಶ್ ಪಾಟಿದಾರ್ ಅವರು 2021 ರಲ್ಲಿ ಕರೋನವೈರಸ್ ಸೋಂಕಿನಿಂದ ಬಳಲುತ್ತಿದ್ದರು ಮತ್ತು ವಡೋದರಾದ (ಗುಜರಾತ್) ಆಸ್ಪತ್ರೆಗೆ ದಾಖಲಾಗಿದ್ದರು ಎಂದು ಕನ್ವಾನ್ ಪೊಲೀಸ್ ಠಾಣೆಯ ಉಸ್ತುವಾರಿ ರಾಮ್ ಸಿಂಗ್ ರಾಥೋಡ್ ಹೇಳಿದ್ದಾರೆ. ಕಮಲೇಶ್ ಪಾಟಿದಾರ್ ಅವರ ಹೇಳಿಕೆಯನ್ನು ದಾಖಲಿಸಿಕೊಂಡ ನಂತರ ವಿಷಯ ಸ್ಪಷ್ಟವಾಗಲಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಮತ್ತಷ್ಟು ಓದಿ: India Covid Updates: ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 10,093 ಮಂದಿ ಕೊರೊನಾ ಸೋಂಕಿತರು ಪತ್ತೆ
ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 10,093 ಮಂದಿ ಕೊರೊನಾ(Corona) ಸೋಂಕಿತರು ಪತ್ತೆಯಾಗಿದ್ದಾರೆ, ಭಾನುವಾರ ನವೀಕರಿಸಿದ ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿಅಂಶಗಳ ಪ್ರಕಾರ ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 10,093 ಹೊಸ ಕೊರೊನಾಸೋಂಕುಗಳು ದಾಖಲಾಗಿವೆ. ಶನಿವಾರ, ಭಾರತದಲ್ಲಿ 10,753 ಹೊಸ ಕೋವಿಡ್ -19 ಪ್ರಕರಣಗಳು ಪತ್ತೆಯಾಗಿತ್ತು. ಶುಕ್ರವಾರ ದೇಶದಲ್ಲಿ 11,109 ಮಂದಿಗೆ ಕೊರೊನಾ ಸೋಂಕು ತಗುಲಿತ್ತು.
ದೇಶದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 57,542 ಆಗಿದೆ, ಮಹಾರಾಷ್ಟ್ರದಲ್ಲಿ ಹೊಸದಾಗಿ 660 ಮಂದಿಗೆ ಸೋಂಕು ತಗುಲಿದೆ, ಒಂದು ದಿನದ ಹಿಂದೆ 1152 ಮಂದಿಗೆ ಸೋಂಕು ತಗುಲಿತ್ತು. ಎರಡು ಸಾವುಗಳು ದಾಖಲಾಗಿತ್ತು. ದೈನಂದಿನ ಕೊರೊನಾ ಪ್ರಕರಣಗಳಲ್ಲಿ ಹೆಚ್ಚಳ ಕಂಡ ಬಳಿಕ ಕಕ್ಕಿರಿದ ಸ್ಥಳಗಳಲ್ಲಿ ಮಾಸ್ಕ್ ಧರಿಸುವಂತೆ ಸೂಚನೆ ನೀಡಲಾಗಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ